ಲಕ್ಷ್ಮೀ ನಿವಾಸಕ್ಕೆ ಟಕ್ಕರ್, ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನೂ ಮೀರಿಸುತ್ತಾ ಆ ಸೀರಿಯಲ್!ಟಿಆರ್‌ಪಿಯಲ್ಲಿ ಸೀತಾ ರಾಮನಿಗೆ ಜೈಕಾರ
- Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್‌ಗಳಿಗೆ ನೋಡುಗ ಆಕರ್ಷಿತನಾಗುತ್ತಿದ್ದಾನೆ. ಹಾಗಂತ, ಹಳೇ ಸೀರಿಯಲ್‌ಗಳ ಖದರ್ ಕಡಿಮೆ ಆಗಿಲ್ಲ. ಟಿಆರ್‌ಪಿ ಲೆಕ್ಕಾಚಾರದಲ್ಲಿ ಹಳೇ ಸೀರಿಯಲ್‌ಗಳೇ ಮುಂದಡಿ ಇಡುತ್ತಿವೆ. ಹೊಸಬರೂ ಅದೇ ಬಿರುಸಿನಲ್ಲಿ ಟಕ್ಕರ್ ಕೊಡುತ್ತಿದ್ದಾರೆ. ಈ ನಡುವೆ ಈ ವಾರದ (ಜುಲೈ 3ನೇ ವಾರದ) ಟಿಆರ್‌ಪಿ ಹೊರಬಿದ್ದಿದೆ.
- Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್‌ಗಳಿಗೆ ನೋಡುಗ ಆಕರ್ಷಿತನಾಗುತ್ತಿದ್ದಾನೆ. ಹಾಗಂತ, ಹಳೇ ಸೀರಿಯಲ್‌ಗಳ ಖದರ್ ಕಡಿಮೆ ಆಗಿಲ್ಲ. ಟಿಆರ್‌ಪಿ ಲೆಕ್ಕಾಚಾರದಲ್ಲಿ ಹಳೇ ಸೀರಿಯಲ್‌ಗಳೇ ಮುಂದಡಿ ಇಡುತ್ತಿವೆ. ಹೊಸಬರೂ ಅದೇ ಬಿರುಸಿನಲ್ಲಿ ಟಕ್ಕರ್ ಕೊಡುತ್ತಿದ್ದಾರೆ. ಈ ನಡುವೆ ಈ ವಾರದ (ಜುಲೈ 3ನೇ ವಾರದ) ಟಿಆರ್‌ಪಿ ಹೊರಬಿದ್ದಿದೆ.
(1 / 6)
. ಟಿಆರ್‌ಪಿ ಲೆಕ್ಕಾಚಾರದಲ್ಲಿ ಹಳೇ ಸೀರಿಯಲ್‌ಗಳೇ ಮುಂದಡಿ ಇಡುತ್ತಿವೆ. ಹೊಸಬರೂ ಅದೇ ಬಿರುಸಿನಲ್ಲಿ ಟಕ್ಕರ್ ಕೊಡುತ್ತಿದ್ದಾರೆ. ಈ ನಡುವೆ ಈ ವಾರದ (ಜುಲೈ 3ನೇ ವಾರದ) ಟಿಆರ್‌ಪಿ ಹೊರಬಿದ್ದಿದೆ. ಆ ಪೈಕಿ ಯಾವೆಲ್ಲ ಸೀರಿಯಲ್‌ಗಳು ಮೊದಲ ಸ್ಥಾನದಲ್ಲಿವೆ? ಇಲ್ಲಿ ನೋಡೋಣ.
(Image\ Zee5)(2 / 6)
ಪುಟ್ಟಕ್ಕನ ಮಕ್ಕಳು: ಉಮಾಶ್ರೀ, ಮಂಜು ಭಾಷಿಣಿ ಮುಖ್ಯಭೂಮಿಕೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈ ವಾರವೂ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಬಂಗಾರಮ್ಮನ ಬದಲಿಗೆ ಸಿಂಗಾರಮ್ಮನ ಆಗಮನವಾಗಿದ್ದು, ನೋಡುಗರನ್ನು ಕುತೂಹಲಕ್ಕೆ ದೂಡಿದೆ. ಮತ್ತೊಂದು ಕಡೆ ಸಹನಾಳ ಸುಳಿವೂ ವಿದೇಶಿ ಯೂಟ್ಯೂಬರ್‌ನಿಂದ ಪುಟ್ಟಕ್ಕನಿಗೆ ಸಿಗುವ ಸೂಚನೆಯೂ ಸಿಕ್ಕಿದೆ.
(3 / 6)
ಶ್ರಾವಣಿ ಸುಬ್ರಮಣ್ಯ: ಅಪ್ಪ ಮಗಳ ನಡುವಿನ ಮುನಿಸು ಮತ್ತೆ ಅಪ್ಪನ ಮೇಲಿನ ಅತಿಯಾದ ಪ್ರೀತಿಯ ಕಥೆಯೇ ಶ್ರಾವಣಿ ಸುಬ್ರಮಣ್ಯ. ಈ ಧಾರಾವಾಹಿ ಶುರುವಾದಾಗಿನಿಂದ ನೋಡುಗರ ಪ್ರೀತಿ ಗಿಟ್ಟಿಸಿಕೊಳ್ಳುತ್ತಲೇ ಬಂದಿದೆ. ಅದರಂತೆ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದ ಈ ಸೀರಿಯಲ್ ಈ ವಾರ ಏಕಾಏಕಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕಳೆದ ವಾರ ಪುಟ್ಟಕ್ಕನ ಮಕ್ಕಳು ಸೀರಿಯಲ್ ಜತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದ ಲಕ್ಷ್ಮೀ ನಿವಾಸವನ್ನು ಹಿಂದಿಕ್ಕಿದೆ ಈ ಧಾರಾವಾಹಿ.
(4 / 6)
ಲಕ್ಷ್ಮೀ ನಿವಾಸ: ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಪ್ರತಿಸ್ಪರ್ಧಿ ಎಂದರೆ ಅದು ಲಕ್ಷ್ಮೀ ನಿವಾಸ ಮಾತ್ರ. ಇಂದಿಗೂ ಅದು ಪುಟ್ಟಕ್ಕನ ಮಕ್ಕಳು ಜತೆಗೆ ಸಮಬಲದ ಹೋರಾಟ ನಡೆಸುತ್ತಲೇ ಬಂದಿದೆ. ಇದೀಗ ಈ ವಾರ ಅದ್ಯಾಕೋ ಕೊಂಚ ಟಿಆರ್‌ಪಿಯಲ್ಲಿ ಇಳಿಮುಖ ಕಂಡಿದೆ. ಮೊದಲ ಸ್ಥಾನದಿಂದ ನೇರವಾಗಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.
(5 / 6)
ಸೀತಾ ರಾಮ: ಕಳೆದೊಂದು ವಾರವಿಡೀ ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ರಾಮರ ಮದುವೆಯ ಸಂಭ್ರಮ ಜೋರಾಗಿತ್ತು. ಇದೀಗ ಸೀತಾ ಜತೆಗೆ ಸಿಹಿಯೂ ಮನೆ ಪ್ರವೇಶಿಸಿದ್ದಾಳೆ. ಭಾರ್ಗವಿಯೂ ಒಳಗೊಳಗೇ ಷಡ್ಯಂತ್ರ ರೂಪಿಸುತ್ತಿದ್ದಾಳೆ. ಒಟ್ಟಾರೆ ಮದುವೆ ಸಂಭ್ರಮವೇ ಈ ವಾರ ಸೀತಾ ರಾಮನಿಗೆ ಪ್ಲಸ್ ಆಗಿದೆ. ಟಿಆರ್‌ಪಿಯಲ್ಲಿಯೂ ನಾಲ್ಕನೇ ಸ್ಥಾನ ಪಡೆದರೂ, ಅರ್ಬನ್ ಏರಿಯಾದಲ್ಲಿ ಈ ಧಾರವಾಹಿಯದ್ದೇ ಪಾರಮ್ಯ.
ಇತರ ಗ್ಯಾಲರಿಗಳು