ಕನ್ನಡ ಸುದ್ದಿ  /  Photo Gallery  /  Television News Amruthadhaare Serial Today Episode Goutham Practics To Propose Bhumika With Red Rose Kannada Pcp

Amruthadhaare: ಕೆಂಪು ಗುಲಾಬಿ ಹಿಡಿದುಕೊಂಡು ಭೂಮಿಕಾಗೆ ಪ್ರಪೋಸ್‌ ಮಾಡ್ತಾರೆ ಗೌತಮ್‌; ಭೂಮಿ ಕೂಡ ಮನಸ್ಸಿನ ಮಾತು ಹೇಳಲು ರೆಡಿ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾರ ಪ್ರಪೋಸ್‌ ಇರಲಿದೆ. ಗೌತಮ್‌ ಅವರು ಆಫೀಸ್‌ನಲ್ಲಿ ಭೂಮಿಕಾಳಿಗೆ ಕೆಂಪು ಗುಲಾಬಿ ನೀಡುವ ಕುರಿತು ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಝೀ ಕನ್ನಡ ವಾಹಿನಿ ಇಂದು ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಹಲವು ವಿಚಾರಗಳು ತಿಳಿದಬಂದಿವೆ.

ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಇಂದಿನ ಪ್ರಮೋ ಬಿಡುಗಡೆ ಮಾಡಿದೆ. ಭೂಮಿಕಾಳಿಗೆ ಪ್ರಪೋಸ್‌ ಮಾಡಲು ಗೌತಮ್‌ ಕೆಂಪು ಹೂವು ಹಿಡಿದುಕೊಂಡು ಪ್ರ್ಯಾಕ್ಟೀಸ್‌ ಮಾಡುತ್ತಿದ್ದಾರೆ.  ಇದೇ ಸಮಯದಲ್ಲಿ ಇನ್ನೊಂದೆಡೆ ಭೂಮಿಕಾ ಕೂಡ ಇಂದು ಗೌತಮ್‌ಗೆ ಮನಸ್ಸಿನ ಮಾತು ಹೇಳಿಬಿಡಬೇಕೆಂದು ಪೇಪರ್‌ನಲ್ಲಿ ತನ್ನ ಪ್ರೀತಿಯ ಮಾತುಗಳನ್ನು ಬರೆಯುತ್ತಿದ್ದಾರೆ.
icon

(1 / 10)

ಗೌತಮ್‌ ಅವರು ಆಫೀಸ್‌ನಲ್ಲಿ ಏಕಪಾತ್ರಭಿನಯ ಮಾಡುತ್ತಿದ್ದಾರೆ. ಒಂದು ಕಡೆ ನಿಂತರೆ ಭೂಮಿಕಾ. ಇನ್ನೊಂದು ಕಡೆ ನಿಂತರೆ ಗೌತಮ್‌. "ಗೌತಮ್‌ ಅವರೇ ಏನಕ್ಕೆ ಬರೋಕ್ಕೆ ಹೇಳಿದ್ದು" "ಭೂಮಿಕಾ ಇದನ್ನು ನಿಮಗೆ ಅಂತ ತಂದಿದ್ದು" ಎಂದೆಲ್ಲ ಪ್ರಾಕ್ಟೀಸ್‌ ಮಾಡ್ತಾ ಇರ್ತಾರೆ.
icon

(2 / 10)

ಗೌತಮ್‌ ಪ್ರ್ಯಾಕ್ಟೀಸ್‌ ಮಾಡೋದನ್ನು ಮರೆಯಲ್ಲಿ ನಿಂತು ನೋಡುತ್ತ ಆನಂದ್‌ ಅಚ್ಚರಿ ಪಡುತ್ತಾನೆ. "ಓಹ್‌ ಮೈ ಗಾಡ್‌ ನನಗೆ ರೋಸ್‌ ಅಂದರೆ ತುಂಬಾ ಇಷ್ಟ" ಎಂದು ಭೂಮಿಕಾ ಹೇಳಿದಂತೆ ಗೌತಮ್‌ ಆಕ್ಟ್‌ ಮಾಡುತ್ತಾರೆ.
icon

(3 / 10)

"ಭೂಮಿಕಾ ಅವರೇ ನೀವು ಕೂಡ ರೋಸ್‌ ರೀತಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರ" "ಐ ಲವ್‌ ಯು ಭೂಮಿಕಾ" ಎಂದೆಲ್ಲ ಪ್ರಿಪೇರ್‌ ಆಗ್ತಾ ಇದ್ದಾರೆ ಗೌತಮ್‌.
icon

(4 / 10)

ಮರೆಯಲ್ಲಿ ನಿಂತ ಆನಂದ್‌ "ಬಂಧನ ಸಿನಿಮಾವನ್ನೇ ತೋರಿಸ್ತಾ ಇದ್ದಾನೆ" ಎಂದೆಲ್ಲ ಅಂದುಕೊಳ್ಳುತ್ತಾರೆ. ಇನ್ನೊಂದೆಡೆ ಭೂಮಿಕಾ ತನ್ನ ಮನಸ್ಸಿನ ಮಾತುಗಳನ್ನು ಕಾಗದದಲ್ಲಿ ಬರೆಯುತ್ತಿದ್ದಾರೆ.  
icon

(5 / 10)

ಶುಕ್ರವಾರದ ಸಂಚಿಕೆಯಲ್ಲೂ ಗೌತಮ್‌ ಮತ್ತು ಭೂಮಿಕಾರ ಪ್ರೀತಿಯ ಪಿಸು ಮಾತುಗಳು ಕೇಳಿದ್ದವು. ಇವರಿಬ್ಬರು ಹೋಳಿ  ಹಬ್ಬ ಆಚರಿಸಿದ್ದರು.
icon

(6 / 10)

ಗೌತಮ್‌ ನಿದ್ದೆಯಲ್ಲಿದ್ದ ವೇಳೆ ಭೂಮಿಕಾ ಗೌತಮ್‌ ಮುಖಕ್ಕೆ ಬಣ್ಣ ಬಳಿದಿದ್ದಳು. ಗೌತಮ್‌ ಅಮ್ಮ ಅದೇ ರೀತಿ ಮಾಡುತ್ತಿದ್ದರು. ಅದನ್ನೇ ಭೂಮಿ ಮಾಡಿದ್ದಳು.
icon

(7 / 10)

ಬೆಳಗ್ಗೆ ಎದ್ದ ಗೌತಮ್‌ ಭೂಮಿಕಾಳಿಗೂ ಬಣ್ಣ ಬಳಿದಿದ್ದರು. ಒಟ್ಟಾರೆ, ಶುಕ್ರವಾರದ ಸಂಚಿಕೆಯಲ್ಲಿ ಇವರ ಪ್ರೀತಿ ಬಣ್ಣಗಳಲ್ಲಿ ಮಿಂದಿತ್ತು.
icon

(8 / 10)

ಇಂದು ಶನಿವಾರದ ಸಂಚಿಕೆಯಲ್ಲಿ ಅಮೃತಧಾರೆಯಲ್ಲಿ ಭೂಮಿ ಮತ್ತು ಗೌತಮ್‌ ಪ್ರಪೋಸ್‌ ಮಾಡುವ ಸನ್ನಿವೇಶ ಇರುವ ಸೂಚನೆಯು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಿಂದ ತಿಳಿದುಬಂದಿದೆ. ಪ್ರಪೋಸ್‌ ಮಾಡಲು ಯಶಸ್ವಿಯಾಗುತ್ತಾರ ಕಾದು ನೋಡಬೇಕಿದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(10 / 10)

ಇತರ ಗ್ಯಾಲರಿಗಳು