ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್‌, ಭೂಮಿಕಾ ಅಪ್ಪ ಸದಾಶಿವನಿಗೂ ಗೌತಮ್ ತಾಯಿ ಭಾಗ್ಯಮ್ಮನಿಗೂ ನಂಟು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್‌, ಭೂಮಿಕಾ ಅಪ್ಪ ಸದಾಶಿವನಿಗೂ ಗೌತಮ್ ತಾಯಿ ಭಾಗ್ಯಮ್ಮನಿಗೂ ನಂಟು

ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್‌, ಭೂಮಿಕಾ ಅಪ್ಪ ಸದಾಶಿವನಿಗೂ ಗೌತಮ್ ತಾಯಿ ಭಾಗ್ಯಮ್ಮನಿಗೂ ನಂಟು

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಈಗಾಗಲೇ ಸೀರಿಯಲ್‌ಗೆ ಮರು ಎಂಟ್ರಿ ನೀಡಿರುವ ಸದಾಶಿವನಿಗೆ ಗೌತಮ್‌ ತಾಯಿ ಭಾಗ್ಯಮ್ಮನ ಪರಿಚಯ ಇರುವ ಸಂಗತಿ ಬಯಲಾಗಿದೆ.

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಇತ್ತೀಚೆಗಷ್ಟೇ ಮಹಾ ತಿರುವು ಪಡೆದುಕೊಂಡಿದೆ. ಗೌತಮ್‌ಗೆ ಕೊನೆಗೂ ತನ್ನ ತಾಯಿ ಸಿಕ್ಕಿದ್ದಾರೆ. ಅಮ್ಮ ಸಿಕ್ಕ ಖುಷಿಯಲ್ಲಿರುವ ಗೌತಮ್‌ ಮನೆಗೆ ಭೂಮಿಕಾ ತಂದೆ ಸದಾಶಿವ ಬಂದಿದ್ದಾರೆ. ಭಾಗ್ಯಮ್ಮನನ್ನು ನೋಡಿದ ತಕ್ಷಣ ನನಗೆ ಇವರ ಪರಿಚಯವಿದೆ ಎಂದಿದ್ದಾರೆ. ಈ ಮೂಲಕ ಭಾಗ್ಯಮ್ಮನಿಗೂ ಸದಾಶಿವರಿಗೂ ನಂಟು ಇರುವ ಸಂಗತಿ ಬಹಿರಂಗವಾಗಿದೆ.
icon

(1 / 10)

ಪಾರ್ಥ ಮತ್ತು ಅಪೇಕ್ಷಾ ಮದುವೆಯಾದ ಬಳಿಕ ನೊಂದ ಸದಾಶಿವ ಮನೆ ಬಿಟ್ಟು ಹೋಗಿದ್ದರು. ನನ್ನ ಇಷ್ಟದ ವಿರುದ್ಧ ಮಗಳು ಮದುವೆಯಾಗಿರುವುದು ಅವರಿಗೆ ಕೋಪ ತರಿಸಿತ್ತು. ಇದಾದ ಬಳಿಕ ಭೂಮಿಕಾಳ ತಾಯಿ, ಸಹೋದರ, ಮಹಿಮಾಳ ಕಥೆಯೂ ಸೀರಿಯಲ್‌ನಲ್ಲಿ ಕೊನೆಗೊಂಡಿತ್ತು.  
icon

(2 / 10)

ಇದೀಗ ಸದಾಶಿವ ಮತ್ತು ಮಂದಾಕಿನಿ ಗೌತಮ್‌ ದಿವಾನ್‌ ಮನೆಗೆ ಬಂದಿದ್ದಾರೆ. ಅಪ್ಪ ಮತ್ತು ಅಮ್ಮ ಮನೆಗೆ ಬಂದಿರುವುದರಿಂದ ಭೂಮಿಕಾ ತುಂಬಾ ಖುಷಿಯಾಗಿದ್ದಾರೆ. ವಿಶೇಷವೆಂದರೆ, ಸದಾಶಿವ ಹಳೆಯದನ್ನೆಲ್ಲ ಮರೆತಿದ್ದಾರೆ. ಪಾರ್ಥನನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಅಪ್ಪನ ಬಗ್ಗೆ ಅಪೇಕ್ಷಾಳ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
icon

(3 / 10)

ಗೌತಮ್‌ ತನ್ನ ತಾಯಿಯನ್ನು ಸದಾಶಿವ ಮತ್ತು ಮಂದಾಕಿನಿಗೆ ಪರಿಚಯಿಸುತ್ತಾರೆ. ಭಾಗ್ಯಮ್ಮಳ ಮುಖ ನೋಡಿದ ತಕ್ಷಣ ಸದಾಶಿವ "ಭಾಗ್ಯಕ್ಕ" ಎಂದು ಹೇಳುತ್ತಾರೆ. ಭಾಗ್ಯಕ್ಕನ ಕಾಲಿಗೆ ನಮಸ್ಕರಿಸುತ್ತಾರೆ. 
icon

(4 / 10)

ಮಾವ ಅಮ್ಮ ನಿಮಗೆ ಗೊತ್ತಾ? ಎಂದು ಗೌತಮ್‌ ಕೇಳುತ್ತಾರೆ. "ಇವರು ನನ್ನ ಪಾಲಿನ ದೇವರು" ಎಂದು ಸದಾಶಿವ ಹೇಳುತ್ತಾರೆ. ಪ್ರಮೋದಲ್ಲಿ ಅಷ್ಟೇ ಇದೆ. ಸದಾಶಿವನ ಟೀಚರ್‌ ಆಗಿದ್ದರೋ, ಬಾಲ್ಯದಲ್ಲಿ ಸದಾಶಿವನಿಗೆ ಆಶ್ರಯ ನೀಡಿದ್ದಾರೋ ಅಥವಾ ಇನ್ಯಾವುದೋ ಹೊಸ ಕಥೆ ಇರುವುದೇ ಎಂದು ಇಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.
icon

(5 / 10)

ಈ ಪ್ರೊಮೊಗೆ ಪ್ರೇಕ್ಷಕರು ಖುಷಿಯಾಗಿದ್ದಾರೆ. "ಚೆನ್ನಾಗಿದೆ, ಅಮೃತಧಾರೆಯಲ್ಲಿ ಮತ್ತೊಂದು ಟ್ವಿಸ್ಟ್‌ ನೀಡುತ್ತಾ ಇದ್ದಾರೆ" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ.
icon

(6 / 10)

"ಸದಾಶಿವ ಅವರನ್ನೂ ಕಥೆಗೆ ಬಳಸಿಕೊಳ್ಳುವುದು ಒಳ್ಳೆಯ ಪ್ರಯತ್ನ. ಅದೇ ರೀತಿ ಜೀವ ಮತ್ತು ಮಹಿಮಾ ಅವರನ್ನೂ ಬಳಸಿಕೊಳ್ಳಿ. ಶಕುಂತಲಾಳನ್ನು ವಿರೋಧಿಸುವ ಮಹಿಮಾ ಇದ್ದರೆ ಚೆನ್ನಾಗಿರುತ್ತದೆ. ಗೌತಮ್‌ ಜೀವನಿಗೆ ಹೆಲ್ಪ್‌ ಮಾಡಿದ್ದಾರೆ. ಅವರ ಕಥೆ ಏನಾಯಿತು" "ತುಂಬಾ ಚೆನ್ನಾಗಿದೆ, ಟ್ವಿಸ್ಟ್ ಅಂದ್ರೆ ಟ್ವಿಸ್ಟ್,ಇನ್ನಾದರೂ ಕಷ್ಟಗಳು‌ ದೂರಾಗಿ ಎಲ್ಲರೂ ಚೆನ್ನಾಗಿ ಬಾಳ್ವೆ ನಡೆಸುವಂತಾಗಲಿ" ಎಂದದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ.  
icon

(7 / 10)

ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಭಾಗ್ಯಮ್ಮ ಏನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ, ಶಕುಂತಲಾ ಗ್ಯಾಂಗ್‌ಗೆ ತಮ್ಮ ಕಥೆ ಬಹಿರಂಗವಾಗುವ ಭಯವಿಲ್ಲ. ಸದ್ಯ ಶಕುಂತಲಾ ಅವರ ಗೆಳತಿ ಬರುತ್ತಾಳೆ. ಆಕೆಯೊಂದಿಗೆ ಶಕುಂತಲಾ ಒಂದಿಷ್ಟು ದಿನ ಇರುತ್ತಾರೆ.  ಅಲ್ಲಿಯವರೆಗೆ ಶಕುಂತಲಾ ಕಡೆಯಿಂದ ಯಾವುದೇ ಅಪಾಯವಾಗುವ ಸೂಚನೆಯಿಲ್ಲ.
icon

(8 / 10)

ಇತ್ತೀಚಿನ ಮಹಾ ತಿರುವು ಮತ್ತು ಅಮೃತಧಾರೆಯ ಕೆಲವು ಕಲಾವಿದರು ತಮಿಳು ಸೀರಿಯಲ್‌ನಲ್ಲಿ ಕಾಣಿಸಿಕೊಂಡ ಕಾರಣ ಈ ಸೀರಿಯಲ್‌ ಬೇಗ ಮುಕ್ತಾಯವಾಗಬಹುದೇ ಎಂಬ ಸಂದೇಹವಿತ್ತು. ಆದರೆ, ಸದ್ಯ ಹೊಸ ಟ್ವಿಸ್ಟ್‌ಗಳ ಮೂಲಕ ಕಥೆ ಇನ್ನೂ ಮುಂದುವರೆಯುವ ಸೂಚನೆ ದೊರಕಿದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ  ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.
icon

(10 / 10)

ಇತರ ಗ್ಯಾಲರಿಗಳು