ಮತ್ತೆ ಒಂದಾಗ್ತಿದ್ದಾರೆ ಪುಟ್ಟಕ್ಕನ ಮಕ್ಕಳು; ಕುಟುಂಬದವರು ಒಂದಾಗೋ ಈ ಘಳಿಗೆಯನ್ನು ನೋಡಿ ಇಂದಿನ ಮಹಾಸಂಚಿಕೆಯಲ್ಲಿ
- Puttakkana Makkalu Serial: ಸಹನಾ ತನ್ನ ಕುಟುಂಬದಿಂದ ದೂರಾಗಿದ್ದಾಳೆ. ಆದರೆ ಅವಳು ಬದುಕಿದ್ದಾಳೆ ಎಂಬ ಸತ್ಯ ಸ್ನೇಹಾಗೆ ಮಾತ್ರ ಗೊತ್ತಾಗಿದೆ. ಅದನ್ನು ಮನೆಯವರಿಗೂ ತಿಳಿಸಬೇಕು ಎಂದು ಕಷ್ಟಪಡುತ್ತಿದ್ದಾಳೆ. ಹೇಗಾದರೂ ಮಾಡಿ ಸಹನಾಳನ್ನು ಒಪ್ಪಿಸಲು ಯತ್ನಿಸುತ್ತಿದ್ದಾಳೆ.
- Puttakkana Makkalu Serial: ಸಹನಾ ತನ್ನ ಕುಟುಂಬದಿಂದ ದೂರಾಗಿದ್ದಾಳೆ. ಆದರೆ ಅವಳು ಬದುಕಿದ್ದಾಳೆ ಎಂಬ ಸತ್ಯ ಸ್ನೇಹಾಗೆ ಮಾತ್ರ ಗೊತ್ತಾಗಿದೆ. ಅದನ್ನು ಮನೆಯವರಿಗೂ ತಿಳಿಸಬೇಕು ಎಂದು ಕಷ್ಟಪಡುತ್ತಿದ್ದಾಳೆ. ಹೇಗಾದರೂ ಮಾಡಿ ಸಹನಾಳನ್ನು ಒಪ್ಪಿಸಲು ಯತ್ನಿಸುತ್ತಿದ್ದಾಳೆ.
(1 / 8)
ಸಹನಾಳನ್ನು ನೋಡಿ ಸ್ನೇಹಾಗೆ ಎಷ್ಟು ಖುಷಿಯಾಗಿದೆ ಎಂದರೆ ಅದನ್ನು ವರ್ಣನೆ ಮಾಡಲು ಸಾಧ್ಯವಿಲ್ಲ. ಅಷ್ಟು ಸಂತಸವಾಗಿದೆ. (ಝೀ ಕನ್ನಡ)
(2 / 8)
ಯಾಕೆ ಸಹನಾ ಸುಳ್ಳು ಹೇಳಿಕೊಂಡು ದೂರದ ಊರಿನಲ್ಲಿ ಬದುಕುತ್ತಿದ್ದಾಳೆ ಎಂದು ಅವಳಿಗೆ ಅರ್ಥ ಆಗುತ್ತಿಲ್ಲ. ತಮ್ಮ ಜೊತೆ ಬಂದಿರು ಎಂದರೆ ಅವಳು ಅದಕ್ಕೂ ಒಪ್ಪುತ್ತಿಲ್ಲ. (ಝೀ ಕನ್ನಡ)
(3 / 8)
ಹೋಗಿ ಮಾತನಾಡಿಸಿದಾಗ ಅವಳು ಈ ಹಿಂದೆ ನಡೆದ ಎಲ್ಲ ಘಟನೆಯನ್ನು ವಿವರಿಸುತ್ತಾಳೆ. ನಾನು ಬದುಕಿರುವ ವಿಚಾರ ಯಾರಿಗೂ ಹೇಳಬೇಡ ದಯವಿಟ್ಟು ಎಂದು ಬೇಡಿಕೊಳ್ಳುತ್ತಾಳೆ. (ಝೀ ಕನ್ನಡ)
(4 / 8)
ಆದರೆ ಅದನ್ನು ಸ್ನೇಹಾ ಒಪ್ಪುವುದಿಲ್ಲ. ಯಾಕೆ ಬದುಕಿಯೂ ಸತ್ತಂತೆ ಇರಬೇಕು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವಳು ತಾನು ಸಾಧನೆ ಮಾಡಬೇಕು ಎಂದು ಹೇಳುತ್ತಾಳೆ. (ಝೀ ಕನ್ನಡ)
(5 / 8)
ನೀನು ಸಾಧನೆ ಮಾಡು ನಾನು ನಿನ್ನ ಸಾಧನೆಗೆ ಅಡ್ಡಿ ಆಗೋದಿಲ್ಲ. ಆದರೆ ಒಮ್ಮೆ ನೀನು ಮನೆಗೆ ಬಮದು ಹೋಗು. ಅಲ್ಲೇ ಉಳಿದುಕೋ ಎಂದು ನಾನು ಹೇಳೊದಿಲ್ಲ ಎಂದು ಸ್ನೇಹಾ ಹೇಳುತ್ತಾಳೆ. (ಝೀ ಕನ್ನಡ)
(6 / 8)
ಇಲ್ಲಾ ಅಲ್ಲಿಗೆ ಬಂದು ನನ್ನ ಮನಸು ಬದಲಾದರೆ ನನಗೆ ಕಷ್ಟ ಆಗುತ್ತದೆ ಎಂದು ಹೇಳಿದ್ದಾಳೆ. ಆಗ ಸ್ನೇಹಾ ಮಾತು ಕೊಡುತ್ತಾಳೆ. ನಾನೇ ನಿನ್ನನ್ನು ಮತ್ತೆ ಇಲ್ಲಿಗೆ ತಂದು ಬಿಡುತ್ತೇನೆ ಎಂದು ಹೇಳುತ್ತಾಳೆ. (ಝೀ ಕನ್ನಡ)
(7 / 8)
ಇನ್ನು ಮನೆಯಲ್ಲಿ ಎಲ್ಲ ಸೇರಿಕೊಂಡು ಪುಟ್ಟಕ್ಕನ ಬರ್ತಡೆಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇತ್ತ ಸ್ನೇಹಾ ಬೇರೆ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. (ಝೀ ಕನ್ನಡ)
ಇತರ ಗ್ಯಾಲರಿಗಳು