ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode February 23 Malli Grandafather Entry Bhumika Reveal Truth Pcp

Amruthadhaare: ಮಲ್ಲಿ ತಾತಾ ಬಂದಾಯ್ತು, ಜೈದೇವ್‌ ಕೊರಳು ಹಿಡಿದಾಯ್ತು; ನ್ಯಾಯದ ಪರ ಭೂಮಿ; ಅಮೃತಧಾರೆ ಸೀರಿಯಲ್‌ನಲ್ಲಿ ಶಕುಂತಲಾ ನಾಟಕ ಅಂತ್ಯ

  • Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ ರೋಚಕ ಹಂತಕ್ಕೆ ಬಂದು ನಿಂತಿದೆ. ಅಪೇಕ್ಷಾ ಜತೆ ಮೋಸದ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ಜೈದೇವ್‌ನಿಂದ ಗರ್ಭಿಣಿಯಾದ ಮಲ್ಲಿಯ ತಾತಾ ಮದುವೆ ಮಂಟಪಕ್ಕೆ ಬಂದಿದ್ದಾರೆ. ಇನ್ನೊಂದೆಡೆ ನ್ಯಾಯದ ಪರ ಭೂಮಿಕಾಳೂ ಧ್ವನಿ ಎತ್ತಿದ್ದಾಳೆ.

Amruthadhaare Serial Today Episode:  ಅಮೃತಧಾರೆ ಧಾರಾವಾಹಿಯ ಶುಕ್ರವಾರದ ಸಂಚಿಕೆಯಲ್ಲಿ ಕಿರುತೆರೆ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. ಝೀ ಕನ್ನಡ ಹಂಚಿಕೊಂಡಿರುವ ಪ್ರಮೋದಲ್ಲಿ ಜೈದೇವ್‌ ಕತ್ತಿಗೆ ಕತ್ತಿ ಹಿಡಿದ ತಾತಾ, ಧ್ವನಿ ಎತ್ತಿದ ಭೂಮಿಕಾ, ಕಕ್ಕಾಬಿಕ್ಕಿಯಾಗಿ ನೋಡುತ್ತಿರುವ ಶಕುಂತಲಾ ದೇವಿಯನ್ನು ಕಾಣಬಹುದು. ಈ ಮೂಲಕ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಮೋಸದ ಮದುವೆಗೆ ಅಂತ್ಯ ಹಾಡುವ ಸಮಯ ಬಂದಂತೆ ಕಾಣಿಸುತ್ತಿದೆ.
icon

(1 / 10)

ಅಮೃತಧಾರೆ ಸೀರಿಯಲ್‌ ಈಗಾಗಲೇ 198 ಎಪಿಸೋಡ್‌ ಪೂರ್ಣಗೊಳಿಸಿದ್ದು, 199 ಎಪಿಸೋಡ್‌ ಇಂದು ನಡೆಯಲಿದೆ. ಮುಂದಿನ 200ನೇ ಎಪಿಸೋಡ್‌ನಲ್ಲಿ ಈ ಮದುವೆ ನಾಟಕಕ್ಕೆ ಪೂರ್ಣ ಪ್ರಮಾಣದಲ್ಲಿ ಅಂಕಿತ ಬೀಳುವ ನಿರೀಕ್ಷೆಯಲ್ಲಿದೆ. ಇಂದಿನ ಎಪಿಸೋಡ್‌ನಲ್ಲಿ ಕತ್ತಿ ಹಿಡಿದ ತಾತಾನ ದೃಶ್ಯವನ್ನು ತೋರಿಸಿ ಸೀರಿಯಲ್‌ ಅನ್ನು ಮುಂದಿನ ಎಪಿಸೋಡ್‌ಗೆ "ಮುಂದುವರೆಸುವ" ಸಾಧ್ಯತೆ ದಟ್ಟವಾಗಿದೆ.
icon

(2 / 10)

ಈ ಹಿಂದಿನ ಸಂಚಿಕೆಯಲ್ಲಿಯೇ ಜೈದೇವ್‌ ಮಾತನಾಡುವುದನ್ನು ಭೂಮಿಕಾ ಕೇಳಿಸಿಕೊಂಡಿರುತ್ತಾರೆ. "ಮಲ್ಲಿಯ ಹೊಟ್ಟೆಯಲ್ಲಿ ದಿವಾನ್‌ ವಂಶದ ಕುಡಿ ಬೆಳೆಯುತ್ತಿದೆ" ಎಂದು ಹೇಳಿರುವ ಮಾತನ್ನು ಭೂಮಿಕಾ ಕೇಳಿಸಿಕೊಂಡಿದ್ದಾಳೆ. ಆದರೆ, ಈ ವಿಷಯವನ್ನು ಭೂಮಿಕಾ ಶಕುಂತಲಾದೇವಿಗೆ ತಿಳಿಸಿದರೂ ಪ್ರಯೋಜನವಾಗಿರುವುದಿಲ್ಲ. ಗೌತಮ್‌ಗೂ ಹೇಳುವಂತೆ ಇರುವುದಿಲ್ಲ. ಭೂಮಿಕಾ ಮುಂದೇನೂ ಮಾಡ್ತಾಳೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. 
icon

(3 / 10)

ಶುಕ್ರವಾರದ ಎಪಿಸೋಡ್‌ನಲ್ಲಿ ಮಲ್ಲಿ ತಾತಾ  ಮದುವೆ ಮಂಟಪಕ್ಕೆ ಎಂಟ್ರಿ ನೀಡಿಯಾಗಿದೆ. ಖುಷಿಯಿಂದ ತಾಳಿ ಕಟ್ಟಲು ರೆಡಿಯಾದ ಜೈದೇವ್‌ ಮುಖದಲ್ಲಿ ಆತಂಕ ಮೂಡಿದೆ. ತಾಳಿ ಕಟ್ಟಿಸಿಕೊಳ್ಳುವ ಭಯದಲ್ಲಿದ್ದ ಅಪೇಕ್ಷಾ ನಿರಾಳವಾಗಿದ್ದಾಳೆ.
icon

(4 / 10)

ಮದುವೆ ಹಾಲ್‌ನ ಹಿಂದಿನಿಂದ ಪ್ರೇಕ್ಷಕರ ನಡುವಿನಿಂದ ರಾಜಾರೋಷವಾಗಿ "ಅದನ್ನು ನಾನು ಹೇಳ್ತಿನಿ" ಎಂದು ಭೂಮಿಕಾ ಆಗಮಿಸುತ್ತಿದ್ದಾರೆ. ಇಲ್ಲಿಗೆ ಜೈದೇವ್‌ ಮತ್ತು ಅಪೇಕ್ಷಾಳ ಮದುವೆ ನಾಟಕ ಕೊನೆಗೊಳ್ಳುವುದು ದಟ್ಟವಾಗಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. 
icon

(5 / 10)

ಮೋಸದ ಆಟಕ್ಕೆ ಇವತ್ತು ಅಂತ್ಯ ಸಂಸ್ಕಾರ ಮಾಡ್ತಾ ಇದ್ದಾರೆ. ನಮ್ ಭೂಮಿಯ ಹೋರಾಟ ಕ್ಕೆ ಜಯ ಸಿಗಲಿ. ತ್ಯ ಮೇವ ಜಯತೆೇ ಎಂದು ರೂಪಾಶ್ರಿ ಎಂಬವರು ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್‌ ಮಾಡಿದ್ದಾರೆ.
icon

(6 / 10)

"ಅಯ್ಯೋ ಒಂದು ವಾರದಿಂದ ಇದೇ ತೋರಿಸ್ತಾ ಇದ್ದೀರ , ಭೂಮಿ ಹೇಗೆ ಸಾಕ್ಷಿ ಒಪ್ಪಿಸ್ತಾಳೆ ನೋಡ್ಬೇಕು ಅನ್ಸ್ತಿದೆ ಬೇಗ ಬೇಗ" ಎಂದು ಸಹನ ಎಂಬವರು ಇನ್‌ಸ್ಟಾಗ್ರಾಂನಲ್ಲಿ ಸಹನೆ ಕಳೆದುಕೊಂಡಿದ್ದಾರೆ. "ಪಾರ್ಥ ಮತ್ತು ಅಪೇಕ್ಷಾನಿಗೆ ಬೇಗ ಮದುವೆ ಮಾಡಿ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.  
icon

(7 / 10)

"ಅತ್ತಿಗೆ ತಂಗಿ -ಬಾವನ ತಮ್ಮ ಜೋಡಿ ಒಂದಾಗಬೇಕು ನಿಷ್ಕಲ್ಮಶ ಪ್ರೀತಿ ಜೀವಿಸಬೇಕು" ಎಂದು ಮಂಜುನಾಥ್‌ ಎಂಬವರು ಕಾಮೆಂಟ್‌ ಮಾಡಿದ್ದಾರೆ. "ಸತ್ಯಕ್ಕೆ ಸಾವಿಲ್ಲ ಎಂದಿಗೂ ಜಯ ಇದ್ದೆ ಇರುತ್ತೆ ಅದಕ್ಕೆ ಭೂಮಿನೆ ಉದಾಹರಣೆ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ನ್ಯಾಯ ಗೆಲ್ಲಬೇಕು. ಮೋಸ ಮಣ್ಣು ತಿನ್ನಬೇಕು" ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 
icon

(8 / 10)

"ಮೋಸದ ಮದುವೆಗೆ ಅಡ್ಡಿಯಾಗಿ ನಿಂತು..  ನ್ಯಾಯದ ಪರ ಧ್ವನಿ ಎತ್ತಿದ್ಲು ಭೂಮಿ! ಅಮೃತಧಾರೆ | ಇಂದು ಸಂಜೆ 7ಕ್ಕೆ" ಎಂದು ಝೀ ಕನ್ನಡ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಒಟ್ಟಾರೆ ಕಳೆದ ಕೆಲವು ದಿನಗಳಿಂದ ಅಮೃತಧಾರೆ ಸೀರಿಯಲ್‌ ಕಿರುತೆರೆ ಪ್ರೇಕ್ಷಕರನ್ನು ಹಿಡಿದಿಟ್ಟಿರುವುದು ಸುಳ್ಳಲ್ಲ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಇತರ ಗ್ಯಾಲರಿಗಳು