ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಐ ಲವ್‌ ಯು ಗೌತಮ್‌ ಅವರೇ.... ಕೆಂಪು ಗುಲಾಬಿ ನೀಡಿ ಪ್ರಪೋಸ್‌ ಮಾಡಿದ ಭೂಮಿಕಾ; ಅಮೃತಧಾರೆಯಲ್ಲಿ ಸುರಿಯಿತು ಪ್ರೇಮಧಾರೆ

Amruthadhaare: ಐ ಲವ್‌ ಯು ಗೌತಮ್‌ ಅವರೇ.... ಕೆಂಪು ಗುಲಾಬಿ ನೀಡಿ ಪ್ರಪೋಸ್‌ ಮಾಡಿದ ಭೂಮಿಕಾ; ಅಮೃತಧಾರೆಯಲ್ಲಿ ಸುರಿಯಿತು ಪ್ರೇಮಧಾರೆ

  • Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಪ್ರೇಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಪ್ರೇಮಗಳಿಗೆಯೊಂದು ಬಂದಿದೆ. ಒಂದೆಡೆ ಗೌತಮ್‌ ಭೂಮಿಕಾ ಮುಂದೆ ತನ್ನ ಹೃದಯದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನೊಂದೆಡೆ ಭೂಮಿಕಾ ತನ್ನ ಪತಿಗೆ ಕೆಂಪು ಗುಲಾಬಿ ನೀಡಿ ಐ ಲವ್‌ ಯು ಗೌತಮ್‌ ಅವರೇ ಎಂದು ಪ್ರಪೋಸ್‌ ಮಾಡಿದ್ದಾರೆ.

Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಪ್ರೇಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಪ್ರೇಮಗಳಿಗೆಯೊಂದು ಬಂದಿದೆ. ಒಂದೆಡೆ ಗೌತಮ್‌ ಭೂಮಿಕಾ ಮುಂದೆ ತನ್ನ ಹೃದಯದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನೊಂದೆಡೆ ಭೂಮಿಕಾ ತನ್ನ ಪತಿಗೆ ಕೆಂಪು ಗುಲಾಬಿ ನೀಡಿ ಐ ಲವ್‌ ಯು ಗೌತಮ್‌ ಅವರೇ ಎಂದು ಪ್ರಪೋಸ್‌ ಮಾಡಿದ್ದಾರೆ.
icon

(1 / 16)

ಗಂಡ-ಹೆಂಡತಿ ನಡುವೆ ಪ್ರೀತಿ ಮಾತುಗಳನ್ನು ಹೇಳಿಕೊಳ್ಳುವುದು ಕಷ್ಟವೇ? ಒಂದೇ ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಗಂಡು ಹೆಣ್ಣು ಇದ್ದಾಗಲೂ ಪ್ರಪೋಸ್‌ ಮಾಡುವುದು ಸಾಧ್ಯವಿಲ್ಲವೇ? ಅಮೃತಧಾರೆ ಧಾರಾವಾಹಿ ವೀಕ್ಷಕರಲ್ಲಿ ಇಂತಹ ಪ್ರಶ್ನೆಯೊಂದು ಮೂಡಿರದೆ ಇರದು. 
icon

(2 / 16)

ಕಳೆದ ಹತ್ತು ಹಲವು ಎಪಿಸೋಡ್‌ಗಳಲ್ಲಿ, ಹಲವು ತಿಂಗಳ ಸಂಚಿಕೆಯಲ್ಲಿ ಅಮೃತಧಾರೆಯಲ್ಲಿ ಗೌತಮ್‌ ಭೂಮಿಕಾಳಿಗೆ ಪ್ರಪೋಸ್‌ ಮಾಡಲು ಸಾಧ್ಯವಾಗದೆ ಪರಿತಪಿಸುತ್ತಿದ್ದರು. ಇದೇ ರೀತಿ ಭೂಮಿಕಾಳಿಗೂ ತನ್ನ ಮನದ ಮಾತು ಹೇಳಲು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಗೂ ಕಾಲಕೂಡಿ ಬಂದಿದೆ.
icon

(3 / 16)

ಈ ಹಿಂದೆ ಗೌತಮ್‌ ಮತ್ತು ಭೂಮಿಕಾರ ಪ್ರೀತಿ ಮಾತುಗಳಿಗೆ ನಾನಾ ಅಡ್ಡಿ, ವಿಘ್ನಗಳು ಬಂದಿದ್ದವು. ಶಕುಂತಲಾದೇವಿ ಪ್ರಮುಖ ಅಡ್ಡಿಯಾಗಿದ್ದಳು. ಇದೀಗ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಯೊಂದರ ಬಳಿಕ ಇಬ್ಬರೂ ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ.  
icon

(4 / 16)

ರೌಡಿ ಕೆಂಚ ಭೂಮಿಕಾರನ್ನು ಕಿಡ್ನ್ಯಾಪ್‌ ಮಾಡಿದ್ದನು. ಗೌತಮ್‌ ಹೀರೋ ರೀತಿ ಕೆಂಚನಿಂದ ಭೂಮಿಕಾರನ್ನು ರಕ್ಷಣೆ ಮಾಡಿದ್ದರು. ಈ ಸಮಯದಲ್ಲಿ ಇಬ್ಬರ ನಡುವಿನ ಪ್ರೀತಿ ಇನ್ನಷ್ಟು ಗಾಢವಾಗಿದೆ. 
icon

(5 / 16)

ಅಮೃತಧಾರೆ ಧಾರಾವಾಹಿಯ ಮುಂಬರುವ ಸಂಚಿಕೆಗಳಲ್ಲಿ ಭೂಮಿಕಾ ಗೌತಮ್‌ಗೆ ಐ ಲವ್‌ ಯು ಹೇಳುವ ಸನ್ನಿವೇಶ ಬರಲಿದೆ. 
icon

(6 / 16)

 ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಈ ಸುಂದರ ಗಳಿಗೆಯ ಸಂಕ್ಷಿಪ್ತ ಕ್ಲಿಪ್‌ ತೋರಿಸಲಾಗಿದೆ. 
icon

(7 / 16)

ಗೌತಮ್‌ ಮತ್ತು ಭೂಮಿಕಾ ಡಿನ್ನರ್‌ಗೆ ಕುಳಿತಿದ್ದಾರೆ. ಆನಂದ್‌ ಮತ್ತು ಅಪರ್ಣಾ ಊಟ ಅರೇಂಜ್‌ ಮಾಡಿರುತ್ತಾರೆ. ಈ ಸಮಯದಲ್ಲಿ ಗೌತಮ್‌ ತನ್ನ ಮನದ ಮಾತುಗಳನ್ನು ಹೇಳುತ್ತಾರೆ. "ಸಾರಿ ಭೂಮಿಕಾ ಈ ರೀತಿ ಎಲ್ಲಾ ಆಗಿರುವುದು ನನ್ನ ಮನಸ್ಸಿಗೆ ತುಂಬಾ ಬೇಜಾರು ಉಂಟು ಮಾಡಿದೆ" ಎನ್ನುತ್ತಾರೆ ಗೌತಮ್‌.
icon

(8 / 16)

ಕುಳಿತಲ್ಲಿಂದ ಎದ್ದ ಗೌತಮ್‌ "ನಾನು ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದೇನೆ ಭೂಮಿಕಾ, ಎಷ್ಟೆಂದರೆ ಅದು ಹೇಳಿಕೊಳ್ಳಲಾಗದಷ್ಟು" ಎಂದು ಕಣ್ಣೀರಿಡುತ್ತಾರೆ ಗೌತಮ್‌. 
icon

(9 / 16)

ಈ ಸಮಯದಲ್ಲಿ ಹಿಂತುರುಗಿ ನೋಡಿದಾಗ ಭೂಮಿಕಾ ಕೆಂಪು ಗುಲಾಬಿ ಹಿಡಿದುಕೊಂಡು ಗೌತಮ್‌ಗೆ ಪ್ರಪೋಸ್‌ ಮಾಡಿದ್ದಾರೆ.
icon

(10 / 16)

"ನೀವು ನಿಮ್ಮ ಮನಸ್ಸಿನ ಮಾತುಗಳನ್ನು ಹೇಳಿ ಹಗುರವಾಗಿದ್ದೀರಿ. ಈಗ ನನ್ನ ಸರದಿ. ಐ ಲವ್‌ ಯು ಗೌತಮ್‌ ಅವರೇ" ಎಂದು ಭೂಮಿಕಾ ಪ್ರಪೋಸ್‌ ಮಾಡಿದ್ದಾರೆ. 
icon

(11 / 16)

ಪ್ರೀತಿಯ ಕಣ್ಣೀರಿನೊಂದಿಗೆ ಗೌತಮ್‌ "ಐ ಲವ್‌ ಯು ಟೂ" ಎಂದಿದ್ದಾರೆ. ಈ ಸುಂದರ ಕ್ಷಣ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಅಮೃತಧಾರೆ ವೀಕ್ಷಕರಿಗೆ ಸಖತ್‌ ಖುಷಿಯಾಗಿದೆ.
icon

(12 / 16)

ಪ್ರೀತಿಯಿಂದ ಗೌತಮ್‌ ಮತ್ತು ಭೂಮಿಕಾ ಅಪ್ಪಿಕೊಂಡಿದ್ದಾರೆ. ಕಳೆದ ಹಲವು ಸಮಯದಿಂದ ಹೃದಯದಲ್ಲಿ ಬಚ್ಚಿಟ್ಟ ಪ್ರೀತಿ ಹೊರಕ್ಕೆ ಬಂದಿದೆ. ಇನ್ನು ಅಜ್ಜಮ್ಮನ ಆಸೆಯಂತೆ ಮರಿ ಡುಮ್ಮ ಬರಬೇಕಿದೆ.
icon

(13 / 16)

ಅಬ್ಬಾ ಕೊನೆಗೂ ಭೂಮಿಕಾ ಮತ್ತು ಗೌತಮ್‌ ಒಂದಾಗುತ್ತಿದ್ದಾರೆ. ಇನ್ನು ಇವರ ಪ್ರೀತಿಗೆ ಯಾರ ಕಣ್ಣು ಬೀಳದೆ ಇದ್ದರೆ ಸಾಕು ಎಂದು ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ. 
icon

(14 / 16)

 "ಸೂಪರ್‌ ಸಂಚಿಕೆ" "ನಮ್ಮ ಪ್ರೀತಿಯ ಸೀರಿಯಲ್‌" "ಈ ಸೀರಿಯಲ್‌ನಷ್ಟು ಇಷ್ಟವಾಗುವ ಇನ್ನೊಂದು ಸೀರಿಯಲ್‌ ಇಲ್ಲ" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ. 
icon

(15 / 16)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(16 / 16)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು