ನೂರು ಜನ್ಮಕೂ ಹೊಸ ಧಾರಾವಾಹಿ ಕೈ ಹಿಡಿದ ವೀಕ್ಷಕ, ಅಣ್ಣಯ್ಯನಿಗೂ ಬಂಪರ್; ಹೀಗಿದೆ ಕನ್ನಡ ಸೀರಿಯಲ್‌ಗಳ ಟಿಆರ್‌ಪಿ ಲಿಸ್ಟ್
- Kannada Serial TRP: ಕನ್ನಡದ ಕಿರುತೆರೆಯಲ್ಲಿ ಬಗೆಬಗೆ ಕಥೆಯ ವಿಭಿನ್ನ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಅದರಂತೆ, ಇತ್ತೀಚೆಗಷ್ಟೇ ಹೊಸ ಸೀರಿಯಲ್‌ಗಳೂ ಆಗಮಿಸಿವೆ. ಆ ಪೈಕಿ ಟಿಆರ್‌ಪಿ ಲೆಕ್ಕಾಚಾರದಲ್ಲಿ ಯಾವ ಧಾರಾವಾಹಿ ನಂಬರ್ 1 ಇದೆ? ಯಾವೆಲ್ಲ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಬದಲಾವಣೆಗಳಾಗಿವೆ?ಮೇಲುಗೈ ಸಾಧಿಸಿದವರು ಯಾರು?
- Kannada Serial TRP: ಕನ್ನಡದ ಕಿರುತೆರೆಯಲ್ಲಿ ಬಗೆಬಗೆ ಕಥೆಯ ವಿಭಿನ್ನ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಅದರಂತೆ, ಇತ್ತೀಚೆಗಷ್ಟೇ ಹೊಸ ಸೀರಿಯಲ್‌ಗಳೂ ಆಗಮಿಸಿವೆ. ಆ ಪೈಕಿ ಟಿಆರ್‌ಪಿ ಲೆಕ್ಕಾಚಾರದಲ್ಲಿ ಯಾವ ಧಾರಾವಾಹಿ ನಂಬರ್ 1 ಇದೆ? ಯಾವೆಲ್ಲ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಬದಲಾವಣೆಗಳಾಗಿವೆ?ಮೇಲುಗೈ ಸಾಧಿಸಿದವರು ಯಾರು?
(1 / 12)
ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿ ಈ ಸಲ ಟಾಪ್ ಸ್ಥಾನದಲ್ಲಿದೆ. ಅದರಂತೆ, ಅಣ್ಣಯ್ಯ ಸೀರಿಯಲ್ ಈ ಸಲ ಎರಡನೇ ಸ್ಥಾನಕ್ಕೆ ಜಿಗಿದಿದೆ. ಕಲರ್ಸ್ ಕನ್ನಡದ ಹೊಸ ಸೀರಿಯಲ್ ನೂರು ಜನ್ಮಕೂ ಸಹ ಒಳ್ಳೆಯ ನಂಬರ್ ಪಡೆದಿದೆ. ಇಲ್ಲಿವೆ ಕನ್ನಡದ ಟಾಪ್ 10 ಸೀರಿಯಲ್‌ಗಳು.
(2 / 12)
ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿ ಈ ಹಿಂದಿನ ಟಿಆರ್‌ಪಿಗೆ ಹೋಲಿಕೆ ಮಾಡಿದರೆ ಕೊಂಚ ಇಳಿಕೆ ಕಂಡಿದೆ. ಈ ಬಾರಿ 7.9 ಟಿಆರ್‌ಪಿ ಮೂಲಕ ಮೊದಲ ಸ್ಥಾನದಲ್ಲಿದೆ.
(3 / 12)
ಅದೇ ರೀತಿ ಅಣ್ಣಯ್ಯ ಧಾರಾವಾಹಿಯಲ್ಲಿ ತಂಗಿಯ ಮದುವೆ ವಿಚಾರವಾಗಿ ಸಾಕಷ್ಟು ಅಚ್ಚರಿಯ ಘಟನಾವಳಿಗಳು ನಡೆದಿವೆ. ಆ ಕಾರಣಕ್ಕೆ ಅಣ್ಣಯ್ಯ ಸೀರಿಯಲ್ ಕುತೂಹಲ ಮೂಡಿಸಿದ್ದು. 7.7 ಟಿಆರ್‌ಪಿ ಪಡೆದುಕೊಂಡಿದೆ.
(4 / 12)
ಅದೇ ರೀತಿ ಜೀ ಕನ್ನಡದ ಮತ್ತೊಂದು ಸೀರಿಯಲ್ ಅಮೃತಧಾರೆ ಸಹ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಅಮ್ಮನ ಆಗಮನದಿಂದ ಗೌತಮ್ ಸಂಭ್ರಮದಲ್ಲಿದ್ದಾನೆ. ಈ ಸೀರಿಯಲ್ ಸಹ 7.7 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.
(6 / 12)
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಮದುವೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಶ್ರಾವಣಿ ಯಾರನ್ನು ಮದುವೆ ಆಗ್ತಾಳೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ. ಈ ಸೀರಿಯಲ್ 6.8 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ.
(7 / 12)
ಇನ್ನು ಕಳೆದ ಕೆಲ ವಾರಗಳಿಂದ ಟಾಪ್ ಐದರ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಭಾಗ್ಯಲಕ್ಷ್ಮೀ ಸೀರಿಯಲ್ ಈ ಬಾರಿ ಕೊಂಚ ಕೆಳಕ್ಕಿಳಿದಿದೆ. ಈ ಸಲ 6.5 ಟಿಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ.
(8 / 12)
ಕಲರ್ಸ್ ಕನ್ನಡದ ಹೊಸ ಸೀರಿಯಲ್ ನೂರು ಜನ್ಮಕೂ ಎರಡು ವಾರಗಳ ಹಿಂದೆಯೇ ಶುರುವಾಗಿತ್ತು. ಈಗ ಈ ಸೀರಿಯಲ್‌ಗೆ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಅದರಂತೆ 5.8 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ.
(9 / 12)
ಮೊದಲ ಸ್ಥಾನಕ್ಕೆ ಬಂದು ದಾಖಲೆ ಬರೆದಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ಇದೀಗ ಕುಸಿತ ಕಂಡಿದೆ. 5.8 ಟಿಆರ್‌ಪಿ ಮೂಲಕ ಏಳನೇ ಸ್ಥಾನದಲ್ಲಿದೆ.
(10 / 12)
ಕಲರ್ಸ್ ಕನ್ನಡದ ಇನ್ನೊಂದು ಸೀರಿಯಲ್ ನಿನಗಾಗಿ ಸಹ ತಟಸ್ಥ ಸ್ಥಿತಿಯಲ್ಲಿದೆ. ಈ ಸೀರಿಯಲ್ ಈ ಬಾರಿ 5.3 ಟಿಆರ್‌ಪಿ ರೇಟಿಂಗ್ ಪಡೆದು ಎಂಟನೇ ಸ್ಥಾನದಲ್ಲಿದೆ.
(11 / 12)
ರಾಮಾಚಾರಿ ಧಾರಾವಾಹಿಯೂ 5.3 ಟಿಆರ್‌ಪಿ ಪಡೆದು, ನಿನಗಾಗಿ ಸೀರಿಯಲ್ ಜತೆಗೆ ಸರಿ ಸಮ ಸ್ಥಾನ ಅಲಂಕರಿಸಿದೆ. ಈ ಧಾರಾವಾಹಿ, ಈ ಮೊದಲು ಟಾಪ್ ಐದರಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿತ್ತು.
ಇತರ ಗ್ಯಾಲರಿಗಳು