ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Mahima Actress Sara Annaiah Shared Beautiful Saree Photos Traditonal Fashion Pcp

Sara Annaiah: ಇದು ನಿಮ್ಮ ಸೌಂದರ್ಯ ಅಂದ್ರು ಸಾರಾ ಅಣ್ಣಯ್ಯ; ಕೆಂಪು ಸೀರೆಯಲ್ಲಿ ಮನಸೂರೆಗೊಂಡ ಅಮೃತಧಾರೆ ಮಹಿಮಾ

  • Amruthadhaare Serial Sara Annaiah: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಸಹೋದರಿಯಾಗಿ ನಟಿಸುತ್ತಿರುವ ಮಹಿಮಾ ಅಪೂರ್ವ ಚೆಲುವೆ. ಮಹಿಮಾ ಪಾತ್ರಕ್ಕೆ ಜೀವತುಂಬಿರುವ ಸಾರಾ ಅಣ್ಣಯ್ಯ ಇದೀಗ ಇನ್‌ಸ್ಟಾಗ್ರಾಂನಲ್ಲಿ ಮನಸೂರೆಗೊಳಿಸುವ ಸೀರೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಮೃತಧಾರೆಯ ಮಹಿಮಾ "ಸಾರಾ ಅಣ್ಣಯ್ಯ" ಕೆಂಪು ಸೀರೆಯುಟ್ಟು ಸುಂದರ ನೋಟ ಬೀರಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ "The beauty you see in me is a reflection of you! -Rumi" ಎಂಬ ರೂಮಿ ಬರಹವನ್ನು ಕ್ಯಾಪ್ಷನ್‌ ಆಗಿ ನೀಡಿದ್ದಾರೆ. "ನನ್ನಲ್ಲಿ ನೀವು ನೋಡುವ ಸೌಂದರ್ಯ ಅದು ನಿಮ್ಮದೇ ಪ್ರತಿಫಲನ" ಎಂದಿದ್ದಾರೆ. ಈ ಮೂಲಕ ನೀವು ನೋಡುತ್ತಿರುವುದು ನಿಮ್ಮದೇ ಸೌಂದರ್ಯ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
icon

(1 / 9)

ಸಾರಾ ಅಣ್ಣಯ್ಯ ಹಂಚಿಕೊಂಡಿರುವ ಫೋಟೋಗಳಿಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ನೀವು ಕನ್ನಡದ ಪ್ರಿಯಾಂಕ ಚೋಪ್ರಾ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಇವರು ಸೀರೆಯುಟ್ಟ ಇನ್ನೊಂದು ಬಂಚ್‌ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಕೆಂಪು ಬಣ್ಣದ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
icon

(2 / 9)

ಅಮೃತಧಾರೆ ಸೀರಿಯಲ್‌ನಲ್ಲಿ ಈಗ ಭೂಮಿಕಾ, ಅಪೇಕ್ಷಾ ಪಾತ್ರಗಳು ಹೆಚ್ಚು ಲವಲವಿಕೆಯಿಂದ ಕೂಡಿವೆ. ಅವಕಾಶ ಸಿಕ್ಕಾಗ ಮಹಿಮಾ ಕೂಡ ಎಲ್ಲರ ಗಮನ ಸೆಳೆಯುತ್ತಾರೆ. ಅಮೃತಧಾರೆ ಸೀರಿಯಲ್‌ಗಿಂತಲೂ ಈಗ ಸಾರಾ ಅಣ್ಣಯ್ಯ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌. ಆಕೆಗೆ ಸಾಕಷ್ಟು ಫ್ಯಾನ್ಸ್‌ ಇದ್ದಾರೆ. ಸಮಯ ಸಿಕ್ಕಾಗ ಸಿಹಿಕಹಿ ಚಂದ್ರು ಜತೆಗೆ ರೀಲ್ಸ್‌ ಮಾಡುತ್ತಾರೆ. 
icon

(3 / 9)

ಅಮೃತಧಾರೆಯಲ್ಲಿ ಮಹಿಮಾ ಪಾತ್ರಕ್ಕೆ ಭಿನ್ನ ಶೇಡ್‌ ಇದೆ. ಒಳ್ಳೆಯವಳೂ ಅಲ್ಲದ, ಕೆಟ್ಟವಳೂ ಅಲ್ಲದ ಪಾತ್ರವದು. ಗೌತಮ್‌ ತಂಗಿಯಾಗಿ, ಶಕುಂತಲಾದೇವಿ ಮಗಳಾಗಿ ನಟಿಸಿದ್ದಾರೆ. ಸಾರಾ ಅಣ್ಣಯ್ಯ ಅವರು ಈ ಹಿಂದೆ ಕನ್ನಡತಿ ಸೀರಿಯಲ್‌ನಲ್ಲೂ ನಟಿಸಿದ್ದರು.
icon

(4 / 9)

ಅಮೃತಧಾರೆಯಲ್ಲಿ ಮಹಿಮಾಳಿಗೂ ಅಪೇಕ್ಷಾ ಸಹೋದರ ಜೀವನ್‌ಗೂ ಮದುವೆಯಾಗಿದೆ. ಅಲ್ಲಿ ಈಕೆ ನಟಿ. ತನ್ನ ಸೌಂದರ್ಯ ಹಾಳಾಗುತ್ತದೆ ಎಂದು ಅಬಾರ್ಶನ್‌ ಮಾಡಿಸಿಕೊಂಡಿದ್ದಾರೆ.  ಬೈಕ್‌ ಅಪಘಾತದಲ್ಲಿ ತೊಂದರೆ ಆಯ್ತು ಎಂದು ಸುಳ್ಳು ಹೇಳಿರುತ್ತಾಳೆ. ಮಗುವಿನ ನಿರೀಕ್ಷೆಯಲ್ಲಿದ್ದ ಗೌತಮ್‌ ಇದರಿಂದ ಸಾಕಷ್ಟು ನೊಂದುಕೊಂಡಿರ್ತಾನೆ. ಇದೇಲ್ಲ ಹಳೆ ಕಥೆ, ಈಗ ಜೈದೇವ್‌ ಮತ್ತು ಮಲ್ಲಿ ಮದುವೆ ಕಥೆ ಅಮೃತಧಾರೆಯಲ್ಲಿ ನಡೆಯುತ್ತಿದೆ. 
icon

(5 / 9)

ಇತ್ತೀಚೆಗೆ ಸಾರಾ ಅಣ್ಣಯ್ಯ ಗೋವಾ ಬೀಚ್‌ನಲ್ಲಿ ಬಿಕಿನಿ ಉಡುಗೆ ತೊಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಇದು ಸಾಕಷ್ಟು ವೈರಲ್‌ ಆಗಿತ್ತು. ನಿಮಗೆ ಈ ಫೋಟೋ ಸೂಟ್‌ ಆಗೋದಿಲ್ಲ ಎಂದು ಫ್ಯಾನ್ಸ್‌ ಹೇಳಿದ್ದರು. ಇನ್ನು ಕೆಲವರು ಬ್ಯೂಟಿಫುಲ್‌ ಎಂದಿದ್ದರು. 
icon

(6 / 9)

ಸಾರಾ ಅಣ್ಣಯ್ಯ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಕನ್ನಡತಿ, ಅಮೃತಧಾರೆ ಸೀರಿಯಲ್‌ ಮೂಲಕ ಹೆಚ್ಚು ಪರಿಚಿತರು. ತಮಿಳು ಕಿರುತೆರೆಯಲ್ಲೂ ಇವರು ನಟಿಸಿದ್ದಾರೆ. 
icon

(7 / 9)

ಕನ್ನಡ ಕಿರುತೆರೆಗೆ ಆಗಮಿಸುವ ಮೊದಲು ಸ್ಯಾಂಡಲ್‌ವುಡ್‌ನಲ್ಲಿ ನಮ್ಮೂರ ಹೈಕ್ಲು ಎಂಬ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಕಲರ್ಸ್‌ ಕನ್ನಡದ ಕನ್ನಡತಿ ಸೀರಿಯಲ್‌ನಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡರು. ನಮ್ಮ ಲಚ್ಚಿ ಸೀರಿಯಲ್‌ ಮೂಲಕವೂ ಇವರು ಸೀರಿಯಲ್‌ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. 
icon

(8 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(9 / 9)

IPL_Entry_Point

ಇತರ ಗ್ಯಾಲರಿಗಳು