Kannada Serial TRP: ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆದ ಸೀರಿಯಲ್ ಯಾವುದು? ಹೀಗಿವೆ ಈ ವಾರದ ಟಾಪ್ ಐದು ಧಾರಾವಾಹಿಗಳು
- ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ದೊಡ್ಡ ಸ್ಪರ್ಧೆಯೇ ಇದೆ. ಐಪಿಎಲ್, ಚುನಾವಣೆ ನಡುವೆ ಕೊಂಚ ಸೊರಗಿದ್ದ ಕಿರುತೆರೆ ಕ್ಷೇತ್ರ, ಇದೀಗ ಮತ್ತೆ ಚುರುಕಾಗಿದೆ. ಸೀರಿಯಲ್ ವೀಕ್ಷಕರ ಸಂಖ್ಯೆ ಏರಿಯಾಗುತ್ತಿದ್ದು, ಈ ವಾರ ಯಾವೆಲ್ಲ ಧಾರಾವಾಹಿಗಳು ಅತೀ ಹೆಚ್ಚು ಟಿಆರ್‌ಪಿ ಪಡೆದಿವೆ ಎಂಬ ಮಾಹಿತಿ ಇಲ್ಲಿದೆ.

(2 / 6)
ಪುಟ್ಟಕ್ಕನ ಮಕ್ಕಳು: ಕಳೆದ ಎರಡು ವರ್ಷಗಳಿಂದ ಮೊದಲ ಸ್ಥಾನದಲ್ಲಿಯೇ ಮುಂದುವರಿದಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗಲೂ ಅದೇ ಸ್ಥಾನದಲ್ಲಿ ಮುಂದುವರಿಯುತ್ತಿದೆ. ಈ ವಾರ ಈ ಸೀರಿಯಲ್ ಟಿಆರ್‌ಪಿಯ ಎರಡಂಕಿಯ ಸನಿಹ ಬಂದು ನಿಂತಿದೆ. 9.1 ರೇಟಿಂಗ್ ಪಡೆದ ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ.
(3 / 6)
ಲಕ್ಷ್ಮೀ ನಿವಾಸ: ಅದೇ ರೀತಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಮತ್ತೊಂದು ಸೀರಿಯಲ್ ಲಕ್ಷ್ಮೀ ನಿವಾಸ ಸಹ ವೀಕ್ಷಕರ ಮನಗೆದ್ದಿದೆ. ಪ್ರಸಾರ ಆರಂಭವಾದಾಗ ಪುಟ್ಟಕ್ಕನಿಗೆ ಟಕ್ಕರ್ ಕೊಟ್ಟಿದ್ದ ಈ ಸೀರಿಯಲ್ ಸದ್ಯ ಎರಡನೇ ಸ್ಥಾನವನ್ನೇ ಖಾಯಂ ಮಾಡಿಕೊಂಡಿದೆ. ಈ ಸೀರಿಯಲ್‌ಗೆ 7.9 ರೇಟಿಂಗ್ ಸಿಕ್ಕಿದೆ.
(4 / 6)
ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಸಹ, ವೀಕ್ಷಕರನ್ನು ಸೆಳೆಯುತ್ತಿದೆ. ದೊಡ್ಡ ರಾಜಕಾರಣಿಯ ಅತ್ಯಾಪ್ತ ಸಹಾಯಕನ ಏಳುಬೀಳಿನ ಕಥೆಯಲ್ಲಿ ಶ್ರಾವಣಿ ಮತ್ತು ಸುಬ್ಬು ಪಾತ್ರಗಳೇ ಹೈಲೈಟ್. ಈ ಸೀರಿಯಲ್ ಕಳೆದ ವಾರದಂತೆ ಈ ವಾರವೂ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. 6.3 ರೇಟಿಂಗ್ ಪಡೆದುಕೊಂಡಿದೆ ಈ ಸೀರಿಯಲ್.
(5 / 6)
ಅಮೃತಧಾರೆ: ಗೌತಮ್ ಮತ್ತು ಭೂಮಿಕಾ ಜೋಡಿಯ ಅಮೃತಧಾರೆ ಸೀರಿಯಲ್ ಈ ವಾರದ ಟಿಆರ್‌ಪಿಯಲ್ಲಿ ಮುಂದಡಿ ಇರಿಸಿದೆ. ಕಳೆದ ವಾರ ಐದನೇ ಸ್ಥಾನದಲ್ಲಿದ್ದ ಈ ಸೀರಿಯಲ್ ಈ ವಾರ, ನಾಲ್ಕಕ್ಕೆ ಜಿಗಿದಿದ್ದು, 5.8 ಟಿಆರ್‌ಪಿ ಪಡೆದುಕೊಂಡಿದೆ.
ಇತರ ಗ್ಯಾಲರಿಗಳು