Amruthadhaare: ನೀವೇ ಬರ್ತಿರಾ, ನಾನು ಬರ್ಬೇಕಾ? ಅಂದ್ರು ಭೂಮಿಕಾ; ಕಳ್ಳಬೆಕ್ಕಿನಂತೆ ಮನೆಗೆ ಬಂದ ಗೌತಮ್‌ಗೆ ಏನೋ ಒಂಥರಾ ಅನುಭವ
- Amruthadhaare Serial Today Episode: ಗೌತಮ್ ಮತ್ತು ಭೂಮಿಕಾ ಮುತ್ತಿನ ಕಥೆಯ ಫಲಿತಾಂಶದ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಈಗಾಗಲೇ ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಹಲವು ವಿಷಯಗಳು ಗೊತ್ತಾಗಿದೆ. ಮುತ್ತು ಕೊಟ್ಟ ಬಳಿಕ ಗೌತಮ್ ಭಯಪಟ್ಟಿದ್ದಾನೆ. ಭಯದಲ್ಲಿಯೇ ಮನೆಗೆ ಆಗಮಿಸುತ್ತಾನೆ.
- Amruthadhaare Serial Today Episode: ಗೌತಮ್ ಮತ್ತು ಭೂಮಿಕಾ ಮುತ್ತಿನ ಕಥೆಯ ಫಲಿತಾಂಶದ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಈಗಾಗಲೇ ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಹಲವು ವಿಷಯಗಳು ಗೊತ್ತಾಗಿದೆ. ಮುತ್ತು ಕೊಟ್ಟ ಬಳಿಕ ಗೌತಮ್ ಭಯಪಟ್ಟಿದ್ದಾನೆ. ಭಯದಲ್ಲಿಯೇ ಮನೆಗೆ ಆಗಮಿಸುತ್ತಾನೆ.
(1 / 9)
ಆನಂದ್ ಒತ್ತಾಯಕ್ಕೋ, ಹೃದಯದೊಳಗಿನ ಪ್ರೀತಿಗೋ ಹೇಗೋ ಧೈರ್ಯ ಮಾಡಿ ಗೌತಮ್ ಭೂಮಿಕಾಳಿಗೆ ಸಿಹಿಮುತ್ತು ನೀಡಿದ್ದರು. ಅದೇ ಸಮಯದಲ್ಲಿ ಪ್ರೀತಿಯ ಮಾತಿನ ಡೈರಿ ನೀಡಲು ಭೂಮಿಕಾ ತಿರುಗಿದಾಗ ಗೌತಮ್ ಧೈರ್ಯ ಮಾಡಿ ಮುತ್ತು ನೀಡಿದ್ದರು. ಒಂದು ಕ್ಷಣ ಎಲ್ಲವನ್ನೂ ಮರೆತಿದ್ದರು. ಆಮೇಲೆ ಕಣ್ಣು ತೆರೆದಾಗ ಗೌತಮ್‌ಗೆ ಭಯವಾಗಿ ಅಲ್ಲಿಂದ ಹೋಗಿದ್ದರು.
(2 / 9)
ಆಫೀಸ್‌ನಲ್ಲೂ ಗೌತಮ್ ಟೆನ್ಷನ್‌ನಲ್ಲಿ ಕುಳಿತಿದ್ದರು. ಎಷ್ಟೆಂದರೆ, ಕೆಲಸ ಮುಗಿದರೂ ಮನೆಗೆ ಹೋಗದೆ ಭಯದಲ್ಲಿ, ಆತಂಕದಲ್ಲಿ ಆಫೀಸ್‌ನಲ್ಲಿಯೇ ಉಳಿದಿದ್ದರು. ಇವರ್ಯಾಕೆ ಮನೆಗೆ ಬಂದಿಲ್ಲ ಎಂದು ಭೂಮಿಕಾ ಕೂಡ ಟೆನ್ಷನ್ ಆಗಿದ್ದರು.
(3 / 9)
ಭೂಮಿಕಾ ಯೋಚನೆಯಲ್ಲಿದ್ದಾಗ ಅಲ್ಲಿಗೆ ಶಕುಂತಲಾದೇವಿ ಆಗಮಿಸಿದ್ದರು. "ಯಾಕೆ ಗೌತಮ್ ಮನೆಗೆ ಬಂದಿಲ್ಲ, ನಿಮ್ಮಿಬ್ಬರ ನಡುವೆ ಏನು ನಡೆಯಿತು" ಎಂದು ಶಕುಂತಲಾ ಪ್ರಶ್ನಿಸಿದ್ದರು.
(4 / 9)
"ಇಲ್ಲ ಅತ್ತೆ ಏನೋ ನಡಿದಿಲ್ಲ" ಅಂದಾಗ "ನಾನು ಫೋನ್ ಮಾಡಿದೆ, ಫೋನ್ ರಿಸೀವ್ ಮಾಡ್ತಾ ಇಲ್ಲ. ನೀನು ಒಮ್ಮೆ ಫೋನ್ ಮಾಡು" ಅಂತಾರೆ ಶಕುಂತಲಾದೇವಿ.
(5 / 9)
ಭೂಮಿಕಾ ಗೌತಮ್‌ಗೆ ಫೋನ್ ಮಾಡ್ತಾರೆ. ಏನೋ ಅರ್ಜೆಂಟ್ ಅಂತ ಶಕುಂತಲಾದೇವಿ ಅಲ್ಲಿಂದ ಹೋಗುತ್ತಾರೆ. ಧೈರ್ಯವಿಲ್ಲದೆ ಇದ್ದರೂ ಗೌತಮ್ ಫೋನ್ ತೆಗೆಯುತ್ತಾನೆ.
(6 / 9)
"ಯಾಕೆ ಇನ್ನು ಬಂದಿಲ್ಲ. ನೀವೇ ಬರ್ತೀರ, ಅಥವಾ ನಾನೇ ಆಫೀಸ್‌ಗೆ ಬರಬೇಕಾ?" ಎಂದು ಭೂಮಿ ಕೇಳಿದಾಗ ಗೌತಮ್‌ಗೆ ಅಲ್ಲಿರಲು ಆಗುವುದಿಲ್ಲ. ಧೈರ್ಯ ತಂದುಕೊಂಡು ಮನೆಗೆ ಹೊರಡುತ್ತಾನೆ. ಆನಂದ್ ಕೂಡ ಧೈರ್ಯ ತುಂಬುತ್ತಾನೆ.
(7 / 9)
ಮನೆಯೊಳಗೆ ತಲೆ ತಗ್ಗಿಸಿಕೊಂಡೇ ಗೌತಮ್ ಆಗಮಿಸ್ತಾರೆ. ಏನಾಗಿದೆ ನಿಮಗೆ ಎಂದು ಭೂಮಿಕಾ ಕೂಡ ಪ್ರಶ್ನಿಸುತ್ತಾರೆ. ಪ್ರಮೋದಲ್ಲಿ ಇರೋದು ಇಷ್ಟೇ ವಿಷಯ. ಒಟ್ಟಾರೆ ಇಂದಿನ ಸಂಚಿಕೆಯಲ್ಲಿ ಅಮೃತಧಾರೆ ಸೀರಿಯಲ್ ವೀಕ್ಷಕರಿಗೆ ಗೌತಮ್‌ನ ಮುತ್ತಿನ ಬಳಿಕದ ತಳಮಳ ಕಾಣಿಸುವುದು ಪಕ್ಕಾ ಆಗಿದೆ.
(8 / 9)
ಒಟ್ಟಾರೆ, ಕಳೆದ ಹಲವು ದಿನಗಳಿಂದ ಮುತ್ತು ನೀಡಲು ಹೆದರುತ್ತಿದ್ದ ಡುಮ್ಮ ಸರ್ ಮುತ್ತು ನೀಡಿರುವುದು ಪ್ರೇಕ್ಷಕರಿಗೆ ಖುಷಿ ತಂದಿದೆ. ಇನ್ನು ಇವರಿಬ್ಬರು ಪ್ರೀತಿಯ ಮಾತುಗಳನ್ನು ಮನಸ್ಸು ಬಿಚ್ಚಿ ಮಾತನಾಡಬೇಕಿದೆ. ಇದರ ನಡುವೆ ಮಾನ್ಯ, ಜೈದೇವ್, ಮಲ್ಲಿ, ಶಕುಂತಲಾದೇವಿ ವಿಚಾರಗಳು ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಅಪೇಕ್ಷಾ ಮತ್ತು ಪಾರ್ಥನ ಲವ್ ಸ್ಟೋರಿಯೂ ನಡೆಯಬೇಕಿದೆ.
ಇತರ ಗ್ಯಾಲರಿಗಳು