ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode February 28 Jaidev Malli Marriage First Night Bumika Warning Pcp

Amruthadhaare: ಮೊದಲ ರಾತ್ರಿಯಂದೇ ಮಲ್ಲಿಗೆ ಆಘಾತ; ಜೈದೇವ್‌ಗೆ ಭೂಮಿಕಾ ವಾರ್ನಿಂಗ್‌, ಬೆಳ್ಳುಳ್ಳಿ ಕಬಾಬ್‌ ಆಗ್ತಿಯ ಅಂದ್ರು ಪ್ರೇಕ್ಷಕರು

  • Amruthadhaare Serial Today Episode: ಮಲ್ಲಿಯನ್ನು ಮನೆಗೆ ಸೇರಿಸದ ಶಕುಂತಲಾದೇವಿಯನ್ನು ಮನವೋಲಿಸಿ ಭೂಮಿಕಾ ಮತ್ತು ಗೌತಮ್‌ ಗೃಹಪ್ರವೇಶ ಮಾಡಿಸ್ತಾರೆ. ಆದರೆ, ಮಲ್ಲಿಗೆ ಮೊದಲ ರಾತ್ರಿಯಂದು ಜೈದೇವ್‌ ಭಯ ಹುಟ್ಟಿಸುತ್ತಾನೆ. ಜೈದೇವ್‌ಗೆ ಭೂಮಿಕಾ ಎಚ್ಚರಿಕೆಯನ್ನೂ ನೀಡುತ್ತಾಳೆ.

Amruthadhaare Serial Today Episode: ಮಲ್ಲಿಯನ್ನು ಮನೆಗೆ ಸೇರಿಸದ ಶಕುಂತಲಾದೇವಿಯನ್ನು ಮನವೋಲಿಸಿ ಭೂಮಿಕಾ ಮತ್ತು ಗೌತಮ್‌ ಗೃಹಪ್ರವೇಶ ಮಾಡಿಸ್ತಾರೆ. ಆದರೆ, ಮಲ್ಲಿಗೆ ಮೊದಲ ರಾತ್ರಿಯಂದು ಜೈದೇವ್‌ ಭಯ ಹುಟ್ಟಿಸುತ್ತಾನೆ. ಜೈದೇವ್‌ಗೆ ಭೂಮಿಕಾ ಎಚ್ಚರಿಕೆಯನ್ನೂ ನೀಡುತ್ತಾಳೆ. ಝೀ ಕನ್ನಡ ಬಿಡುಗಡೆ ಮಾಡಿದ ಇಂದಿನ ಪ್ರಮೋದಲ್ಲಿ ಹಲವು ವಿವರಗಳು ಲಭಿಸಿವೆ. 
icon

(1 / 10)

ಜೈದೇವ್‌ ಜತೆ ಮದುವೆಯಾದ ತಕ್ಷಣ ಮಲ್ಲಿಯ ಸಮಸ್ಯೆಗಳು ಮುಗಿದಿಲ್ಲ. ಆಕೆಗೆ ನಿಜವಾದ ಸಮಸ್ಯೆಗಳು ಈ ಮದುವೆಯ ಬಳಿಕ ಶುರುವಾದಂತೆ ಇದೆ. ಮೊದಲ ರಾತ್ರಿಗೆ ಕೊಠಡಿ ಡೆಕೊರೇಷನ್‌ ಆಗಿದೆ. ಮಧುಮಂಚ ರೆಡಿಯಾಗಿದೆ. ಇದನ್ನು ನೋಡಿ ಮಲ್ಲಿ ಖುಷಿಪಟ್ಟಿದ್ದಾಳೆ. ಇವತ್ತಿನ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಪ್ರಮೋದಲ್ಲಿ ಸಾಕಷ್ಟು ವಿವರಗಳು ದೊರಕಿವೆ.
icon

(2 / 10)

ಮಲ್ಲಿಯನ್ನು ಭೂಮಿಕಾ ಜೈದೇವ್‌ ಕೊಠಡಿಗೆ ತಂದುಬಿಡುತ್ತಾಳೆ. ಅಲ್ಲಿನ ಅಲಂಕಾರ ನೋಡಿ ಮಲ್ಲಿ ಖುಷಿಪಡುತ್ತಾಳೆ. ಆ ಸಮಯದಲ್ಲಿ ಜೈದೇವ್‌ ಹಾಲಿನ ಲೋಟ ಹಿಡಿದುಕೊಂಡು ಬರುತ್ತಾನೆ. ತಕ್ಷಣ ಕೈಯಿಂದ ಹಾಲಿನ ಲೋಟ ಬೀಳಿಸಿ ಮಲ್ಲಿಯನ್ನು ಭಯ ಪಡಿಸುತ್ತಾನೆ.
icon

(3 / 10)

ನನ್ನ ಮದುವೆಯಾಗಿ ಖುಷಿಯಾಗಿರಬಹುದು ಅಂದುಕೊಂಡಿದೆಯಾ? ನಿನ್ನ ಬದುಕನ್ನು ಸರ್ವನಾಶ ಮಾಡ್ತಿನಿ ಎಂದು ಜೈದೇವ್‌ ಭಯಪಡಿಸುತ್ತಾನೆ. ಅಲಂಕಾರಗೊಂಡ ಹಾಸಿಗೆಯನ್ನು ಹಾಳು ಮಾಡಿ ಹೊರಕ್ಕೆ ಹೋಗುತ್ತಾನೆ. ಮಲ್ಲಿ ಅಳುತ್ತಾ ಕುಳಿತುಕೊಳ್ಳುತ್ತಾಳೆ. 
icon

(4 / 10)

ಇನ್ನೊಂದೆಡೆ ಭೂಮಿಕಾಳಿಗೆ ವಿಷಯ ಗೊತ್ತಾಗಿದೆ. ಆಕೆ ಹೊರಗೆ ಕುಳಿತಿರುವ ಜೈದೇವ್‌ ಬಳಿಗೆ ಬರುತ್ತಾಳೆ. ನಿನಗೆ ಕೋಪ ಇರುವುದು ನನ್ನ ಮೇಲೆ, ಈ ವಿಷಯಕ್ಕೂ ಮಲ್ಲಿಗೂ ಸಂಬಂಧವಿಲ್ಲ. ಎಲ್ಲಾದರೂ ಮಲ್ಲಿ ವಿಷ್ಯದಲ್ಲಿ ಕೆಟ್ಟದಾಗಿ ನಡೆದುಕೊಂಡ್ರೆ ಸುಮ್ಮನಿರೋದಿಲ್ಲ ಎಂದು ಎಚ್ಚರಿಸುತ್ತಾಳೆ.
icon

(5 / 10)

ಇಂದಿನ ಈ ಸಂಚಿಕೆಯ ಪ್ರಮೋ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. "ಜಾಸ್ತಿ ಹಾರಾಡಬೇಡ ಭೂಮಿ ಭಯ ಇರಲಿ ಇಲ್ಲಾಂದ್ರೆ ಡುಮ್ಮ ಸರ್ ಕೈಯಲ್ಲಿ ರೊಸ್ಟ್  ಆಗ್ತೀಯಾ" ಎಂದು ಇನ್‌ಸ್ಟಾಗ್ರಾಂನಲ್ಲಿ ಒಬ್ಬರು ಎಚ್ಚರಿಸಿದ್ದಾರೆ. 
icon

(6 / 10)

"ಭೂಮಿಕಾಳನ್ನು ನಮ್ಮ ಅಣ್ಣನಿಗೆ ಏಕೆ ಮದುವೆ ಮಾಡಿದ್ರೋ ಎಂದು ಜೈದೇವ್‌ಗೆ ಅನಿಸಬಹುದು" "ಜೈ ದೇವ್ ಬೆಳ್ಳುಳ್ಳಿ ಕಬಾಬ್ ಆಗ್ತೀಯಾ ಹುಷಾರು" ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ. 
icon

(7 / 10)

ಒಟ್ಟಾರೆ ಕಳೆದ ಹಲವು ದಿನಗಳಿಂದ ಕುತೂಹಲ ಕೆರಳಿಸಿರುವ ಅಮೃತಧಾರೆ ಧಾರಾವಾಹಿ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಮಲ್ಲಿ ಬಸುರಿಯಾದ ಸಂಗತಿ ಒಬ್ಬೊರೊಬ್ಬರಿಗೆ ತಿಳಿದು ಅಂತಿಮವಾಗಿ ಮಲ್ಲಿ ಜತೆ ಜೈದೇವ್‌ ವಿವಾಹವಾಗಿತ್ತು. ಕಳೆದ ಹಲವು ಎಪಿಸೋಡ್‌ಗಳು ಸಾಕಷ್ಟು ರೋಚಕವಾಗಿತ್ತು.
icon

(8 / 10)

ಸಾಕಷ್ಟು ಕುತೂಹಲ ಕೆರಳಿಸಿದ ಅಮೃತಧಾರೆ ಸೀರಿಯಲ್‌ ಈಗ ಮತ್ತೆ ಅತ್ತೆ ಸೊಸೆ ಜಗಳದತ್ತ ತಿರುಗಿದೆ. ಭೂಮಿಕಾಳನ್ನು ನೆನಪಿಸಿಕೊಂಡರೆ ಶಕುಂತಲಾದೇವಿಗೆ ಕೋಪ ನೆತ್ತಿಗೇರುತ್ತದೆ. ಜೈದೇವ್‌ಗೂ ಮದುವೆಯಾದರೂ ನೆಮ್ಮದಿಯಿಲ್ಲ. ಇವರೆಲ್ಲರನ್ನೂ ಭೂಮಿಕಾ ಮತ್ತು ಗೌತಮ್‌ ಹೇಗೆ ನಿಭಾಯಿಸ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು