ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಭೂಮಿಕಾಳ ಅಪಹರಿಸಿದ ಕೆಂಚನ ಪತ್ತೆಗೆ ಬುದ್ದಿ ಉಪಯೋಗಿಸಿದ ಗೌತಮ್‌; ಹೀರೋನಂತೆ ಭೂಮಿಯ ಕಾಪಾಡ್ತಾರೆ ನೋಡಿ ಡುಮ್ಮ ಸರ್‌

Amruthadhaare: ಭೂಮಿಕಾಳ ಅಪಹರಿಸಿದ ಕೆಂಚನ ಪತ್ತೆಗೆ ಬುದ್ದಿ ಉಪಯೋಗಿಸಿದ ಗೌತಮ್‌; ಹೀರೋನಂತೆ ಭೂಮಿಯ ಕಾಪಾಡ್ತಾರೆ ನೋಡಿ ಡುಮ್ಮ ಸರ್‌

  • ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿ ಸಿನಿಮೀಯ ತಿರುವು ಪಡೆದಿದೆ. ಜೈದೇವ್‌ ಸೂಚನೆಯ ಮೇರೆಗೆ ಭೂಮಿಕಾಳನ್ನೇ ಕೆಂಚ ಅಪಹರಿಸಿದ್ದಾನೆ.  ಗೌತಮ್‌ ಪ್ರಪೋಸ್‌ ಮಾಡುವ ಸಂದರ್ಭದಲ್ಲಿಯೇ ಭೂಮಿಕಾಳನ್ನು ಕೆಂಚ ಅಪಹರಿಸಿದ್ದಾನೆ. ಅಮೃತಧಾರೆ ಇಂದಿನ ಸಂಚಿಕೆಯಲ್ಲೂ ಗೌತಮ್‌ಗೆ ಭೂಮಿಕಾ ದೊರಕಿಲ್ಲ. ಮುಂದೇನಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಅಮೃತಧಾರೆ ಇಂದಿನ ಸಂಚಿಕೆಯಲ್ಲೂ ಗೌತಮ್‌ಗೆ ಭೂಮಿಕಾ ದೊರಕಿಲ್ಲ. ಮುಂದೇನಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಇದೇ ಸಮಯದಲ್ಲಿ ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರಮೋವೊಂದು ಮುಂದೇ ಏನಾಗಲಿದೆ ಎಂಬ ಸುಳಿವು ನೀಡಿದೆ.  
icon

(1 / 11)

ಗೌತಮ್‌ ಬಹುದಿನಗಳಿಂದ ಹೃದಯದಲ್ಲಿ ಬಚ್ಚಿಟ್ಟ ಮಾತುಗಳನ್ನು ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಭೂಮಿಕಾಳಿಗೆ ಹೇಳುತ್ತಿದ್ದಾರೆ. ಮುಖ ನೋಡಿ ಮಾತನಾಡಲು ಧೈರ್ಯವಿಲ್ಲ ಎಂದು ಭೂಮಿಕಾಳಿಗೆ ಬೆನ್ನು ಹಾಕಿಕೊಂಡು ತನ್ನ ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ ಡುಮ್ಮ ಸರ್‌.
icon

(2 / 11)

ಈ ಸಂದರ್ಭದಲ್ಲಿ ಐ ಲವ್‌ ಯು ಎಂದು ಹೇಳಿ ಹಿಂತುರುಗಿ ನೋಡಿದಾಗ ಭೂಮಿಕಾ ಕಾಣೆಯಾಗಿರುತ್ತಾರೆ. ಕೆಂಚನಿಂದ ಭೂಮಿಕಾ ಅಪಹರಣವಾಗಿರುತ್ತದೆ. 
icon

(3 / 11)

ಭೂಮಿಕಾ ಕಾಣದೆ ಗೌತಮ್‌ ಪರಿತಪಿಸುತ್ತಾರೆ. ಆನಂದ್‌ ಕೂಡ ಸ್ಥಳಕ್ಕೆ ಬರುತ್ತಾರೆ. ರೌಡಿಗಳ ಬಂಧನದಲ್ಲಿರುವ ಭೂಮಿಕಾ ದಾರಿ ತಿಳಿಯಲು ತನ್ನ ಕಿವಿಯೋಲೆ, ಬಲೆಗಳನ್ನು ದಾರಿಯಲ್ಲಿ ಹಾಕುತ್ತ ಹೋಗುತ್ತಾರೆ.
icon

(4 / 11)

ಅಮೃತಧಾರೆ ಧಾರಾವಾಹಿಯ ಬುಧವಾರ ಮತ್ತು ಗುರುವಾರದ ಸಂಚಿಕೆ ನೋಡಿರುವ ವೀಕ್ಷಕರಿಗೆ ಮುಂದೇನಾಗುತ್ತದೆ ಎಂಬ ಕುತೂಹಲವಿದೆ. ಶುಕ್ರವಾರದ ಸಂಚಿಕೆಯಲ್ಲಿ ಗೌತಮ್‌ ಭೂಮಿಕಾ ಇರುವ ಸ್ಥಳ ಪತ್ತೆ ಮಾಡುವ ಸೂಚನೆ ದೊರಕಿದೆ.
icon

(5 / 11)

ಗೌತಮ್‌ ಭೂಮಿಕಾಳ ಮೊಬೈಲ್‌ ನಂಬರ್‌ಗೆ ಕರೆ ಮಾಡುತ್ತಾನೆ. ಕಾಲ್‌ ರಿಸೀವ್‌ ಮಾಡಿದ ಕೆಂಚ ಭೂಮಿಕಾಳಿಗೆ ಅಪಾಯ ಮಾಡುವ ಮಾತುಗಳನ್ನಾಡುತ್ತಾನೆ. ಎರಡು ಗಂಟೆಯಲ್ಲಿ ನಾನು ಕೇಳಿದ್ದಷ್ಟು ಹಣ ನೀಡಬೇಕೆಂದು ಕೇಳುತ್ತಾನೆ.
icon

(6 / 11)

ಈ ರೀತಿ ಕೆಂಚ ಮಾತನಾಡುತ್ತಿರುವ ಸಮಯದಲ್ಲಿ ಗೌತಮ್‌ಗೆ ಫೋನ್‌ನಲ್ಲಿ ದೇವಾಲಯದ ಗಂಟೆಯ ಸದ್ದು ಕೇಳಿಸುತ್ತದೆ. ಯಾವುದೋ ದೇಗುಲದ ಪಕ್ಕದಲ್ಲಿ ಈತನಿದ್ದಾನೆ ಎಂಬ ಸುಳಿವು ದೊರಕುತ್ತದೆ.
icon

(7 / 11)

ಈ ಸಂದರ್ಭದಲ್ಲಿ ಆನಂದ್‌ ಪೊಲೀಸರಿಗೆ ಫೋನ್‌ ಮಾಡುತ್ತಾನೆ. ಹತ್ತಿರದಲ್ಲಿರುವ ದೇವಾಲಯ ಹುಡುಕಲು ಗೌತಮ್‌ ಮತ್ತು ಆನಂದ್‌ ಮುಂದಾಗುತ್ತಾರೆ.  
icon

(8 / 11)

ಖಂಡಿತಾ ಗೌತಮ್‌ ಭೂಮಿಕಾ ಇರುವ ಸ್ಥಳ ಪತ್ತೆಹಚ್ಚುತ್ತಾರೆ. ಕೆಂಚನಿಗೆ ಹೀರೋ ಶೈಲಿಯಲ್ಲಿ ಎರಡೇಟು ಹಾಕುತ್ತಾರೆ. ಈ ಮೂಲಕ ಹೀರೋ ರೀತಿ ಭೂಮಿಕಾಳನ್ನು ಕಾಪಾಡುತ್ತಾರೆ ಡುಮ್ಮ ಸರ್‌ ಎಂದು ಪ್ರೇಕ್ಷಕರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. 
icon

(9 / 11)

ಬಳಿಕ ಪೊಲೀಸರು ಆಗಮಿಸಿ ಕೆಂಚನ ಬಂಧಿಸ್ತಾರೆ. ಗೌತಮ್‌ ಸಾಹಸ ಮತ್ತು ಪ್ರೀತಿ ನೋಡಿ ಭೂಮಿಕಾ ಖುಷಿಯಾಗುತ್ತಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಅಂದಾಜಿಸಿದ್ದಾರೆ.
icon

(10 / 11)

ಒಟ್ಟಾರೆ ಸದ್ಯದಲ್ಲಿಯೇ ಕೆಂಚ ಜೈಲುಪಾಲಾಗುವುದು ಖಾತ್ರಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ಮತ್ತು ಗೌತಮ್‌ ನಡುವಿನ ಪ್ರೀತಿ ಹೆಚ್ಚಾಗಿ ಒಲವ ಅಮೃತಧಾರೆ ಸುರಿಯುವ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ. 
icon

(11 / 11)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು