Amruthadhaare: ಅತ್ತೆ ಮಂದಾಕಿನಿ ಬೆಂಬಲಕ್ಕೆ ನಿಂತು ಅಬ್ಬರಿಸಿದ ಮಹಿಮಾ; ಸರ ರೋಲ್ಡ್‌ಗೋಲ್ಡಾ? ಒರಿಜಿನಲಾ ಎಂದು ತನಿಖೆ ಮಾಡಿದವರಿಗೆ ಶಾಸ್ತ್ರಿ
- Amruthadhaare Serial Today Episode: ಝೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಎಪಿಸೋಡ್‌ನಲ್ಲಿ ಮಂದಾಕಿನಿ ಅತ್ತೆಗೆ ಆಗುವ ಅವಮಾನವನ್ನು ಮಹಿಮಾ ತಪ್ಪಿಸಿದ್ದಾಳೆ. ಶಕುಂತಲಾದೇವಿ ಸ್ನೇಹಿತೆಯರ ಸೊಕ್ಕು ಇಳಿಸಿದ್ದಾಳೆ.
- Amruthadhaare Serial Today Episode: ಝೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಎಪಿಸೋಡ್‌ನಲ್ಲಿ ಮಂದಾಕಿನಿ ಅತ್ತೆಗೆ ಆಗುವ ಅವಮಾನವನ್ನು ಮಹಿಮಾ ತಪ್ಪಿಸಿದ್ದಾಳೆ. ಶಕುಂತಲಾದೇವಿ ಸ್ನೇಹಿತೆಯರ ಸೊಕ್ಕು ಇಳಿಸಿದ್ದಾಳೆ.
(1 / 14)
ಏನು ಶಕುಂತಲಾ, ನಿಮ್ಮ ಭೀಗತಿ ದೊಡ್ಡ ಸ್ಕ್ಯಾಮ್ ಮಾಡಿದಂತೆ ಇದೆ. ನಿಮ್ಮ ಮಗನಿಗೆ ಬರ್ತ್‌ಡೇ ಅಂತ ಚೈನ್ ಹಾಕಿದ್ರಲ್ವ. ಅದು ರೋಲ್ಡ್ ಗೋಲ್ಡ್ ಅಂತೆ. ಅಂತಹ ಯಾವುದೇ ಡಿಸೈನ್ ಆ ಶಾಪ್‌ನಲ್ಲಿ ಇಲ್ವಂತೆ. ನಾನು ಆ ಶಾಪ್‌ನವರಲ್ಲಿ ವಿಚಾರಿಸಿದೆ ಎಂದು ಶಕುಂತಲಾದೇವಿಯ ಸ್ನೇಹಿತೆ ಎಲ್ಲರ ಮುಂದೆ ಮಂದಾಕಿನಿಯ ಸುದ್ದಿ ಮಾತನಾಡುತ್ತಾಳೆ.
(2 / 14)
ಶಕುಂತಲಾದೇವಿಯ ಸ್ನೇಹಿತೆ ಹಾಗೆ ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಈಗಾಗಲೇ ಈ ವಿಷಯ ತಿಳಿದಿರುವ ಭೂಮಿಕಾಳಿಗೂ ಏನು ಮಾಡಬೇಕೆಂದು ತಿಳಿಯುವುದಿಲ್ಲ.
(3 / 14)
ನಾನು ಆಗ್ಲೇ ಅಂದುಕೊಂಡೆ. ಇದು ಗೋಲ್ಡೇ ಅಲ್ಲ, ರೋಲ್ಡ್ ಗೋಲ್ಡ್ ಅಂತ ಎಂದು ಮತ್ತೊಬ್ಬಳು ಸ್ನೇಹಿತೆಯೂ ಕೊಂಕಾಗಿ ಮಾತಾಡನಾಡುತ್ತಾಳೆ.
(4 / 14)
ನೋಡಿ ಇಲ್ಲಿ ಜುವೆಲ್ಲರಿ ಶಾಪ್‌ನವರೇ ಮಾಡಿರುವ ಮೆಸೆಜ್. ನಿಮ್ಮ ಬೀಗತಿ ಹೇಳಿದ್ದೆಲ್ಲ ಸುಳ್ಳು. ಬಿಲ್ಡಪ್‌ಗೋಸ್ಕರ ಹೀಗೆಲ್ಲ ಮಾಡ್ತಾರೆ ಎಂದು ಶಕುಂತಲಾದೇವಿಯ ಸ್ನೇಹಿತೆ ಚುಚ್ಚು ಮಾತುಗಳನ್ನಾಡುತ್ತಾರೆ.
(5 / 14)
ಈ ಸಂದರ್ಭದಲ್ಲಿ ಶಕುಂತಲಾ "ನಮ್ಮ ಬೀಗರು ಹೀಗ್ಯಾಕೆ ಮಾಡ್ತಾರೆ" ಎನ್ನುತ್ತಾರೆ. "ಯಾಕೆ ಎಂದು ಅವರನ್ನೇ ಕೇಳಬೇಕು" ಎಂದಾಗ ಎಕ್ಸ್‌ಕ್ಯೂಸ್‌ಮೀ ಎಂಬ ಧ್ವನಿ ಕೇಳುತ್ತದೆ.
(6 / 14)
ಎಕ್ಸ್‌ಕ್ಯೂಮಿ ಎಂದು ಜೋರಾದ ಧ್ವನಿಯಲ್ಲಿ ಮಹಿಮಾ ಹೇಳುತ್ತಾಳೆ. ತನ್ನ ಅತ್ತೆಯ ಮರ್ಯಾದೆ ಎಲ್ಲರ ಮುಂದೆ ಹೋಗುವುದನ್ನು ಆಕೆ ಇಷ್ಟಪಡುವುದಿಲ್ಲ.
(7 / 14)
ಯಾರ ಬಗ್ಗೆ ಹೀಗೆಲ್ಲ ಮಾತನಾಡ್ತಾ ಇದ್ದೀರ? ಇನ್ನೊಬ್ಬರ ಬಗ್ಗೆ ಹೀಗೆಲ್ಲ ಚೀಪ್ ಆಗಿ ಮಾತನಾಡಲು ನಾಚಿಕೆಯಾಗೋಲ್ವ ಎಂದು ಮಹಿಮಾ ಪ್ರಶ್ನಿಸುತ್ತಾಳೆ.
(8 / 14)
ನಾಚಿಕೆಯಾಗಬೇಕಾದ್ದು ನಮಗಲ್ಲ. ರಾಜಾರೋಷವಾಗಿ ರೋಲ್ಡ್ ಗೋಲ್ಡ್ ಹಾಕಿದ್ದಾರಲ್ವ ಅವರಿಗೆ ನಾಚಿಕೆಯಾಗಬೇಕು ಎಂದು ಶಕುಂತಲಾ ಸ್ನೇಹಿತೆ ಹೇಳುತ್ತಾರೆ.
(9 / 14)
ಅದು ರೋಲ್ಡ್‌ಗೋಲ್ಡ್ ಅಲ್ಲ. ಒರಿಜಿನಲ್ ಅಂತ ಆಣೆ ಮಾಡಿ ಹೇಳೋಕ್ಕೆ ಹೇಳಿ ಎಂದಾಗ ಭೂಮಿಕಾ, ಮಂದಾಕಿನಿ ಸೇರಿದಂತೆ ಎಲ್ಲರ ಕಣ್ಣಲ್ಲೂ ದುಃಖದ ಛಾಯೆ ಮೂಡುತ್ತದೆ.
(10 / 14)
"ಹಲೋ, ಮಾತನಾಡುವುದಕ್ಕೂ ಮೊದಲು ಸರಿಯಾಗಿ ತಿಳಿದುಕೊಂಡು ಮಾತನಾಡಿ. ಆ ಚೈನ್ ತಂದದ್ದು ನಾನೇ" ಎಂದು ಮಹಿಮಾ ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ.
(11 / 14)
"ಅದು ರೋಲ್ಡ್‌ಗೋಲ್ಡೇ, ತಂದದ್ದು ನಾನೇ. ಕೊಟ್ಟದ್ದು ನಮ್ಮ ಅತ್ತೆ. ಹಾಕಿಕೊಂಡದ್ದು ನಮ್ಮಣ್ಣ. ಇದರ ನಡುವೆ ನಿಮ್ದೇನ್ರಿ ಪ್ರಾಬ್ಲಂ" ಎಂದು ಮಹಿಮಾ ಪ್ರಶ್ನಿಸುತ್ತಾಳೆ.
(12 / 14)
ಅದು ರಿಯಲಾ, ಡುಪ್ಲಿಕೇಟಾ ಎಂದು ಇನ್ವೆಸ್ಟಿಗೇಷನ್ ಮಾಡೋಕ್ಕೆ ಹೋಗ್ತಿರಲ್ವ ನಿಮಗೆ ಬೇರೆ ಕೆಲಸ ಇಲ್ವ? ಎಂದಾಗ ಶಕುಂತಲಾ "ಮಹಿ" ಎನ್ನುತ್ತಾರೆ.
(13 / 14)
ಇವರು ನನ್ನ ಫ್ಯಾಮಿಲಿ ಬಗ್ಗೆ, ನನ್ನ ಅತ್ತೆ ಬಗ್ಗೆ ಮಾತನಾಡ್ತಾ ಇದ್ದಾರೆ. ಹೀಗಾಗಿ ನಾನು ಮಾತನಾಡಲೇಬೇಕು ಎಂದು ಮಹಿಮಾ ಹೇಳುತ್ತಾಳೆ.
ಇತರ ಗ್ಯಾಲರಿಗಳು