Amruthadhaare Serial: ಭಾಗ್ಯಮ್ಮನ ಹಳೆಕಥೆ ಕುರಿತು ತನಿಖೆಗೆ ಇಳಿದ ಭೂಮಿಕಾ; ಶಕುಂತಲಾದೇವಿ ಗ್ಯಾಂಗ್ ಅಸಲಿ ಮುಖ ಬಹಿರಂಗ ಶೀಘ್ರ
- Amruthadhaare serial today episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಭಾಗ್ಯಮ್ಮಳ ಕುರಿತು ಭೂಮಿಕಾ ಒಂದಿಷ್ಟು ಮಾಹಿತಿ ಪಡೆಯಲು ಯತ್ನಿಸುತ್ತಿದ್ದಾರೆ. ಈ ಮೂಲಕ ಶಕುಂತಲಾದೇವಿ ಅಸಲಿ ಮುಖ ಬಹಿರಂಗ ಸದ್ಯದಲ್ಲಿಯೇ ಆಗಲಿದೆಯೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ.
- Amruthadhaare serial today episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಭಾಗ್ಯಮ್ಮಳ ಕುರಿತು ಭೂಮಿಕಾ ಒಂದಿಷ್ಟು ಮಾಹಿತಿ ಪಡೆಯಲು ಯತ್ನಿಸುತ್ತಿದ್ದಾರೆ. ಈ ಮೂಲಕ ಶಕುಂತಲಾದೇವಿ ಅಸಲಿ ಮುಖ ಬಹಿರಂಗ ಸದ್ಯದಲ್ಲಿಯೇ ಆಗಲಿದೆಯೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ.
(1 / 12)
Amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಭಾಗ್ಯಮ್ಮನ ಮುಂದೆ ಸುಧಾ ಮತ್ತು ಭೂಮಿಕಾ ಮಾತನಾಡುತ್ತಾರೆ. ಈ ಸಮಯದಲ್ಲಿ ಭಾಗ್ಯಮ್ಮಳಲ್ಲಿ ಒಂದಿಷ್ಟು ಚೇತರಿಕೆ ಕಾಣಿಸಿಕೊಂಡಿದೆ. ಗೌತಮ್ ಬಗ್ಗೆ ಭೂಮಿಕಾ ಮಾತನಾಡುವಾಗ ಭಾಗ್ಯಮ್ಮ ಗುಂಡೂ ಗುಂಡೂ ಎಂದು ಕನವರಿಸಿದ್ದಾರೆ.
(2 / 12)
ಗುಂಡುವಿನ ಬಗ್ಗೆ ಮಾತನಾಡುವ ಸಮಯದಲ್ಲಿ ಭಾಗ್ಯಮ್ಮ ಪ್ರೀತಿಯಿಂದ ಭೂಮಿಕಾಳ ಕೈ ಸವರಿದ್ದಾರೆ. ಈ ಮೂಲಕ ಭಾಗ್ಯಮ್ಮನಲ್ಲಿ ತುಸುತುಸುವೇ ಚೇತರಿಕೆಯ ಲಕ್ಷಣಗಳು ಕಾಣಿಸಿವೆ. "ನೀವು ಬೇಗ ಹುಷಾರಾಗುವಿರಿ, ಗೌತಮ್ ನಿಮಗೆ ಒಳ್ಳೆಯ ಡಾಕ್ಟರ್‌ನಿಂದ ಚಿಕಿತ್ಸೆ ನೀಡುತ್ತಾರೆ" ಎಂದು ಭೂಮಿಕಾ ಭರವಸೆ ನೀಡುತ್ತಾರೆ.
(3 / 12)
ಈ ಸಮಯದಲ್ಲಿ ಭೂಮಿಕಾಳಿಗೆ ಭಾಗ್ಯಮ್ಮನ ಕೆಲವು ವರ್ತನೆಗಳು ನೆನಪಾಗುತ್ತವೆ. ಇತ್ತೀಚೆಗೆ ಹೋಮ ನಡೆಯುತ್ತಿರುವಾಗ ಬೆಂಕಿ ನೋಡಿ ಭಯಪಟ್ಟ ಘಟನೆ ನೆನಪಾಗುತ್ತದೆ
(4 / 12)
ಭೂಮಿಕಾ ಸುಧಾಳ ಬಳಿ "ಇವರಿಗೆ ಬೆಂಕಿ ಅಂದರೆ ಯಾಕೆ ಭಯ, ಈ ಹಿಂದೆ ಏನಾದರೂ ಬೆಂಕಿ ಆಕಸ್ಮಿಕದಂತಹ ಘಟನೆ ನಡೆದಿರುವುದೇ? ಬೆಂಕಿಯಿಂದ ಏನಾದರೂ ಅಪಾಯವಾಗಿತ್ತ?" ಎಂದು ಕೇಳುತ್ತಾರೆ.
(5 / 12)
ಅದಕ್ಕೆ ಸುಧಾ "ನನಗೆ ಬುದ್ಧಿ ಬಂದಾಗಿನಿಂದ ಅಂತಹ ಯಾವುದೇ ಘಟನೆ ನೆನಪಿಲ್ಲ. ಆಗಿನಿಂದಲೂ ಅಮ್ಮ ಹೀಗೆಯೇ ಇದ್ದಾಳೆ" ಎಂದು ಹೇಳುತ್ತಾಳೆ.
(6 / 12)
"ನನಗೆ ಅನಿಸುತ್ತದೆ, ಅತ್ತೆಯ ಬದುಕಿನಲ್ಲಿ ಏನೋ ಶಾಕಿಂಗ್ ಘಟನೆ ನಡೆದಿದೆ ಅಂತ. ಅದು ಏನು ಅಂತ ಕಂಡು ಹಿಡಿಯಬೇಕು" ಎಂದು ಭೂಮಿಕಾ ಹೇಳುತ್ತಾರೆ.
(7 / 12)
"ಸುಧಾ, ಅತ್ತೆಯ ಬಗ್ಗೆ ಗೊತ್ತಿರುವವರು ಯಾರಾದರೂ ಇದ್ದಾರ?" ಎಂದು ಭೂಮಿಕಾ ಕೇಳಿದಾಗ "ಒಬ್ಬರು ಇದ್ದಾರೆ" ಎಂದು ಸುಧಾ ಹೇಳುತ್ತಾಳೆ.
(8 / 12)
ಸದ್ಯ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಇಷ್ಟು ಮಾಹಿತಿ ಮಾತ್ರವಿದೆ. ಹಾಗಾದರೆ, ಮುಂದಿನ ಸಂಚಿಕೆಗಳಲ್ಲಿ ಭೂಮಿಕಾ ತನ್ನ ಅತ್ತೆಯ ಮಿಸ್ಟರಿ ಹಿಸ್ಟರಿ ಬಗ್ಗೆ ತನಿಖೆ ನಡೆಸುವ ಸೂಚನೆ ಇದೆ.
(9 / 12)
ಶಕುಂತಲಾದೇವಿ ಮತ್ತು ಆಕೆಯ ಗ್ಯಾಂಗ್ ಮಾಡಿರುವ ಅನಾಚರಗಳು ಶೀಘ್ರದಲ್ಲಿ ಹೊರಬೀಳುವ ಸೂಚನೆ ಇದೆ. ಈ ನಡುವೆ ಶಕುಂತಲಾದೇವಿಯ ಕಡೆಯಿಂದ ಬೇರೆ ಏನಾದರೂ ಮಸಲತ್ತು ನಡೆಯುತ್ತದೆಯೇ ಎನ್ನುವ ಅನುಮಾನವೂ ಇದೆ.
(10 / 12)
ಒಂದಾನೊಂದು ಕಾಲದಲ್ಲಿ ಭಾಗ್ಯಮ್ಮನನ್ನು ಸಾಯಿಸಲು ಶಕುಂತಲಾದೇವಿ ಟೀಮ್ ಯತ್ನಿಸಿದೆ. ಆದರೆ, ಹೇಗೋ ತನ್ನ ಮಗಳ ಜತೆ ಭಾಗ್ಯಮ್ಮ ಬದುಕಿಕೊಂಡಿದ್ದಾರೆ. ಈ ವಿಷಯ ಗೊತ್ತಿರದೆ ಗೌತಮ್ ದಿವಾನ್ ತನ್ನ ಮಗನೆಂದು ನಾಟಕವಾಡುತ್ತ ಮಲತಾಯಿ ಪ್ರೀತಿ ತೋರಿಸುತ್ತ ಇದ್ದಾರೆ. ಇವರ ಕಣ್ಣು ಗೌತಮ್ ಆಸ್ತಿಮೇಲೆ ಇದೆ. ಜೈದೇವ್, ರಮಾಕಾಂತ್ ಕೂಡ ಶಕುಂತಲಾ ದೇವಿಯ ತಾಳಕ್ಕೆ ಕುಣಿಯುತ್ತಿದ್ದಾರೆ. ಈಗ ಮತ್ತೆ ಭಾಗ್ಯಮ್ಮ ಪ್ರತ್ಯಕ್ಷವಾಗಿರುವುದು ಇವರಿಗೆ ಭಯ ಹುಟ್ಟಿಸಿದೆ. ಮಾನಸಿಕ ಆರೋಗ್ಯ ಉತ್ತಮವಿಲ್ಲ ಎನ್ನುವ ಕಾರಣಕ್ಕೆ ಶಕುಂತಲಾ ಸ್ವಲ್ಪ ನಿರಾಳವಾಗಿದ್ದಾರೆ.
(11 / 12)
ತನ್ನ ಮಲತಾಯಿಯ ಕ್ರೌರ ಇತಿಹಾಸ ಗೌತಮ್‌ಗೆ ಶೀಘ್ರದಲ್ಲಿ ತಿಳಿಯಲಿ. ಇವರನ್ನೆಲ್ಲ ಮನೆಯಿಂದ ಗೌತಮ್ ಹೊರದಬ್ಬಲಿ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಅಮೃತಧಾರೆ ಪ್ರೊಮೊಗೆ ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು