Amruthadhaare: ಗೌತಮ್-ಭೂಮಿಕಾಗೆ ಇಂದು ಶೋಭಾನ, ಮರಿ ಮೊಮ್ಮಗನ ಪಡೆಯುವ ಅಜ್ಜಮ್ಮನ ಆರ್ಡರ್ ಈಡೇರಿಸ್ತಾರ ಡುಮ್ಮ ಸರ್
- Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾರಿಗೆ ಅಜ್ಜಮ್ಮನ ಆರ್ಡರ್‌ನಂತೆ ಒಳ್ಳೆಯ ಮುಹೂರ್ತ ನೋಡಿ ಶೋಭಾನಕ್ಕೆ ಸಿದ್ಧತೆ ಮಾಡಲಾಗಿದೆ. ಇಂದು ರಾತ್ರಿ ಡುಮ್ಮ ಸಾರ್‌ನ ಶೋಭಾನ ನಡೆಯುವುದೇ? ಅಥವಾ ಅದಕ್ಕೂ ಯಾವುದಾದರೂ ವಿಘ್ನ ಬರುವುದೇ? ಕಾದು ನೋಡಬೇಕಿದೆ.
- Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾರಿಗೆ ಅಜ್ಜಮ್ಮನ ಆರ್ಡರ್‌ನಂತೆ ಒಳ್ಳೆಯ ಮುಹೂರ್ತ ನೋಡಿ ಶೋಭಾನಕ್ಕೆ ಸಿದ್ಧತೆ ಮಾಡಲಾಗಿದೆ. ಇಂದು ರಾತ್ರಿ ಡುಮ್ಮ ಸಾರ್‌ನ ಶೋಭಾನ ನಡೆಯುವುದೇ? ಅಥವಾ ಅದಕ್ಕೂ ಯಾವುದಾದರೂ ವಿಘ್ನ ಬರುವುದೇ? ಕಾದು ನೋಡಬೇಕಿದೆ.
(1 / 10)
ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾರಿಗೆ ಅಜ್ಜಮ್ಮನ ಆರ್ಡರ್‌ನಂತೆ ಒಳ್ಳೆಯ ಮುಹೂರ್ತ ನೋಡಿ ಶೋಭಾನಕ್ಕೆ ಸಿದ್ಧತೆ ಮಾಡಲಾಗಿದೆ.
(2 / 10)
ಕೆಲವು ದಿನಗಳ ಹಿಂದೆ ಗೌತಮ್ ಮತ್ತು ಭೂಮಿಕಾ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋಗಿದ್ದರು. ಹನಿಮೂನ್ ಉದ್ದೇಶದಿಂದ ಇವರಿಬ್ಬರನ್ನು ಕಳುಹಿಸಲಾಗಿತ್ತು. ಆದರೆ, ಅಲ್ಲಿ ರೌಡಿಗಳ ಉಪಟಳ ಇತ್ಯಾದಿಗಳಿಂದ ಹನಿಮೂನ್ ನಡೆದಿರಲಿಲ್ಲ.
(3 / 10)
ಚಿಕ್ಕಮಗಳೂರಿನಲ್ಲಿದ್ದಾಗ ಇವರಿಬ್ಬರು ಮನಸ್ಸಿನ ಪ್ರೀತಿಯ ಮಾತುಗಳನ್ನು ಹೇಳಿಕೊಂಡು ಒಬ್ಬರಿಗೊಬ್ಬರು ಹತ್ತಿರವಾಗಿದ್ದರು. ಕಿಡ್ನ್ಯಾಪ್ ಆದ ಭೂಮಿಕಾಳನ್ನು ಹೀರೋನಂತೆ ಕಾಪಾಡಿದ್ರು ಡುಮ್ಮ ಸರ್. ಇದು ಇವರಿಬ್ಬರ ಪ್ರೀತಿಯನ್ನು ಇನ್ನಷ್ಟು ಹತ್ತಿರಗೊಳಿಸಿತ್ತು.
(4 / 10)
ಇವರಿಬ್ಬರು ಚಿಕ್ಕಮಗಳೂರಿಗೆ ಹೋಗಿದ್ರೂ ಹನಿಮೂನ್ ಮಾಡಿಲ್ಲ ಎಂದು ಅಜ್ಜಮ್ಮನಿಗೆ ಆನಂದ್ ಮೂಲಕ ತಿಳಿಯತ್ತದೆ. ಜತೆಗೆ ಇವರಿಬ್ಬರು ಗಂಡ ಹೆಂಡತಿ ರೀತಿಯಂತೆ ಇಲ್ಲದೆ ಇರುವ ಮಾಹಿತಿಯನ್ನೂ ಅಜ್ಜಮ್ಮನಿಗೆ ಆನಂದ್ ತಿಳಿಸಿರ್ತಾನೆ. ಇದರಿಂದ ರೊಚ್ಚಿಗೆದ್ದ ಅಜ್ಜಮ್ಮ ಇವರಿಬ್ಬರಿಗೆ ಫಸ್ಟ್ ನೈಟ್ ಮಾಡಿಸಿಯೇ ತೀರಬೇಕು ಎಂದು ದೃಢ ನಿರ್ಧಾರ ಕೈಗೊಂಡಿದ್ದಾರೆ.
(5 / 10)
ಒಳ್ಳೆಯ ಮುಹೂರ್ತ ನೋಡಿ ಶೋಭಾನ ಇಟ್ಟಿದ್ದಾರೆ. ಝೀ ಕನ್ನಡ ವಾಹನಿ ಬಿಡುಗಡೆ ಮಾಡಿದ ಇಂದಿನ ಪ್ರಮೋದಲ್ಲಿ ಫಸ್ಟ್ ನೈಟ್‌ಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಬೆಡ್ ರೂಂ ಅಲಂಕಾರ ಎಲ್ಲವೂ ಆಗಿದೆ.
(6 / 10)
ಸ್ವತಃ ಆನಂದ್ ಗೆಳೆಯನ ಬೆಡ್‌ರೂಂ ಅಲಂಕರಿಸಿದ್ದಾನೆ. ದ್ರಾಕ್ಷಿ ಸೇರಿದಂತೆ ಹಣ್ಣುಹಂಪಲುಗಳನ್ನು ಇಟ್ಟಿದ್ದಾನೆ. "ಅವರೇ ಒಪ್ಪಿದ ಮೇಲೆ ಇನ್ನೇನೂ" ಎಂದು ಭೂಮಿಕಾ ಕೂಡ ನಾಚಿ ಫಸ್ಟ್ ನೈಟ್‌ಗೆ ರೆಡಿಯಾಗಿದ್ದಾರೆ.
(7 / 10)
ಸದ್ಯ ಇಂದು ಸಾಂಗವಾಗಿ ಫಸ್ಟ್ ನೈಟ್ ನಡೆಯುತ್ತಾ? ಅಥವಾ ಇದಕ್ಕೂ ಏನಾದರೂ ವಿಘ್ನವಾಗುತ್ತಾ? ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.
(8 / 10)
ಇದೇ ಸಮಯದಲ್ಲಿ ಇವರಿಬ್ಬರು ಒಂದಾಗುವುದನ್ನು ತಪ್ಪಿಸಲು ಶಕುಂತಲಾದೇವಿಯ ಹಲವು ಪ್ರಯತ್ನಗಳು ವಿಫಲವಾಗಿವೆ. ಆಸ್ಪತ್ರೆಯಲ್ಲೇ ಗೌತಮ್‌ನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.
(9 / 10)
ಹೀಗಾಗಿ, ಇಂದು ಗೌತಮ್ ಮತ್ತು ಭೂಮಿಕಾರ ಮೊದಲ ರಾತ್ರಿಗೆ ಯಾವುದೇ ವಿಘ್ನ ಬರುವುದು ಡೌಟ್. ಶೀಘ್ರದಲ್ಲಿಯೇ ಅಮೃತಧಾರೆಯಲ್ಲಿ ಮರಿ ಡುಮ್ಮನ ಆಗಮನದ ಸೂಚನೆ ದೊರಕಿದರೂ ಅಚ್ಚರಿಯಿಲ್ಲ.
ಇತರ ಗ್ಯಾಲರಿಗಳು