ಕಿರುತೆರೆಯಲ್ಲಿ ಒಂದಾದ ಮಾನಸ ಸರೋವರ ಜೋಡಿ; ಸ್ಟಾರ್ ಸುವರ್ಣದಲ್ಲಿ ಗೌರಿ ಶಂಕರ ಹೊಸ ಅಧ್ಯಾಯ ಆರಂಭ
- ಸ್ಟಾರ್ ಸುವರ್ಣ ಕಿರುತೆರೆ ವಾಹಿನಿಯಲ್ಲಿ ಗೌರಿ ಶಂಕರ ಧಾರಾವಾಹಿಯ ಹೊಸ ಅಧ್ಯಾಯ ಆರಂಭವಾಗುತ್ತಿದೆ. ವಿಶೇಷವೆಂದರೆ, ಈ ಸೀರಿಯಲ್‌ನಲ್ಲಿ ಗೌರಿ ಜಿಲ್ಲಾಧಿಕಾರಿಯಾಗಿದ್ದಾಳೆ. ಶಂಕರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಸ್ಯಾಂಡಲ್‌ವುಡ್‌ನ ಮಾನಸ ಸರೋವರ ಎಂಬ ಕ್ಲಾಸಿಕ್ ಸಿನಿಮಾದ ಶ್ರೀನಾಥ್ ಮತ್ತು ಪದ್ಮಾವಾಸಂತಿ ಈ ಸೀರಿಯಲ್‌ನಲ್ಲಿ ಮತ್ತೆ ಒಂದಾಗಿದ್ದಾರೆ.
- ಸ್ಟಾರ್ ಸುವರ್ಣ ಕಿರುತೆರೆ ವಾಹಿನಿಯಲ್ಲಿ ಗೌರಿ ಶಂಕರ ಧಾರಾವಾಹಿಯ ಹೊಸ ಅಧ್ಯಾಯ ಆರಂಭವಾಗುತ್ತಿದೆ. ವಿಶೇಷವೆಂದರೆ, ಈ ಸೀರಿಯಲ್‌ನಲ್ಲಿ ಗೌರಿ ಜಿಲ್ಲಾಧಿಕಾರಿಯಾಗಿದ್ದಾಳೆ. ಶಂಕರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಸ್ಯಾಂಡಲ್‌ವುಡ್‌ನ ಮಾನಸ ಸರೋವರ ಎಂಬ ಕ್ಲಾಸಿಕ್ ಸಿನಿಮಾದ ಶ್ರೀನಾಥ್ ಮತ್ತು ಪದ್ಮಾವಾಸಂತಿ ಈ ಸೀರಿಯಲ್‌ನಲ್ಲಿ ಮತ್ತೆ ಒಂದಾಗಿದ್ದಾರೆ.
(1 / 11)
ಮಾನಸ ಸರೋವರ ಎಂದಾಗ ಶ್ರೀನಾಥ್ ಮತ್ತು ಪದ್ಮಾವಾಸಂತಿ ನೆನಪಿಗೆ ಬರಬಹುದು. ವೇದಾಂತಿ ಹೇಳಿದನು, ಹಾಡು ಹಾಡು, ಮಾನಸ ಸರೋವರ, ಚಂದ ಚಂದ ಅಥವಾ ನೀನೇ ಸಾಕಿದ ಗಿಣಿ ಹಾಡು ನೆನಪಿಗೆ ಬರಬಹುದು. ಸಿ. ಅಶ್ವಥ್ ಧ್ವನಿಯಲ್ಲಿ ಕೇಳಿರಣ್ಣ ಕೇಳಿ ಹಾಡು ನೆನಪಿಗೆ ಬರಬಹುದು. ಇದೀಗ ಮತ್ತೆ ಈ ಸಿನಿಮಾವನ್ನು ಕಿರುತೆರೆ ವೀಕ್ಷಕರು ಗೌರಿ ಶಂಕರ ಹೊಸ ಅಧ್ಯಾಯದ ಮೂಲಕ ನೆನಪಿಸಿಕೊಳ್ಳಬಹುದು.
(2 / 11)
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾದ ಸುಂದರ ಪ್ರೇಮಕಥೆ ನೆನಪಿಗೆ ಬರಬಹುದು. ಮಾನಸ ಸರೋವರ ಈಗ ಪ್ರೇಕ್ಷಕರಿಗೆ ಮತ್ತೆ ನೆನಪಿಗ ಬರಬಹುದು. ಏಕೆಂದರೆ, ಕಿರುತೆರೆಯಲ್ಲಿ ಮಾನಸ ಸರೋವರದ ಜೋಡಿ "ಶ್ರೀನಾಥ್ ಮತ್ತು ಪದ್ಮವಸಂತಿ" ಅಭಿನಯದ ಗೌರಿ ಶಂಕರ ಸೀರಿಯಲ್‌ನ ಹೊಸ ಅಧ್ಯಾಯ ಆರಂಭವಾಗುತ್ತಿದೆ.
(3 / 11)
ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ಗೌರಿ ಶಂಕರ ಸೀರಿಯಲ್ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
(4 / 11)
ಇದು ಗೌರಿ ಮತ್ತು ಶಂಕರನ ಕಥೆ. ವೀರಭದ್ರಪ್ಪ ಎಂಬ ವಿಲನ್‌ನ ಸಾಕು ಮಗ ಈ ಶಂಕರ. ಕೊನೆಯವರೆಗೂ ಶಂಕರನಿಗೆ ತನ್ನ ತಂದೆ ವೀರಭದ್ರಪ್ಪ ಅಲ್ಲ ಅನ್ನುವ ಸಂಗತಿ ಗೊತ್ತಿರುವುದಿಲ್ಲ.
(5 / 11)
ಸೀರಿಯಲ್‌ನ ಕೊನೆಗೆ ಭೈರಾದೇವಿ ಎಂಬಾಕೆ ಎಂಟ್ರಿ ನೀಡುತ್ತಾಳೆ. ಆಕೆಯ ಮಗ ಈ ಶಂಕರ ಎನ್ನುವುದು ವೀಕ್ಷಕರಿಗೆ ತಿಳಿಯುತ್ತದೆ.
(6 / 11)
ಇನ್ನು ಆರಂಭವಾಗಲಿರುವ ಹೊಸ ಅಧ್ಯಾಯದಲ್ಲಿ ಭೈರಾದೇವಿ, ಶಂಕರ ಎಲ್ಲರೂ ಒಂದಾಗಿರುತ್ತಾರೆ. ಬಾಲ್ಯವಿವಾಹವಾಗಿದ್ದ ಗಂಗೆ ಜೈಲಿಂದ ಹೊರಬಂದ ಶಂಕರನ ಭೇಟಿಯಾಗುತ್ತಾಳೆ. ಇದೇ ಸಮಯದಲ್ಲಿ ಶಂಕರನಿಗೆ ಗೌರಿ ಮೇಲೆ ಅತೀವ ಕೋಪ, ದ್ವೇಷ ಇರುತ್ತದೆ. ಜಿಲ್ಲಾಧಿಕಾರಿಯಾಗಿರುವ ಗೌರಿ ಜತೆ ದ್ವೇಷ ಕಾರುತ್ತಾನೆ.
(7 / 11)
ವಿಶೇಷ ಏನೆಂದರೆ ಈ ಸೀರಿಯಲ್ ಮೂಲಕ ಮಾನಸ ಸರೋವರ ಸಿನಿಮಾದ ನಾಯಕ ಮತ್ತು ನಾಯಕಿಯಾಗಿದ್ದ ಶ್ರೀನಾಥ್ ಮತ್ತು ಪದ್ಮಾವಾಸಂತಿ ಈ ಸೀರಿಯಲ್‌ನಲ್ಲಿ ಮತ್ತೆ ಒಂದಾಗಿ ನಟಿಸುತ್ತಿದ್ದಾರೆ.
(8 / 11)
ಗೌರಿ ಶಂಕರ ಸೀರಿಯಲ್‌ನಲ್ಲಿ ಗೌರಿಯಾಗಿ ಪ್ರೇಕ್ಷಕರ ಮನಸೆಳೆದಿರುವ ನಟಿ ದಿವ್ಯಾ ವಾಗೂಕರ್. ಹೊಸ ಅಧ್ಯಾಯದಲ್ಲಿಯೂ ಈಕೆಯೇ ಗೌರಿಯಾಗಿ ಮುಂದುವರೆದಿದ್ದಾರೆ. ಆರಂಭದಲ್ಲಿ ಕೌಸ್ತುಭಮಣ ಗೌರಿಯಾಗಿ ನಟಿಸಿದ್ದರು.
(9 / 11)
ಗೌರಿ ಶಂಕರ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವುದು ಯಶ್ವಂತ್ ಬೆಟ್ಟಸ್ವಾಮಿ. ಜೋಗಿ ಮನೆತನದ ಒಬ್ಬನೇ ಮಗ ಶಂಕರನ ಮಾತ್ರದಲ್ಲಿ ಇವರು ಹೊಸ ಅಧ್ಯಾಯದಲ್ಲಿಯೂ ಮುಂದುವರೆಯಲಿದ್ದಾರೆ.
(10 / 11)
ಈ ಹೊಸ ಅಧ್ಯಾಯದಲ್ಲಿ ಬದಲಾಗಿದೆ ಬದುಕಿನ ಪ್ರಯಾಣ ಎಂದು ಗೌರಿ ಎಂಟ್ರಿಯ ಸಮಯದಲ್ಲಿ ಸ್ಟಾರ್‌ಸುವರ್ಣ ತಿಳಿಸಿದೆ. ಹೌದು, ಗೌರಿ ಈಗ ಜಿಲ್ಲಾಧಿಕಾರಿ. ಈ ಮೂಲಕ ಈಕೆಯ ಪಾತ್ರಕ್ಕೆ ಹೆಚ್ಚು ಪವರ್ ನೀಡಲಾಗಿದೆ.
ಇತರ ಗ್ಯಾಲರಿಗಳು