ಕನ್ನಡ ಸುದ್ದಿ  /  Photo Gallery  /  Televison News Aamruthadhaare Serial Today Episode Shakuntala Devi Eat Malli Poison Food Jaidev Plan Pcp

Aamruthadhaare: ಮಲ್ಲಿಗೆ ಮಾಡಿಟ್ಟ ತಿಂಡಿ ಯಾಕೆ ತಿಂದೆ, ನೀನು ತಿಂದಿರೋದು ವಿಷ; ಜೈದೇವ್‌ ಮಾತಿಗೆ ಬೆಚ್ಚಿಬಿದ್ರು ಶಕುಂತಲಾದೇವಿ

  • Aamruthadhaare serial today episode: ಮಲ್ಲಿಯ ಕಥೆ ಹೇಗಾದರೂ ಮುಗಿಸಲೇಬೇಕು ಎಂದುಕೊಂಡಿದ್ದ ಜೈದೇವ್‌ ಮಲ್ಲಿ ಆಹಾರದಲ್ಲಿ ವಿಷ ಬೆರೆಸಿದ್ದಾನೆ. ಟೇಸ್ಟ್‌ ನೋಡುತ್ತ ಅದನ್ನು ಶಕುಂತಲಾದೇವಿ ತಿಂದಿದ್ದಾಳೆ. ವಿಷದ ಪರಿಣಾಮ ಆಕೆಯ ಮೇಲೆ ಕಾಣಿಸಿಕೊಂಡಿದೆ.

ಝೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಶಕುಂತಲಾದೇವಿ ಮಲ್ಲಿಗೆ ಮಾಡಿಟ್ಟ ತಿಂಡಿ ತಿಂದಿದ್ದಾರೆ. ಮಲ್ಲಿಯನ್ನು ಸಾಯಿಸಲು ಈ ತಿಂಡಿಗೆ ಜೈದೇವ್‌ ವಿಷ ಬೆರೆಸಿದ್ದ ಸಂಗತಿ ಅವರಿಗೆ ಗೊತ್ತಿಲ್ಲ. 
icon

(1 / 11)

ಮಲ್ಲಿಗೆ ಜೈದೇವ್‌ ಮಾತುಕತೆ ಕೇಳಿ ಏನೋ ಅನುಮಾನ ಬಂದಿದೆ. "ನನ್ನನ್ನು ವಿಷ ಹಾಕಿ ಸಾಯಿಸ್ತಾರೆ" ಎಂದು ಭೂಮಿಕಾಳಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣ ಭೂಮಿಕಾ ಹೊರಕ್ಕೆ ಹೋಗಿ "ಇವಳಿಗೆ ಇಲ್ಲಿ ತಿಂಡಿ ತಿನ್ನಲು ಭಯವಾಗಿದೆ" ಎಂದಾಗ "ನಾವು ಟೇಸ್ಟ್‌ ಮಾಡಿ ನೋಡಬೇಕ" ಎಂದು ಶಕುಂತಲಾದೇವಿ ಕೇಳುತ್ತಾರೆ. 
icon

(2 / 11)

"ಹೌದು ಅತ್ತೆ ಇನ್ನು ಮುಂದೆ ನೀವೇ ಎಲ್ಲಾ ಆಹಾರ ಟೇಸ್ಟ್‌ ಮಾಡಬೇಕು" ಎಂದು ಭೂಮಿಕಾ ಹೇಳುತ್ತಾಳೆ. ಆ ಸಮಯದಲ್ಲಿ ಅಜ್ಜಿಯು "ಅವಳಿಗೆ ನೀನೇ ತಿಳುವಳಿಕೆ ನೀಡಬೇಕು. ನೀನೇ ಎಲ್ಲಾ ಆಹಾರ ರುಚಿ ನೋಡಿ ನೀಡಬೇಕು. ಅವಳನ್ನು ಕೇರ್‌ ಮಾಡಬೇಕು. ನೀನು ನಾಲ್ಕು ಮಕ್ಕಳನ್ನು ಹೆತ್ತ ತಾಯಿ" ಎಂದೆಲ್ಲ ಹೇಳುತ್ತಾಳೆ. 
icon

(3 / 11)

ನಿನ್ನೆಯ ಸಂಚಿಕೆಯಲ್ಲಿ ಅಮೃತಧಾರೆ ಧಾರಾವಾಹಿ ಇಲ್ಲಿಯವರೆಗೆ ಬಂದಿತ್ತು. ಇಂದಿನ ಸಂಚಿಕೆಯ ಕುರಿತು ಝೀ ಕನ್ನಡ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಶಕುಂತಲಾದೇವಿ ವಿಷ ಇರುವ ಆಹಾರ ಸೇವಿಸಿದ್ದಾರೆ. ಅವರ ತಲೆ ಗಿರ್ರೆನ್ನಲು ಆರಂಭವಾಗಿದೆ.  
icon

(4 / 11)

ಶಕುಂತಲಾದೇವಿ ತಿಂಡಿ ಟೇಸ್ಟ್‌ ಮಾಡಲು ನೋಡಿದಾಗ ಜೈದೇವ್‌ ತಪ್ಪಿಸಲು ಪ್ರಯತ್ನಿಸುತ್ತಾನೆ. ಮಲ್ಲಿಗೆ ಮಾಡಿದ ತಿಂಡಿ ನೀನ್ಯಾಕೆ ತಿನ್ತಿಯಾ ಎಂದೆಲ್ಲ ಹೇಳಿದರೂ ಕೇಳದೇ ಶಕುಂತಲಾದೇವಿ ಟೇಸ್ಟ್‌ ಮಾಡುತ್ತಾರೆ. 
icon

(5 / 11)

ಆ ತಿಂಡಿಗೆ ವಿಷ ಹಾಕಿದ್ದೀನಿ ಎಂದು ಹೇಳಿದರೆ ಸಿಕ್ಕಿ ಬೀಳುವ ಭಯ. ಹೇಳದೇ ಇದ್ದರೆ ತಾಯಿ ವಿಷ ಸೇವಿಸ್ತಾರೆ. ಇಂತಹ ಸಮಯದಲ್ಲಿ ಏನು ಮಾಡಬೇಕೆಂದು ತೋಚದೆ ಜೈದೇವ್‌ ತಲೆ ಕೆರೆದುಕೊಳ್ಳುತ್ತಾನೆ.
icon

(6 / 11)

ಗರ್ಭಿಣಿ ಮಲ್ಲಿಗೆ ಮಾಡಿಟ್ಟ ಸಿರಿಧಾನ್ಯದ ಆಹಾರಕ್ಕೆ ಜೈದೇವ್‌ ವಿಷ ಹಾಕಿದ್ದ. ಆ ತಿಂಡಿಯಿಂದ ಒಂದಿಷ್ಟು ತೆಗೆದು ಬೌಲಿಗೆ ಹಾಕಿಕೊಂಡು ಮಿಕ್ಸ್‌ ಮಾಡಿಕೊಂಡು ಶಕುಂತಲಾ ದೇವಿ ಸೇವಿಸಿದ್ದಾರೆ.
icon

(7 / 11)

ತಿಂಡಿ ಎಲ್ಲಾ ಸರಿ ಇದೆ ಎನ್ನುತ್ತಾ ಶಕುಂತಲಾದೇವಿ ಎದ್ದು ಹೋಗುತ್ತಾರೆ. ತಲೆ ಸುತ್ತುವ ಫೀಲ್‌ ಆಗುತ್ತದೆ. ಸಾವರಿಸಿಕೊಂಡು ಕೋಣೆಗೆ ಹೋಗುತ್ತಾರೆ.
icon

(8 / 11)

ಶಕುಂತಲಾದೇವಿ ಇರುವ ಕೋಣೆಗೆ ಆಗಮಿಸಿದ ಜೈದೇವ್‌ ಮಾಮ್‌ ಮಾಮ್‌ ನೀನ್ಯಾಕೆ ಮಲ್ಲಿಗೆ ಇಟ್ಟಿದ್ದ ತಿಂಡಿ ತಿಂದೆ, ಅದಕ್ಕೆ ವಿಷ ಬೆರೆಸಿದ್ದೆ ಎಂದು ಸಂಗತಿ ಹೇಳಿದಾಗ "ವಾಟ್‌" ಎಂದು ಶಕುಂತಲಾ ದೇವಿ ಅಚ್ಚರಿಗೆ ಒಳಗಾಗುತ್ತಾರೆ.
icon

(9 / 11)

ತಕ್ಷಣ ಶಕುಂತಲಾದೇವಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆಯೇ? ವಿಷದ ನಾಟಕ ಮುಂದೆ ಏನಾಗುತ್ತದೆ? ಜೈದೇವ್‌ ಸಿಕ್ಕಿಬೀಳುತ್ತಾನ? ಆಹಾರ ಮಾಡಿದ್ದು ಭೂಮಿಕಾ ಎಂದು ಭೂಮಿಕಾಳ ಮೇಲೆ ಗೂಬೆ ಕೂರಿಸಲಾಗುತ್ತದೆಯೇ? ಇತ್ಯಾದಿ ವಿಷಯಗಳು ಇಂದಿನ ಮತ್ತು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ. 
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(11 / 11)

IPL_Entry_Point

ಇತರ ಗ್ಯಾಲರಿಗಳು