ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಶೂಟಿಂಗ್‌ಗೆ ಬ್ರೇಕ್‌; ಉತ್ತರ ಕರ್ನಾಟಕದತ್ತ ಮುಖ ಮಾಡಿದ ನಟಿ, ಮಾಜಿ ಶಾಸಕಿ ಉಮಾಶ್ರೀ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಶೂಟಿಂಗ್‌ಗೆ ಬ್ರೇಕ್‌; ಉತ್ತರ ಕರ್ನಾಟಕದತ್ತ ಮುಖ ಮಾಡಿದ ನಟಿ, ಮಾಜಿ ಶಾಸಕಿ ಉಮಾಶ್ರೀ Photos

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಶೂಟಿಂಗ್‌ಗೆ ಬ್ರೇಕ್‌; ಉತ್ತರ ಕರ್ನಾಟಕದತ್ತ ಮುಖ ಮಾಡಿದ ನಟಿ, ಮಾಜಿ ಶಾಸಕಿ ಉಮಾಶ್ರೀ PHOTOS

  • ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಅತ್ಯಧಿಕ ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿಯೇ ಗಟ್ಟಿಯಾಗಿ ನಿಂತಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಇದೀಗ ಇದೇ ಸೀರಿಯಲ್‌ನಿಂದ ಹಿರಿಯ ನಟಿ ಉಮಾಶ್ರೀ ಕೊಂಚ ಬ್ರೇಕ್‌ ಪಡೆದಿದ್ದಾರೆ. ಆ ಬಿಡುವಿನಲ್ಲಿಯೇ ಸಚಿವ ಕೃಷ್ಣಭೈರೇಗೌಡ ಅವರ ಜತೆ ಉತ್ತರ ಕರ್ನಾಟಕದತ್ತ ಮುಖ ಮಾಡಿ, ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಹಿರಿಯ ನಟಿ, ಸದ್ಯ ಕಿರುತೆರೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಗಮನ ಸೆಳೆದಿರುವ ಉಮಾಶ್ರೀ, ಉತ್ತರ ಕರ್ನಾಟಕದ ಕಡೆ ಹೆಜ್ಜೆ ಹಾಕಿದ್ದಾರೆ. ಶೂಟಿಂಗ್‌ಗೆ ಬ್ರೇಕ್‌ ಹಾಕಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳದ ಮಾಜಿ ಶಾಸಕಿಯೂ ಆಗಿರುವ ಉಮಾಶ್ರೀ, ಇದೀಗ, ನೆರೆಪೀಡಿತ ಪ್ರದೇಶಗಳನ್ನು ಸಚಿವ ಕೃಷ್ಣಭೈರೇಗೌಡ ಅವರ ಜತೆ ಸೇರಿ ವಿಕ್ಷಣೆ ಮಾಡಿದರು.  
icon

(1 / 6)

(Photo\ Zee5)

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಜತೆಗೆ ಬಾಗಲಕೋಟೆ ಮುಧೋಳ ತಾಲೂಕಿನಲ್ಲಿ ಘಟಪ್ರಭ ನದಿ ಪಾತ್ರದ ಪ್ರದೇಶಗಳಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ಅಧಿಕಾರಿಗಳ ಜೊತೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. 
icon

(2 / 6)

ಮುಧೋಳ ತಾಲೂಕಿನಲ್ಲಿ ನದಿ ನೀರು ಹಲವು ನಿವಾಸಿ ಪ್ರದೇಶಗಳಿಗೆ ನುಗ್ಗಿದ್ದು ಸಚಿವರ ಜತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮುಧೋಳ ತಾಲೂಕಿನ ಆರೈಕೆ ಕೇಂದ್ರಕ್ಕೆ ಸಚಿವರ ಜತೆಗೆ ತೆರಳಿದ ಉಮಾಶ್ರೀ.
icon

(3 / 6)

ನೆರೆ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸ್ಥಳೀಯ ನಾಯಕರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಜಮಖಂಡಿ ತಾಲೂಕು ಹಿಪ್ಪರಗಿಯ ನೀರಾವರಿ ಇಲಾಖೆ ಕಚೇರಿಯಲ್ಲಿ ಚರ್ಚಿಸಲಾಯಿತು.
icon

(4 / 6)

ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಅಣೆಕಟ್ಟೆಗೆ ಭೇಟಿ ನೀಡಲಾಯಿತು. ಕೃಷ್ಣಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
icon

(5 / 6)

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರು ಬ್ರಿಡ್ಜ್ ಬಳಿ ಕೃಷ್ಣೆ ತುಂಬಿ ಹರಿಯುತ್ತಿದ್ದು, ಕ್ಷೇತ್ರದ ಹಿರಿಯ ಮುಖಂಡರೂ ಮಾಜಿ ಉಪ ಮುಖ್ಯಮಂತ್ರಿಗಳೂ ಆದ ಲಕ್ಷ್ಮಣ ಸವದಿ, ಮಾಜಿ ಶಾಸಕಿ ಉಮಾಶ್ರೀ ಅವರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೃಷ್ಣಭೈರೇಗೌಡ.
icon

(6 / 6)

ಇತರ ಗ್ಯಾಲರಿಗಳು