Kannada Serial TRP: ಟಿಆರ್‌ಪಿ ರೇಸ್‌ನಲ್ಲಿ ಜೋರಿದೆ ಭಾಗ್ಯಲಕ್ಷ್ಮೀ, ಲಕ್ಷ್ಮೀಬಾರಮ್ಮ ಓಟ; ಕನ್ನಡದ ಟಾಪ್‌ 10 ಧಾರಾವಾಹಿಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Serial Trp: ಟಿಆರ್‌ಪಿ ರೇಸ್‌ನಲ್ಲಿ ಜೋರಿದೆ ಭಾಗ್ಯಲಕ್ಷ್ಮೀ, ಲಕ್ಷ್ಮೀಬಾರಮ್ಮ ಓಟ; ಕನ್ನಡದ ಟಾಪ್‌ 10 ಧಾರಾವಾಹಿಗಳಿವು

Kannada Serial TRP: ಟಿಆರ್‌ಪಿ ರೇಸ್‌ನಲ್ಲಿ ಜೋರಿದೆ ಭಾಗ್ಯಲಕ್ಷ್ಮೀ, ಲಕ್ಷ್ಮೀಬಾರಮ್ಮ ಓಟ; ಕನ್ನಡದ ಟಾಪ್‌ 10 ಧಾರಾವಾಹಿಗಳಿವು

  • ‌Kannada Serial TRP: ಟಿಆರ್‌ಪಿ ರೇಸ್‌ನಲ್ಲಿ ಜೀ ಕನ್ನಡದ ಧಾರಾವಾಹಿಗಳ ಜತೆಗೆ ಕಲರ್ಸ್‌ನ ಸೀರಿಯಲ್‌ಗಳೂ ಓಟಕ್ಕಿಳಿದಿವೆ. ಹಾಗಾದರೆ, ಈ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ ಯಾವ ಸೀರಿಯಲ್‌ ಟಾಪ್‌ ಇದೆ? ಯಾವೆಲ್ಲ ಧಾರಾವಾಹಿಗಳ ಅಂಕಿ ಅಂಶದಲ್ಲಿ ಬದಲಾವಣೆಗಳಾಗಿವೆ? ಟಿಆರ್‌ಪಿ ಏರಿಳಿತದಲ್ಲಿ ಮೇಲುಗೈ ಸಾಧಿಸಿದವರು ಯಾರು? ಹೀಗಿದೆ ಮಾಹಿತಿ.

ಕನ್ನಡ ಕಿರುತೆರೆಯಲ್ಲಿ ಈ ವಾರ ಅಚ್ಚರಿಯ ಬೆಳವಣಿಗೆ ಘಟಿಸಿದೆ. ಜೀ ಕನ್ನಡದ ಅಮೃತಧಾರೆ ಸೀರಿಯಲ್‌ ಮತ್ತು ಲಕ್ಷ್ಮೀ ನಿವಾಸ ಧಾರಾವಾಹಿಗಳು ಕಳೆದ ವಾರದ ಟಾಪ್‌ ಸೀರಿಯಲ್‌ಗಳಾಗಿ ಹೊರಹೊಮ್ಮಿವೆ. ಅಂದರೆ ಎರಡೂ ಸೀರಿಯಲ್‌ಗಳು ಟಿಆರ್‌ಪಿಯಲ್ಲಿ ಒಂದೇ ನಂಬರ್‌ ಪಡೆದುಕೊಂಡಿದೆ. 7.9 ಟಿಆರ್‌ಪಿ ಪಡೆದು ಮೊದಲ ಸ್ಥಾನ ಅಲಂಕರಿಸಿವೆ.
icon

(1 / 7)

(Zee5\ JioCinema)

ಸದಾ ಅಗ್ರಸ್ಥಾನದಲ್ಲಿಯೂ ಮುಂದುವರಿಯುತ್ತಿದ್ದ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ 7.6 ಟಿಆರ್‌ಪಿ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. 
icon

(2 / 7)

ಅದೇ ರೀತಿ ಅಣ್ಣಯ್ಯ ಧಾರಾವಾಹಿಯೂ ನೋಡುಗರ ಗಮನ ಸೆಳೆಯುತ್ತಿದೆ. ಶಿವು ಪಾರ್ವತಿಯ ನಡುವಿನ ಪ್ರೀತಿ ಈಗ ವೀಕ್ಷಕರ ನೆಚ್ಚಿನ ಸಂಚಿಕೆಗಳಾಗಿವೆ. ಹಾಗಾಗಿ ಈ ಧಾರಾವಾಹಿ 7.3 ಟಿಆರ್‌ ಪಡೆದು ಮೂರನೇ ಸ್ಥಾನದಲ್ಲಿದೆ. ಇದೇ ಅಣ್ಣಯ್ಯ ಸೀರಿಯಲ್‌ ಜತೆಗೆ ಅದೇ ಮೂರನೇ ಸ್ಥಾನವನ್ನು 7.3 ಟಿಆರ್‌ಪಿ ಪಡೆದು ಹಂಚಿಕೊಂಡಿದೆ ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ. 
icon

(3 / 7)

ಕಳೆದ ಎರಡು ವಾರಗಳ ಹಿಂದೆ ಮೊದಲ ಸ್ಥಾನದಲ್ಲಿ ಮಿಂಚಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ ಅದ್ಯಾಕೋ ಕೊಂಚ ಮಂಕಾದಂತಿದೆ. ಟಿಆರ್‌ಪಿಯಲ್ಲಿ ದಾಖಲೆ ಬರೆದಿದ್ದ ಈ ಸೀರಿಯಲ್‌ ಈಗ 6.7 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. 
icon

(4 / 7)

ಅದೇ ರೀತಿ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ 6.6 ಟಿಆರ್‌ಪಿ ಸಿಕ್ಕಿದ್ದು 5ನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಕಲರ್ಸ್‌ನ ನಿನಗಾಗಿ ಸೀರಿಯಲ್‌ 5.7 ಟಿಆರ್‌ಪಿಯೊಂದಿಗೆ ಆರನೇ ಸ್ಥಾನದಲ್ಲಿದೆ. 
icon

(5 / 7)

ಜೀ ಕನ್ನಡದ ಸೀತಾ ರಾಮ 5.1 ಟಿಆರ್‌ಪಿಯೊಂದಿಗೆ ಏಳನೇ ಸ್ಥಾನದಲ್ಲಿದೆ. ಈ ಹಿಂದೆ ಈ ಸೀರಿಯಲ್‌ 10ನೇ ಸ್ಥಾನದಲ್ಲಿಯೂ ಕಂಡಿತ್ತು.  ಕಲರ್ಸ್‌ನ ಮತ್ತೊಂದು ಹಿಟ್‌ ಸೀರಿಯಲ್‌ ರಾಮಾಚಾರಿ, ಟಿಆರ್‌ಪಿಯಲ್ಲಿ ಕೊಂಚ ಇಳಿಕೆ ಕಂಡಿದೆ. ಈ ಧಾರಾವಾಹಿ 5.0 ರೇಟಿಂಗ್‌ ಪಡೆದು, ಎಂಟನೇ ಸ್ಥಾನದಲ್ಲಿದೆ. 
icon

(6 / 7)

ಶ್ರೀಗೌರಿ 4.9 ಟಿಆರ್‌ಪಿಯೊಂದಿಗೆ 9ನೇ ಸ್ಥಾನದಲ್ಲಿದೆ. ಜೀ ಕನ್ನಡದ ಬ್ರಹ್ಮಗಂಟು ಧಾರಾವಾಹಿ 4.7 ಟಿಆರ್‌ಪಿಯೊಂದಿಗೆ 10ನೇ ಸ್ಥಾನದಲ್ಲಿದೆ. 
icon

(7 / 7)

ಇತರ ಗ್ಯಾಲರಿಗಳು