Seetha Rama Serial: ರಾಮನ ಪ್ರೀತಿಗೆ ಸಿಕ್ಕಾಯ್ತು ಸೀತೆಯ ಒಪ್ಪಿಗೆ; ಸೀತಾ ರಾಮ ಸೀರಿಯಲ್‌ನಲ್ಲಿ ಇನ್ನೇನಿದ್ರೂ ಪ್ರೇಮಾಯಣ
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಪ್ರೇಮದ ಝರಿ ಹರಿಯುತ್ತಿದೆ. ಎರಡು ಮನಸುಗಳ ನಡುವಿನ ಭಾವ ಲಹರಿ ಮಿಡಿಯುತ್ತಿದೆ. ರಾಮನ ಮನಸಲ್ಲಿರುವುದು ಸೀತಾಗೂ ತಿಳಿದಿದೆ. ಈ ನಡುವೆಯೇ ತನ್ನೊಳಗಿನ ಪ್ರೀತಿಯನ್ನೂ ಹೇಳಿಕೊಂಡಿದ್ದಾಳೆ ಸೀತಾ. ಕೊನೆಗೂ ಬಹುದಿನಗಳಿಂದ ನೋಡುಗ ಎದುರು ನೋಡುತ್ತಿದ್ದ ಸನ್ನಿವೇಶಕ್ಕೆ ಈಗ ತೆರೆಬಿದ್ದಿದೆ.

(2 / 8)
ಈ ಜೀವಗಳು ಆದಷ್ಟು ಬೇಗ ಒಂದಾಗಲಿ ಎಂದು ಸೀರಿಯಲ್ ವೀಕ್ಷಕರು ಕಾದಿದ್ದೇ ಬಂತು. ಆದರೆ, ಆ ಕ್ಷಣ ಮಾತ್ರ ನಿಜವಾಗಿರಲಿಲ್ಲ.
(3 / 8)
ಈಗ ರಾಮನ ಹೃದಯದಲ್ಲಿ ಸೀತಾ ಸ್ಥಾನ ಖಾಯಂ ಆಗಿದೆ. ಅಂದರೆ, ರಾಮ ತಮ್ಮ ಪ್ರೀತಿಯನ್ನು ಸೀತಾಳ ಮುಂದೆ ಹೇಳಿಕೊಂಡಿದ್ದಾನೆ.
(4 / 8)
ರಾಮನ ಮಾತಿಗೆ ಸೀತಾಳಿಂದಲೂ ಸಹಮತಿ ಸಿಕ್ಕಿದೆ. ನಾನೂ ನಿಮ್ಮನ್ನು ತುಂಬ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾಳೆ. ರಾಮನ ಎದೆಯಲ್ಲೂ ಚಿಟ್ಟೆ ಹಾರಾಡಿದೆ.
(5 / 8)
ನನಗೆ ಇದನ್ನು ನಂಬಲೂ ಆಗ್ತಿಲ್ಲ. ನಾವಿಬ್ಬರೂ ಈ ರೀತಿ ಇರ್ತಿವಿ ಅಂತಲೂ ನಂಬೋಕೆ ಆಗ್ತಿಲ್ಲ ಎಂದಿದ್ದಾಳೆ ಸೀತಾ. ಇತ್ತ ನನ್ನ ಲೈಫ್‌ನ ಪ್ರತಿ ಕ್ಷಣವನ್ನೂ ನಿಮ್ಮ ಜತೆ ಹಂಚಿಕೊಳ್ಳಲು ಕಾಯ್ತಿದ್ದೇನೆ ಎಂದಿದ್ದಾನೆ ರಾಮ.
(6 / 8)
ನಿಮ್ಮನ್ನು ಇಷ್ಟೊಂದು ಇಷ್ಟ ಪಡ್ತಿನಿ ಅಂತ ಅಂದುಕೊಂಡಿರಲಿಲ್ಲ ರಾಮ್ ಎಂದು ಸೀತಾ ಹೇಳಿದರೆ, ಐ ಲವ್ ಯೂ ಸೀತಾ ಎಂದು ಮತ್ತೆ ಪ್ರೇಮನಿವೇದನೆ ಮಾಡಿದ್ದಾನೆ ರಾಮ. ಸೀತೆಯಿಂದಲೂ ಅದೇ ಉತ್ತರ ಸಿಕ್ಕಿದೆ.
(7 / 8)
ಹೀಗೆ ಈ ಜೋಡಿಯ ಯುಗಳಗೀತೆ ಶುರುವಾಗುತ್ತಿದ್ದಂತೆ, ಸೀರಿಯಲ್ ವೀಕ್ಷಕರೂ ಬಗೆಬಗೆ ಕಾಮೆಂಟ್ ಮೂಲಕ ಹಾರೈಸುತ್ತಿದ್ದಾರೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು ಎಂದು ಕೆಲವರು ಹೇಳಿದರೆ, ಯಾರ ಕಣ್ಣೂ ಈ ಜೋಡಿ ಮೇಲೆ ಬೀಳದಿರಲಿ ಎಂದೂ ಹಾರೈಸುತ್ತಿದ್ದಾರೆ.
ಇತರ ಗ್ಯಾಲರಿಗಳು