ತಾಜ್‌ಮಹಲ್‌ನಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾದವ್-ಅಭಿಷೇಕ್ ಕಾಸರಗೋಡು; ಪ್ರೇಮಸೌಧದಲ್ಲಿ ಮತ್ತೆ ಲವ್ ಮೂಡ್‌ಗೆ ಜಾರಿದ ಜೋಡಿ
- ಸತ್ಯ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ಗೌತಮಿ ಜಾದವ್ ಈಗ ವೆಕೇಷನ್ ಮೂಡ್‌ನಲ್ಲಿದ್ದಾರೆ. ಇತ್ತೀಚೆಗೆ ಇವರ ಪತಿ ಅಭಿಷೇಕ್ ಕಾಸರಗೋಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಗ್ರಾಕ್ಕೆ ತೆರಳಿದ್ದಾರೆ.
- ಸತ್ಯ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ಗೌತಮಿ ಜಾದವ್ ಈಗ ವೆಕೇಷನ್ ಮೂಡ್‌ನಲ್ಲಿದ್ದಾರೆ. ಇತ್ತೀಚೆಗೆ ಇವರ ಪತಿ ಅಭಿಷೇಕ್ ಕಾಸರಗೋಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಗ್ರಾಕ್ಕೆ ತೆರಳಿದ್ದಾರೆ.
(1 / 12)
ಸತ್ಯ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ಗೌತಮಿ ಜಾದವ್ ಈಗ ವೆಕೇಷನ್ ಮೂಡ್‌ನಲ್ಲಿದ್ದಾರೆ. ಇತ್ತೀಚೆಗೆ ಇವರ ಪತಿ ಅಭಿಷೇಕ್ ಕಾಸರಗೋಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಗ್ರಾಕ್ಕೆ ತೆರಳಿದ್ದಾರೆ.
(2 / 12)
ಗೌತಮಿ ಜಾದವ್ ಆಗ್ರಾಹಕ್ಕೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಾಜ್ ಮಹಲ್ ಮುಂದೆ ಮತ್ತೆ ಲವ್ ಮೂಡ್‌ಗೆ ಜಾರಿದ್ದು, ಹಲವು ಫೋಟೋಗಳಲ್ಲಿ ಲವ್ ಸಿಂಬಲ್ ತೋರಿಸಿದ್ದಾರೆ.
(3 / 12)
ಆಗ್ರಾದಲ್ಲಿರುವ ತಾಜ್‌ಮಹಲ್ ಪ್ರೇಮಿಗಳ ಪಾಲಿಗೆ ಪ್ರೇಮಸೌಧ. ಅಂದಹಾಗೆ ಗೌತಮಿ ಜಾದವ್ ಮತ್ತು ಅಭಿಷೇಕ್ ಕಾಸರಗೋಡು ನಡುವೆ ಬ್ಯೂಟಿಫುಲ್ ಲವ್‌ಸ್ಟೋರಿ ಇದೆ.
(4 / 12)
ಇವರಿಬ್ಬರು ಪ್ರೀತಿಸಿ ಮದುವೆಯಾದವರು. ಕನ್ನಡ ಚಿತ್ರರಂಗದಲ್ಲಿ ಕ್ಯಾಮೆರಾಮನ್ ಆಗಿ ಜನಪ್ರಿಯತೆ ಪಡೆದಿರುವ ಅಭಿಷೇಕ್ ಕಾಸರಗೊಡು ಮತ್ತು ಗೌತಮಿ ಜಾದವ್ ಪ್ರೀತಿಗೆ ಬಿದ್ದಿದ್ದರು. ಬಳಿಕ ಮನೆಯರನ್ನು ಒಪ್ಪಿಸಿ ಮದುವೆಯಾಗಿದ್ದರು. ಕಿನ್ನಾರೆ ಶೂಟಿಂಗ್ ವೇಳೆ ಇವರಿಬ್ಬರ ನಡುವೆ ಲವ್ ಆಗಿತ್ತು.
(6 / 12)
ಆಪರೇಷನ್ ಅಲಮೇಲಮ್ಮ, ಮಾಯಾ ಬಜಾರ್, ಅನಂತು ವರ್ಸಸ್ ನುಸ್ರತ್ ಮುಂತಾದ ಸಿನಿಮಾಗಳ ಶೂಟಿಂಗ್ ಕೆಲಸದಲ್ಲಿ ಅಭಿಷೇಕ್ ಭಾಗಿಯಾಗಿದ್ದಾರೆ.
(7 / 12)
ನಾಗಪಂಚಮಿ ಸೀರಿಯಲ್‌ನಲ್ಲಿ ಗೌತಮಿ ನಟಿಸಿದ್ದರು. ಲೂಟಿ, ಆದ್ಯ, ಕಿನಾರೆ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸತ್ಯ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.
(8 / 12)
ಗೌತಮಿ ಜಾದವ್ ಉದ್ಯಮಿಯೂ ಹೌದು. ಆರ್ಗ್ಯಾನಿಕ್ ಕೇಶ ತೈಲ ಪ್ರಾಡಕ್ಟ್ ಬಿಸ್ನೆಸ್ ಆರಂಭಿಸಿದ್ದರು. ಕಳೆದ ವರ್ಷ ವನತೈಲಂ ಎಂಬ ಕೇಶತೈಲದ ಕಂಪನಿ ಆರಂಭಿಸಿದ್ದರು.
(9 / 12)
ಮಹಿಳಾ ಪ್ರಧಾನ ಧಾರಾವಾಹಿ ಸತ್ಯದಲ್ಲಿ "ತನ್ನ ಖುಷಿಯನ್ನು ತ್ಯಾಗ ಮಾಡಿ ಕುಟುಂಬದ ಸಂತೋಷಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಹೆಣ್ಣು ಮಗಳ ಪಾತ್ರದಲ್ಲಿ" ಮಿಂಚಿದ್ದಾರೆ.
(10 / 12)
ಓದು ಮುಗಿಸಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದ ಗೌತಮಿ ಜಾಧವ್ ಅವರು ಜಿಮ್ನಾಸ್ಟಿಕ್ ತರಬೇತಿ ಪಡೆಯುತ್ತಿದ್ದರು.
(11 / 12)
ಅಲ್ಲಿಗೆ ಆಗಮಿಸುವ ಕಲಾವಿದರನ್ನು ನೋಡಿ ಇವರಿಗೂ ಆಕ್ಟಿಂಗ್ ಮೇಲೆ ಮೋಹ ಉಂಟಾಗಿತ್ತು. ಬಳಿಕ ಅಡಿಷನ್‌ನಲ್ಲಿ ನಾಗಪಂಚಮಿ ಸೀರಿಯಲ್‌ಗೆ ಆಯ್ಕೆಯಾಗಿದ್ದರು.
ಇತರ ಗ್ಯಾಲರಿಗಳು