ಬಾಲ್ಯ ವಿವಾಹ ಪ್ರಕರಣದಲ್ಲಿ ಶಿವರಾಮೇಗೌಡ ಬಂಧನ, ವಿದ್ಯಾ ಕಾಲ್ಗುಣ ಸರಿ ಇಲ್ವಂತೆ- ಮುದ್ದು ಸೊಸೆ ಸೀರಿಯಲ್ ಕಥೆ
ಮುದ್ದು ಸೊಸೆ ಧಾರಾವಾಹಿ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಏನೆಲ್ಲ ನಡೆಯಿತು ನೋಡೋಣ. ವಿದ್ಯಾಗೆ ಭದ್ರ ತಾಳಿ ಕಟ್ಟುವ ಸಮಯಕ್ಕೆ ಪೊಲೀಸರು ಬರುತ್ತಾರೆ. ಮದುವೆ ನಿಲ್ಲುತ್ತದೆ. ಶಿವರಾಮೇಗೌಡನ ಬಂಧನವಾಗುತ್ತದೆ.
(1 / 10)
ಮುದ್ದು ಸೊಸೆ ಧಾರಾವಾಹಿ ಕಥೆ: ಮುದ್ದು ಸೊಸೆ ಧಾರಾವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಹಲವು ಘಟನೆಗಳು ನಡೆದಿವೆ. ವಿದ್ಯಾಗೆ ಭದ್ರ ತಾಳಿ ಕಟ್ಟುವ ಸಮಯಕ್ಕೆ ಪೊಲೀಸರು ಆಗಮಿಸಿ ಈ ಮದುವೆ ನಡೆಯಲು ಸಾಧ್ಯವಿಲ್ಲ ನಿಲ್ಲಿಸಿ ಎನ್ನುತ್ತಾರೆ. ಮದುವೆಗೆ ಹುಡುಗ, ಹುಡುಗಿ ಇಬ್ಬರೂ ಒಪ್ಪಿದ್ದಾರೆ ಆದರೂ ಏಕೆ ಮದುವೆ ನಿಲ್ಲಿಸಬೇಕು ಎಂದು ಶಿವರಾಮೇಗೌಡ ಕೇಳುತ್ತಾನೆ.
(2 / 10)
ಬಾಲ್ಯ ವಿವಾಹ ಕಾರಣ: ಇದು ಬಾಲ್ಯ ವಿವಾಹ, ಹುಡುಗಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂದು ಇನ್ಸ್‌ಪೆಕ್ಟರ್ ಹೇಳುತ್ತಾರೆ. ನೀನು ಮದುವೆ ಮಂಟಪ ಬಿಟ್ಟು ಬರದಿದ್ದರೆ ಬಟ್ಟೆ ಬಿಚ್ಚಿಸಿ ಕರೆದೊಯ್ಯುತ್ತೇನೆ ಎಂದು ಭದ್ರನಿಗೆ ಎಚ್ಚರಿಕೆ ಕೊಡುತ್ತಾರೆ. ಮಗನಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಸಿಟ್ಟಾದ ಶಿವರಾಮೇಗೌಡ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಮಾಡುತ್ತಾನೆ.
(3 / 10)
ಬಾಲ್ಯ ವಿವಾಹ ಮಾಡುವುದು ದೊಡ್ಡ ತಪ್ಪು. ಅದರ ಜೊತೆಗೆ ಡ್ಯೂಟಿಯಲ್ಲಿದ್ದ ಪೊಲೀಸ್ ಆಫೀಸರ್ ಮೇಲೆ ಕೈ ಮಾಡಿ ಇನ್ನೂ ದೊಡ್ಡ ತಪ್ಪು ಮಾಡಿದ್ದೀಯ ಇದರ ಪರಿಣಾಮ ಏನು ಅನ್ನೋದನ್ನು ತೋರಿಸುತ್ತೇನೆ ಬಾ ಎಂದು ಶಿವರಾಮೇಗೌಡನ ಕುತ್ತಿಗೆ ಪಟ್ಟಿ ಹಿಡಿದು ಪೊಲೀಸರು ಠಾಣೆಗೆ ಕರೆದೊಯ್ಯುತ್ತಾರೆ.
(4 / 10)
ಮದುವೆ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ ಇಷ್ಟೆಲ್ಲಾ ರಾದ್ಧಾಂತ ಆಗಿದ್ದನ್ನು ನೋಡಿ ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಶಿವರಾಮೇಗೌಡನಿಗೆ ಈ ಪರಿಸ್ಥಿತಿ ಬಂದಿದ್ದಕ್ಕೆ ಸಾವಿತ್ರಿ, ವಿನಂತಿ, ಈಶ್ವರಿ, ಚಿತ್ರಾ, ಸುಭಾಷ್ ಖುಷಿಯಾಗುತ್ತಾರೆ. ಮದುವೆ ನಡೆಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾ ಕೂಡಾ ಖುಷಿಯಾಗುತ್ತಾಳೆ. ತಂದೆಯನ್ನು ಬಿಡಿಸಲು ಕ್ವಾಟ್ಲೆ ಹಾಗೂ ಚಿಕ್ಕಪ್ಪನ ಜೊತೆ ಭದ್ರ ಪೊಲೀಸ್ ಸ್ಟೇಷನ್‌ಗೆ ಹೋಗುತ್ತಾನೆ.
(5 / 10)
ಅವರ ಹಿಂದೆಯೇ ಶಿವರಾಮೇಗೌಡನ ತಾಯಿ ಓಡೋಡಿ ಹೋಗುತ್ತಾಳೆ. ನನ್ನ ಮಗ ಸುತ್ತಮುತ್ತಲಿನ ಹಳ್ಳಿಯಲೆಲ್ಲಾ ಒಳ್ಳೆ ಹೆಸರು ಸಂಪಾದಿಸಿದ್ದ. ಗತ್ತಿನಿಂದ ಮೆರೆಯುತ್ತಿದ್ದವನನ್ನು ಪೊಲೀಸರು ಈ ರೀತಿ ಎಳೆದೊಯ್ಯುತ್ತಿದ್ದಾರಲ್ಲ ಎಂದು ಕಣ್ಣೀರಿಡುತ್ತಾಳೆ. ಮಗ ಪೊಲೀಸ್ ಸ್ಟೇಷನ್‌ಗೆ ಹೋಗಿದ್ದಕ್ಕೆ ಶಿವರಾಮೇಗೌಡನ ತಾಯಿ ಕಣ್ಣೀರಿಟ್ಟರೆ, ಮಗಳ ಮದುವೆ ನಿಂತುಹೋಯ್ತಲ್ಲಾ ಎಂದು ಚೆಲುವ ಆತಂಕ ವ್ಯಕ್ತಪಡಿಸುತ್ತಾನೆ.
(6 / 10)
ನನ್ನ ಮಗಳ ಗತಿ ಏನು? ಹಸೆಮಣೆವರೆಗೂ ಬಂದ ಹೆಣ್ಣಿನ ಮದುವೆ ಈ ರೀತಿ ಅರ್ಧದಲ್ಲಿ ನಿಂತರೆ ಮುಂದೆ ಏನು ಗತಿ? ನನ್ನ ಮಗಳಿಗೆ ನೀವಾದರೂ ಧೈರ್ಯ ಹೇಳಿ ಅಮ್ಮ ಎಂದು ಮನವಿ ಮಾಡುತ್ತಾನೆ. ಚೆಲುವನ ಮಾತುಗಳನ್ನು ಕೇಳಿಸಿಕೊಂಡು ಶಿವರಾಮೇಗೌಡನ ತಾಯಿ ಸಿಟ್ಟಾಗುತ್ತಾಳೆ. ಇದೆಲ್ಲದಕ್ಕೂ ನೀನು ನಿನ್ನ ಮಗಳೇ ಕಾರಣ. ನನ್ನ ಮಗ ರಾಜನಂತೆ ಇದ್ದ, ನಿನ್ನ ಮಗಳ ಕಾಲ್ಗುಣದಿಂದಲೇ ಅವನಿಗೆ ಈ ಗತಿ ಬಂದಿದ್ದು, ನನ್ನ ಮಗ ಪೊಲೀಸ್ ಸ್ಟೇಷನ್‌ಗೆ ಹೋದ ಚಿಂತೆ ನನಗೆ, ನೀನು ನಿನ್ನ ಮಗಳ ಮದುವೆ ವಿಚಾರವೇ ದೊಡ್ಡದು ಎಂದುಕೊಂಡಿದ್ದೀಯ ಎನ್ನುತ್ತಾಳೆ.
(7 / 10)
ಆ ಮಾತು ಕೇಳಿ ಚೆಲುವ ಹಾಗೂ ರತ್ನ ಬೇಸರಗೊಳ್ಳುತ್ತಾರೆ. ತಾಯಿ ಮಾತಿಗೆ ದನಿಗೂಡಿಸುವ ಸಾವಿತ್ರಿ ಮನೆಗೆ ಕಾಲಿಡುವ ಮುನ್ನವೇ ಹೀಗೆಲ್ಲಾ ಆಯ್ತು, ಇನ್ನು ಮನೆಗೆ ಬಂದಿದ್ದರೆ ಇನ್ನು ಎಷ್ಟೆಲ್ಲಾ ಸಮಸ್ಯೆ ಆಗುವುದೋ ಎನ್ನುತ್ತಾಳೆ.
(8 / 10)
ಶಿವರಾಮೇಗೌಡನನ್ನು ಪೊಲೀಸರು ಕರೆದೊಯ್ಯುತ್ತಿರುವ ದೃಶ್ಯವನ್ನು ಸುಭಾಷ್ ತನ್ನ ಸ್ನೇಹಿತನ ಮೂಲಕ ವಿಡಿಯೋ ಮಾಡಿಸುತ್ತಾನೆ. ಅದನ್ನು ನೋಡಿ ಈಶ್ವರಿ ಖುಷಿಯಾಗುತ್ತಾಳೆ. ಆ ಹುಡುಗಿಯನ್ನು ಮನೆಗೆ ಕರೆತಂದು ಶಿವರಾಮೇಗೌಡನಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದೆ, ಆದರೆ ನೀನು ಅದಕ್ಕಿಂತ ದೊಡ್ಡ ಕೆಲಸವನ್ನೇ ಮಾಡಿದ್ದೀಯ ಈ ವಿಡಿಯೋವನ್ನು ನಿನ್ನ ಸ್ನೇಹಿತರಿಗೆ ಕಳಿಸಿ ವೈರಲ್ ಮಾಡಿಸು ಎನ್ನುತ್ತಾಳೆ.
(9 / 10)
ವಿದ್ಯಾ ತನ್ನ ತಂದೆ ತಾಯಿ ಜೊತೆ ಖುಷಿಯಿಂದಲೇ ಮನೆಗೆ ವಾಪಸ್ ಹೋಗುತ್ತಾಳೆ. ಇತ್ತ ಭದ್ರ ಪೊಲೀಸ್ ಸ್ಟೇಷನ್‌ಗೆ ಹೋಗುತ್ತಾನೆ. ಆದರೆ ಅವನನ್ನು ಪೊಲೀಸರು ಒಳಗೆ ಹೋಗದಂತೆ ತಡೆಯುತ್ತಾರೆ. ಲಾಯರ್ ಹಾಗೂ ಮಿನಿಸ್ಟರ್‌ಗೆ ಕರೆ ಮಾಡುವಂತೆ ಕ್ವಾಟ್ಲೆ ಹಾಗೂ ಚಿಕ್ಕಪ್ಪನಿಗೆ ಹೇಳುತ್ತಾನೆ.
(10 / 10)
ಲಾಯರ್ ಬಂದು ಇನ್ಸ್‌ಪೆಕ್ಟರ್ ಜೊತೆ ಮಾತನಾಡುತ್ತಾರೆ. ನಾನು ಆಗಲೇ ಎಫ್‌ಐಆರ್ ಹಾಕಿ ಆಯ್ತು, ಈ ವಿಷಯವನ್ನು ನೀವು ಕೋರ್ಟ್‌ನಲ್ಲಿ ನೋಡಿಕೊಳ್ಳಿ ಎಂದು ಇನ್ಸ್‌ಪೆಕ್ಟರ್ ಹೇಳುತ್ತಾರೆ. ತಂದೆಯನ್ನು ಈ ಪರಿಸ್ಥಿತಿಗೆ ತಂದವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಭದ್ರ ಅರಚುತ್ತಾನೆ. ಶಿವರಾಮೇಗೌಡ ಪೊಲೀಸ್ ಸ್ಟೇಷನ್‌ನಿಂದ ವಾಪಸ್ ಬರುತ್ತಾನಾ? ಸುಭಾಷ್ ರೆಕಾರ್ಡ್ ಮಾಡಿದ ವಿಡಿಯೋ ವೈರಲ್ ಆಗುವುದಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.
ಇತರ ಗ್ಯಾಲರಿಗಳು