ಕನ್ನಡ ಸುದ್ದಿ  /  Photo Gallery  /  Television News Amruthadhaare Today Episode Goutham Bhumika Horoscope Problem Jataka Dosha Shakuntala Devi Plan Pcp

Amruthadhaare: ಭೂಮಿಕಾ-ಗೌತಮ್‌ ಜಾತಕದಲ್ಲಿ ದೋಷ, ಇಬ್ರು ದೂರ ಇರಬೇಕು ಅಂದ್ರು ಶಾಸ್ತ್ರಿಗಳು: ನಾಟಕ ಜಾಸ್ತಿ ಆಯ್ತು ಬೋರಿಂಗ್‌ ಅಂದ ಪ್ರೇಕ್ಷಕ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಎಪಿಸೋಡ್‌ನ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾ ಒಂದಾಗುವುದನ್ನು ತಪ್ಪಿಸಲು ಶಕುಂತಲಾದೇವಿ ಖತರ್ನಾಕ್‌ ಯೋಜನೆ ಮಾಡಿರುವುದು ಗೊತ್ತಾಗಿದೆ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಟ್ವಿಸ್ಟ್‌ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.

ಮನೆಗೆ ಬಂದ ಶಾಸ್ತ್ರಿಗಳು ಗೌತಮ್‌ ಅವರಲ್ಲಿ "ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕು. ನಿಮ್ಮ ಮತ್ತು ಭೂಮಿಕಾ ಅವರ ಜಾತಕದಲ್ಲಿ ದೋಷ ಇದೆ. ಇಬ್ಬರೂ ಒಂದಾಗಲು ಸಾಧ್ಯವೇ ಇಲ್ಲ"  ಎಂದು ಹೇಳುತ್ತಾರೆ.  ಈ ಮೂಲಕ ಶಕುಂತಲಾದೇವಿ ಹೇಳಿದಂತೆ ಶಾಸ್ತ್ರಿಗಳು ಹೇಳುತ್ತಾರೆ. ಆದರೆ, ಗೌತಮ್‌ ಮತ್ತು ಭೂಮಿಕಾ ಒಂದಾಗುವುದನ್ನು ಕಾಯುತ್ತಿದ್ದ ಪ್ರೇಕ್ಷಕರಿಗೆ ಇದರಿಂದ ಬೇಸರವಾಗಿದೆ. 
icon

(1 / 10)

"ನೀವಿಬ್ಬರು ಮದುವೆಯೇ ಆಗಬಾರದಿತ್ತು. ನಿಮ್ಮಿಬ್ಬರ ಜಾತಕಗಳು ಒಂದಕ್ಕೊಂದು ವಿರುದ್ಧವಾಗಿದೆ ಎಂದು ಶಾಸ್ತ್ರಿಗಳು ಹೇಳುತ್ತಾರೆ. ಹೊಂದಾಣಿಕೆ ಎನ್ನುವುದು ಎಳ್ಳಷ್ಟು ಇಲ್ಲ ಎಂದು ಹೇಳುತ್ತಾರೆ. 
icon

(2 / 10)

ದೈಹಿಕವಾಗಿ ಇಬ್ರು ದೂರದೂರನೇ ಇರಬೇಕು ಎಂದು ಶಾಸ್ತ್ರಿಗಳು ಹೇಳುತ್ತಾರೆ. ಈ ಮೂಲಕ ಇನ್ಮುಂದೆ ಡುಮ್ಮ  ಸರ್‌ ಭೂಮಿಕಾರಿಂದ ದೂರ ಇರುವ ಸೂಚನೆ ದೊರಕಿದೆ. ಎಲ್ಲಾದರೂ ಹೀಗೆ ಮಾಡದೆ ಇದ್ದರೆ ನಿಮ್ಮ ಮಗ ತನ್ನ ಹೆಂಡತಿನ ಕಳೆದುಕೊಳ್ಳಬಹುದು ಎಂದು ಶಾಸ್ತ್ರಿಗಳು ಎಚ್ಚರಿಸುತ್ತಾರೆ. 
icon

(3 / 10)

ಇದೆಲ್ಲವೂ ಶಕುಂತಲಾದೇವಿ ಕೈವಾಡ ಎನ್ನುವುದು ಈಗಾಗಲೇ ಪ್ರೇಕ್ಷಕರು ತಿಳಿದುಕೊಂಡಿದ್ದಾರೆ. ಭೂಮಿಕಾ ಲವ್‌ ಲೆಟರ್‌ ಬರೆದು ಗೌತಮ್‌ಗೆ ನೀಡಬೇಕೆಂದುಕೊಂಡಿದ್ದ.   ಆದರೆ, ಆ ಲವ್‌ಲೆಟರ್‌ ಅನ್ನು ಅಶ್ವಿನಿ ನೋಡಿ ತಾಯಿ ಶಕುಂತಲಾದೇವಿಗೆ ತಿಳಿಸುತ್ತಾಳೆ.
icon

(4 / 10)

ಇನ್ನೊಂದೆಡೆ ಭೂಮಿಕಾಳಿಗೆ ಪ್ರಪೋಸ್‌ ಮಾಡಲು ಗೌತಮ್‌ ಪ್ರ್ಯಾಕ್ಟೀಸ್‌ ಮಾಡುವುದು ಶಕುಂತಲಾದೇವಿ ಗಮನಕ್ಕೆ ಬಂದಿತ್ತು. ಇವರಿಬ್ಬರು ಒಂದಾದ್ರೆ ನಮಗೆ ಉಳಿಗಾಲವಿಲ್ಲ ಎಂದು ಶಕುಂತಲಾದೇವಿ ಮತ್ತು ಆಕೆಯ ಮಗಳು ಯೋಚಿಸುತ್ತಾರೆ. 
icon

(5 / 10)

ಇದೇ ಕಾರಣಕ್ಕೆ ಇವರಿಬ್ಬರನ್ನು ದೂರ ಮಾಡಲು ಶಾಸ್ತ್ರಿಗಳಲ್ಲಿ  ಸುಳ್ಳು ಹೇಳಿಸಿದ್ದಾರೆ. ಭೂಮಿಕಾಳನ್ನು ಅತಿಯಾಗಿ ಪ್ರೀತಿಸುವ ಗೌತಮ್‌ಗೆ ಇದು ದೊಡ್ಡ ಆಘಾತವಾಗಿದೆ.
icon

(6 / 10)

ಭೂಮಿಕಾಳಿಗೆ ಏನೂ ಅಪಾಯ ಆಗಬಾರದು ಎಂದು ಗೌತಮ್‌ ಇನ್ಮುಂದೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸದೆ ಇರಬಹುದು. ಭೂಮಿಕಾಳಿಗೆ ಗೌತಮ್‌ನ ಈ ಮನಸ್ಥಿತಿ ಅರಿವಾಗದೆ ಹೋಗಬಹುದು. ಹತ್ತಿರ ಬರಲು ಪ್ರಯತ್ನಿಸಿದಾಗ ದೂರ ಹೋಗಲು ಪ್ರಯತ್ನಿಸುವಂತಹ ಸಂದರ್ಭ ಬರಬಹುದು. 
icon

(7 / 10)

ಒಟ್ಟಾರೆ ಈ ಬಾರಿಯಾದರೂ ಡುಮ್ಮ ಸರ್‌, ಭೂಮಿ ಒಂದಾಗಿ ಇನ್ನೊಂದು ಪುಟಾಣಿ ಡುಮ್ಮ ಮಗು ಬರಲಿ ಎಂದು ಬಯಸಿದ ಆನಂದ್‌ಗೆ, ಪ್ರೇಕ್ಷಕರಿಗೆ ಈ ಟ್ವಿಸ್ಟ್‌ ನಿರಾಸೆಯನ್ನೂ ತರಬಹುದು. 
icon

(8 / 10)

ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಪ್ರೇಕ್ಷಕರು ಈ ಟ್ವಿಸ್ಟ್‌ಗೆ ಅಸಮಾಧಾನ ತೋರಿಸಿದ್ದಾರೆ. "ನೆಗಟಿವ್ ಪಾತ್ರ ತುಂಬಾ ಧೀರ್ಘವಾಗಿ ತೋರಿಸಿದರೆ ನೋಡುವ ಪ್ರೇಕ್ಷಕರಿಗೆ ಖಾಯಿಲೆ ಬರುವುದಂತೂ ಸತ್ಯ" "ನಾಟಕ ಜಾಸ್ತಿ ಆಯ್ತು. ನೋಡೋದಕ್ಕೆ ಬೇಜಾರು" "ಈ ಗೌತಮ್ ಭೂಮಿಕ ಸೀರಿಯಲ್ ತುಂಬಾನೇ ಒಳ್ಳೆಯದಾಗಿ ಮೂಡಿ ಬರ್ತಾ ಇತ್ತು .ಕೊನೆಗೂ ಅದಕ್ಕೊಂದು ಕೊಳ್ಳಿ ಇಟ್ಟಂತಾಯ್ತು. ತುಂಬಾ ಬೋರಾಗಿ ತೋರಿಸಬೇಡಿ" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.  
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(10 / 10)

IPL_Entry_Point

ಇತರ ಗ್ಯಾಲರಿಗಳು