ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಮತದಾನ ಹೇಗೆ? ನಿಮ್ಮ ನೆಚ್ಚಿನ ಸ್ಪರ್ಧಿಗೆ ಹೀಗೆ ಓಟ್ ಮಾಡಿ, ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ
- Bigg Boss Kannada Season 11 Voting: ಬಿಗ್‌ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಸ್ಪರ್ಧಿಗಳನ್ನು ಗೆಲ್ಲಿಸಲು ಜನರು ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ಮತದಾನ ಮಾಡಬಹುದು. ಹನುಮಂತ, ಮಂಜು, ಮೋಕ್ಷಿತಾ, ರಜತ್, ಭವ್ಯಾ ಮತ್ತು ತ್ರಿವಿಕ್ರಮ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಇಲ್ಲಿ ಬಿಗ್‌ಬಾಸ್ ಕನ್ನಡ ಓಟಿಂಗ್‌ನ ಹಂತಹಂತದ ಮಾರ್ಗದರ್ಶಿ ನೀಡಲಾಗಿದೆ.
- Bigg Boss Kannada Season 11 Voting: ಬಿಗ್‌ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಸ್ಪರ್ಧಿಗಳನ್ನು ಗೆಲ್ಲಿಸಲು ಜನರು ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ಮತದಾನ ಮಾಡಬಹುದು. ಹನುಮಂತ, ಮಂಜು, ಮೋಕ್ಷಿತಾ, ರಜತ್, ಭವ್ಯಾ ಮತ್ತು ತ್ರಿವಿಕ್ರಮ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಇಲ್ಲಿ ಬಿಗ್‌ಬಾಸ್ ಕನ್ನಡ ಓಟಿಂಗ್‌ನ ಹಂತಹಂತದ ಮಾರ್ಗದರ್ಶಿ ನೀಡಲಾಗಿದೆ.
(1 / 6)
Bigg Boss Kannada Season 11 Voting: ಬಿಗ್‌ಬಾಸ್ ಕನ್ನಡ ಫಿನಾಲೆ ಕಣದಲ್ಲಿ ಹನುಮಂತ, ಮಂಜು, ಮೋಕ್ಷಿತಾ, ರಜತ್, ಭವ್ಯಾ ಮತ್ತು ತ್ರಿವಿಕ್ರಮ್ ಇದ್ದಾರೆ. ಇವರಲ್ಲಿ ನೀವು ಯಾರನ್ನು ಗೆಲ್ಲಿಸಲು ಬಯಸುವಿರಿ? ನಿಮ್ಮ ಮನಸ್ಸಿನಲ್ಲಿ ನಿರ್ದಿಷ್ಟವಾಗಿ ಇವರೇ ಗೆಲ್ಲಬೇಕೆಂಬ ಕನಸು ಇರಬಹುದು. ಚುನಾವಣೆಯಲ್ಲಿ ಮತದಾನ ಮಾಡದೆ "ನಿರ್ದಿಷ್ಟು ರಾಜಕಾರಣಿ" ಗೆಲ್ಲಬೇಕೆಂದು ಬಯಸುವುದು ಹೇಗೆ ತಪ್ಪಾಗುತ್ತದೆಯೋ ಅದೇ ರೀತಿ ಬಿಗ್‌ಬಾಸ್‌ನಲ್ಲಿಯೂ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ನಿಮ್ಮ ಅಮೂಲ್ಯ ಮತದಾನ ಮಾಡಬೇಕು. ಮೊದಲಿಗೆ ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಿ. ವೆಬ್‌ನಲ್ಲಿಯೂ ಈ ಲಿಂಕ್‌ಗೆ ಭೇಟಿ ನೀಡಬಹುದು.
(2 / 6)
ಹಂತ 1: ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ. ಜಿಯೋ ಸಿನಿಮಾ ಈಗಾಗಲೇ ಡೌನ್‌ಲೋಡ್ ಮಾಡಿಕೊಂಡವರು ಜಿಯೋ ಸಿನಿಮಾ ಅಪ್ಲಿಕೇಷನ್ ತೆರೆಯಿರಿ.
(3 / 6)
ಹಂತ 2: ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ಮೇಲ್ಬಾಗದಲ್ಲಿರುವ ಸರ್ಚ್ ಅಥವಾ ಹುಡುಕಾಟದ ಬಾಕ್ಸ್‌ನಲ್ಲಿ Bigg Boss Kannada ಎಂದು ಟೈಪ್ ಮಾಡಿ ಸರ್ಚ್ ಮಾಡಿ.
(4 / 6)
ಹಂತ 3: ಓಟ್ ನೌ ಎಂಬ ಬ್ಯಾನರ್ ಕ್ಲಿಕ್ ಮಾಡಿ. ಮುಂದಿನ ಹಂತದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗೆ ಓಟ್ ಮಾಡಲಿದ್ದೀರಿ. ನೆನಪಿಡಿ, ಸದ್ಯ ದೊಡ್ಮನೆಯೊಳಗೆ ಹನುಮಂತ, ಮಂಜು, ಮೋಕ್ಷಿತಾ, ರಜತ್, ಭವ್ಯಾ ಮತ್ತು ತ್ರಿವಿಕ್ರಮ್ ಮಾತ್ರ ಇದ್ದಾರೆ.
(5 / 6)
ಹಂತ 4: ಹನುಮಂತ, ಮಂಜು, ಮೋಕ್ಷಿತಾ, ರಜತ್, ಭವ್ಯಾ ಮತ್ತು ತ್ರಿವಿಕ್ರಮ್‌ರಲ್ಲಿ ನಿಮಗೆ ಯಾರನ್ನು ಗೆಲ್ಲಿಸಲು ಇಷ್ಟವೋ ಅವರಿಗೆ ಓಟ್ ಮಾಡಿ. ಈ ಮೂಲಕ ಈ ವರ್ಷದ ಬಿಗ್‌ಬಾಸ್ ಕನ್ನಡದ ಅಂತಿಮ ಹಂತದಲ್ಲಿ ನಿಮ್ಮ ಅಮೂಲ್ಯ ಮತ ಚಲಾಯಿಸಿ. ನಿಮ್ಮ ನೆಚ್ಚಿನ ಸ್ಪರ್ಧಿ ಬಿಗ್‌ಬಾಸ್ ಕಪ್ ಗೆಲ್ಲುವುದಕ್ಕೆ ನಿಮ್ಮ ಕೊಡುಗೆ ನೀಡಿ.
(6 / 6)
ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಯಾರೂ ವಿನ್ ಆಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಈ ವಾರಾಂತ್ಯದಲ್ಲಿ ದೊರಕಲಿದೆ. ಇದು ಕಿಚ್ಚ ಸುದೀಪ್ ನಡೆಸಿಕೊಡುವ ಕೊನೆಯ ಬಿಗ್‌ಬಾಸ್ ಕೂಡ ಹೌದು. ಈ ಬಾರಿ ಹನುಮಂತ ಗೆಲ್ಲುತ್ತಾನ? ತ್ರಿವಿಕ್ರಮ್ ಅಥವಾ ಉಗ್ರಂ ಮಂಜುವಿಗೆ ಗೆಲುವಿನ ಪಟ್ಟ ದೊರಕಲಿದೆಯೇ? ಅಥವಾ ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್ ಆಗಲಿದ್ದಾರೆಯೇ ಇತ್ಯಾದಿ ಪ್ರಶ್ನೆಗಳಿಗೆ ಈ ಭಾನುವಾರ ಉತ್ತರ ದೊರಕಲಿದೆ.
ಇತರ ಗ್ಯಾಲರಿಗಳು