ಭಾಗ್ಯಲಕ್ಷ್ಮೀ ಧಾರಾವಾಹಿ: ಕನ್ನಿಕಾಗೆ ಮುಖಭಂಗ! ನೇರವಾಗಿ ಭಾಗ್ಯ ಮನೆಗೆ ಬಂದ ಕಿಶನ್‌ ತಂದೆ ರಾಮನಾಥ್‌ ಕಾಮತ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾಗ್ಯಲಕ್ಷ್ಮೀ ಧಾರಾವಾಹಿ: ಕನ್ನಿಕಾಗೆ ಮುಖಭಂಗ! ನೇರವಾಗಿ ಭಾಗ್ಯ ಮನೆಗೆ ಬಂದ ಕಿಶನ್‌ ತಂದೆ ರಾಮನಾಥ್‌ ಕಾಮತ್‌

ಭಾಗ್ಯಲಕ್ಷ್ಮೀ ಧಾರಾವಾಹಿ: ಕನ್ನಿಕಾಗೆ ಮುಖಭಂಗ! ನೇರವಾಗಿ ಭಾಗ್ಯ ಮನೆಗೆ ಬಂದ ಕಿಶನ್‌ ತಂದೆ ರಾಮನಾಥ್‌ ಕಾಮತ್‌

ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್‌ ಮತ್ತು ಪೂಜಾ ಮದುವೆ ಮಾಡಿಸಬೇಕು ಅನ್ನೋ ಕಾರಣಕ್ಕೆ, ನೇರವಾಗಿ ಕಿಶನ್‌ನ ಮನೆಗೆ ಬಂದಿದ್ದಾರೆ ಭಾಗ್ಯಾ ಕುಟುಂಬ. ಆದರೆ, ಅಲ್ಲಿ ಅಚ್ಚರಿ ಸಂಗತಿ ಬಹಿರಂಗವಾಗಿದೆ. ದೇವಸ್ಥಾನದಲ್ಲಿ ಎಲ್ಲರ ಮುಂದೆ ಅವಮಾನ ಮಾಡಿದ ಕನ್ನಿಕಾ ಬೇರೆ ಯಾರೂ ಅಲ್ಲ, ಆಕೆ ಕಿಶನ್‌ನ ತಂಗಿ ಅನ್ನೋದು ಗೊತ್ತಾಗಿದೆ.

ಕಲರ್ಸ್‌ ಕನ್ನಡದ ನಂಬರ್‌ 1 ಧಾರಾವಾಹಿ ಭಾಗ್ಯಲಕ್ಷ್ಮೀಯ ಮೇ 25ರ 798ನೇ ಸಂಚಿಕೆಯಲ್ಲಿ ಏನೆಲ್ಲ ಆಯ್ತು? ಇಲ್ಲಿದೆ ವಿವರ.
icon

(1 / 10)

(Jio Hotstar)

ಕಿಶನ್‌ ಮತ್ತು ಪೂಜಾ ಮದುವೆ ಮಾಡಿಸಬೇಕು ಅನ್ನೋ ಕಾರಣಕ್ಕೆ, ನೇರವಾಗಿ ಕಿಶನ್‌ನ ಮನೆಗೆ ಬಂದಿದ್ದಾರೆ ಭಾಗ್ಯಾ ಕುಟುಂಬ. ಆದರೆ, ಅಲ್ಲಿ ಅಚ್ಚರಿ ಸಂಗತಿ ಬಹಿರಂಗವಾಗಿದೆ. ದೇವಸ್ಥಾನದಲ್ಲಿ ಎಲ್ಲರ ಮುಂದೆ ಅವಮಾನ ಮಾಡಿದ ಕನ್ನಿಕಾ ಬೇರೆ ಯಾರೂ ಅಲ್ಲ, ಆಕೆ ಕಿಶನ್‌ನ ತಂಗಿ ಅನ್ನೋದು ಗೊತ್ತಾಗಿದೆ.
icon

(2 / 10)

ಬಿಟ್ಟಿ ಊಟ ಮಾಡೋಕೆ ಬಂದ್ರಾ ಅಥವಾ ಭಿಕ್ಷೆ ಬೇಡೋಕೆ ಬಂದ್ರಾ? ಎಂದು ಕಿಶನ್‌ ಮನೆಗೆ ಬಂದ ಭಾಗ್ಯಾ ಕುಟುಂಬಕ್ಕೆ ಕನ್ನಿಕಾಳಿಂದ ಅವಮಾನವಾಗಿದೆ. ಭಾಗ್ಯಾ, ಕುಸುಮಾ, ಪೂಜಾ, ಸುನಂದಾ ಕೈಯಲ್ಲಿದ್ದ ಹೂವು, ಹಣ್ಣು, ಸೀರೆಯನ್ನು ಎಸೆದು ಎಲ್ಲರನ್ನೂ ಮನೆಯಿಂದ ಆಚೆ ಕಳಿಸುವಂತೆ ಸೆಕ್ಯೂರಿಟಿಗೆ ಆದೇಶಿಸಿದ್ದಾಳೆ ಕನ್ನಿಕಾ.
icon

(3 / 10)

ಕಿಶನ್‌ ತಂಗಿ ಕನ್ನಿಕಾ ಎಂಬ ವಿಚಾರ ಕುಸುಮಾ ಮತ್ತು ಭಾಗ್ಯಾಗೆ ಗೊತ್ತಾಗಿದೆ. ಕನ್ನಿಕಾಳ ಮಾತಿಗೆ ಬೇಸತ್ತು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ತೊರೆದಿದ್ದಾರೆ. ಅಂಥ ಅಣ್ಣನಿಗೆ ಇಂಥ ತಂಗೀನಾ ಎಂದು ಕುಸುಮಾ ಮಾತನಾಡಿಕೊಳ್ಳುತ್ತಿದ್ದಾಳೆ.
icon

(4 / 10)

ಇತ್ತ ಆದ ತಪ್ಪಿಗೆ ಕ್ಷಮೆ ಕೇಳಲು ಬಂದ ಕಿಶನ್‌ ಮಾತಿಗೆ ಪೂಜಾ ಸಹ ಪ್ರತಿಕ್ರಿಯೆ ನೀಡದೆ, ನಿಮ್ಮ ಮನೆಯಲ್ಲಿ ನಮಗಾದ ಅವಮಾನವೇ ಸಾಕು ಎಂದಿದ್ದಾಳೆ. ನಿಮಗಿಂತ ಜಾಸ್ತಿ ನೋವು ನಮಗಾಗಿದೆ ಎಂದು ಎಲ್ಲರ ಬಳಿ ಕ್ಷಮೆ ಕೇಳಿದ್ದಾನೆ. ಪೂಜಾಳನ್ನು ತುಂಬ ಪ್ರೀತಿಸ್ತಿದ್ದೇನೆ. ಇದೆಲ್ಲ ಬೇಗ ಸರಿ ಹೋಗುತ್ತೆ ಎಂದಿದ್ದಾನೆ ಕಿಶನ್.‌
icon

(5 / 10)

ಇತ್ತ ಇವರೆಲ್ಲ ಹೊರಗೆ ಬರ್ತಿದ್ದಂತೆ, ತಾಂಡವ್‌ ಮತ್ತು ಶ್ರೇಷ್ಠಾ ಎದುರಾಗಿದ್ದಾರೆ. ಬೇಕು ಅಂತಲೇ ತಮ್ಮ ಕಟು ಮಾತುಗಳಿಂದ ಎಲ್ಲರನ್ನು ಮತ್ತಷ್ಟು ಅವಮಾನಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಭಾಗ್ಯಾ ಎಂದಿದ್ದಾನೆ. ದಯವಿಟ್ಟು ನನ್ನ ಮತ್ತು ನನ್ನ ಕುಟುಂಬದ ಸಹವಾಸಕ್ಕೆ ಬರಬೇಡಿ ಎಂದ ಭಾಗ್ಯಾ, ಎಲ್ಲರನ್ನು ಕರೆದುಕೊಂಡು ಮನೆಯತ್ತ ನಡೆದಿದ್ದಾಳೆ.
icon

(6 / 10)

ಮನೆಗೆ ಬರುತ್ತಿದ್ದಂತೆ, ಭಾಗ್ಯಾ ಮಾಡಿದ್ದು ತಪ್ಪು ಎಂದು ಅಮ್ಮ ಸುನಂದಾ ಆಕೆಯ ಮೇಲೆ ರೇಗಿದ್ದಾಳೆ. ಮದುವೆ ಮಾತುಕಥೆ ಹಂತದ ವರೆಗೂ ಹೋಗಿ ಅದು ಮುರಿದು ಬಿದ್ದರೆ ನಮ್ಮ ಪೂಜಾ ಬಗ್ಗೆ ಜನ ಏನೆಲ್ಲ ಮಾತನಾಡಿಕೊಳ್ತಾರೆ ಎಂದು ಸುನಂದಾ ಕೋಪಗೊಂಡಿದ್ದಾಳೆ.
icon

(7 / 10)

ಈ ವಿಷಯದಲ್ಲಿ ಭಾಗ್ಯ ಮಾಡಿದ್ದು ತಪ್ಪು ತಪ್ಪು ತಪ್ಪು.. ಇದೆಲ್ಲ ಆಗಿದ್ದು ಭಾಗ್ಯಾಳಿಂದ ಎಂದಿದ್ದಾಳೆ ಸುನಂದಾ.  ಅವಳು ನನ್ನ ಮಗಳು, ಆಕೆಗೆ ಏನು ಬೇಕಾದರೂ ನಾನು ಹೇಳಬಹುದೆಂದು ಕುಸುಮಾ ಎದುರೇ ಮಾತನಾಡಿದ್ದಾಳೆ ಸುನಂದಾ.
icon

(8 / 10)

ಕನ್ನಿಕಾ ಮಾಡಿದ ಕೆಟ್ಟ ಕೆಲಸಕ್ಕೆ ಆಕೆಯ ತಂದೆ ರಾಮನಾಥ್‌ ಕಾಮತ್‌ ಗರಂ ಆಗಿದ್ದಾನೆ. ಮನೆಯವರ ಮುಂದೆಯೇ ಬೈದಿದ್ದಾನೆ. ದುಡ್ಡಿನ ದರ್ಪ ಒಳ್ಳೆಯದಲ್ಲ. ಇದಕ್ಕೆಲ್ಲ ಕಾರಣ ನೀನೇ ಎಂದು ಗುಡುಗಿದ್ದಾನೆ. ಇದು ನಮ್ಮ ಕಡೆಯಿಂದ ಆದ ತಪ್ಪು ಇದನ್ನು ನಾನೇ ಸರಿ ಮಾಡ್ತಿನಿ ಎಂದಿದ್ದಾನೆ ಕಾಮತ್.‌
icon

(9 / 10)

ನೇರವಾಗಿ ಕಿಶನ್‌ ಜೊತೆ ಭಾಗ್ಯಾ ಮನೆಗೆ ಬಂದ ರಾಮನಾಥ್‌ ಕಾಮತ್‌, ನಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾನೆ. ಅಲ್ಲಿಗೆ 798ನೇ ಏಪಿಸೋಡ್‌ ಮುಕ್ತಾಯವಾಗಿದೆ.
icon

(10 / 10)

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು