Amruthadhaare: ತಿಥಿ ಮಾಡುವಾಗಲೇ ಮನೆಗೆ ಅಮ್ಮನ ಎಂಟ್ರಿ, ಶಕುಂತಲಾದೇವಿ ಕಣ್ಣಿಗೆ ಬೀಳ್ತಾರ ಭಾಗ್ಯಮ್ಮ -ಅಮೃತಧಾರೆಯಲ್ಲಿ ರೋಚಕ ತಿರುವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ತಿಥಿ ಮಾಡುವಾಗಲೇ ಮನೆಗೆ ಅಮ್ಮನ ಎಂಟ್ರಿ, ಶಕುಂತಲಾದೇವಿ ಕಣ್ಣಿಗೆ ಬೀಳ್ತಾರ ಭಾಗ್ಯಮ್ಮ -ಅಮೃತಧಾರೆಯಲ್ಲಿ ರೋಚಕ ತಿರುವು

Amruthadhaare: ತಿಥಿ ಮಾಡುವಾಗಲೇ ಮನೆಗೆ ಅಮ್ಮನ ಎಂಟ್ರಿ, ಶಕುಂತಲಾದೇವಿ ಕಣ್ಣಿಗೆ ಬೀಳ್ತಾರ ಭಾಗ್ಯಮ್ಮ -ಅಮೃತಧಾರೆಯಲ್ಲಿ ರೋಚಕ ತಿರುವು

  • Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮಹತ್ತರ ಬದಲಾವಣೆಗಳು, ರೋಚಕ ತಿರುವು ಕಾಣಿಸಿಕೊಳ್ಳುವ ಸುಳಿವನ್ನು ಜೀ ಕನ್ನಡ ವಾಹಿನಿ ನೀಡಿದೆ. ಆಸ್ಪತ್ರೆಯಿಂದ ಭಾಗ್ಯಮ್ಮ ಗೌತಮ್‌ ಮನೆಗೆ ಬಂದಿದ್ದಾರೆ. ಅಲ್ಲಿ ಶಕುಂತಲಾದೇವಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಇದು ತನ್ನ ಮಗನ ಮನೆ ಎಂಬ ಮಾಹಿತಿ ಅವರಿಗೆ ದೊರಕಿದೆ.

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಭೂಮಿಕಾನ ಆಹ್ವಾನದ ಮೇರೆಗೆ ಸುಧಾ ಮತ್ತು ಭಾಗ್ಯಮ್ಮ, ಜತೆಗೆ ಮಗು ಗೌತಮ್‌ ಮನೆಗೆ ಬರುತ್ತಾರೆ. ಅದೇ ಸಮಯದಲ್ಲಿ ಗೌತಮ್‌ ತನ್ನ ತಾಯಿಯ ತಿಥಿ ಮಾಡುತ್ತಾ ಇರುತ್ತಾರೆ. ಇದೇ ಸಮಯದಲ್ಲಿ ಬದುಕಿರುವ ತಾಯಿಯೇ ಗೌತಮ್‌ ಮನೆಗೆ ಬರುತ್ತಾರೆ.  
icon

(1 / 10)

ಅಮೃತಧಾರೆ ಸೀರಿಯಲ್‌ ರೋಚಕ ತಿರುವಿನತ್ತ ಮುಖ ಮಾಡುತ್ತಿದೆ. ಗೌತಮ್‌ಗೆ ಸದ್ಯದಲ್ಲಿಯೇ ತನ್ನ ತಂಗಿ ಮತ್ತು ತಾಯಿಯ ಭೇಟಿಯಾಗುವ ಸೂಚನೆ ಇದೆ. ಇನ್ನೊಂದು ಅಚ್ಚರಿಯೆಂದರೆ ಗೌತಮ್‌ ಮನೆಗೆ ಬಂದ ಸಮಯದಲ್ಲಿ ಅಲ್ಲೇ ಸಮೀಪದಲ್ಲಿ ಹೋಗುತ್ತಿದ್ದ ಶಕುಂತಲಾದೇವಿಯನ್ನು ನೋಡಿ ಭಾಗ್ಯಮ್ಮ ಬೆಚ್ಚಿಬಿದ್ದಿದ್ದಾರೆ. ಅವರಿಗೆ ಶಕುಂತಲಾನ ಗುರುತು ಸಿಕ್ಕಿದೆ. 
icon

(2 / 10)

ಶಕುಂತಲಾದೇವಿಗೆ ತಾನು ಕಾಣಬಾರದು ಎಂದು ಭಾಗ್ಯಮ್ಮ ಮುಖ ಮುಚ್ಚಿಕೊಂಡಿದ್ದಾರೆ. ಮುಖಕ್ಕೆ ಸೀರೆ ಅಡ್ಡ ಹಿಡಿದಿದ್ದಾರೆ. ಇನ್ನು ಕೆಲವು ಸಮಯ ಶಕುಂತಲಾದೇವಿ ಕಣ್ಣಿಗೆ ಕಾಣದಂತೆ ಇವರು ಇರುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಭೂಮಿಕಾ ಇವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಒಂದು ಕಡೆ ಗೌತಮ್‌ ತನ್ನ ತಾಯಿಗೆ ತಿಥಿ ನಡೆಸುತ್ತಿದ್ದಾನೆ. ಇದೇ ಸಮಯದಲ್ಲಿ ಭಾಗ್ಯಮ್ಮ ಮನೆಗೆ ಪ್ರವೇಶಿಸಿದ್ದಾರೆ.
icon

(3 / 10)

ಭಾಗ್ಯಮ್ಮ ಗೌತಮ್‌ನ ಮನೆಗೆ ಹೇಗೆ ಬಂದ್ರು ಎಂಬ ಪ್ರಶ್ನೆ ಇರಬಹುದು. ಸುಧಾ ಆಸ್ಪತ್ರೆಯಲ್ಲಿದ್ದಾಗ ಅತ್ತಿಗೆ ಭೂಮಿಕಾಳಿಗೆ ಕಾಲ್‌ ಮಾಡುತ್ತಾಳೆ. ಆಸ್ಪತ್ರೆ ಫೀಸ್‌ಗೆ ನಾಲ್ಕು ಸಾವಿರ ಕಡಿಮೆ ಇದೆ ಎಂದು ಹೇಳುತ್ತಾಳೆ. ಭೂಮಿಕಾ ಹಣದ ಅರೇಂಜ್‌ಮೆಂಟ್‌ ಮಾಡುತ್ತಾರೆ.
icon

(4 / 10)

ಮತ್ತೆ ಭೂಮಿಕಾ ಕಾಲ್‌ ಮಾಡಿದ ಸಂದರ್ಭದಲ್ಲಿ ಸುಧಾಳ ಮಗಳು "ನಮಗೆ ಮನೆ ಇಲ್ಲ, ಮನೆಗೆ ಬೆಂಕಿ ಬಿದ್ದಿದೆ. ನಾವು ಎಲ್ಲಿ ಹೋಗೋದಮ್ಮ" ಎಂದು ಕೇಳುವುದು ಫೋನ್‌ನಲ್ಲಿದ್ದ ಭೂಮಿಕಾಳಿಗೆ ಕೇಳುತ್ತದೆ. ಯಾಕೆ ಏನಾಯ್ತು ಎಂದು ವಿಚಾರಿಸುತ್ತಾರೆ. ನೀವು ಅಮ್ಮ ಮತ್ತು ಮಗಳನ್ನು ಕರೆದುಕೊಂಡು ಮನೆಗೆ ಬನ್ನಿ ಎಂದು ಹೇಳುತ್ತಾರೆ ಭೂಮಿಕಾ.
icon

(5 / 10)

ಹೀಗೆ ತನ್ನ ಮಗನ ಮನೆಗೆ ಭಾಗ್ಯಮ್ಮ ಬರುತ್ತಾರೆ. ಇನ್ನು ಗೌತಮ್‌ಗೆ ಇವಳೇ ನನ್ನ ತಾಯಿ ಎಂದು ಮುಖ ನೋಡಿದಾಗ ಗುರುತು ಹಿಡಿಯಬಹುದು. ಸುಧಾಳ ಕಾಲಿನಲ್ಲಿರುವ ಮಚ್ಚೆ ನೋಡಿ ಗೌತಮ್‌ಗೆ ತಂಗಿಯ ಗುರುತು ಹಿಡಿಯಬಹುದು. ಇನ್ನು ಕೆಲವೇ ದಿನಗಳಲ್ಲಿ ಗೌತಮ್‌ಗೆ ತನ್ನ ತಾಯಿ ಮತ್ತು ತಂಗಿಯ ಸಿಗಬಹುದು ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿ ಇದೆ.
icon

(6 / 10)

ಸುಧಾ ಮನೆಯೊಳಗೆ ಪೂಜೆ ನಡೆಯವ ಸ್ಥಳದಲ್ಲಿಯೇ ಆರ್ಚಕರು "ಫೋಟೊ ತೆಗೀರಿ" ಎಂದು ಪೂಜೆಗಿಟ್ಟ ಫೋಟೋ ತೆಗೆಸುತ್ತಾರೆ. ಈ ಮೂಲಕ ಸುಧಾಳಿಗೆ ಪೂಜೆ ನಡೆಯುತ್ತಿರುವುದು ನನ್ನ ಮತ್ತು ಅಮ್ಮನಿಗೆ ಎಂದು ಸದ್ಯಕ್ಕೆ ತಿಳಿಯುವ ಸೂಚನೆ ಇಲ್ಲ. 
icon

(7 / 10)

 ಸುಧಾ ಮತ್ತು ಭಾಗ್ಯಮ್ಮ ಮನೆಗೆ ಬರುತ್ತಾರೆ ಎಂದು ಕಾದುಕುಳಿತ ಗೌತಮ್‌ಗೆ ಇನ್ಸ್ಪೆಕ್ಟರ್‌ ಮೂಲಕ ಸುಳ್ಳು ಹೇಳಿಸಿದ್ದರು.  ನಿಮ್ಮ ಅಮ್ಮ ಮತ್ತು ತಂಗಿ ಬದುಕಿಲ್ಲ. ಅವರು ಸತ್ತಿದ್ದಾರೆ ಎಂದು ಹೇಳಿದ್ದರು. ಇಷ್ಟು ದಿನ ಅಮ್ಮನಿಗಾಗಿ ಕಾಯುತ್ತಿದ್ದ ಗೌತಮ್‌ಗೆ ಇದರಿಂದ ಅತೀವ ದುಃಖವಾಗಿತ್ತು. ಇದೇ ಸಮಯದಲ್ಲಿ ಸತ್ತವರಿಗೆ ತಿಥಿ ಮಾಡೋಣ ಎಂದು ಶಕುಂತಲಾದೇವಿ ಒಪ್ಪಿಸಿರುತ್ತಾರೆ. ಶ್ರಾದ್ಧ ಮಾಡುವ ಸಮಯದಲ್ಲಿಯೇ ಇದೀಗ ಗೌತಮ್‌ನ ನಿಜವಾದ ಅಮ್ಮನ ಆಗಮನವಾಗಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. 
icon

(8 / 10)

ಈ ಸೀರಿಯಲ್‌ನ ಪ್ರಮೋಗೆ ಪ್ರೇಕ್ಷಕರು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. "ಅತಿಯಾಗಿ ತೋರಿಸ್ಬೇಡಿ, ಗುರುತು ಸಿಗಬೇಕು. ತಾಯಿ ಮಗ ಸೇರ್ಬೇಕು, ಅಮ್ಮ ಸ್ಥಾನದಲ್ಲಿ ಗೌತಮ್‌ ಇವರನ್ನು ಕೂರಿಸಬೇಕು. ಚೆನ್ನಾಗಿ ಇರುತ್ತೆ ತಾಯಿ ಮಗ ದೂರ ಮಾಡ್ಬೇಡಿ" "ಏನ್ರಿ ಡೈರೆಕ್ಟರ್‌, ತಿಥಿ ಶಾಸ್ತ್ರ ಮಾಡುವಾಗ ಏನಾದರೂ ಅಡಚಣೆ ಉಂಟು ಮಾಡಬೇಕಿತ್ತು" "ಭೂಮಿಕಾ ಸೂಪರ್‌, ಈ ಕೆಲಸವನ್ನು ನೀವು ಇದಕ್ಕಿಂತ ಮೊದಲೇ ಮಾಡಬೇಕಿತ್ತು" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ.
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.
icon

(10 / 10)

ಇತರ ಗ್ಯಾಲರಿಗಳು