ಅಮೃತಧಾರೆ ಧಾರಾವಾಹಿಯಲ್ಲಿ ರೋಚಕ ಆಕ್ಷನ್‌ ಸೀನ್‌; ಪಾರ್ಥನ ಕೊಲ್ಲೋ ಜೈದೇವ್‌ ಸಂಚು ವ್ಯರ್ಥ, ಡುಮ್ಮ ಸರ್‌ ಮುಂದೆ ಬಯಲಾಯ್ತು ಸತ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿಯಲ್ಲಿ ರೋಚಕ ಆಕ್ಷನ್‌ ಸೀನ್‌; ಪಾರ್ಥನ ಕೊಲ್ಲೋ ಜೈದೇವ್‌ ಸಂಚು ವ್ಯರ್ಥ, ಡುಮ್ಮ ಸರ್‌ ಮುಂದೆ ಬಯಲಾಯ್ತು ಸತ್ಯ

ಅಮೃತಧಾರೆ ಧಾರಾವಾಹಿಯಲ್ಲಿ ರೋಚಕ ಆಕ್ಷನ್‌ ಸೀನ್‌; ಪಾರ್ಥನ ಕೊಲ್ಲೋ ಜೈದೇವ್‌ ಸಂಚು ವ್ಯರ್ಥ, ಡುಮ್ಮ ಸರ್‌ ಮುಂದೆ ಬಯಲಾಯ್ತು ಸತ್ಯ

  • Amruthadhaare serial Today Episode Aug 13: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಶಿವಂ ಸಿನಿಮಾ ನೆನಪಿಸುವಂತೆ ಆಕ್ಷನ್‌ ಸೀನ್‌ ಇರಲಿದೆ. ತನ್ನ ತಮ್ಮ ಎಂದೂ ನೋಡದೇ ಪಾರ್ಥನನ್ನೇ ಸಾಯಿಸಲು ಬಂದ ಜೈದೇವ್‌ನ ಬಣ್ಣ ಗೌತಮ್‌ ದಿವಾನ್‌ ಮುಂದೆ ಬಯಲಾಯ್ತೇ?

Amruthadhaare serial Today Episode Aug 13:  ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇಂದಿನ ಪ್ರಮೋದಲ್ಲಿ ಸಾಕಷ್ಟು ಸಂಗತಿಗಳು ತಿಳಿದುಬಂದಿವೆ.  ಅಪೇಕ್ಷಾ ಮತ್ತು ಪಾರ್ಥ ದೇವಾಲಯದಲ್ಲಿ ಮದುವೆಯಾಗಲು ಉದ್ದೇಶಿಸಿದ್ದಾರೆ. ತನ್ನ ತಾಯಿ ಶಕುಂತಲಾದೇವಿಯ ಅಣತಿಯಂತೆ ಪಾರ್ಥ ಆ ದೇಗುಲಕ್ಕೆ ಹೋಗಿದ್ದಾನೆ. ಆದರೆ, ಈ ವಿಷಯ ಕೇಳಿಸಿಕೊಂಡ ಜೈದೇವ್‌ ಕ್ರೋಧಗೊಂಡಿದ್ದಾನೆ. ತನ್ನ ಸಹೋದರ ಎಂದೂ ನೋಡದೆ ಪಾರ್ಥನನ್ನು ಕೊಲ್ಲಲು ರೌಡಿಗಳೊಂದಿಗೆ ಆಗಮಿಸಿದ್ದಾನೆ.
icon

(1 / 9)

"ಇವತ್ತು ನಿನ್ನ ಲಾಸ್ಟ್‌ ಡೇ ಪಾರ್ಥ" ಎಂದುಕೊಂಡು ಮುಖ ಮುಚ್ಚಿಕೊಂಡು ಜೈದೇವ್‌ ಕಣಕ್ಕೆ ಇಳಿದಿದ್ದಾನೆ. ಪಾರ್ಥ  ಮತ್ತು ಅಪೇಕ್ಷಾ ಓಡುತ್ತಾರೆ. ರೌಡಿಗಳ ವಿರುದ್ಧ ಪಾರ್ಥನೂ ಹೋರಾಡುತ್ತಾನೆ. ಫೈಟಿಂಗ್‌ ಮಾಡುತ್ತಾನೆ. ಆದರೆ, ಕೊನೆಗೆ ಜೈದೇವ್‌ನ ಕೈಗೆ ಸಿಲುಕುತ್ತಾನೆ.
icon

(2 / 9)

ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿರುವ ಜೈದೇವ್‌ ಪಾರ್ಥನಿಗೆ ಚಾಕು ಚುಚ್ಚಲು ಯತ್ನಿಸುತ್ತಾನೆ. ಜೈದೇವ್‌ ಚಾಕು ಚುಚ್ಚಬೇಕೆನ್ನವಷ್ಟರಲ್ಲಿ ಗೌತಮ್‌ ದಿವಾನ್‌ ಆಗಮನವಾಗುತ್ತದೆ. 
icon

(3 / 9)

ಗೌತಮ್‌ ಜೈದೇವ್‌ನ ಕೈಯನ್ನು ತಡೆಯುತ್ತಾರೆ. ತೆರೆಮರೆಯ ಹಿಂದೆ ನಡೆಯುತ್ತಿರುವ ಎಲ್ಲಾ ವಿಷಯಗಳು ಗೌತಮ್‌ಗೆ ಗೊತ್ತಿರುವ ಸಾಧ್ಯತೆ ಇದೆ. ಆನಂದ್‌ ಮೂಲಕ ಪಿನ್‌ಟುಪಿನ್‌ ಅಪ್‌ಡೇಟ್‌ ಪಡೆದಿರುವ ಸಾಧ್ಯತೆ ಇದೆ.
icon

(4 / 9)

ಜೀವನ್‌ ನೆರವಿನಿಂದ ರಿಜಿಸ್ಟ್ರೇಷನ್‌ ಮದುವೆಯಾಗಲು ಅಪ್ಪಿ ಪಾರ್ಥ ಬಂದಿರುತ್ತಾರೆ. ಆದರೆ, ಜೀವನ್‌ ಕೊನೆಕ್ಷಣ ಕೈಚೆಲ್ಲುತ್ತಾನೆ. ಈ ಸಮಯದಲ್ಲಿ ಶಕುಂತಲಾದೇವಿ ಅಣತಿಯಂತೆ ದೇವಾಲಯದಲ್ಲಿ ಮದುವೆಯಾಗಲು ಉದ್ದೇಶಿಸಿದ್ದಾರೆ. ಈ ಸಮಯದಲ್ಲಿ ಜೈದೇವ್‌ ಎಂಟ್ರಿ ನೀಡಿದ್ದಾರೆ.
icon

(5 / 9)

ಒಟ್ಟಾರೆ ಸಿನಿಮಾವೊಂದರ ಆಕ್ಷನ್‌ ಸೀನ್‌ನಂತೆ ಇಂದಿನ ಅಮೃತಧಾರೆ ಸೀರಿಯಲ್‌ ಸಾಹಸ ದೃಷ್ಯಗಳು ಕಾದಿವೆ. ಕೊನೆಗೆ ಇವರಿಬ್ಬರಿಗೆ ಡುಮ್ಮ ಸರ್‌ ನಿಂತು ಮದುವೆ ಮಾಡಿಸುತ್ತಾರೋ ಅಥವಾ ಕೊನೆಕ್ಷಣದಲ್ಲಿ ಮುಖದ ಗುರುತು ಪತ್ತೆಹಚ್ಚುವ ಮೊದಲೇ ಜೈದೇವ್‌ ಓಡಿ ಹೋಗುತ್ತಾನೋ ಕಾದು ನೋಡಬೇಕಿದೆ. 
icon

(6 / 9)

ಎಲ್ಲಾದರೂ ಜೈದೇವ್‌ ಸಿಕ್ಕಿಬಿದ್ದರೆ ಪಾರ್ಥ ಮತ್ತು ಅಪೇಕ್ಷಾ ಸ್ಟೋರಿ ಸುಖಾಂತ್ಯವಾಗಲಿದೆ. ಇವರಿಬ್ಬರ ಮದುವೆಯನ್ನು ಸ್ವತಃ ಗೌತಮ್‌ ನಿಂತು ಮಾಡಿಸಲಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಈ ದುರಂತ ಪ್ರೇಮಕಥೆ ಸುಖಾಂತ್ಯವಾಗಲಿದೆ. 
icon

(7 / 9)

ಅಮೃತಧಾರೆ ಸೀರಿಯಲ್‌ನಲ್ಲಿ ಡುಮ್ಮ ಸರ್‌ ಎಂಟ್ರಿ ನೀಡಿರುವುದು ಪ್ರೇಕ್ಷಕರಿಗೆ ಖುಷಿಯಾಗಿದೆ. ಕಳೆದ ಕೆಲವು ದಿನಗಳಿಂದ ಈ ಸೀರಿಯಲ್‌ಗಳಂತೆ ಈ ಸೀರಿಯಲ್‌ ಕೂಡ ಆಗುತ್ತಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಇದೀಗ ಸೀರಿಯಲ್‌ ಡೈರೆಕ್ಟರ್‌ ಈ ಧಾರಾವಾಹಿಯನ್ನು ಮತ್ತೆ ಟ್ರ್ಯಾಕ್‌ಗೆ ತರುವ ಸೂಚನೆ ದೊರಕಿದೆ.
icon

(8 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(9 / 9)

ಇತರ ಗ್ಯಾಲರಿಗಳು