Amruthadhaare: ಚಮಕ್‌ಚಲ್ಲೋ ದಿಯಾ ಜತೆ ಜೈದೇವ್ ಅಕ್ರಮ ಸಂಬಂಧ ವಿಚಾರ ಮಲ್ಲಿಗೆ ಗೊತ್ತಾಯ್ತು, ಭೂಮಿಕಾಳಿಗೆ ಬೈದವಳಿಗೀಗ ಸತ್ಯದರ್ಶನ
- Amruthadhaare: ಜೀ ಕನ್ನಡವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗೆ ಸತ್ಯದರ್ಶನವಾಗಿದೆ. ದಿಯಾಳ ಜತೆಗೆ ಜೈದೇವ್‌ಗೆ ಇರುವ ಅಕ್ರಮ ಸಂಬಂಧ ಗೊತ್ತಾಗಿದೆ. ಮಲ್ಲಿಯ ಕಣ್ಣಮುಂದೆಯೇ ಜೈದೇವ್-ದಿಯಾ ಚೆಲ್ಲಾಟ ಆಡಿದ್ದಾರೆ. ಭೂಮಿಕಾಳಿಗೆ ಬೈದವಳಿಗೆ ಈಗ ನಿಜ ಏನೆಂದು ಗೊತ್ತಾಗಿದೆ.
- Amruthadhaare: ಜೀ ಕನ್ನಡವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗೆ ಸತ್ಯದರ್ಶನವಾಗಿದೆ. ದಿಯಾಳ ಜತೆಗೆ ಜೈದೇವ್‌ಗೆ ಇರುವ ಅಕ್ರಮ ಸಂಬಂಧ ಗೊತ್ತಾಗಿದೆ. ಮಲ್ಲಿಯ ಕಣ್ಣಮುಂದೆಯೇ ಜೈದೇವ್-ದಿಯಾ ಚೆಲ್ಲಾಟ ಆಡಿದ್ದಾರೆ. ಭೂಮಿಕಾಳಿಗೆ ಬೈದವಳಿಗೆ ಈಗ ನಿಜ ಏನೆಂದು ಗೊತ್ತಾಗಿದೆ.
(1 / 7)
Amruthadhaare: ಜೀ ಕನ್ನಡ ವಾಹಿನಿಯ ಅಮೃತಧಾರೆಯ ಮುಂಬರುವ ಸಂಚಿಕೆಯಲ್ಲಿ ಮಲ್ಲಿಗೆ ಜೈದೇವ್‌ನ ನಿಜ ಮುಖ ದರ್ಶನವಾಗಿದೆ. ಚಮಕ್‌ಚಲ್ಲೋ ದಿಯಾಳ ಜತೆ ಕಾರಿನಲ್ಲಿ ರೋಮಾನ್ಸ್ ಮಾಡುತ್ತಿರುವ ಘಟನೆಯನ್ನು ಮಲ್ಲಿ ನೇರವಾಗಿ ನೋಡಿದ್ದಾಳೆ. ಇತ್ತೀಚೆಗೆ ಭೂಮಿಕಾಳಿಗೆ ಈ ವಿಚಾರದಲ್ಲಿ ಎದುರುತ್ತರ ನೀಡಿದ್ದ ಮಲ್ಲಿಗೆ ಈಗ ಸತ್ಯದರ್ಶನವಾಗಿದೆ.
(2 / 7)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಕುರಿತು ಜೀಕನ್ನಡವಾಹಿನಿ ಪ್ರಮೋ ಬಿಡುಗಡೆ ಮಾಡಿದೆ. ಬಸುರಿ ಬಯಕೆ ತೀರಿಸಿ ತಾತಾನ ಊರಿಗೆ ಹೊರಟ ಮಲ್ಲಿಗೆ ಜೈದೇವ್‌ನ ಇನ್ನೊಂದು ಮುಖ ಗೊತ್ತಾಗಿದೆ. ದಾರಿಯಲ್ಲಿ ಕಾರು ನಿಲ್ಲಿಸಿ ಪಕ್ಕಕ್ಕೆ ಹೋದವ ಇನ್ನೂ ಬಂದಿಲ್ಲ ಎಂದು ನೋಡಲು ಹೊರಟ ಮಲ್ಲಿಗೆ ಬೇರೊಂದು ಕಾರಿನಲ್ಲಿ ದಿಯಾಳ ಜತೆ ಜೈದೇವ್ ಇರುವ ವಿಷಯ ಗೊತ್ತಾಗಿದೆ.
(3 / 7)
ಮಲ್ಲಿಗೆ ಈ ಹಿಂದೆಯೇ ಭೂಮಿಕಾ ಈ ಕುರಿತು ಸುಳಿವು ನೀಡಿದ್ದಳು. ಜೈದೇವ್‌ನ ಕುರಿತು ಎಚ್ಚರದಿಂದ ಇರುವಂತೆ ಹೇಳಿದ್ದಳು. ಅದಕ್ಕೆ ಮಲ್ಲಿ "ಏನು ನೀವು ಜೈದೇವ್‌ಗೆ ದಿಯಾಳ ಜತೆ ಸಂಬಂಧ ಇದೆ ಎನ್ನುತ್ತಿದ್ದೀರಾ?" ಎಂದು ಬೈದಿದ್ದಾಳೆ. ಇದರಿಂದ ಭೂಮಿಕಾ ತಲೆತಗ್ಗಿಸುವಂತೆ ಆಗಿತ್ತು.
(4 / 7)
ದಿಯಾಳ ಜತೆ ಸಂಬಂಧ ಬಿಡುವೆ ಎಂದು ಗೌತಮ್‌ಗೂ ಜೈದೇವ್ ಮಾತು ಕೊಟ್ಟಿದ್ದ. ಆದರೆ, ಆತ ಸಮಯ ಸಿಕ್ಕಾಗಲೆಲ್ಲ ದಿಯಾಳನ್ನು ಭೇಟಿಯಾಗುತ್ತಿದ್ದ. ಇದೀಗ ಮನೆಯಲ್ಲಿ ಸೀಮಂತ ಮುಗಿಸಿ ಹಳ್ಳಿಗೆ ಹೊರಟ ಜೈದೇವ್ ದಾರಿ ಮಧ್ಯೆ ತನ್ನ ಕಳ್ಳಾಟ ಮುಂದುವರೆಸಿದ್ದಾನೆ. ಒಂದೇ ಕಾರಿನಲ್ಲಿ ಜೈದೇವ್ ಮತ್ತು ದಿಯಾಳನ್ನು ನೋಡಿ ಮಲ್ಲಿ ಬೆಚ್ಚಿಬಿದ್ದಿದ್ದಾಳೆ.
(5 / 7)
ಈಕೆಯನ್ನು ದಿಯಾಳ ನೋಡಿರುವಂತೆ ಪ್ರಮೋದಲ್ಲಿ ಕಾಣಿಸಿದೆ. ಮಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳ ಅಥವಾ ಏನೂ ಗೊತ್ತಾಗದಂತೆ ಇರುತ್ತಾಳ? ಕಾದು ನೋಡಬೇಕಿದೆ. ಈ ವಿಚಾರವನ್ನು ಭೂಮಿಕಾಳಿಗೆ ತಿಳಿಸುತ್ತಾಳ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿ ಮೂಡಿದೆ.
(6 / 7)
ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿ ವಿಷಯದಲ್ಲಿ ಇನ್ನೇನೋ ಘಟನೆ ನಡೆಯುವ ಸೂಚನೆಯಿದೆ. ಈ ಪ್ರಮೋಗೆ ಪ್ರೇಕ್ಷಕರು ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಆಗ್ಬೇಕು ಮಲ್ಲಿ ಗೆ,,ಭೂಮಿಕಾ ಹೇಳಿದ್ರೆ ಅವಳಿಗೆ ಬೈದ್ಲು,,,ಇವಾಗ ಕಣ್ಣ್ ಮುಂದೆ ಇದೆ ಏನ್ ಮಾಡ್ತೀಯ ನೋಡು,,ಕರ್ಮಾ ರಿಟರ್ನ್" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
(7 / 7)
"ಮಲ್ಲಿಗೆ ಆಕ್ಸಿಡೆಂಟ್ ಆಗುತ್ತೆ ಸೀರಿಯಸ್ ಆಗಿ ಆಸ್ಪತ್ರೆ ಗೆ ಹೋಗ್ತಾರೆ ನಂತರ ಹೆರಿಗೆ ಆಗುತ್ತೆ ಮಲ್ಲಿ ಅಥವಾ ಮಗುಗೆ ತೊಂದರೆ ಆಗುತ್ತೆ ಇದೇ ಮುಂದಿನ ಎಪಿಸೋಡ್" "ಮಲ್ಲಿಯ ಜೀವನ ರೂಪಿಸಿದ್ದೆ ಭೂಮಿಕಾ, ಆದ್ರೆ ಮಲ್ಲಿ ಅವಳ್ ಬುದ್ದಿಮಾತಿಗೆ ಎದುರು ಮಾತಾಡಿದ್ದಾಳೆ, ಈಗ ಜಯದೇವನ ರಾಸಲಿಲೇ ಕಣ್ಣೂತುಂಬಿಕೊ ಸೌಭಾಗ್ಯ ಮಲ್ಲಿಗೆ, ಸುಳ್ಳು ಹೇಳಿ ಮೋಸ ಮಾಡುತ್ತಿರುವ ಜಯದೇವನಿಗೆ ಮಲ್ಲಿ ಮನೆಯವರೆಲ್ಲರ ಮುಂದೆ ಇವನ ಕಳ್ಳ ನಾಟಕವನ್ನು ಬಯಲಿಗೆ ತರಬೇಕು" ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು