Drama Juniors: ಡ್ರಾಮಾ ಜ್ಯೂನಿಯರ್ಸ್‌ ಸೆಮಿ ಫೈನಲ್‌ನಲ್ಲಿ ಎಆರ್‌ ಟೆಕ್ನಾಲಜಿ; ಮಾಯಾ ಲೋಕ ಸೃಷ್ಟಿಸಿದ ಮಕ್ಕಳು-television news zee kannada drama juniors season 5 reality show in ar augmented reality pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Drama Juniors: ಡ್ರಾಮಾ ಜ್ಯೂನಿಯರ್ಸ್‌ ಸೆಮಿ ಫೈನಲ್‌ನಲ್ಲಿ ಎಆರ್‌ ಟೆಕ್ನಾಲಜಿ; ಮಾಯಾ ಲೋಕ ಸೃಷ್ಟಿಸಿದ ಮಕ್ಕಳು

Drama Juniors: ಡ್ರಾಮಾ ಜ್ಯೂನಿಯರ್ಸ್‌ ಸೆಮಿ ಫೈನಲ್‌ನಲ್ಲಿ ಎಆರ್‌ ಟೆಕ್ನಾಲಜಿ; ಮಾಯಾ ಲೋಕ ಸೃಷ್ಟಿಸಿದ ಮಕ್ಕಳು

  • ಝೀ ಕನ್ನಡ ವಾಹಿನಿಯು ಈ ವೀಕೆಂಡ್‌ಗೆ ಡ್ರಾಮಾ ಜ್ಯೂನಿಯರ್ಸ್‌ ಸೆಮಿ ಫೈನಲ್‌ ಅನ್ನು ರೋಚಕವಾಗಿ ತೋರಿಸಲು ಹೊರಟಿದೆ. ಆಗ್ಯುಮೆಂಟೆಡ್‌ ಟೆಕ್ನಾಲಜಿ (ಎಆರ್‌) ಬಳಸಿ ಡ್ರಾಮಾವನ್ನು ಇನ್ನಷ್ಟು ರೋಚಕವಾಗಿ ಕಿರುತೆರೆ ಪ್ರೇಕ್ಷಕರಿಗೆ ತೋರಿಸಲಿದೆ. ರಂಗ ವೇದಿಕೆಯ ಮೇಲೆ ಯಾವುದೋ 9ಡಿ ಸಿನಿಮಾ ನೋಡಿದಂತೆ ಪ್ರೇಕ್ಷಕರಿಗೆ ಭಾಸವಾಗಲಿದೆ.

ಝೀ ಕನ್ನಡ ವಾಹಿನಿಯ ವೀಕ್ಷಕರಿಗೆ ಈ ವೀಕೆಂಡ್‌ನ ಡ್ರಾಮಾ ಜ್ಯೂನಿಯರ್ಸ್‌ ಭಿನ್ನ ಅನುಭವ ನೀಡಲಿದೆ. ಈ ವಾರ ಆಗ್ಯುಮೆಂಟೆಡ್‌ ಟೆಕ್ನಾಲಜಿ (ಎಆರ್‌) ಬಳಸಿ ಡ್ರಾಮಾವನ್ನು ಇನ್ನಷ್ಟು ರೋಚಕವಾಗಿ ಕಿರುತೆರೆ ಪ್ರೇಕ್ಷಕರಿಗೆ ತೋರಿಸಲಿದೆ. ರಂಗ ವೇದಿಕೆಯ ಮೇಲೆ ಯಾವುದೋ 9ಡಿ ಸಿನಿಮಾ ನೋಡಿದಂತೆ ಪ್ರೇಕ್ಷಕರಿಗೆ ಭಾಸವಾಗಲಿದೆ.
icon

(1 / 10)

: ಪುಟ್ಟ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಿಕೊಡುತ್ತಿರುವ ಜೀ಼ ಕನ್ನಡ ವಾಹಿನಿಯ ಸೂಪರ್‌ ಹಿಟ್‌ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮ ಈ ಬಾರಿ ತನ್ನ ಐದನೇ ಸೀಸನ್ನಿನಲ್ಲಿ ಸಾಕಷ್ಟು ಹೊಸ ಪ್ರಯೋಗಗಳನ್ನ ಮಾಡಿ ಸೈ ಎನಿಸಿಕೊಂಡಿದೆ. ಇದೀಗ ಎಆರ್‌ ಟೆಕ್ನಾಲಜಿ ಇರುವ ಡ್ರಾಮಾ ಜ್ಯೂನಿಯರ್ಸ್‌ ರಿಯಾಲಿಟಿ ಶೋದ ಝಲಕ್‌ ಅನ್ನು ಪ್ರಮೋ ರೂಪದಲ್ಲಿ ಝೀ ಕನ್ನಡ ಬಿಡುಗಡೆ ಮಾಡಿದೆ. 
icon

(2 / 10)

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಮನೆಮಂದಿಯನ್ನೆಲ್ಲ ಮನರಂಜಿಸೋ ಡ್ರಾಮಾ ಜೂನಿಯರ್ಸ್‌ ಈ ಬಾರಿ  ಭಾರತದ ಕಿರುತೆರೆ ಇತಿಹಾಸದಲ್ಲೆ  ವಿಶೇಷವಾಗಿರಲಿದೆ.
icon

(3 / 10)

ಮೊದಲ ಬಾರಿಗೆ ರಿಯಾಲಿಟಿ ಶೋ ವೇದಿಕೆಯಲ್ಲಿ ಆಗ್ಯುಮೆನ್ಟೆಡ್‌ ರಿಯಾಲಿಟಿ ಟೆಕ್ನಾಲಜಿ ಬಳಸಿ ಸಮಿಫಿನಾಲೆ ವೇದಿಕೆಯ ಸಂಚಿಕೆಯನ್ನ ಮತ್ತಷ್ಟು ರೋಚಕವನ್ನಾಗಿ ಮಾಡಲು ಹೊರಟಿದೆ.  
icon

(4 / 10)

ಭಾರತದ ನುರಿತ ತಂತ್ರಜ್ಞರ ಮಾರ್ಗದರ್ಶನದಲ್ಲಿ ತಯಾರಾದ ಈ ಸಂಚಿಕೆಯಲ್ಲಿ ಕುರುಕ್ಷೇತ್ರದಿಂದ ಹಿಡಿದು ರಾಮಾಯಣದ ತನಕ  ಎಲ್ಲಾ ಪಾತ್ರಗಳನ್ನ ನೈಜವಾಗಿ ಕಣ್ಣಿಗೆ ಕಟ್ಟುವ ರೀತಿಯಲ್ಲಿ ರೂಪಿಸಲಾಗಿದೆ. 
icon

(5 / 10)

ಈ ಸಂಚಿಕೆ, ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.೦೦ಗಂಟೆಗೆ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.
icon

(6 / 10)

ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರಮೋ ವಿಡಿಯೋದಲ್ಲಿ ಜೈಶ್ರೀರಾಮ್‌ ಎಂದು ಆಂಜನೇಯನ ವೇಷಧಾರಿ ಮಗು ಮೇಲಕ್ಕೆ ಹಾರುವ ದೃಶ್ಯ, ಆನೆಗಳು, ಜಿಂಕೆಗಳು ಎಲ್ಲವೂ ನೈಜ್ಯವಾಗಿರುವಂತೆ ಕಾಣಿಸುತ್ತದೆ.
icon

(7 / 10)

"ರಂಗವೇದಿಕೆಯನ್ನು ಬೇರೆ ಲೆವೆಲ್‌ಗೆ ಕರೆದುಕೊಂಡು ಹೋದ್ರಿ" ಎಂದೆಲ್ಲ ಹಿನ್ನೆಲೆಯಲ್ಲಿ  ಧ್ವನಿಗಳು ಕೇಳಿಸುತ್ತಿವೆ. ಝೀ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಆಸಕ್ತರು ಪ್ರಮೋ ನೋಡಬಹುದು. 
icon

(8 / 10)

ನಮಗೆ ಇದನ್ನು ನೋಡಿದಾಗ ರೋಮಾಂಚನ ಉಂಟು ಮಾಡಿತು. ರಿಯಾಲಿಟಿ ಶೋನಲ್ಲಿ ಇದು ನೆಕ್ಸ್ಟ್‌ ಲೆವೆಲ್‌ ಎಂದೆಲ್ಲ ಜಡ್ಜ್‌ಗಳು ಹೇಳಿರುವ ಮಾತು ಪ್ರಮೋದಲ್ಲಿ ಕೇಳಿಸಿದೆ. 
icon

(9 / 10)

ಏನಿದು ಎಆರ್‌ ಟೆಕ್ನಾಲಜಿ?: ನೋಡುಗರಿಗೆ ನೈಜ್ಯವಾದ ಸಮಯದಲ್ಲಿ ಆರ್ಟಿಫಿಶಿಯಲ್‌ ಪರಿಸರವನ್ನು ತೋರಿಸುವಂತಹ ತಂತ್ರಜ್ಞಾನ ಇದಾಗಿದೆ. ಎಆರ್‌ ಬಳಕೆದಾರರಿಗೆ ನಿಜಕ್ಕೂ ನಾವು ಬೇರೆ ಯಾವುದೋ ಪರಿಸರದಲ್ಲಿರುವಂತಹ ಫೀಲ್‌ ನೀಡುತ್ತದೆ. ಡಿಜಿಟಲ್‌ ಮತ್ತು 3ಡಿ ತಂತ್ರಜ್ಞಾನವನ್ನು ಒಟ್ಟಾಗಿಸಿ ಈ ಎಆರ್‌ ಜಗತ್ತು ಸೃಷ್ಟಿಸಲಾಗುತ್ತಿದೆ.  
icon

(10 / 10)

ಇತರ ಗ್ಯಾಲರಿಗಳು