ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆನೆ ದಪ್ಪದಪ್ಪಗೆ ಇತ್ತು, ಮೊಲ ನನ್ನ ಥರ ಮುದ್ದಾಗಿತ್ತು; ಆನಂದನ ಮಕ್ಕಳಿಗೆ ಆನೆ ಮೊಲದ ಮದುವೆ ಕಥೆ ಹೇಳಿದ ಭೂಮಿಕಾ- ಅಮೃತಧಾರೆ ಸೀರಿಯಲ್‌

ಆನೆ ದಪ್ಪದಪ್ಪಗೆ ಇತ್ತು, ಮೊಲ ನನ್ನ ಥರ ಮುದ್ದಾಗಿತ್ತು; ಆನಂದನ ಮಕ್ಕಳಿಗೆ ಆನೆ ಮೊಲದ ಮದುವೆ ಕಥೆ ಹೇಳಿದ ಭೂಮಿಕಾ- ಅಮೃತಧಾರೆ ಸೀರಿಯಲ್‌

  • Amruthadhaare Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇಂದಿನ ಸಂಚಿಕೆಯಲ್ಲಿ ಆನಂದನ ಮಕ್ಕಳನ್ನು ನಿದ್ದೆ ಮಾಡಿಸುವ ಟಾಸ್ಕ್‌ ಭೂಮಿಕಾ ಮತ್ತು ಆನಂದ್‌ಗೆ ಬಂದಿದೆ.

ಆನಂದನ ಮಕ್ಕಳಿಗೆ ಭೂಮಿಕಾ "ಆನೆ ಮತ್ತು ಮೊಲದ ಕಥೆ" ಹೇಳುವ ಮೂಲ ನಿದ್ದೆ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಭೂಮಿಕಾ ಬೇಕೆಂದೇ ಗೌತಮ್‌ರನ್ನು ಕಿಚಾಯಿಸಲು ಆನೆ ಮತ್ತು ಮೊಲದ ಕಥೆ ಹೇಳಿದ್ದಾರೆ.
icon

(1 / 10)

ಒಂದೂರಲ್ಲಿ ಒಂದು ಆನೆ ಮತ್ತು ಮೊಲ ಇತ್ತು. ಆನೆ ದಪ್ಪದಪ್ಪಗೆ ಡುಮ್ಮಗೆ ಇತ್ತು ಎಂದು ಭೂಮಿಕಾ ಪರೋಕ್ಷವಾಗಿ ಡುಮ್ಮ ಸರ್‌ಗೆ ಟಾಂಗ್‌ ನೀಡಿದ್ದಾರೆ.
icon

(2 / 10)

ಮೊಲ ನನ್ನ ತರಹ ಮುದ್ದುಮುದ್ದಾಗಿ ಇತ್ತು ಎಂದು ಭೂಮಿಕಾ ಮಕ್ಕಳಿಗೆ ಕಥೆ ಹೇಳಿದಾಗ ಗೌತಮ್‌ ದಿವಾನ್‌ "ಮೊಲ ಏನೂ ಕಡಿಮೆ ಇರಲಿಲ್ಲ. ನೋಡಲಷ್ಟೇ ಮುದ್ದು ಮುದ್ದಾಗಿತ್ತು, ಬಾಳ ಡೇಂಜರಸ್‌" ಎಂದು ಹೇಳುತ್ತಾರೆ.
icon

(3 / 10)

ಆ ಆನೆ ಇದೆಯಲ್ವ ಅದಕ್ಕೆ ಇಷ್ಟು ದೊಡ್ಡ ಹೊಟ್ಟೆ ಇತ್ತು ಎನ್ನುತ್ತಾರೆ ಭೂಮಿಕಾ. ತುಂಬಾ ಕೊಬ್ಬು ತುಂಬಿತ್ತು. ಆಮೇಲೆ ಆನೆಗೂ ಮೊಲಕ್ಕೂ ಮದುವೆ ಆಗೋಯ್ತು ಎಂದು ಭೂಮಿಕಾ ಕಥೆ ಹೇಳಿದ್ದಾರೆ.
icon

(4 / 10)

ಆಮೇಲೆ ಏನಾಯ್ತು ಎಂದು ಆನಂದ್‌ ಮಗ ಕುತೂಹಲದಿಂದ ಕೇಳುತ್ತಾನೆ. "ಆಮೇಲೆ ದಿನಾ ಜಗಳ, ಜಗಳ ಅಷ್ಟೇ ಆಗಿತ್ತು" ಆಮೇಲೆ, ಮೊಲಕ್ಕೆ ಆನೆ ಮೇಲೆ ಪ್ರೀತಿ ಶುರುವಾಯ್ತು" ಅಂತಾರೆ ಭೂಮಿಕಾ. 
icon

(5 / 10)

ಮಕ್ಕಳು ನಿದ್ದೆ ಮಾಡುತ್ತಾರೆ. ಮಕ್ಕಳಿಗೆ ಕಥೆ ಅರ್ಥ ಆಯ್ತು ಎಂದು ಭೂಮಿ ಹೇಳಿದಾಗ ಗೌತಮ್‌ "ಅದು ಹೇಗೆ ಸಾಧ್ಯ, ಮಕ್ಕಳಿಗೆ ಅರ್ಥ ಆಗೋಲ್ಲ" ಎನ್ನುತ್ತಾನೆ. 
icon

(6 / 10)

ಆಗ….  ನಿದ್ದೆ ಮಾಡದ ಆನಂದ್‌ ಮಗ "ನನಗೂ ಅರ್ಥ ಆಯ್ತು, ನೀವು ಆನೆ, ನೀವು ಮೊಲ" ಎಂದು ಹೇಳುತ್ತಾನೆ. ಎಲ್ಲರೂ ನಗುತ್ತಾರೆ. ಈ ಮೂಲಕ ಅಮೃತಧಾರೆ ಧಾರಾವಾಹಿಯಲ್ಲಿ ಒಲವ ಅಮೃತಧಾರೆ ಸುರಿದಿದೆ.
icon

(7 / 10)

ಆನಂದ್‌ ಮನೆಯಲ್ಲಿ ಪಾರ್ಟಿ ಮಾಡಲು ಗೌತಮ್‌, ಭೂಮಿಕಾ, ಪಾರ್ಥ, ಅಪೇಕ್ಷಾ ಬಂದಿದ್ದರು. ಅಲ್ಲಿ ಊಟ, ಪಾರ್ಟಿ ಮಸ್ತಿ ಮಾಡಿದ್ದರು. ಟ್ರೂಥ್‌ ಆಂಡ್‌ ಡೇರ್‌ ಗೇಮ್ಸ್‌ ಆಡಿ ಎಲ್ಲರ ಮನಸ್ಸಲ್ಲಿ ಇರುವ ಮಾತುಗಳನ್ನು ಹೊರಕ್ಕೆ ತೆಗೆದಿದ್ದರು. 
icon

(8 / 10)

ಇಂದಿನ ಸಂಚಿಕೆಯಲ್ಲಿ ಆನಂದ್‌ ಮನೆಯ ಪಾರ್ಟಿ ಮುಗಿದು ಮತ್ತೆ ಮೊದಲಿನ ಜೀವನಕ್ಕೆ ಎಲ್ಲರೂ ಹಿಂತುರುಗುವ ನಿರೀಕ್ಷೆಯಿದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಇತರ ಗ್ಯಾಲರಿಗಳು