Amruthadhaare: ಮಲ್ಲಿ ಹೊಟ್ಟೆಯಲ್ಲಿ ದಿವಾನ್ ವಂಶದ ಕುಡಿ, ಭೂಮಿಕಾಗೆ ಸತ್ಯ ಗೊತ್ತಾಯ್ತು; ಜೈದೇವ್ ನಿನ್ನ ಕಥೆ ಮುಗೀತು ಅಂದ್ರು ಪ್ರೇಕ್ಷಕರು
- Amruthadhaare Serial Today Episode: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಇನ್ನೊಂದು ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಮಲ್ಲಿ ಗರ್ಭಿಣಿಯಾಗಲು ಜೈದೇವ್ ಕಾರಣವೆಂಬ ಸತ್ಯ ಭೂಮಿಕಾಳಿಗೆ ತಿಳಿದುಹೋಗಿದೆ. ತಂಗಿ ಅಪೇಕ್ಷಾಳ ಬದುಕು ಕಾಪಾಡಲು ಭೂಮಿಕಾ ಇನ್ನೇನು ಮಾಡ್ತಾಳೆ ಅನ್ನೂ ಕುತೂಹಲ ಹೆಚ್ಚಾಗಿದೆ.
- Amruthadhaare Serial Today Episode: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಇನ್ನೊಂದು ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಮಲ್ಲಿ ಗರ್ಭಿಣಿಯಾಗಲು ಜೈದೇವ್ ಕಾರಣವೆಂಬ ಸತ್ಯ ಭೂಮಿಕಾಳಿಗೆ ತಿಳಿದುಹೋಗಿದೆ. ತಂಗಿ ಅಪೇಕ್ಷಾಳ ಬದುಕು ಕಾಪಾಡಲು ಭೂಮಿಕಾ ಇನ್ನೇನು ಮಾಡ್ತಾಳೆ ಅನ್ನೂ ಕುತೂಹಲ ಹೆಚ್ಚಾಗಿದೆ.
(1 / 9)
Amruthadhaare Serial Today Episode: ಅಮೃತಧಾರೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಮಲ್ಲಿ ಗರ್ಭಿಣಿಯಾಗಲು ಜೈದೇವ್ ಕಾರಣವೆಂಬ ಸತ್ಯ ಭೂಮಿಕಾಳಿಗೆ ತಿಳಿಯುತ್ತದೆ. ಶಕುಂತಲಾದೇವಿ ತನ್ನ ಮಗನಿಗೆ "ಕೈ ಮತ್ತು ಬಾಯಿ" ಮೇಲೆ ನಿಗಾ ಇರಲಿ ಎಂದರೂ ಜೈದೇವ್‌ನ ಬಾಯಲ್ಲಿಯೇ ಸತ್ಯ ಹೊರಬಿದ್ದಿದೆ.
(2 / 9)
ಜೈದೇವ್ ಡ್ರೆಸಿಂಗ್ ಕೊಠಡಿಯಲ್ಲಿ ತನ್ನ ಮನೆಹಾಳ ಮಾವನ ಜತೆ ಮಾತನಾಡುತ್ತ ಇರುತ್ತಾನೆ. ಹೊರಗಡೆ ಭೂಮಿಕಾ ಹೋಗುತ್ತ ಇರುತ್ತಾರೆ. ಈ ಸಮಯದಲ್ಲಿ ಜೈದೇವ್ ಬಾಯಿಂದ ಸತ್ಯ ಹೊರಬೀಳುತ್ತದೆ. ಈ ಮಾತನ್ನು ಭೂಮಿಕಾ ಕೇಳಿಸಿಕೊಳ್ಳುತ್ತಾರೆ.
(3 / 9)
"ಇನ್ನು ಮುಂದೆ ನನ್ನ ಬಟರ್‌ಫ್ಲೈ ಜತೆ ಯಾವಾಗಲೂ ಜಂಟಿಯಾಗಿ ಇರ್ತಾರೆ. ಆಮೇಲೆ ಮಲ್ಲಿಯಲ್ಲ ಮಲ್ಲಿಯಂತಹ ಸಾವಿರಾರು ಜನರು ಬಂದರೂ ನನ್ನನ್ನು ಏನೂ ಮಾಡೋಕ್ಕೆ ಆಗೋಲ್ಲ" ಎಂದು ಜೈದೇವ್ ತನ್ನ ಮಾವನಲ್ಲಿ ಹೇಳುತ್ತಾನೆ.
(4 / 9)
"ನಮ್ಮ ಸೋ ಕಾಲ್ಡ್ ಅತ್ತಿಗೆಗೆ ಈ ಎಲ್ಲಾ ವಿಚಾರಗಳು ತಿಳಿದರೂ ಏನು ಮಾಡಲಾಗದೆ ಸಾಕ್ಷಿ ಇಲ್ಲದೆ ಇದ್ದಾಳೆ. ಆದರೆ, ಆಕೆಗೇನು ಗೊತ್ತು, ಮಲ್ಲಿ ಹೊಟ್ಟೆಯಲ್ಲಿ ದಿವಾನ್ ವಂಶದ ಕುಡಿ ಬೆಳೆಯುತ್ತಿದೆ" ಎಂದು ಹೇಳುತ್ತಾನೆ.
(5 / 9)
ಗೋಡೆಯಾಚೆ ಇದ್ದ ಭೂಮಿಕಾಳಿಗೆ ಈ ಸತ್ಯ ಕೇಳಿಸುತ್ತದೆ. ಇನ್ನು ಮುಂದೆ ಭೂಮಿಕಾ ಹೇಗೆ ಸತ್ಯ ಕಂಡುಹಿಡಿತಾರೆ? ಜೈದೇವ್‌ನ ವಂಚನೆಗೆ ಹೇಗೆ ಅಂತ್ಯ ಕಾಣಿಸುತ್ತಾಳೆ ಎಂದು ಕಾದು ನೋಡಬೇಕಿದೆ.
(6 / 9)
ಇಂದಿನ ಎಪಿಸೋಡ್‌ನಲ್ಲಿ ಮದುವೆ ಮನೆಯ ಅರಸಿನ ಶಾಸ್ತ್ರದ ಕಾರ್ಯಕ್ರಮಗಳೂ ನಡೆಯಲಿದೆ. ಅಪೇಕ್ಷಾ ಮತ್ತು ಭೂಮಿಕಾಳಿಗೆ ಅರಸಿನ ಹಚ್ಚುವ ದೃಶ್ಯಗಳು ಇರಲಿವೆ. ಮದುವೆ ಮನೆಯ ಸಂಭ್ರಮದಲ್ಲಿ ಜೈದೇವ್ ತನ್ನ ಮಾವನಲ್ಲಿ ಮಾತನಾಡಿ ತನ್ನ ಖೆಡ್ಡ ತಾನೇ ತೋಡಿಕೊಳ್ಳುತ್ತಾನೆ.
(7 / 9)
ಈ ಎಪಿಸೋಡ್ ಪ್ರಮೋ ನೋಡಿ ಪ್ರೇಕ್ಷಕರಂತೂ ಖುಷಿಯಾಗಿ ಬಿಟ್ಟಿದೆ. ಇದೊಂದೇ ಧಾರಾವಾಹಿ ಲ್ಯಾಗ್ ಇಲ್ಲದೆ ಸಾಗುತ್ತಿರುವುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಮಯದಲ್ಲಿ ಮಗನೇ ಜೈದೇವ್ ನಿನ್ನ ಕಥೆ ಮುಗೀತು ಎಂದಿದ್ದಾರೆ.
(8 / 9)
"ಹೌದೋ ಇದು ಬೇಕ್ ಇರೋದು ನೊಡ್ ಇವಾಗ ಹಂಗ್ ಮದುವೆ ನಿಲ್ಲತ್ತ ಅಂತ ಜೈ ಐಯಾಮ್ ರಿಯಲಿ ವೈಟಿಂಗ್ ಹೊಡ್ರೋ ಹಲಗೀ" "ಮುಂದೆ ಇದೆ ಮಾರಿ ಹಬ್ಬ" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ, ಅಮೃತಧಾರೆ ಸೀರಿಯಲ್ ದಿನದಿಂದ ದಿನಕ್ಕೆ ರೋಚಕವಾಗುತ್ತಿದ್ದು, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಇತರ ಗ್ಯಾಲರಿಗಳು