ಬಿಗ್‌ಬಾಸ್ ರಿಯಾಲಿಟಿ ಶೋ ಇನ್ಮುಂದೆ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗೋದಿಲ್ವಂತೆ; ಬಿಗ್‌ಬಾಸ್ ಕನ್ನಡ ಸೀಸನ್ 12ರ ಕಥೆಯೇನು?
- ಬಿಗ್‌ಬಾಸ್ ಶೋಗಳು ಇಲ್ಲಿಯವರೆಗೆ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಮುಂದಿನ ಸೀಸನ್‌ನಿಂದ ಬಿಗ್‌ಬಾಸ್ ಮತ್ತು ಖತ್ರೋನ್ ಕೆ ಖಿಲಾಡಿ ರಿಯಾಲಿಟಿ ಶೋಗಳು ಇನ್ಮುಂದೆ ಹೊಸ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ ಎಂದು ವರದಿಗಳು ತಿಳಿಸಿವೆ.
- ಬಿಗ್‌ಬಾಸ್ ಶೋಗಳು ಇಲ್ಲಿಯವರೆಗೆ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಮುಂದಿನ ಸೀಸನ್‌ನಿಂದ ಬಿಗ್‌ಬಾಸ್ ಮತ್ತು ಖತ್ರೋನ್ ಕೆ ಖಿಲಾಡಿ ರಿಯಾಲಿಟಿ ಶೋಗಳು ಇನ್ಮುಂದೆ ಹೊಸ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ ಎಂದು ವರದಿಗಳು ತಿಳಿಸಿವೆ.
(1 / 9)
ಬಿಗ್‌ಬಾಸ್ ರಿಯಾಲಿಟಿ ಶೋಗಳು ಭಾರತದ ಜನಪ್ರಿಯ ಶೋಗಳು. ಟಿಆರ್‌ಪಿಯಲ್ಲಿಯೂ ಈ ಶೋಗಳು ಸಾಕಷ್ಟು ಸಾಧನೆ ಮಾಡಿವೆ. ಬಿಗ್‌ಬಾಸ್ ಶೋಗಳು ಇಲ್ಲಿಯವರೆಗೆ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಮುಂದಿನ ಸೀಸನ್‌ನಿಂದ ಬಿಗ್‌ಬಾಸ್ ಮತ್ತು ಖತ್ರೋನ್ ಕೆ ಖಿಲಾಡಿ ರಿಯಾಲಿಟಿ ಶೋಗಳು ಇನ್ಮುಂದೆ ಹೊಸ ಚಾನೆಲ್‌ನಲ್ಲಿ ಪ್ರಸಾರವಾಗಲಿದೆಯಂತೆ. ಈ ಹೊಸ ಬೆಳವಣಿಗೆಯು ಕಲರ್ಸ್ ಕನ್ನಡದ ಬಿಗ್‌ಬಾಸ್ ಕನ್ನಡ ಸೀಸನ್ ಮೇಲೆ ಪರಿಣಾಮ ಬೀರುವುದೇ ಕಾದು ನೋಡಬೇಕಿದೆ. ಕಿಚ್ಚ ಸುದೀಪ್ ಇಲ್ಲದ ಮುಂದಿನ ರಿಯಾಲಿಟಿ ಶೋ ಯಾವ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
(2 / 9)
'ಬಿಗ್ ಬಾಸ್' ಮತ್ತು 'ಖತ್ರೋನ್ ಕೆ ಖಿಲಾಡಿ' ಚಾನೆಲ್ ಮತ್ತು ನಿರ್ಮಾಣ ಸಂಸ್ಥೆಯ ನಡುವಿನ ಸೃಜನಶೀಲ ಭಿನ್ನಾಭಿಪ್ರಾಯಗಳಿಂದಾಗಿ ಸೋನಿಯಲ್ಲಿ ಹೊಸ ನೆಲೆಯನ್ನು ಕಂಡುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಮಾತುಕತೆಗಳು ಈಗಾಗಲೇ ನಡೆಯುತ್ತಿವೆ.
(3 / 9)
"ತಂಡವು ಇತ್ತೀಚೆಗೆ ಹೊಸ ಸೀಸನ್‌ನಲ್ಲಿ ಕೆಲಸ ಮಾಡದಿರಲು ನಿರ್ಧರಿಸಿದೆ ಎಂದು ನಿರ್ಮಾಣ ಸಂಸ್ಥೆಯ ಆಪ್ತ ಮೂಲಗಳು ತಿಳಿಸಿವೆ" ಎಂದು ಮೂಲಗಳು ತಿಳಿಸಿವೆ. "ಕೆಲವು ಸೆಲೆಬ್ರಿಟಿಗಳು ಮುಂದಿನ ಶೋಗಾಗಿ ಈಗಾಗಲೇ ಲಾಕ್ ಆಗಿದ್ದರು. ಇತರ ಸೆಲೆಬ್ರಿಟಿಗಳ ಜತೆಯೂ ತಂಡ ಮಾತುಕತೆ ನಡೆಸುತ್ತಿತ್ತು. ನಿರ್ಮಾಪಕರು ತಮ್ಮ ನಿರ್ಧಾರವನ್ನು (ಕಲರ್ಸ್ ಚಾನೆಲ್) ಚಾನೆಲ್‌ಗೆ ತಿಳಿಸಿದ ನಂತರ ಲಾಕ್ ಆಗಿರುವ ಸೆಲೆಬ್ರಿಟಿಗಳ ದಿನಾಂಕಗಳನ್ನು ರಿಲೀಸ್ ಮಾಡಲಾಯಿತು" ಎಂದು ಮೂಲಗಳು ತಿಳಿಸಿವೆ.
(4 / 9)
ಭಾರತದ ಎರಡು ಟಿವಿ ಶೋಗಳು ಕಲರ್ಸ್ ಟಿವಿಯಿಂದ ಹೊರಹೋಗುವ ಸುದ್ದಿಗಳು ಬಂದಿವೆ. ಬಿಗ್‌ಬಾಸ್ ಮತ್ತು ಖತ್ರೋನ್ ಕಿ ಖಿಲಾಡಿಗಳು ವಯಾಕಾಮ್ ಮಾಲಿಕತ್ವದ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿತ್ತು. ಇದೀಗ ಸೋನಿ ಟಿವಿ ಜತೆ ಮಾತುಕತೆ ನಡೆಯುತ್ತಿದೆ. ಮುಂದಿನ ಎಪಿಸೋಡ್‌ಗಳು ಸೋನಿ ಟಿವಿಯಲ್ಲಿ ಪ್ರಸಾರವಾದರೆ ಅಚ್ಚರಿಯಿಲ್ಲ.
(5 / 9)
ಬಿಗ್‌ಬಾಸ್ ರಿಯಾಲಿಟಿ ಶೋವನ್ನು ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದರು. ಖತ್ರೋನ್ ಕಿ ಖಿಲಾಡಿಯನ್ನು ರೋಹಿತ್ ಶೆಟ್ಟಿ ನಿರೂಪಣೆ ಮಾಡುತ್ತಾರೆ. ಇವೆರಡೂ ಶೋಗಳು ಕಲರ್ಸ್ ಟಿವಿ ಮತ್ತು ಜಿಯೋ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದವು.
(6 / 9)
ಆದರೆ, ಇದೀಗ ವಯೋಕಾಮ್ ಮತ್ತು ಎಂಡೆಮೊಲ್‌ಗಳ ಚಾನೆಲ್ ಮತ್ತು ಪ್ರೊಡಕ್ಷನ್ ಹೌಸ್‌ಗಳ ನಡುವೆ ಕ್ರಿಯೇಟಿವ್ ವ್ಯತ್ಯಾಸಗಳು ಕಾಣಿಸಿವೆ. ಹೀಗಾಗಿ ಈ ಶೋಗಳು ಸೋನಿಯತ್ತ ಪ್ರಯಾಣ ಬೆಳೆಸುವ ಸೂಚನೆ ಇದೆ.
(7 / 9)
ಈ ಹೊಸ ಬೆಳವಣಿಗೆ ಕುರಿತು ಮಾಹಿತಿ ಪಡೆಯಲು ಹಿಂದೂಸ್ತಾನ್ ಟೈಮ್ಸ್ ಕಲರ್ಸ್ ಟಿವಿಯನ್ನು ಸಂಪರ್ಕಿಸಲು ಯತ್ನಿಸಿದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ವಿಶೇಷವೆಂದರೆ ಬಿಗ್‌ಬಾಸ್ ರಿಯಾಲಿಟಿ ಶೋ ಮೊದಲು ಸೋನಿ ಟಿವಿಯಲ್ಲಿ 2006ರಲ್ಲಿ ಪ್ರಸಾರವಾಗಿತ್ತು. ಸೀಸನ್ 2ರ ಬಳಿಕ ಕಲರ್ಸ್ ಟಿವಿಗೆ ಶಿಫ್ಟ್ ಆಗಿತ್ತು.
(8 / 9)
ಬಿಗ್‌ಬಾಸ್ ಎನ್ನುವುದು ಇಂಗ್ಲೆಂಡ್‌ನ ಬಿಗ್‌ಬ್ರದರ್‌ನ ಭಾರತೀಯ ಅವತರಣಿಕೆಯಾಗಿದೆ. ಅದೇ ರೀತಿ ಖತ್ರೋನ್ ಕೆ ಖಿಲಾಡಿಯು ಅಮೆರಿಕದ ಶೋ ಫಿಯರ್ ಫ್ಯಾಕ್ಟರ್‌ನ ಭಾರತೀಯ ಅವತರಣಿಕೆ.
(9 / 9)
ಸದ್ಯ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನ ಬಿಗ್‌ಬಾಸ್ ಶೋಗಳ ಮೇಲೆ ಏನು ಪರಿಣಾಮ ಉಂಟಾಗಲಿದೆ ಎಂಬ ವಿವರ ಲಭ್ಯವಿಲ್ಲ. ಕಿಚ್ಚ ಸುದೀಪ್ ಕನ್ನಡದಲ್ಲಿ ಕಳೆದ ವರ್ಷ ತನ್ನ ಕೊನೆಯ ಬಿಗ್‌ಬಾಸ್ ಶೋ ನಡೆಸಿಕೊಟ್ಟಿದ್ದಾರೆ. ಆದರೆ, ಮುಂದಿನ ವರ್ಷದಿಂದ ಹೊಸ ನಿರೂಪಕರು ಕಾಣಿಸಿಕೊಳ್ಳಲಿದ್ದಾರೆ. ಇದೇ ಸಮಯದಲ್ಲಿ ಈ ಶೋ ಕಲರ್ಸ್ ಕನ್ನಡದಲ್ಲಿಯೇ ಇರುತ್ತದೆಯೇ? ಅಥವಾ ಬೇರೆ ಯಾವುದಾದರೂ ಚಾನೆಲ್‌ಗೆ ಶಿಫ್ಟ್ ಆಗಲಿದೆಯೇ ಎಂದು ಕಾದುನೋಡಬೇಕಿದೆ.
ಇತರ ಗ್ಯಾಲರಿಗಳು