ಹೊಟ್ಟೆಯಲ್ಲಿರುವ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ? ಗೌತಮ್ ಪ್ರಶ್ನೆ ಕೇಳಿ ಭೂಮಿಕಾ ತಬ್ಬಿಬ್ಬು; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ
- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ಪ್ರೇಮಧಾರೆ ಮುಂದುವರೆದಿದೆ. ಈ ಸಂದರ್ಭದಲ್ಲಿ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ ಎಂದು ಗೌತಮ್ ಆತಂಕ ಪಡಿಸಿದ್ದಾರೆ. ಇಂದಿನ ಎಪಿಸೋಡ್‌ನ ಝಲಕ್ ಇಲ್ಲಿದೆ.

(1 / 10)
Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾಗೆ ಇದ್ದ ಸಮಸ್ಯೆಗಳೆಲ್ಲ ಸಾಂಗವಾಗಿ ಕಳೆದುಹೋಗಿವೆ. ಇದೀಗ ಭೂಮಿಕಾ ಗರ್ಭಿಣಿ. ಗೌತಮ್ ಈಕೆಯ ಕುರಿತು ಅತೀವ ಕಾಳಜಿ ವಹಿಸುತ್ತಾನೆ. ವಿಶೇಷವಾಗಿ ಹೊಟ್ಟೆಯಲ್ಲಿರುವ ಮಗುವಿನ ಕುರಿತು ವಿಶೇಷ ಕಾಳಜಿ ವಹಿಸುತ್ತಾನೆ.
(2 / 10)
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಮಗು ಆಗೋದಿಲ್ಲ, ಗರ್ಭಕೋಶದ ಸಮಸ್ಯೆ ಇದೆ ಎಂದೆಲ್ಲ ಹಿಂದೆ ಸುದ್ದಿಯಾಗಿತ್ತು. ಶಕುಂತಲಾದೇವಿ ಈ ರೀತಿ ಡಾಕ್ಟರ್ ಮೂಲಕ ಹೇಳಿಸಿದ್ದರು. ಆದರೆ, ಇದೀಗ ಅದೆಲ್ಲ ಸುಳ್ಳು, ಭೂಮಿಕಾ ಗರ್ಭಿಣಿ ಆಗಿದ್ದಾಳೆ ಎಂದು ಜಾಹೀರಾಗಿದೆ.
(3 / 10)
ಗೌತಮ್‌ಗೆ ಎರಡನೇ ಮದುವೆ ಮಾಡಿಸಲು ಶಕುಂತಲಾದೇವಿ ಮುಂದಾಗಿದ್ದರು. ಗೌತಮ್ ಜಾಣತನದಿಂದ ವಧು ಮಧುರಾಳಿಗೆ ಎಲ್ಲಾ ಹೇಳಿದ್ದ. ಮಧುರಾ ಮತ್ತು ಗೌತಮ್ ನಾಟಕ ಮಾಡಿದ್ರು. ಹಸೆಮಣೆಯಲ್ಲಿ ಗೌತಮ್ ತಾಳಿ ಕಟ್ಟುವ ಸಮಯದಲ್ಲಿ ಒಂದು ಟ್ವಿಸ್ಟ್ ಕೊಟ್ರು.
(4 / 10)
ಮಧುರಾಳಿಗೆ ತಾಳಿ ಕಟ್ಟುವ ಬದಲು ತನ್ನ ಹೆಂಡತಿ ಭೂಮಿಕಾಳಿಗೆ ತಾಳಿ ಕಟ್ಟಿದ್ರು. ಈ ಮೂಲಕ ಮಗುವಾಗದೆ ಇದ್ದಾಗ ಗಂಡಿಗೆ ಎರಡನೇ ಮದುವೆ ಮಾಡುವುದು ಎಷ್ಟು ಸರಿ ಎಂದು ಸಮಾಜಕ್ಕೆ ತಿಳಿ ಹೇಳಿದ್ರು.
(5 / 10)
ಮಧುರಾಳಿಗೆ ತಾಳಿ ಕಟ್ಟುವ ಬದಲು ತನ್ನ ಹೆಂಡತಿ ಭೂಮಿಕಾಳಿಗೆ ತಾಳಿ ಕಟ್ಟಿದ್ರು. ಈ ಮೂಲಕ ಮಗುವಾಗದೆ ಇದ್ದಾಗ ಗಂಡಿಗೆ ಎರಡನೇ ಮದುವೆ ಮಾಡುವುದು ಎಷ್ಟು ಸರಿ ಎಂದು ಸಮಾಜಕ್ಕೆ ತಿಳಿ ಹೇಳಿದ್ರು.
(6 / 10)
ಇದೇ ಸಮಯದಲ್ಲಿ ಭೂಮಿಕಾ ಗರ್ಭಿಣಿ ಎಂಬ ವಿಷಯ ಬಹಿರಂಗವಾಗಿತ್ತು. ಅಲ್ಲೇ ಇದ್ದ ಮಧುರಾಳ ಅಮ್ಮ ಈಕೆ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ರು. ಹೀಗೆ, ಭೂಮಿಕಾ ಮತ್ತು ಗೌತಮ್ ನಡುವೆ ಇದ್ದ ಸಮಸ್ಯೆಗಳು ಸರಿಯಾಗಿವೆ. ಇಂದಿನ ಸಂಚಿಕೆಯಲ್ಲಿ ಭೂಮಿಕಾ ಮತ್ತು ಗೌತಮ್ ಮಾತನಾಡುತ್ತಿದ್ದಾರೆ.
(7 / 10)
"ಅವರಲ್ಲಿ ರಿಕ್ವಸ್ಟ್ ಮಾಡಿದ್ದಕ್ಕೆ ಒಪ್ಪಿಕೊಂಡ್ರು. ಇಲ್ಲದೆ ಇದ್ದರೆ ಅವರಿಗೆ ತಾಳಿ ಕಟ್ಟಬೇಕಿತ್ತು. ಅವರ ಒಳ್ಳೆಯತನಕ್ಕೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ" ಎಂದು ಗೌತಮ್ ಹೇಳುತ್ತಾರೆ. ಮಧುರಾಳನ್ನು ಹೊಗಳುವಾಗ ಭೂಮಿಕಾ "ಸಾಕು ಸಾಕು ಹೊಗಳಿದ್ದು " ಎಂದು ಗುಣುಗುಡುತ್ತಾರೆ.
(8 / 10)
"ಏನು ನಿಮಗೆ ಇಷ್ಟೊಂದು ಪೊಸೆಸಿವ್‌ನೆಸ್" ಎಂದು ಗೌತಮ್ ಕೇಳುತ್ತಾರೆ. "ಸಾರಿ" ಎಂದು ಭೂಮಿಕಾ ಭಸ್ಕಿ ಹೊಡೆಯುತ್ತಾರೆ. ಈ ಸಮಯದಲ್ಲಿ ಗೌತಮ್ ಎದ್ದು ಬರುತ್ತಾರೆ.
(9 / 10)
ಈಕೆ ಭಸ್ಕಿ ಹೊಡೆಯುವುನ್ನು ನಿಲ್ಲಿಸಿದ ಗೌತಮ್ "ಹೊಟ್ಟೆಯಲ್ಲಿ ಮಗು ಇದೆ, ಮಗುವಿಗೆ ಏನಾದರೂ ಆದ್ರೆ ಏನು ಗತಿ" ಎಂದು ಕೇಳುತ್ತಾರೆ.
ಇತರ ಗ್ಯಾಲರಿಗಳು