Amruthadhaare: ಗೌತಮ್ ಹಚ್ಚಿದ ಪಟಾಕಿಗೆ ಭಾಗ್ಯಮ್ಮಳಿಗೆ ಹಳೆಯ ನೆನಪು ಮರುಕಳಿಸಿದೆ; ಶಕುಂತಲಾ ನಿನಗಿದೆ ಮಾರಿಹಬ್ಬ ಅಂದ್ರು ವೀಕ್ಷಕರು
- Amruthadhare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಗ್ಯಾಂಗ್‌ಗೆ ಭೀತಿ ಉಂಟಾಗುವಂತಹ ಘಟನೆಯೊಂದು ನಡೆದಿದೆ. ಭಾಗ್ಯಮ್ಮನಿಗೆ ಹಳೆಯ ನೆನಪು ಮರುಕಳಿಸಿದೆ. ತಾನು ತನ್ನದೇ ಮನೆಯಲ್ಲಿ ಇರುವ ಸಂಗತಿ ಆಕೆಗೆ ಗೊತ್ತಾಗಿದೆ.
- Amruthadhare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಗ್ಯಾಂಗ್‌ಗೆ ಭೀತಿ ಉಂಟಾಗುವಂತಹ ಘಟನೆಯೊಂದು ನಡೆದಿದೆ. ಭಾಗ್ಯಮ್ಮನಿಗೆ ಹಳೆಯ ನೆನಪು ಮರುಕಳಿಸಿದೆ. ತಾನು ತನ್ನದೇ ಮನೆಯಲ್ಲಿ ಇರುವ ಸಂಗತಿ ಆಕೆಗೆ ಗೊತ್ತಾಗಿದೆ.
(1 / 11)
Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಇದರಲ್ಲಿ ಭಾಗ್ಯಮ್ಮನಿಗೆ ಹಳೆಯ ಘಟನೆಗಳೆಲ್ಲ ನೆನಪಾದ ಕ್ಷಣವನ್ನು ತೋರಿಸಲಾಗಿದೆ. ಶಕುಂತಲಾದೇವಿ ಗ್ಯಾಂಗ್‌ಗೆ ಇದು ಭಯ ಹುಟ್ಟಿಸುವಂತಹ ಸಂಗತಿಯಾಗಿದೆ.
(2 / 11)
ಕ್ರಿಕೆಟ್ ಮ್ಯಾಚ್ ನೋಡುತ್ತ ಗೌತಮ್ ಖುಷಿಯಾಗಿದ್ದಾರೆ. ಮ್ಯಾಚ್ ಗೆದ್ದ ಖುಷಿಗೆ ಏನಾದರೂ ಮಾಡಬೇಕು ಎಂದೆನಿಸಿದೆ. ಸ್ಟಾಕ್‌ನಲ್ಲಿರುವ ಪಟಾಕಿಯನ್ನು ತೆಗೆದುಕೊಂಡು ಹಚ್ಚಿದ್ದಾರೆ.
(3 / 11)
ಪಟಾಕಿ ಡಮ್‌ಡುಂ ಎಂದು ಸಿಡಿದಿದೆ. ಈ ಸದ್ದಿಗೆ ಕೋಣೆಯಲ್ಲಿ ಮಲಗಿದ್ದ ಭಾಗ್ಯಮ್ಮಳಿಗೆ ಎಚ್ಚರವಾಗಿದೆ. ಆಕೆ ಬೆಚ್ಚಿ ಬಿದ್ದಿದ್ದಾರೆ.
(4 / 11)
ಗೌತಮ್ ತನ್ನ ತಂಗಿ ಮತ್ತು ತಾಯಿಯನ್ನು ಬಹಳಷ್ಟು ಸಮಯದಿಂದ ಹುಡುಕುತ್ತಿದ್ದರು. ಇವರಿಬ್ಬರನ್ನು ಹುಡುಕಲು ಪ್ರೈವೇಟ್ ಏಜೆನ್ಸಿಯ ನೆರವು ಪಡೆದಿದ್ದರು. ಪೊಲೀಸರ ನೆರವೂ ಪಡೆದಿದ್ದರು. ಆದರೆ, ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಅಚಾನಕ್ಕಾಗಿ ಇವರಿಬ್ಬರು ಪತ್ತೆಯಾಗಿದ್ದರು.
(5 / 11)
ಭಾಗ್ಯಮ್ಮ ಮತ್ತು ಸುಧಾಳನ್ನು ಸಾಯಿಸುವ ಜೈದೇವ್ ಯತ್ನ ವಿಫಲವಾಗಿತ್ತು. ಭೂಪತಿಯ ಕಿತಾಪತಿಯಿಂದಾಗಿ ಇವರಿಬ್ಬರು ಇದೇ ಮನೆಗೆ ಆಗಮಿಸಿದ್ದರು. ತಾವು ಸಾಯಿಸಲು ಯತ್ನಿಸುತ್ತಿದ್ದ ವ್ಯಕ್ತಿಗಳು ಮನೆಗೆ ಬಂದಾಗ ಶಂಕುತಲಾ ಗ್ಯಾಂಗ್ ಭಯಪಟ್ಟಿತ್ತು. ಆದರೆ, ಭಾಗ್ಯಮ್ಮನಿಗೆ ಯಾವುದೇ ನೆನಪು ಇಲ್ಲ ಎಂದು ತಿಳಿದು ನಿರಾಳವಾಗಿದ್ದರು.
(6 / 11)
ಭಾಗ್ಯಮ್ಮನಿಗೆ ನೀಡುವ ಔಷಧ ಬದಲಾಯಿಸಿದ್ರು ಶಕುಂತಲಾದೇವಿ. ಆದರೆ, ಇತ್ತೀಚೆಗೆ ಭೂಮಿಕಾಗೆ ಶಾಕ್ ಹೊಡೆಸಲು ಶಕುಂತಲಾದೇವಿ ಪ್ರಯತ್ನಿಸಿದ್ದರು. ಆದರೆ, ಆ ಶಾಕ್ ವೈರ್‌ನಿಂದ ಭಾಗ್ಯಮ್ಮನಿಗೆ ಶಾಕ್ ಹೊಡೆದಿತ್ತು. ಒಂದಿಷ್ಟು ಹಳೆಯ ನೆನಪುಗಳು ತಲೆಯಲ್ಲಿ ಮರುಕಳಿಸಿದ್ದವು.
(7 / 11)
ಇಂದಿನ ಸಂಚಿಕೆಯ ಮತ್ತೊಂದು ಪ್ರೊಮೊವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಇದರಲ್ಲಿ ಮಹತ್ವದ ಘಟನೆಯೊಂದು ಕಾಣಿಸಿದೆ. ಗೌತಮ್ ಹಚ್ಚಿದ ಪಟಾಕಿ ಸದ್ದಿಗೆ ಭಾಗ್ಯಮ್ಮ ಎಚ್ಚರಗೊಂಡಿದ್ದಾರೆ. ದಿಗಿಲಿನಿಂದ ಮನೆಯ ಹೊರಗೆ ಬಂದಿದ್ದಾರೆ.
(8 / 11)
ಭಾಗ್ಯಮ್ಮನ ತಲೆಯಲ್ಲಿ ಹಳೆಯ ನೆನಪುಗಳು ಮರುಕಳಿಸಿವೆ. ಯಾಕೆ ನಾನು ಮಾತನಾಡುತ್ತಿಲ್ಲ. ನಾನು ಎಲ್ಲಿದ್ದೇನೆ ಎಂದು ಭಾಗ್ಯಮ್ಮ ಕನವರಿಸಿದ್ದಾರೆ.
(9 / 11)
ಮನೆಯ ಹಾಲ್‌ನಲ್ಲಿ ಭಾಗ್ಯಮ್ಮ ಸುತ್ತಾಡಿದ್ದಾರೆ. ಅಲ್ಲಿ ಅಜ್ಜಮ್ಮನ ಫೋಟೋ ಕಾಣಿಸಿದೆ. "ಹೋ, ಇವರ ಫೋಟೋ, ಅಂದ್ರೆ, ನಾನು ನನ್ನ ಮನೆಯಲ್ಲಿಯೇ ಇದ್ದೇನೆ" ಎಂದು ಭಾಗ್ಯಮ್ಮ ಕನವರಿಸಿದ್ದಾರೆ.
(10 / 11)
ಈ ಮೂಲಕ ಭಾಗ್ಯಮ್ಮನಿಗೆ ಹಳೆಯ ನೆನಪುಗಳು ಬಂದಿವೆ. ಈ ಪ್ರೊಮೊಗೆ ವೀಕ್ಷಕರು ನಾನಾ ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ. "ಭಾಗ್ಯ ಅವರಿಗೆ ಹಳೆ ನೆನಪು ಮರುಕಳಿಸಿದೆ. ಶಕುಂತಲಾ ಮುಂದೆ ಇದೆ ನಿಂಗೆ ಇದೆ ತಡಿ ಮಾರಿ ಹಬ್ಬ " ಎಂದೆಲ್ಲ ಕಿರುತೆರೆ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು