ಅಮೃತಧಾರೆಯಲ್ಲಿ ವಿಷಧಾರೆ: ಮಲ್ಲಿ ತಿನ್ನೋ ತಿಂಡಿಗೆ ವಿಷ ಪ್ರಾಶನ ಮಾಡಿದ ಜೈದೇವ್, ಆ ತಿಂಡಿಯನ್ನು ಶಕುಂತಲಾದೇವಿ ತಿನ್ನೋ ಪರಿಸ್ಥಿತಿ
- Aamruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ವಿಶಪ್ರಾಶನದ ಕಸರತ್ತು ನಡೆಯಲಿದೆ. ಗೂಂಡಾಗಳಿಂದ ಮಲ್ಲಿಯನ್ನು ಭೂಮಿಕಾ ಬಚಾವ್ ಮಾಡಿದ್ದಳು. ಆದರೆ, ಮಲ್ಲಿಯ ತಿಂಡಿಗೆ ಜೈದೇವ್ ವಿಷ ಹಾಕಿದ್ದಾನೆ.
- Aamruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ವಿಶಪ್ರಾಶನದ ಕಸರತ್ತು ನಡೆಯಲಿದೆ. ಗೂಂಡಾಗಳಿಂದ ಮಲ್ಲಿಯನ್ನು ಭೂಮಿಕಾ ಬಚಾವ್ ಮಾಡಿದ್ದಳು. ಆದರೆ, ಮಲ್ಲಿಯ ತಿಂಡಿಗೆ ಜೈದೇವ್ ವಿಷ ಹಾಕಿದ್ದಾನೆ.
(1 / 8)
ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ದಿನಕ್ಕೊಂದು ತಿರುವುಗಳು. ಮಲ್ಲಿ ಬಸುರಿ ಎಂದು ಗೊತ್ತಾದ ಬಳಿಕ ಜೈದೇವ್ ಮತ್ತು ಮಲ್ಲಿಯನ್ನು ಭೂಮಿಕಾ ಮದುವೆಯಾಗುವಂತೆ ಮಾಡಿದ್ದಳು. ಮದುವೆಯಾದ ತಕ್ಷಣ ಇವರ ಸಮಸ್ಯೆಗಳು ಮುಗಿದಿಲ್ಲ. ಮಲ್ಲಿಯ ನೆರಳನ್ನು ಜೈದೇವ್, ಶಕುಂತಲಾದೇವಿ ಸಹಿಸುತ್ತಿಲ್ಲ.
(2 / 8)
ಮಲ್ಲಿ ಮನೆಗೆ ಬಂದ ಬಳಿಕ ಶಕುಂತಲಾದೇವಿ ಅತೀವ ಕೋಪಗೊಂಡಿದ್ದಾರೆ. ಕೆಲಸದವಳನ್ನು ಮನೆ ಸೊಸೆ ಎಂದು ಅವರ ಮನಸ್ಸು ಒಪ್ಪುತ್ತಿಲ್ಲ. ಈಕೆಯನ್ನು ಏನಾದರೂ ಮಾಡು ಎಂದು ಮಗನಿಗೆ ಅನುಮತಿ ನೀಡಿರ್ತಾಳೆ. ತಾಯಿಯಿಂದ ಅನುಮತಿ ದೊರಕಿದ ಬಳಿಕ ಮಲ್ಲಿಯನ್ನು ಸಾಯಿಸುವ ಸಂಚು ಜೈದೇವ್ ಮಾಡುತ್ತಾನೆ.
(3 / 8)
ಮಲ್ಲಿಯನ್ನು ಗೂಂಡಾಗಳ ಮೂಲಕ ಕೊಲ್ಲೋ ಪ್ಲಾನ್ ಪ್ಲಾಪ್ ಆಗಿತ್ತು. ಲೋಕಿ ಮತ್ತು ಗೂಂಡಾಗಳ ಮೂಲಕ ಮಲ್ಲಿಯನ್ನು ಸಾಯಿಸಲು ಯತ್ನಿಸಲಾಯಿತು. ಮನೆಯಿಂದ ಎಲ್ಲರನ್ನೂ ಹೊರಕ್ಕೆ ಕಳುಹಿಸಿ ಮಲ್ಲಿಯನ್ನು ಸಾಯಿಸುವ ಪ್ಲಾನ್ ಮಾಡಲಾಗಿತ್ತು. ಸಕಾಲಕ್ಕೆ ಮನೆಗೆ ಆಗಮಿಸಿದ ಭೂಮಿಕಾ ಪಿಸ್ತೂಲ್ ಹಿಡಿದು ಗೂಂಡಾಗಳನ್ನು ಹಿಮ್ಮೆಟ್ಟಿಸಿದ್ದಳು.
(4 / 8)
ಈ ವಿಷಯ ಮಲ್ಲಿ ಮತ್ತು ಭೂಮಿಕಾರಿಗೆ ಮಾತ್ರ ತಿಳಿದಿದೆ. ಇತ್ತ ಜೈದೇವ್ ಮಲ್ಲಿಯನ್ನು ಸಾಯಿಸಲೇಬೇಕೆಂದು ನಿರ್ಧರಿಸಿದ್ದಾನೆ. ಇಂದಿನ ಸಂಚಿಕೆಯಲ್ಲಿ ಮಲ್ಲಿ ತಿನ್ನುವ ತಿಂಡಿಗೆ ವಿಷ ಕೂಡ ಹಾಕುತ್ತಾನೆ. ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಈ ಸಂಗತಿ ತಿಳಿದುಬಂದಿದೆ.
(5 / 8)
ಆದರೆ, ಇಲ್ಲೂ ಒಂದು ಟ್ವಿಸ್ಟ್ ಉಂಟಾಗಿದೆ. ತನ್ನ ತಿಂಡಿಗೆ ವಿಷ ಬೆರೆಸಿದ್ದನ್ನು ಮಲ್ಲಿ ನೋಡುತ್ತಾಳೆ. ಆಕೆ ವಿಷಯವನ್ನು ಭೂಮಿಕಾಳಿಗೆ ತಿಳಿಸುತ್ತಾಳೆ. ಈ ವಿಷಯವನ್ನು ಎಲ್ಲರ ಮುಂದೆ ಹೇಳಿದಾಗ "ಈ ಮನೆಯಲ್ಲಿ ಆಕೆ ತಿನ್ನುವ ಮೊದಲು ನಾವು ಟೇಸ್ಟ್ ಮಾಡಬೇಕಾ?" ಎಂದು ಶಕುಂತಲಾದೇವಿ ಹೇಳುತ್ತಾರೆ.
(6 / 8)
"ಹೌದು ಟೇಸ್ಟ್ ಮಾಡಬೇಕು" ಎಂದು ಭೂಮಿಕಾ ಹೇಳಿದಾಗ ಮಗ ವಿಷ ಹಾಕಿದ ವಿಷಯ ತಿಳಿಯದೆ ಶಕುಂತಲಾದೇವಿ ಆ ತಿಂಡಿ ಸೇವಿಸಲು ಮುಂದಾಗುವ ತನಕ ಪ್ರಮೋ ಇದೆ. ಇವರು ವಿಷ ಇರುವ ಆಹಾರ ಸೇವಿಸ್ತಾರ? ಈ ಪ್ರಯತ್ನದಲ್ಲೂ ಜೈದೇವ್ ಪ್ಲಾಪ್ ಆಗ್ತಾನ? ಮುಂದೇನಾಗುತ್ತದೆ ಎಂಬ ಕುತೂಹಲ ಸೀರಿಯಲ್ ಪ್ರಿಯರಲ್ಲಿ ಉಂಟಾಗಿದೆ.
(7 / 8)
ಮಲ್ಲಿಯ ರಕ್ಷಣೆಗೆ ಭೂಮಿಕಾ ನಿಂತಿರುವುದು ಶಕುಂತಲಾದೇವಿ ಮತ್ತು ಜೈದೇವ್ ಆಟೋಟಪಗಳಿಗೆ ದೊಡ್ಡ ಗೋಡೆಯಾಗಿದೆ. ಮಲ್ಲಿಯನ್ನು ಸಾಯಿಸಬೇಕು, ಗೌತಮ್ ಮತ್ತು ಭೂಮಿಕಾರ ನಡುವೆ ಮನಸ್ಥಾಪ ಹೆಚ್ಚಿಸಬೇಕು ಇತ್ಯಾದಿ ಗುರಿಗಳು ಅವರ ಮುಂದಿವೆ. ಮುಂದೆನಾಗುತ್ತದೋ ಕಾದು ನೋಡಬೇಕಿದೆ.
ಇತರ ಗ್ಯಾಲರಿಗಳು