Amruthadhaare: ಸೃಜನ್‌ ಜತೆ ಭೂಮಿಕಾ ಪತ್ತೆದಾರಿಕೆಗೆ ಹೊರಟ್ರು; ಶಕುಂತಲಾದೇವಿ ಈ ಬಾರಿ ಸಿಕ್ಕಿ ಬೀಳ್ತಾರ? ಅಮೃತಧಾರೆ ಧಾರಾವಾಹಿ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಸೃಜನ್‌ ಜತೆ ಭೂಮಿಕಾ ಪತ್ತೆದಾರಿಕೆಗೆ ಹೊರಟ್ರು; ಶಕುಂತಲಾದೇವಿ ಈ ಬಾರಿ ಸಿಕ್ಕಿ ಬೀಳ್ತಾರ? ಅಮೃತಧಾರೆ ಧಾರಾವಾಹಿ ಕಥೆ

Amruthadhaare: ಸೃಜನ್‌ ಜತೆ ಭೂಮಿಕಾ ಪತ್ತೆದಾರಿಕೆಗೆ ಹೊರಟ್ರು; ಶಕುಂತಲಾದೇವಿ ಈ ಬಾರಿ ಸಿಕ್ಕಿ ಬೀಳ್ತಾರ? ಅಮೃತಧಾರೆ ಧಾರಾವಾಹಿ ಕಥೆ

  • Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿರುವ ಸೂಚನೆ ದೊರಕಿದೆ. ಮಾತಿನ ಮಲ್ಲ ಸೃಜನ್‌ ಜತೆ ಭೂಮಿಕಾ "ಮೈಕ್‌" ತನಿಖೆಗೆ ಇಳಿದಿದ್ದಾರೆ. ಶಕುಂತಲಾ ಗ್ಯಾಂಗ್‌ ಈ ಬಾರಿಯಾದ್ರೂ ಸಿಕ್ಕಿ ಬೀಳಬಹುದೇ? ಎಂದು ಕಾದು ನೋಡಬೇಕಿದೆ.

Amruthadhaare: ಸೃಜನ್‌ ಜತೆ ಭೂಮಿಕಾ ಪತ್ತೆದಾರಿಕೆಗೆ ಹೊರಟ್ರು; ಶಕುಂತಲಾದೇವಿ  ಈ ಬಾರಿ ಸಿಕ್ಕಿ ಬೀಳ್ತಾರ? ಅಮೃತಧಾರೆ ಧಾರಾವಾಹಿ ಕಥೆ
icon

(1 / 10)

ಈ ಸೃಜನ್‌ ಪರಿಚಯವಾದದ್ದೇ ಒಂದು ರೋಚಕ ಘಟನೆಯಲ್ಲಿ. ಭೂಮಿಕಾ, ಸುಧಾಳನ್ನು ಸಾಯಿಸಲು ಜೈದೇವ್‌ ಪ್ಲ್ಯಾನ್‌ ರೂಪಿಸಿದ್ದ. ಗೂಂಡಾಗಳಿಗೆ ಹಣ ನೀಡಿ ಕಾರಿನಲ್ಲಿ ಡಿಕ್ಕಿ ಹೊಡೆದು ಸಾಯಿಸಲು ತಿಳಿಸಿದ. ಈ ಕುರಿತು ಗೂಂಡಾಗಳು ಮಾತನಾಡುತ್ತಿರುವುದು ಇನ್ನೊಬ್ಬ ಚಾಲಕ ಸೃಜನ್‌ ಕಿವಿಗೆ ಬಿದ್ದಿತ್ತು.
icon

(2 / 10)

ಸುಧಾ ಮತ್ತು ಭೂಮಿಕಾನನ್ನು ಕಾಪಾಡಲು ಸೃಜನ್‌ ಫಾಲೋ ಮಾಡಿದ್ದ. ಇವರಿಗೆ ಗೂಂಡಾಗಳು ಕಾರು ಡಿಕ್ಕಿ ಹೊಡೆಸಲು ಮುಂದಾದಗ ತನ್ನ ಕಾರು ಅಡ್ಡ ತಂದು ನಿಲ್ಲಿಸಿದ್ದ. ಬಳಿಕ ತನ್ನ ಕಾರಲ್ಲಿಯೇ ಇವರೆಲ್ಲರಿಗೂ ಮನೆಗೆ ಡ್ರಾಪ್‌ ನೀಡಿದ್ದ.
icon

(3 / 10)

ಮನೆಗೆ ಬಂದ ಸೃಜನ್‌ ಬಳಿಕ ಗೂಂಡಾಗಳ ವಿಚಾರವನ್ನು ಭೂಮಿಕಾಗೆ ಹೇಳಿದ್ದ. ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದ. ಎಂಟೆಕ್‌ ಓದಿರುವ ಸೃಜನ್‌ ಜಾಬ್‌ ಕಟ್‌ನಿಂದ ಕೆಲಸ ಕಳೆದುಕೊಂಡು ಚಾಲಕ ವೃತ್ತಿ ಮಾಡಿದ್ದ. ಆತನಿಗೆ ಭೂಮಿಕಾ ಕೆಲಸ ಕೊಡಿಸಿದ್ರು.
icon

(4 / 10)

ತನಗೆ ಅವಶ್ಯಕತೆ ಬಿದ್ದಾಗ ತನಿಖೆಗೆ ಸೃಜನ್‌ನ ಸಹಾಯವನ್ನು ಭೂಮಿಕಾ ಪಡೆಯಲು ನಿರ್ಧರಿಸುತ್ತಾರೆ. ಇದೀಗ ಇಂತಹ ಸಮಯ ಬಂದಿದೆ. ಜೀ ಕನ್ನಡ ವಾಹಿನಿಯು ಇಂದಿನ ಪ್ರೊಮೊ ಬಿಡುಗಡೆ ಮಾಡಿದೆ. ಅದರಲ್ಲಿ ಸರದಲ್ಲಿ ದೊರಕಿರುವ ಮೈಕ್‌ ಬಗ್ಗೆ ತನಿಖೆ ನಡೆಸಲು ಸೃಜನ್‌ ಸಹಾಯ ಮಾಡುತ್ತಾನೆ.
icon

(5 / 10)

ಭೂಮಿಕಾ ಅವರಿಗೆ ಸೃಜನ್‌ ಕರೆ ಮಾಡುತ್ತಾನೆ. ಮೈಕ್‌ ನೀಡಿರುವ ಕಂಪನಿಯ  ಮೂಲಕ ಯಾರಿಗೆ ನೀಡಲಾಗಿದೆ, ಎಲ್ಲಿಗೆ ಟ್ರಾನ್ಸ್‌ಪೋರ್ಟ್‌ ಮಾಡಲಾಗಿದೆ ಎಂದು ತಿಳಿದುಕೊಳ್ಳಬಹುದು ಎಂದು ಆತ ಹೇಳುತ್ತಾನೆ.
icon

(6 / 10)

ನನ್ನ ಗೆಳೆಯೊನೊಬ್ಬ ಇಂತಹ ಮೈಕ್‌ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಮೈಕ್‌ ಆತನಿಗೆ ತೋರಿಸಿದರೆ ಸಾಕು, ಆ ಮೈಕ್‌ ಯಾರಿಗೆ ನೀಡಲಾಗಿದೆ? ಎಲ್ಲಿಗೆ ಸರಬರಾಜು ಆಗಿದೆ ಎಲ್ಲಾ ತಿಳಿದುಕೊಳ್ಳಬಹುದು ಎಂದು ಆತ ತಿಳಿಸುತ್ತಾನೆ.
icon

(7 / 10)

"ಸರಿ ಹಾಗಾದರೆ ನಾನೂ ಬರ್ತಿನಿ. ನಾನು ವಿಚಾರಿಸ್ತಿನಿ" ಎಂದು ಭೂಮಿಕಾ ಹೇಳುತ್ತಾರೆ. "ಬೇಡ ನೀವು ಗರ್ಭಿಣಿ. ರೆಸ್ಟ್‌ ಮಾಡಿ" ಎಂದು ಸೃಜನ್‌ ಹೇಳುತ್ತಾನೆ. ಆದರೆ, ಭೂಮಿಕಾ ಕೇಳುವುದಿಲ್ಲ. ಮೈಕ್‌ ಜತೆ ಆತನ ಜತೆ ಹೊರಡುತ್ತಾರೆ.
icon

(8 / 10)

ಈ ಮೈಕ್‌ ವಿಚಾರದ ಮೂಲಕ ಶಕುಂತಲಾದೇವಿಯ ಇತಿಹಾಸ ಹೊರಬರುವುದೇ ಕಾದು ನೋಡಬೇಕಿದೆ. ಈಗಾಗಲೇ ಈ ಮೈಕ್‌ ಅನ್ನು ಭೂಮಿಕಾ ಶಕುಂತಲಾದೇವಿಗೆ ನೀಡಿದ್ದರು. ಶಕುಂತಲಾದೇವಿ ಮೈಕ್‌ ಬದಲಿಸಿರಬಹುದೇ ಎಂಬ ಸಂದೇಹವೂ ಇದೆ. ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ವಿವರ ದೊರಕಲಿದೆ.
icon

(9 / 10)

ಇನ್ನೊಂದೆಡೆ ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮನಿಗೆ ಹಳೆಯ ನೆನಪುಗಳು ಬಂದಿವೆ.  ಒಟ್ಟಾರೆ, ಸದ್ಯ ಪರಿಸ್ಥಿತಿಗಳು ಶಕುಂತಲಾದೇವಿ ಗ್ಯಾಂಗ್‌ಗೆ ವಿರುದ್ಧವಾಗಿವೆ. ಕಳ್ಳರು ಒಬ್ಬರೊಬ್ಬರು ಸಿಕ್ಕಿ ಬೀಳುವ ಸಾಧ್ಯತೆ ಇದೆ.
icon

(10 / 10)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು