ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಬ್ಲ್ಯಾಕ್‌ಮೇಲ್‌ ಮಾಡಿದ ದೀಪಾನ್ಶು ಕೆನ್ನೆಗೆ ಬಿತ್ತು ಭೂಮಿಕಾ, ಜೀವನ್‌ ಕೈಯಿಂದ ಚಟಪಟ ಪೆಟ್ಟು; ಪ್ರೇಕ್ಷಕರಿಗೆ ರೋಮಾಂಚನ

Amruthadhaare: ಬ್ಲ್ಯಾಕ್‌ಮೇಲ್‌ ಮಾಡಿದ ದೀಪಾನ್ಶು ಕೆನ್ನೆಗೆ ಬಿತ್ತು ಭೂಮಿಕಾ, ಜೀವನ್‌ ಕೈಯಿಂದ ಚಟಪಟ ಪೆಟ್ಟು; ಪ್ರೇಕ್ಷಕರಿಗೆ ರೋಮಾಂಚನ

  • Amruthadhaare Serial: ಅಮೃತಧಾರೆ ಧಾರಾವಾಹಿ ಪ್ರೇಕ್ಷಕರಿಗೆ ಅನಿರೀಕ್ಷಿತ ಅಚ್ಚರಿ ಕಾದಿದೆ. ದೀಪಾನ್ಶುವನ್ನು ಬ್ಲ್ಯಾಕ್‌ಮೇಲ್‌ ಮಾಡಿ ಸಂಬಂಧ ಬೆಳೆಸಿಕೊಳ್ಳಲು ಪ್ರಯತ್ನಿಸಿದ ದೀಪಾನ್ಶು ಕೆನ್ನೆಗೆ ಭೂಮಿಕಾ, ಜೀವನ್‌ ಕಡೆಯಿಂದ ಏಟು ದೊರಕಿದೆ. ಸರಿಯಾದ ಸಮಯದಲ್ಲಿ ಮಹಿಮಾ ತೆಗೆದುಕೊಂಡ ನಿರ್ಧಾರದಿಂದಾಗಿ ಇದು ಸಾಧ್ಯವಾಗಿದೆ.

ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಮುಂದಿನ ದಿನಗಳ ಪ್ರಮೋ ಪ್ರಕಟಿಸಿದೆ. ಇದರಲ್ಲಿ ಪ್ರೇಕ್ಷಕರಿಗೆ ಖುಷಿಯಾಗುವಂತಹ, ಅಚ್ಚರಿಯಾಗುವಂತಹ ಸನ್ನಿವೇಶ ನಡೆದಿದೆ. ಮಹಿಮಾಳಿಗೆ ಪೀಡಿಸುತ್ತಿದ್ದ ದೀಪಾನ್ಶುವಿಗೆ ಭೂಮಿಕಾ, ಜೀವನ್‌ ಟಪ ಟಪ ಎಂದು ಕೆನ್ನೆಗೆ ಏಟು ನೀಡಿದ್ದಾರೆ. ಈ ಮೂಲಕ ಆತನ ಸೊಕ್ಕನ್ನು ಇಳಿಸಿದ್ದು ಕಂಡುಬಂದಿದೆ.
icon

(1 / 14)

ಕಳೆದ ಕೆಲವು ದಿನಗಳಿಂದ ಮಹಿಮಾ ಹೊಸ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಳು. ಆಕೆ ಮಗುವನ್ನು ಅಬಾರ್ಟ್‌ ಮಾಡಿರುವ ವಿಷಯ ತಿಳಿದ ದೀಪಾನ್ಶು ಎಂಬ ಸ್ನೇಹಿತ ಈ ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಬಯಸಿದ್ದ. ನಾನು ಕರೆದಾಗ ಎಲ್ಲಾ ಬರಬೇಕು, ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ ಎಂದೆಲ್ಲ ಹೇಳಿ ಪ್ರತಿದಿನ ಟಾರ್ಚರ್‌ ನೀಡುತ್ತಿದ್ದ. 
icon

(2 / 14)

ಜೀವನ್‌ ಜತೆ ನೆಮ್ಮದಿಯಾಗಿ ಬದುಕುತ್ತಿದ್ದ ಮಹಿಮಾಳ ಮನಸ್ಸಿನಲ್ಲಿ ಬಿರುಗಾಳಿಯೇ ಎದ್ದಿತ್ತು. ಮನೆಯವರಿಗೆ ತಾನು ಮಾಡಿದ ತಪ್ಪಿನ ಅರಿವಾದರೆ ಏನಾಗಲಿದೆ ಎಂದು ಆತಂಕ ಕಾಡಿತ್ತು. ಆದರೆ, ಈ ಸಮಯದಲ್ಲಿ ಮಹಿಮಾ ಒಳ್ಳೆಯ ನಿರ್ಧಾರವೊಂದನ್ನು ತೆಗೆದುಕೊಂಡಳು. 
icon

(3 / 14)

ಭೂಮಿಕಾಳಿಗೆ ಕಾಲ್‌ ಮಾಡಿ ಸ್ಟುಡಿಯೋಗೆ ಬರಲು ಹೇಳಿದಳು. ನಡೆದಿರುವ ಸಂಗತಿಯನ್ನೆಲ್ಲ ಹೇಳಿದ್ದಾಳೆ. ಆಕೆಯನ್ನು ತಬ್ಬಿಕೊಂಡು ತಾನೇ ಮಗುವನ್ನು ಅಬಾರ್ಟ್‌ ಮಾಡಿದ ಸತ್ಯ ಹೇಳಿದ್ದಾಳೆ. ಭೂಮಿಕಾಳಿಗೆ ಈ ಸತ್ಯ ಸುದ್ದಿ  ಕೇಳಿ ಸಹಜವಾಗಿ ಮೊದಲಿಗೆ ಆಘಾತವಾಗಿದೆ. 
icon

(4 / 14)

ಇಂತಹ ಸಮಯದಲ್ಲಿ ಭೂಮಿಕಾ ಮಹಿಮಾಳಿಗೆ ಕಾಟ ನೀಡುತ್ತಿದ್ದ ದೀಪಾನ್ಶುವಿಗೆ ಪಾಠ ಕಲಿಸಲು ನಿರ್ಧರಿಸಿದ್ದಾಳೆ.
icon

(5 / 14)

ದೀಪಾನ್ಶುವಿಗೆ ಕಾಲ್‌ ಮಾಡಿ ಸ್ಟುಡಿಯೋಗೆ ಬರಲು ಹೇಳು ಎಂದು ಮಹಿಮಾಳಿಗೆ ತಿಳಿಸುತ್ತಾಳೆ.
icon

(6 / 14)

ದೀಪಾನ್ಶುವಿಗೆ ಕಾಲ್‌ ಮಾಡಿ ಸ್ಟುಡಿಯೋಗೆ ಬರಲು ಹೇಳು ಎಂದು ಮಹಿಮಾಳಿಗೆ ತಿಳಿಸುತ್ತಾಳೆ.

"ಸ್ಟುಡಿಯೋದಲ್ಲಿ ಯಾರೂ ಇಲ್ಲ, ನೀನು ಇಲ್ಲಿಗೆ ಬಾ" ಎಂದು ಮಹಿಮಾ ಕರೆ ಮಾಡುತ್ತಾಳೆ. ಮಹಿಮಾಳ ಕಾಲ್‌ ನೋಡಿ ಖುಷಿಗೊಂಡ ದೀಪಾನ್ಶು ಓಡೋಡಿ ಬಂದಿದ್ದಾನೆ. 
icon

(7 / 14)

ಓಹ್‌ ನೀನಾಗಿಯೇ ಕಾಲ್‌ ಮಾಡಿದ್ದೀ, ವಾಟ್‌ ಏ ಸರ್‌ಪ್ರೈಸ್‌ ಎಂದು ಆತ ತಿಳಿಸಿದ್ದಾನೆ. ಹೂವಿನ ಬೊಕೆ ನೀಡಿ ಐ ಲವ್‌ ಯು ಮಹಿ ಎನ್ನುತ್ತಾನೆ. 
icon

(8 / 14)

ಲವರ್‌ ಅಂತೆ ಲವರ್‌, ನಿನಗೆ ಈ ರೀತಿ ಹೇಳಲು ನಾಚಿಕೆ ಆಗೋಲ್ವ ಎಂದು ಮಹಿ ಕೇಳುತ್ತಾಳೆ. ಅಂದರೆ, ನೀನು ನನ್ನ ಇಷ್ಟಪಟ್ಟು ಕರೆಸಿಕೊಂಡದ್ದಲ್ವ ಎಂದು ದೀಪಾನ್ಶು ಕೇಳುತ್ತಾನೆ.
icon

(9 / 14)

ನಿನ್ನಂಥವರನ್ನು ಯಾರೋ ಇಷ್ಟಪಡುತ್ತಾರೆ ಎಂದು ಭೂಮಿಕಾಳ ಧ್ವನಿ ಕೇಳಿಸುತ್ತದೆ. "ಇದರ ಬಗ್ಗೆ ಗೌತಮ್‌ ದಿವಾನ್‌ ಬಳಿ ಎಲ್ಲಾ ಹೇಳ್ತಿನಿ" ಎಂದು ಭೂಮಿಕಾಳಿಗೆ ಬೆದರಿಸಲು ದೀಪಾನ್ಶು ಪ್ರಯತ್ನಿಸುತ್ತಾನೆ.
icon

(10 / 14)

ತಕ್ಷಣ ದೀಪಾನ್ಶು ಕೆನ್ನೆಗೆ ಭೂಮಿಕಾಳ ಪೆಟ್ಟು ಬೀಳುತ್ತದೆ. ನನಗೆ ಹೊಡೆಸೋಕ್ಕೆ ನಿನ್ನ ಗಂಡನ ಕರೆಸಿಕೊಂಡ್ಯ, ವಿಷ್ಯ ಎಲ್ಲಾ ನಿನ್ನ ಗಂಡನ ಹತ್ರ ಹೇಳ್ತಿನಿ ಎಂದು ದೀಪಾನ್ಶು ರೋಷದಿಂದ ಹೇಳುತ್ತಾನೆ.
icon

(11 / 14)

"ತಾಕತ್ತಿದ್ದರೆ ಕರೆಸೋ" ಎಂದು ಭೂಮಿಕಾ ಅಬ್ಬರಿಸುತ್ತಾಳೆ. ತಕ್ಷಣ ಆತ ಕಾಲ್‌ ಮಾಡುತ್ತಾನೆ. ಅಲ್ಲೇ ಮರೆಯಲ್ಲಿದ್ದ ಜೀವನ್‌ ಬರುತ್ತಾನೆ. ಬಂದವನೇ ದೀಪಾನ್ಶು ಕೆನ್ನೆಗೆ  ಚಟಪಟ ಹೊಡೆಯುತ್ತಾನೆ. 
icon

(12 / 14)

ಹೀಗೆ, ಬ್ಲ್ಯಾಕ್‌ಮೇಲ್‌ ಮಾಡಿ ಸಂಬಂಧ ಬೆಳೆಸಲು ಬಂದ ದೀಪಾನ್ಶುವಿಗೆ ತಕ್ಕ ಶಾಸ್ತ್ರಿಯಾಗಿದೆ.  ಈ ವಾರದ ಸಂಚಿಕೆಗಳಲ್ಲಿ ಈ ಎಲ್ಲಾ ಸೀನ್‌ಗಳು ಪ್ರೇಕ್ಷಕರಿಗೆ ದೊರಕಲಿವೆ.  
icon

(13 / 14)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(14 / 14)

IPL_Entry_Point

ಇತರ ಗ್ಯಾಲರಿಗಳು