ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿ ಮುಗ್ಧೆ ಮಲ್ಲಿ ಈಗ ಪ್ಯಾನ್‌ ಇಂಡಿಯಾ ಚಿತ್ರದ ಹೀರೋಯಿನ್!‌ ಯಾವ ಸಿನಿಮಾ, ಹೀರೋ ಯಾರು?

ಅಮೃತಧಾರೆ ಧಾರಾವಾಹಿ ಮುಗ್ಧೆ ಮಲ್ಲಿ ಈಗ ಪ್ಯಾನ್‌ ಇಂಡಿಯಾ ಚಿತ್ರದ ಹೀರೋಯಿನ್!‌ ಯಾವ ಸಿನಿಮಾ, ಹೀರೋ ಯಾರು?

  • ಅಮೃತಧಾರೆ ಸೀರಿಯಲ್‌ನಲ್ಲಿ ನಟಿಸುತ್ತಿರುವ ಮಲ್ಲಿ ಅಲಿಯಾಸ್‌ ರಾಧಾ ಭಗವತಿ, ಮುಗ್ಧ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡು, ಬಳಿಕ ಜೈದೇವ್‌ನ ಪತ್ನಿಯಾಗಿ, ದಿವಾನ್‌ ಮನೆಯ ಸೊಸೆಯಾ ಆಗಿದ್ದಾರೆ. ಮಲ್ಲಿ ಪಾತ್ರಕ್ಕೆ ಮೆಚ್ಚುಗೆಯೂ ಸಿಕ್ಕಿದೆ. ಇದೀಗ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಾಯಕಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ರಾಧಾ. ಇಲ್ಲಿದೆ ಹೆಚ್ಚಿನ ಮಾಹಿತಿ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಹೆಸರಿನ ಮುಗ್ಧ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ರಾಧಾ ಭಗವತಿ.
icon

(1 / 8)

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಹೆಸರಿನ ಮುಗ್ಧ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ರಾಧಾ ಭಗವತಿ.(Instagram\ Radha Bhagavati)

ನೋಡಲು ಅಪ್ಸರೆಯಂತಿದ್ದರೂ, ಮಲ್ಲಿ ಅನ್ನೋ ಹಳ್ಳಿ ಹುಡುಗಿ ಪಾತ್ರಕ್ಕೆ ಕೊಂಚ ಡಿ ಗ್ಲಾಮ್‌ ಲುಕ್‌ನಲ್ಲಿ ಎದುರಾಗಿದ್ದಾರವರು.
icon

(2 / 8)

ಜೈದೇವನ ಪತ್ನಿಯಾಗಿ ರಾಧಾ ಭಗವತಿ ಪಾತ್ರ ಮೂಡಿಬರುತ್ತಿದೆ. ಏನೂ ತಿಳಿಯದ ಪೆದ್ದು ಮುದ್ದು ಗೃಹಿಣಿಯಾಗಿ ಅವರ ಪಾತ್ರ ನೋಡುಗರ ಮೆಚ್ಚುಗೆ ಗಳಿಸುತ್ತಿದೆ. 
icon

(3 / 8)

ಇದೀಗ ಇದೇ ರಾಧಾ ಭಗವತಿ ಪ್ಯಾನ್‌ ಇಂಡಿಯಾ ಮಟ್ಟದ ಬಬನ್‌ ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಚಾನ್ಸ್‌ ಗಿಟ್ಟಿಸಿಕೊಂಡಿದ್ದಾರೆ. 
icon

(4 / 8)

ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿಲಿದ್ದಾರೆ ಕುಶಾಲ್ ರಾಘವೇಂದ್ರ. ಕುಶಾಲ್‌ಗೆ ಜೋಡಿಯಾಗಿ ರಾಧಾ ನಟಿಸಲಿದ್ದಾರೆ. 
icon

(5 / 8)

ಇತ್ತೀಚೆಗಷ್ಟೇ ಬೆಂಗಳೂರಿನ ನಾಗರಭಾವಿಯ  ಶ್ರೀ ವೆಂಕಟೇಶ್ವರ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದೆ. 
icon

(6 / 8)

ಕನ್ನಡ, ತೆಲುಗು ತಮಿಳು ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಬನ್‌ ಹೆಸರಿನ ಸಿನಿಮಾ ಮೂಡಿಬರಲಿದೆ. ಅಂದಹಾಗೆ, ನಟಿ ರಾಧಾ ಈ ಹಿಂದೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದರು. ವಸಂತ ಕಾಲದ ಹೂಗಳು ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. 
icon

(7 / 8)

ಇದೀಗ ನೇರವಾಗಿ ಪ್ಯಾನ್‌ ಇಂಡಿಯಾ ಮಟ್ಟದ ಸಿನಿಮಾದ ಭಾಗವಾಗಿದ್ದಾರೆ ರಾಧಾ ಭಗವತಿ. ಆಗಸ್ಟ್‌ನಲ್ಲಿ ಈ ಚಿತ್ರದ ಶೂಟಿಂಗ್‌ ಶುರುವಾಗಲಿದೆ. ನೈಟ್ ಹುಡ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮಾಲಾ ರಮೇಶ್ ಎಂಬುವವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು