ಕುಟುಂಬವೀಗ ಹಿರಿದಾಗುತ್ತಿದೆ; ಸ್ವೀಟ್ ಸುದ್ದಿ ಕೊಟ್ಟ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯ ಅಗಸ್ತ್ಯ
- Kaveri Kannada Medium Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ಸದ್ಯ ವೀಕ್ಷಕರನ್ನು ಸೆಳೆಯುತ್ತಿದೆ. ಇದೀಗ ಇದೇ ಸೀರಿಯಲ್‌ನಲ್ಲಿ ಅಗಸ್ತ್ಯ ಹೆಸರಿನ ಪಾತ್ರ ನಿಭಾಯಿಸುತ್ತಿರುವ ರಕ್ಷಿತ್ ಅರಸ್ ಗೋಪಾಲ್, ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಇಬ್ಬರಿದ್ದವರೀಗ ಮೂವರಾಗುತ್ತಿದ್ದೇವೆ ಎಂದಿದ್ದಾರೆ.

(1 / 8)
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ನಲ್ಲಿ ಅಗಸ್ತ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟ ರಕ್ಷಿತ್ ಅರಸ್ ಗೋಪಾಲ್.
(instagram/ rakshit_urs_gopal)(3 / 8)
ಕಳೆದ ವರ್ಷವಷ್ಟೇ ಮನೋರಂಜಿತಾ ಜೈನ್ ಅವರ ಜತೆಗೆ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ರಕ್ಷಿತ್ ಅರಸ್ ಗೋಪಾಲ್, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
(4 / 8)
ಇತ್ತೀಚೆಗೆ ಪ್ರೇಮಿಗಳ ದಿನದಂದು ಈ ಖುಷಿಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು ರಕ್ಷಿತ್.
(5 / 8)
ಪತ್ನಿ ಮನೋರಂಜಿತಾ ಜೈನ್ ಜತೆಗೆ ಬೀಬಿ ಬಂಪ್ ಫೋಟೋಶೂಟ್ ಮಾಡಿಸಿ, ಆ ಫೋಟೋಗಳ ಗುಚ್ಛವನ್ನು ಹಂಚಿಕೊಂಡಿದ್ದಾರೆ.
(6 / 8)
ಈ ಸಲದ ವ್ಯಾಲೆಂಟೈನ್ಸ್ ದಿನ ಹೆಚ್ಚುವರಿ ಸ್ವೀಟ್. ನಮ್ಮ ಕುಟುಂಬವೀಗ ಹಿರಿದಾಗುತ್ತಿದೆ. ಇನ್ನೆರಡು ಪುಟ್ಟ ಕಾಲುಗಳೀಗ ನಮ್ಮ ಮನೆ ಪ್ರವೇಶಿಸುತ್ತಿವೆ ಎಂದಿದ್ದಾರೆ.
(7 / 8)
ಯಜಮಾನಿ, ಮುದ್ದುಮಣಿಗಳು, ಮಾಂಗಲ್ಯಂ ತಂತುನಾನೇನ ಸೀರಿಯಲ್‌ಗಳಲ್ಲೂ ನಟಿಸಿ ಸದ್ಯ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ಇತರ ಗ್ಯಾಲರಿಗಳು