ರಾತ್ರಿ ಹೊತ್ತು ಕತ್ತಲಲ್ಲಿ ಗೆಜ್ಜೆ ಸದ್ದು ಕೇಳಿ ಭಯಪಟ್ಟ ಗೌತಮ್; ಅಮೃತಧಾರೆಯಲ್ಲಿ ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಬಂದ ಭೂಮಿಕಾ
- Amruthadhaare Serial Today Episode: ಅಮೃತಧಾರೆ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿಯು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪ್ರಮೋದಲ್ಲಿ ಭೂಮಿಕಾಳ ಗೆಜ್ಜೆ ಸದ್ದು ಕೇಳಿ ಭಯಪಟ್ಟ ಗೌತಮ್‌ನ ಪಾಡು ಬಹಿರಂಗವಾಗಿದೆ. ಇದರೊಂದಿಗೆ ಅಪೇಕ್ಷಾ ಪಾರ್ಥನ ಲವ್ ಸ್ಟೋರಿ ತಿಳಿದ ಶಕುಂತಲಾದೇವಿಯ ವಿಷಯವೂ ಇದೆ.

(1 / 11)
ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಗೌತಮ್ ತನ್ನ ಪ್ರೀತಿಯ ಮಡದಿಗೆ ಕಾಲ್ಜೆಜ್ಜೆ ಉಡುಗೊರೆಯಾಗಿ ತಂದಿರುತ್ತಾನೆ. ಗೆಳೆಯ ಆನಂದ್‌ನ ಸಲಹೆ ಮೇರೆಗೆ ಗೆಜ್ಜೆ ತರುತ್ತಾನೆ.
(2 / 11)
ಗಿಫ್ಟ್ ಬಾಕ್ಸ್ ನೋಡಿ ಭೂಮಿಕ ಖುಷಿಪಡುತ್ತಾರೆ. ಆದರೆ, ಗೆಜ್ಜೆ ನೋಡಿದಾಗ ನನಗೆ ಗೆಜ್ಜೆ ಇಷ್ಟ ಇಲ್ಲ. ಆದ್ರೆ, ನೀವು ಪ್ರೀತಿಯಿಂದ ತಂದುಕೊಟ್ಟ ಕಾರಣ ಹಾಕಿಕೊಳ್ಳುವೆ ಎನ್ನುತ್ತಾರೆ.
(6 / 11)
ಇದೇ ಪ್ರಮೋದಲ್ಲಿ ಶಕುಂತಲಾದೇವಿ ಮತ್ತು ಜೈದೇವ್ ಮಾತುಕತೆಯೂ ಇದೆ. "ಪಾರ್ಥ ಅಪೇಕ್ಷಾಳನ್ನು ಲವ್ ಮಾಡುತ್ತಾನೆ ಎಂದುಕೊಂಡಿರಲಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ.
(7 / 11)
"ಅಪೇಕ್ಷಾ ಮತ್ತು ಪಾರ್ಥರನ್ನು ಒಂದು ಮಾಡಿದ್ದೇ ಭೂಮಿಕಾ" ಎಂದು ಜೈದೇವ್ ಬೆಂಕಿಗೆ ಮತ್ತಷ್ಟು ತುಪ್ಪ ಹಾಕುತ್ತಾನೆ.
(8 / 11)
ಇನ್ನೊಂದಡೆ ಅಪೇಕ್ಷಾ ಮತ್ತು ಪಾರ್ಥ ಟೂರ್‌ಗೆ ಹೋಗಿದ್ದಾರೆ. ಇವರಿಬ್ಬರು ಲವ್ ಬರ್ಡ್ಸ್ ರೀತಿ ಸುತ್ತಲಿದ್ದಾರೆ.
(9 / 11)
ಮತ್ತೊಂದೆಡೆ ಗೌತಮ್ ಮತ್ತು ಭೂಮಿಕಾರಿಗೂ ಕಾಶ್ಮೀರ ಟೂರ್ ಇರುವ ಸೂಚನೆಯಿದೆ. ನಮ್ಮ ಬಿಸ್ನೆಸ್ ಅನ್ನು ಕಾಶ್ಮೀರಕ್ಕೆ ವಿಸ್ತರಿಸಬೇಕು ಎನ್ನುವ ಮಾತುಕತೆ ಈಗಾಗಲೇ ನಡೆದಿದೆ.
(10 / 11)
ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಎಲ್ಲರೂ ಟ್ರಿಪ್ ಹೋಗುವ ಸೂಚನೆ ಇದೆ. ಇದೇ ಸಮಯದಲ್ಲಿ ಕೆಲಸ ಕಳೆದುಕೊಂಡ ಜೀವನ್‌ಗೆ ಡೆಲಿವರಿ ಬಾಯ್ ಆಗಿ ಕೆಲಸ ಸಿಕ್ಕಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಇತರ ಗ್ಯಾಲರಿಗಳು