Amruthadhaare: ಗುರುಗಳ ಹತ್ರ ಸುಳ್ಳು ಹೇಳಿಸಿದ್ದು ನೀವೇ ಅಲ್ವ ಅತ್ತೆ, ಹೇಗಿತ್ತು ನನ್ನ ಸರ್‌ಪ್ರೈಸ್‌? ಶಕುಂತಲಾದೇವಿಗೆ ಭೂಮಿಕಾ ಟಾಂಗ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಗುರುಗಳ ಹತ್ರ ಸುಳ್ಳು ಹೇಳಿಸಿದ್ದು ನೀವೇ ಅಲ್ವ ಅತ್ತೆ, ಹೇಗಿತ್ತು ನನ್ನ ಸರ್‌ಪ್ರೈಸ್‌? ಶಕುಂತಲಾದೇವಿಗೆ ಭೂಮಿಕಾ ಟಾಂಗ್‌

Amruthadhaare: ಗುರುಗಳ ಹತ್ರ ಸುಳ್ಳು ಹೇಳಿಸಿದ್ದು ನೀವೇ ಅಲ್ವ ಅತ್ತೆ, ಹೇಗಿತ್ತು ನನ್ನ ಸರ್‌ಪ್ರೈಸ್‌? ಶಕುಂತಲಾದೇವಿಗೆ ಭೂಮಿಕಾ ಟಾಂಗ್‌

  • Amruthadhaare Serial Today Episode: ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಇಂದಿನ ಎಪಿಸೋಡ್‌ನ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ "ನಾನು ಗೌತಮ್‌ ಒಂದಾಗಬಾರದೆಂದು ಗುರುಗಳ ಹತ್ರ ನೀವಲ್ವ ಅತ್ತೆ ಸುಳ್ಳು ಹೇಳಿಸಿದ್ದು?" ಎಂದು ಭೂಮಿಕಾ ನೇರವಾಗಿ ಕೇಳುತ್ತಾಳೆ.

ಅಮೃತಧಾರೆ ಸೀರಿಯಲ್‌ನಲ್ಲಿ ಗುರುಗಳ ಹತ್ರ ಸುಳ್ಳು ಹೇಳಿಸಿದ್ದ ಶಕುಂತಲಾದೇವಿ ತಲೆತಗ್ಗಿಸುವಂತಾಗಿದೆ. ಗೌತಮ್‌ ಮತ್ತು ಭೂಮಿಕಾ ಒಂದಾಗಬಾರದೆಂದು ಕುಟುಂಬದ ಜ್ಯೋತಿಷರ ಬಳಿ ಶಕುಂತಲಾ ಸುಳ್ಳು ಹೇಳಿಸಿದ್ದರು.
icon

(1 / 11)

ಗೌತಮ್‌ ಭೂಮಿಕಾಳಿಗೆ ಪ್ರಪೋಸ್‌ ಮಾಡಬೇಕೆಂದುಕೊಂಡಿದ್ದ. ತನ್ನ ಮನಸ್ಸಿನ ಮಾತುಗಳನ್ನು ಗೌತಮ್‌ಗೆ ಹೇಳಲು ಭೂಮಿಕಾ ಸಿದ್ಧವಾಗಿದ್ದರು. ಈ ವಿಷಯ ತಿಳಿದ ಶಕುಂತಲಾದೇವಿ ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದರು.
icon

(2 / 11)

ಗೌತಮ್‌ ಮತ್ತು ಭೂಮಿಕಾ ಜಾತಕ ಸರಿ ಇಲ್ಲ. ಯಾವುದೇ ಕಾರಣಕ್ಕೂ ಇವರಿಬ್ಬರು ಒಂದಾಗಬಾರದು. ಈ ರೀತಿ ಒಂದಾದ್ರೆ ಭೂಮಿಕಾ ಜೀವಕ್ಕೆ ಅಪಾಯ ಎಂದು ಗುರುಗಳ ಬಳಿ ಸುಳ್ಳು ಹೇಳಿಸಿದ್ರು. ಇದರಿಂದ ಗೌತಮ್‌ ಮಾನಸಿಕವಾಗಿ ತುಂಬಾ ಕುಗ್ಗಿದ್ದರು.
icon

(3 / 11)

ಭೂಮಿಕಾಳಿಗೆ ಏನೂ ತೊಂದರೆಯಾಗಬಾರದೆಂದು ಗೌತಮ್‌ ಹರಕೆ ಹೊತ್ತಿದ್ದರು. ದೇವಾಲಯದಲ್ಲಿ ಉರುಳು ಸೇವೆ ಮಾಡಿದರು. ನೆಲದಲ್ಲಿ ತಟ್ಟೆ ಇಲ್ಲದೆ ಊಟ ಮಾಡಿದ್ದರು. ಉರುಳು ಸೇವೆ ಮಾಡಿ ಗೌತಮ್‌ ಆರೋಗ್ಯ ಕೆಟ್ಟಿತ್ತು.
icon

(4 / 11)

ಶಕುಂತಲಾದೇವಿ ತನ್ನ ಷಡ್ಯಂತ್ರದ ಕುರಿತು ಮಾತನಾಡುವುದನ್ನು ಮಲ್ಲಿ ಕೇಳಿಸಿಕೊಂಡು ಭೂಮಿಕಾಳಿಗೆ ತಿಳಿಸಿದ್ದಳು. ಭೂಮಿಕಾ ನಿಜವಾದ ಜ್ಯೋತಿಷಿ ಮೂಲಕ ಮನೆಯಲ್ಲಿ ಪಂಚಾಂಗ ಶ್ರವಣ ಇಟ್ಟುಕೊಂಡರು. ಆ ಸಮಯದಲ್ಲಿ ಎಲ್ಲರ ಜಾತಕವನ್ನು ಮತ್ತೆ ಓದಿಸಿದ್ದರು. 
icon

(5 / 11)

ಗೌತಮ್‌ ಮತ್ತು ಭೂಮಿಕಾರ ಜಾತಕ ನೀಡಿದ ಗುರುಗಳು "ಇದು ತುಂಬಾ ಅಮೋಘವಾದ ಜಾತಕ" ಎಂದು ಹೇಳುತ್ತಾರೆ. 
icon

(6 / 11)

 "ಇದು ತುಂಬಾ ಅಮೋಘವಾದ ಜಾತಕ. 36ರಲ್ಲಿ 35 ಋಣ ಕೂಡಿ ಬರುತ್ತದೆ. ಭೂಮಿಕಾರಿಗೆ ಇರುವ ಆತ್ಮಶಕ್ತಿ ಅಪಾರವಾದದ್ದು. ಇವತ್ತಿನವರಿಗೂ ನಿಮ್ಮನ್ನೇ ಕಾದಿರುವುದು. ನಿಮ್ಮಿಬ್ಬರಿಗೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ಗುರುಗಳು ಹೇಳುತ್ತಾರೆ.
icon

(7 / 11)

ಇಂದಿನ ಸಂಚಿಕೆಯಲ್ಲಿ ಭೂಮಿಕಾ ಶಕುಂತಲಾ ದೇವಿಗೆ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ಎಲ್ಲವೂ ಒಳ್ಳೆಯದೇ ಆಯ್ತಲ್ವ ಎಂದು ಹೇಳಿದ ಶಕುಂತಲಾ ದೇವಿಗೆ "ನಾನು ಗೌತಮ್‌ ಒಂದಾಗಬಾರದೆಂದು ಗುರುಗಳ ಹತ್ರ ನೀವಲ್ವ ಅತ್ತೆ ಸುಳ್ಳು ಹೇಳಿಸಿದ್ದು?"  ಎಂದು ನೇರವಾಗಿ ಕೇಳುತ್ತಾಳೆ. ಈ ಮೂಲಕ ಶಕುಂತಲಾದೇವಿ ಮಾಡಿದ ತಪ್ಪನ್ನು ನೇರವಾಗಿ ಪ್ರಶ್ನಿಸುತ್ತಾರೆ.
icon

(8 / 11)

"ಒಳ್ಳೆಯ ಕೆಲಸ ಮಾಡಿದೆ ಭೂಮಿಕಾ. ಹಳೆ ಕಹಿಯೆಲ್ಲ ಮರೆತೇ ಹೋಯ್ತು" ಎಂದು ಶಂಕುತಲಾ ದೇವಿ ಹೇಳುತ್ತಾರೆ.
icon

(9 / 11)

 "ಒಳ್ಳೆ ಕೆಲಸ ಮಾಡಿದೆ ಅಂತ ಹೇಗೆ ಹೇಳ್ತಿರಿ ಅತ್ತೆ?" "ನಾನು ಗೌತಮ್‌ ಒಂದಾಗಬಾರದು ಎಂದು ನೀವು ಗುರುಗಳ ಹತ್ರ ಸುಳ್ಳು ಹೇಳಿಸಿದ್ದು" ಎಂದು ನೇರವಾಗಿ ಕೇಳುತ್ತಾಳೆ. ಇದಕ್ಕೂ ಮುನ್ನ ಗೌತಮ್‌ ಖುಷಿಯಿಂದ ಭೂಮಿಕಾಳನ್ನು ಅಪ್ಪಿಕೊಂಡಿರುತ್ತಾನೆ. ಆತನ ಚಿಂತೆಯೆಲ್ಲ ಹೋಗಿರುತ್ತದೆ.  
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು
icon

(11 / 11)

ಇತರ ಗ್ಯಾಲರಿಗಳು