Amruthadhaare: ಐ ಲವ್ ಯು ಗೌತಮ್ ಅವರೇ, ಡುಮ್ಮ ಸರ್ಗೆ ಮತ್ತಿನಲ್ಲಿ ಮುತ್ತು ನೀಡಿದ ಭೂಮಿಕಾ; ಸೂಪರ್ ಸೀರಿಯಲ್ ಅಂದ್ರು ಫ್ಯಾನ್ಸ್
- Amruthadhaare Serial Today Episode: ಝೀ ಕನ್ನಡ ಅಮೃತಧಾರೆ ಧಾರಾವಾಹಿಯ ಶುಕ್ರವಾರದ ಸಂಚಿಕೆಯಲ್ಲಿ ಗೌತಮ್ಗೆ ಭೂಮಿಕಾ ಸಿಹಿಮುತ್ತು ನೀಡುವ ದೃಶ್ಯವಿದೆ. ಆನಂದ್-ಅಪರ್ಣಾರ ಕಿತಾಪತಿಯಿಂದಾಗಿ ಈ ಜೋಡಿ ಇನ್ನಷ್ಟು ಹತ್ತಿರವಾಗಿದೆ.
- Amruthadhaare Serial Today Episode: ಝೀ ಕನ್ನಡ ಅಮೃತಧಾರೆ ಧಾರಾವಾಹಿಯ ಶುಕ್ರವಾರದ ಸಂಚಿಕೆಯಲ್ಲಿ ಗೌತಮ್ಗೆ ಭೂಮಿಕಾ ಸಿಹಿಮುತ್ತು ನೀಡುವ ದೃಶ್ಯವಿದೆ. ಆನಂದ್-ಅಪರ್ಣಾರ ಕಿತಾಪತಿಯಿಂದಾಗಿ ಈ ಜೋಡಿ ಇನ್ನಷ್ಟು ಹತ್ತಿರವಾಗಿದೆ.
(1 / 10)
ಅಮೃತಧಾರೆ ಧಾರಾವಾಹಿಯಲ್ಲಿ ಪ್ರೇಮಿಗಳ ದಿನದ ಪಾರ್ಟಿ ನಡೆಯುತ್ತಿರುತ್ತದೆ. ಅಪೇಕ್ಷಾ ಜೈದೇವ್, ಭೂಮಿಕಾ ಗೌತಮ್, ಆನಂದ್ ಅಪರ್ಣಾ, ಮಹಿಮಾ ಜೀವನ್ ಸೇರಿದಂತೆ ಹಲವು ಜೋಡಿಗಳು ಈ ಪಾರ್ಟಿಯಲ್ಲಿ ಇರುತ್ತಾರೆ. ಪ್ರೇಮ ವೈಫಲ್ಯದಿಂದಾಗಿ ಮತ್ತು ಜೈದೇವ್ ಕುತಂತ್ರದಿಂದಾಗಿ ಪಾರ್ಥ ಒಂಟಿಯಾಗಿರುತ್ತಾನೆ.
(2 / 10)
ಅಮೃತಧಾರೆ ಸೀರಿಯಲ್ನ ಶುಕ್ರವಾರ ಫೆಬ್ರವರಿ 16ರ ಸಂಚಿಕೆಯಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು ಇರುವುದು ಝೀ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿರುವ ಪ್ರಮೋದಿಂದ ತಿಳಿದುಬಂದಿದೆ. ಇಂದಿನ ಅಮೃತಧಾರೆ ಎಪಿಸೋಡ್ನಲ್ಲಿ ಮತ್ತಿನಲ್ಲಿ ಗೌತಮ್ಗೆ ಭೂಮಿಕಾಳಿಗೆ ಮುತ್ತು ನೀಡುವ ಸೀನ್ ಇದೆ.
(3 / 10)
ಪ್ರೇಮಿಗಳ ದಿನದ ಪ್ರಯುಕ್ತ ಪ್ರಪೋಸ್ ಮಾಡುವ ಆಟವಿತ್ತು. ಗೌತಮ್ಗೆ ಪ್ರಪೋಸ್ ಮಾಡುವಂತೆ ಭೂಮಿಕಾಳಿಗೆ ತಿಳಿಸಲಾಯಿತು. ಆನಂದ್ ಅಪರ್ಣಾ ಅವರು ಭೂಮಿಕಾ ಕುಡಿಯುವ ಜ್ಯೂಸ್ಗೆ ಮದ್ಯ ಬೆರೆಸಿ ನೀಡುತ್ತಾರೆ. ಇದರಿಂದ ತುಸು ಮತ್ತೇರಿದ ಭೂಮಿಕಾ ಧೈರ್ಯ ಮಾಡಿ ಪ್ರಪೋಸ್ ಮಾಡುತ್ತಾರೆ.
(4 / 10)
ಭೂಮಿಕಾ ನೀನೀಗ ಎಲ್ಲರ ಮುಂದೆ ಡುಮ್ಮ ಸರ್ಗೆ ಪ್ರಪೋಸ್ ಮಾಡಬೇಕು ಎಂದು ಹೇಳಿದಾಗ ಧೈರ್ಯ ಮಾಡಿ ಭೂಮಿಕಾ ಪ್ರಪೋಸ್ ಮಾಡುತ್ತಾರೆ. "ನಮ್ಮ ಮಧ್ಯೆ ಇರುವ ಪ್ರೀತಿ ಎನ್ನುವ ಅಮೃತಧಾರೆ, ಸೋನೆ ಮಳೆ ರೀತಿ ಸುರಿಯಬೇಕು. ಐ ಲವ್ ಯು ಗೌತಮ್ ಅವರೇ" ಎಂದು ಭೂಮಿಕಾ ಪ್ರಪೋಸ್ ಮಾಡುತ್ತಾರೆ.
(5 / 10)
ಬಳಿಕ ಮೊಬೈಲ್ ನೋಡುವ ಹಂತದಲ್ಲಿ ಗೌತಮ್ ಅವರೇ ಎಂದು ಹೇಳಿ ಹತ್ತಿರಕ್ಕೆ ಬಂದು ಗೌತಮ್ಗೆ ಮುತ್ತು ನೀಡುತ್ತಾರೆ. ಈ ಸಂಚಿಕೆ ಬೆಸ್ಟ್ ಸಂಚಿಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹೇಳಿದ್ದಾರೆ.
(6 / 10)
ಪ್ರೀತಿಯ 'ಮತ್ತು' ಹೆಚ್ಚಾಗಿದೆ! ಗೌತಮ್ಗೆ ಭೂಮಿಯ ಒಲವಿನ 'ಮುತ್ತು' ಸಿಕ್ಕಿದೆ! ಎಂದು ಝೀ ಕನ್ನಡ ಇನ್ಸ್ಟಾಗ್ರಾಂನಲ್ಲಿ ಪ್ರಮೋ ಹಂಚಿಕೊಂಡಿತ್ತು. ಇದಕ್ಕೆ ಕಿರುತೆರೆ ಪ್ರೇಕ್ಷಕರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.
(7 / 10)
ಇರೋದು ಒಂದು ಹೃದಯ ಅದನ್ನ ಎಷ್ಟು ಸಲ ಅಂತ ಗೆಲ್ತಿರಾ ರೀ.. ಲವ್ ಯು ಭೂಮಿಕಾ ಅಂಡ್ ಗೌತಮ್. ಡೈರೆಕ್ಟರ್ ಸರ್ ಒಟ್ಟಾರೆ ನಮ್ಮ ಎಮೋಷನ್ ಅನ್ನು ಎನ್ಕ್ಯಾಶ್ ಮಾಡ್ಕೋತ್ತೀರ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
(8 / 10)
ಅಮೃತಧಾರೆ ಸೀರಿಯಲ್ನಲ್ಲಿ ಒಂದೆಡೆ ಭೂಮಿಕಾ ಮತ್ತು ಗೌತಮ್ ಪ್ರೇಮಲಹರಿ ನಡೆಯುತ್ತಿದೆ. ಇನ್ನೊಂದೆಡೆ ಜೈದೇವ್ ಮತ್ತು ಅಪೇಕ್ಷಾ ಮದುವೆಗೆ ಸಿದ್ಧತೆ ನಡೆಯುತ್ತದೆ.
(9 / 10)
ಪಾರ್ಥ ಇಷ್ಟಪಟ್ಟ ಹುಡುಗಿಯನ್ನು ಮೋಸದಿಂದ ಜೈದೇವ್ ತಾನು ಮದುವೆಯಾಗಲು ಪ್ರಯತ್ನಿಸುತ್ತಾನೆ. ಪಾರ್ಥ ಒಂಟಿಯಾಗಿ ಪರಿತಪಿಸುತ್ತಿದ್ದಾನೆ. ಅಪೇಕ್ಷಾಳೂ ದುಃಖದಿಂದ ಇದ್ದಾಳೆ. ಸದ್ಯದಲ್ಲಿಯೇ ಜೈದೇವ್ ಮತ್ತು ಅಪೇಕ್ಷಾ ಮದುವೆ ಕಾರ್ಯಕ್ರಮ ನಡೆಯಲಿದೆ. ಈ ಹಂತದಲ್ಲಿ ಭೂಮಿಕಾ ಜತೆ ಮಲ್ಲಿಯ ಆಗಮನವಾಗಿ ಅಮೃತಧಾರೆ ಮಹಾ ತಿರುವು ಪಡೆದುಕೊಳ್ಳಲಿದೆ ಎಂದು ಝೀ ಕನ್ನಡ ಈಗಾಗಲೇ ಸೂಚನೆ ನೀಡಿದೆ.
ಇತರ ಗ್ಯಾಲರಿಗಳು