ಮುದ್ದುಸೊಸೆ ಧಾರಾವಾಹಿ: ಪೊಲೀಸರಿಗೆ ಕರೆ ಮಾಡಿದ್ದು ವಿದ್ಯಾ ಎಂಬ ಸತ್ಯ ಗೊತ್ತಾಯ್ತು, ಚೆಲುವನ ಸಿಟ್ಟಿಗೆ ತತ್ತರಿಸಿದ ಮಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುದ್ದುಸೊಸೆ ಧಾರಾವಾಹಿ: ಪೊಲೀಸರಿಗೆ ಕರೆ ಮಾಡಿದ್ದು ವಿದ್ಯಾ ಎಂಬ ಸತ್ಯ ಗೊತ್ತಾಯ್ತು, ಚೆಲುವನ ಸಿಟ್ಟಿಗೆ ತತ್ತರಿಸಿದ ಮಗಳು

ಮುದ್ದುಸೊಸೆ ಧಾರಾವಾಹಿ: ಪೊಲೀಸರಿಗೆ ಕರೆ ಮಾಡಿದ್ದು ವಿದ್ಯಾ ಎಂಬ ಸತ್ಯ ಗೊತ್ತಾಯ್ತು, ಚೆಲುವನ ಸಿಟ್ಟಿಗೆ ತತ್ತರಿಸಿದ ಮಗಳು

ಕಲರ್ಸ್‌ ಕನ್ನಡದ ಮುದ್ದುಸೊಸೆ ಸೀರಿಯಲ್‌ನ ನಿನ್ನೆಯ ಎಪಿಸೋಡ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಲ್ಲಿಯವರೆಗೆ ಪೊಲೀಸ್‌ ಸ್ಟೇಷನ್‌ಗೆ ಕಾಲ್‌ ಮಾಡಿ ಮದುವೆ ನಿಲ್ಲಿಸಿದ್ದು ಯಾರೆಂಬ ವಿಷಯ ಯಾರಿಗೂ ತಿಳಿದಿರಲಿಲ್ಲ. ಇದೀಗ ಆ ಸತ್ಯ ಹೊರಬಿದ್ದಿದೆ.

ಮುದ್ದುಸೊಸೆ ಧಾರಾವಾಹಿ: ಶಿವರಾಮೇಗೌಡನಿಗೆ ಆರು ತಿಂಗಳು ಜೈಲಾಗಿದೆ. ಜೈಲಿನಲ್ಲಿ ಆತ ಮಗ ಭದ್ರನ ಬಗ್ಗೆಯೇ ಯೋಚಿಸುತ್ತಾನೆ. ನಾನು ಇಲ್ಲಿ ಶಿಕ್ಷೆ ಅನುಭವಿಸುತ್ತಿರುವಷ್ಟು ಹೆಚ್ಚಾಗಿ ನನ್ನ ಮಗ ನೋವು ಅನುಭವಿಸುತ್ತಿದ್ದಾನೆ. ನನಗೆ ಇಂಥ ಗತಿ ತಂದವರನ್ನು ಅವನು ಸುಮ್ಮನೆ ಬಿಡುವುದಿಲ್ಲ ಎಂದು ಇನ್ನೊಬ್ಬ ಕೈದಿ ಬಳಿ ಹೇಳುತ್ತಾನೆ.
icon

(1 / 9)

ಇತ್ತ ಭದ್ರ ಮನೆಗೆ ವಾಪಸ್‌ ಹೋಗುತ್ತಾನೆ. ಮಗನಿಗಾಗಿ ಕಾದು ಕೂತಿದ್ದ ಶಿವರಾಮೇಗೌಡನ ತಾಯಿ ಕಾರು ಬಂತು ,ನನ್ನ ಮಗ ಬಂದ ಎಂದು ಓಡಿ ಹೋಗುತ್ತಾಳೆ. ಆದರೆ ಅಲ್ಲಿ ಭದ್ರ ಇಲ್ಲದ್ದನ್ನು ನೋಡಿ ಬೇಸರಗೊಳ್ಳುತ್ತಾಳೆ.
icon

(2 / 9)

ರಾಜನಂತಿದ್ದ ನನ್ನ ಅಪ್ಪ ಇಂದು ಸೋತು ಹೋದರು ಎಂದು ಭದ್ರ ಬೇಸರಗೊಳ್ಳುತ್ತಾನೆ. ಇದು ಆರಂಭ ಅಷ್ಟೇ ಭದ್ರ, ಅಂತ್ಯ ಇನ್ನಷ್ಟು ಬಹಳ ಕೆಟ್ಟದಾಗಿರುತ್ತದೆ ಎಂದು ಈಶ್ವರಿ ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಾಳೆ.
icon

(3 / 9)

ಮದುವೆ ನಿಲ್ಲಿಸಲು ಪೊಲೀಸರಿಗೆ ಕರೆ ಮಾಡಿದ್ದು ಯಾರು ಎಂದು ತಿಳಿದುಕೊಳ್ಳಲು ಭದ್ರ, ಗೋವಿಂದ, ಸುಭಾಷ್‌, ಕ್ವಾಟ್ಲೆ ಎಲ್ಲರೂ ಮರುದಿನ ಪೊಲೀಸ್‌ ಸ್ಟೇಷನ್‌ಗೆ ಹೋಗುತ್ತಾರೆ. ಆದರೆ ಅದರ ಬಗ್ಗೆ ಮಾಹಿತಿ ನೀಡಲು ಇನ್ಸ್‌ಪೆಕ್ಟರ್‌ ನಿರಾಕರಿಸುತ್ತಾರೆ.
icon

(4 / 9)

 ತನ್ನ ಪರಿಚಯಸ್ಥ ಕಾನ್ಸ್‌ಟೆಬಲ್‌ ನಾರಾಯಣ ಬಳಿ ಚೆಲುವ ಪೋನ್‌ ಮಾಡಿದ್ದು ಯಾರು ಹೇಳಿ ಎಂದು ಮನವಿ ಮಾಡುತ್ತಾನೆ. ಫೋನ್‌ ಮಾಡಿದ್ದು ಬೇರೆ ಯಾರೂ ಅಲ್ಲ ನಿನ್ನ ಮಗಳೇ. ಆ ದಿನ ನಾನು ನೈಟ್‌ ಡ್ಯೂಟಿಯಲ್ಲಿದ್ದೆ, ಆಗ ನಿನ್ನ ಮಗಳು ಕರೆ ಮಾಡಿ ಮದುವೆ ನಿಲ್ಲಿಸುವಂತೆ ಮನವಿ ಮಾಡಿದಳು,ನಾನು ಯಾರಿಗೂ ಹೇಳದೆ ಮನೆಗೆ ಹೋದೆ ಎಂದು ಕಾನ್ಸ್‌ಟೆಬಲ್‌ ಹೇಳುತ್ತಾರೆ.
icon

(5 / 9)

ಹಾಗಾದರೆ ಇನ್ಸ್‌ಪೆಕ್ಟರ್‌ಗೆ ಈ ವಿಚಾರ ಹೇಗೆ ತಿಳಿಯಿತು ಎಂದು ಚೆಲುವ ಕೇಳುತ್ತಾನೆ. ನಾನು ಮನೆಗೆ ಹೋದ ನಂತರ ಬಹುಶ: ನಿನ್ನ ಮಗಳು ಮತ್ತೆ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿರಬಹುದು ಎನ್ನುತ್ತಾರೆ.
icon

(6 / 9)

ಪೊಲೀಸರಿಗೆ ಫೋನ್‌ ಮಾಡಿದ್ದು ಯಾರೆಂದು ಯಾರಿಗೂ ಗೊತ್ತಿಲ್ಲವಂತೆ ಎಂದು ಭದ್ರನ ಬಳಿ ಚೆಲುವ ಸುಳ್ಳು ಹೇಳಿ ಕೋಪದಿಂದ ಮನೆ ಕಡೆ ಬರುತ್ತಾನೆ. ಅಲ್ಲಿ ವಿದ್ಯಾ ಅಮ್ಮನ ಬಳಿ ತಾನು ಮತ್ತೆ ಕಾಲೇಜಿಗೆ ಹೋಗಲು ಅಪ್ಪನ ಬಳಿ ಮಾತನಾಡು ಎಂದು ಮನವಿ ಮಾಡುತ್ತಾಳೆ.
icon

(7 / 9)

ಅಜ್ಜಿ ಬೇಡವೆಂದರೂ ಟ್ಯೂಷನ್‌ಗೆ ಹೋಗುತ್ತೇನೆ ಎಂದು ಬ್ಯಾಗ್‌ ತೆಗೆದುಕೊಂಡು ಖುಷಿಯಿಂದ ಹೊರಡುತ್ತಾಳೆ. ಮಗಳನ್ನು ನೋಡುತ್ತಿದ್ದಂತೆ ಚೆಲುವ ಇನ್ನಷ್ಟು ಸಿಟ್ಟಾಗುತ್ತಾನೆ. ವಿದ್ಯಾಳನ್ನು ಮನೆ ಒಳಗೆ ಎಳೆತಂದು ಬಾಗಿಲು ಹಾಕುತ್ತಾನೆ. ಏಕೆ ಈ ರೀತಿ ನಡೆದುಕೊಳ್ಳುತ್ತಿದ್ದೀಯ ಎಂದು ರತ್ನ ಹಾಗೂ ಕಾಳವ್ವ ಕೇಳುತ್ತಾರೆ.
icon

(8 / 9)

ಪೊಲೀಸರಿಗೆ ಕರೆ ಮಾಡಿದ್ದು ವಿದ್ಯಾ ಎಂಬ ಸತ್ಯ ತಿಳಿದು ರತ್ನ ಯಾವ ರೀತಿ ಪ್ರತಿಕ್ರಿಯಿಸುತ್ತಾಳೆ? ವಿದ್ಯಾ ಆಸೆ ಪಟ್ಟಂತೆ ಚೆಲುವ ಅವಳನ್ನು ಮತ್ತೆ ಕಾಲೇಜಿಗೆ ಕಳಿಸುತ್ತಾನಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.‌
icon

(9 / 9)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು