ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ರಾಮಾಚಾರಿ ಸೀರಿಯಲ್ ನಟಿ ಚಾರು ನಾಯಕಿ PHOTOS
- ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್ ಮೂಲಕ ಚಾರುಲತಾ ಎಂದೇ ಕರುನಾಡ ಮನೆಮಂದಿಗೆ ಪರಿಚಿತರಾದ ನಟಿ ಮೌನಾ ಗುಡ್ಡೆಮನೆ. ಕಿರುತೆರೆ ಪ್ರೇಕ್ಷಕರನ್ನು ಸೆಳೆದ ಇದೇ ನಟಿ ಇದೀಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಮೌನಾ ನಾಯಕಿಯಾಗಿ ನಟಿಸಲಿದ್ದಾರೆ.

(1 / 6)
ರಾಮಾಚಾರಿ ಸೀರಿಯಲ್ ಚಾರುಲತಾ ಎಂದೇ ಕರುನಾಡ ಮನೆಮಂದಿಗೆ ಪರಿಚಿತರಾದ ನಟಿ ಮೌನಾ ಗುಡ್ಡೆಮನೆ. ಕಿರುತೆರೆ ಪ್ರೇಕ್ಷಕರನ್ನು ಸೆಳೆದ ಇದೇ ನಟಿ ಇದೀಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. (instagram\ Mouna guddemane)
(2 / 6)
ವಿಶೇಷ ಏನೆಂದರೆ ಈ ಸಿನಿಮಾವನ್ನು ಚಂದನವನದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಪ್ರಸೆಂಟ್ ಮಾಡುತ್ತಿದ್ದಾರೆ. ಪರ್ಲ್ ಸಿನಿ ಕ್ರಿಯೇಷನ್ಸ್‌ನ ಕುಮಾರ್ ಎ.ಕೆ & ವಿದ್ಯಾ ಬಂಡವಾಳ ಹೂಡುತ್ತಿದ್ದಾರೆ.
(3 / 6)
ಕೆ.ರಾಮನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಕುಲದಲ್ಲಿ ಕೀಳ್ಯಾವುದೋ ಎಂಬ ಶೀರ್ಷಿಕೆ ಇಟ್ಟಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿದ್ದಾರೆ.
(4 / 6)
ಇತ್ತೀಚೆಗಷ್ಟೇ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸಕಲೇಶಪುರ, ಹಾಸನ, ರಾಮನಗರ, ಬೆಂಗಳೂರು ಮುಂತಾದ ಕಡೆ ಈ ಚಿತ್ರದ ಶೂಟಿಂಗ್ ನಡೆಯಲಿದೆ.
(5 / 6)
ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಇತರ ಗ್ಯಾಲರಿಗಳು