ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಭಾರ್ಗವಿಯ ಪ್ರಾಣ ಕಾಪಾಡಲು ಬಂದ ಗೌತಮಿ ಜಾಧವ್; ನಾನು ಕಾಲಿಟ್ಟಲ್ಲಿ ಸೌಂಡ್ ಬರುತ್ತಮ್ಮ
ಕಲರ್ಸ್ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಕೌತುಕದ ಘಟನೆ ನಡೆದಿದೆ. ಭಾರ್ಗವಿಯನ್ನು ಕಾಪಾಡಲು ಬಿಗ್‌ಬಾಸ್ ಸ್ಪರ್ಧೆಯ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಟಿ ಗೌತಮಿ ಜಾಧವ್ ಆಗಮಿಸಿದ್ದಾರೆ.
(1 / 9)
ಇತ್ತೀಚೆಗೆ ಆರಂಭವಾದ ಕಲರ್ಸ್ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯು ಕಿರುತೆರೆ ಸೀರಿಯಲ್ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಭಾರ್ಗವಿಯಾಗಿ ರಾಧಾ ಭಗವತಿ ನಟನೆಗೆ ಪ್ರೇಕ್ಷಕರು ವಾಹ್ ಎನ್ನುತ್ತಿದ್ದಾರೆ. ಇದೀಗ ಧಾರಾವಾಹಿಯಲ್ಲೊಂದು ಘಟನೆ ನಡೆದಿದೆ.
(2 / 9)
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾರ್ಗವಿ LL.Bಯಲ್ಲಿ ಭಾರ್ಗವಿಯ ಪ್ರಾಣ ತೆಗೆಯಲು ಕೇಡಿಗಳು ನಿರ್ಧರಿಸಿದ್ದಾರೆ. ಅಲ್ಲಿ ಭಾರ್ಗವಿ ಗೆ ಅಪಾಯವಾಗಿದೆ, ಕೇಡಿಗಳು ಅವಳ ಪ್ರಾಣಕ್ಕೇ ಕುತ್ತು ತರುವ ಹಂತದಲ್ಲಿದ್ದಾರೆ.
(3 / 9)
ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರೋ ಭಾರ್ಗವಿ, ಅವಳನ್ನ ಕಾಪಾಡಲಿಕ್ಕೆ ಬಂದಿರೋದು - ಸ್ಪೆಷಲ್ ಗೆಸ್ಟ್! ಹೌದು ಈ ಸೀರಿಯಲ್‌ನಲ್ಲಿ ಭಾರ್ಗವಿಯನ್ನು ಕಾಪಾಡಲು ವಿಶೇಷ ಅತಿಥಿ ಆಗಮಿಸಿದ್ದಾರೆ.
(4 / 9)
ಯಾರು ಆ ವಿಶೇಷ ಅತಿಥಿ - ಬಿಗ್ ಬಾಸ್ ಸೀಸನ್ ೧೨ ರಲ್ಲಿ ಅತ್ಯಂತ ಜನಪ್ರಿಯವಾದ ತಾರೆ. ಊಹಿಸಬಲ್ಲಿರಾ? ಅವರೇ ಗೌತಮಿ ಜಾಧವ್.
(5 / 9)
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಭಾರ್ಗವಿ LL.B'ಯ ಪ್ರೋಮೋದಲ್ಲಿ ಮಿಂಚುತ್ತಿದ್ದಾರೆ ತಾರೆ ಗೌತಮಿ ಜಾಧವ್.
(6 / 9)
ಭಾರ್ಗವಿಯ ಸುತ್ತಮುತ್ತ ಕೇಡಿಗಳು ಸುತ್ತುವರಿದಿದ್ದಾರೆ. ಅವಳು ಅಪಾಯದಲ್ಲಿದ್ದಾಳೆ. ಆಗ ಕೇಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವ ಭಾರ್ಗವಿಯನ್ನು ಕಾಪಾಡಲಿಕ್ಕೆ ಬರುವ ಗೌತಮಿ ಜಾಧವ್‌ಳನ್ನು ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ.
(7 / 9)
'ನಾನು ಎಲ್ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ' ಎಂದು ಅವರು ವಿಲನ್ ಗಳಿಗೆ ಪಂಚ್ ಕೊಡುವುದನ್ನು ಪ್ರೋಮೋದಲ್ಲಿ ನೋಡಬಹುದು.
ಇತರ ಗ್ಯಾಲರಿಗಳು