ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode Goutham Ex Lover Manya Entry Bhumika Outing Shakuntala Tention Pcp

Amruthadhaare: ರೌಡಿಯಿಂದ ತಪ್ಪಿಸಿಕೊಂಡು ಗೌತಮ್‌ ಮುಂದೆ ಬಂದಳು ಮಾಜಿ ಪ್ರೇಮಿ ಮಾನ್ಯ; ಅಮೃತಧಾರೆಯಲ್ಲಿ ಮತ್ತೊಂದು ತಿರುವು

  • Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಯಾವುದೇ ಸಿನಿಮಾಕ್ಕೆ ಕಡಿಮೆಯಿಲ್ಲದಂತೆ ಪ್ರತಿನಿತ್ಯ ಕುತೂಹಲ ಕೆರಳಿಸುತ್ತಿದೆ. ಗೌತಮ್‌ ಮತ್ತು ಭೂಮಿಕಾರ ಪ್ರೇಮಧಾರೆಯಲ್ಲಿ ಸಾಗುತ್ತಿದ್ದ ಅಮೃತಧಾರೆಯಲ್ಲಿ ಈಗ ಮತ್ತೊಂದು ತಿರುವು ಎದುರಾಗಿದೆ.

ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋವನ್ನು ಜೀ ಕನ್ನಡ ವಾಹಿನಿ ಪ್ರಕಟಿಸಿದೆ.  ಗೌತಮ್‌ ಮತ್ತು ಭೂಮಿಕಾರ ಪ್ರೇಮಧಾರೆಯಲ್ಲಿ ಸಾಗುತ್ತಿದ್ದ ಅಮೃತಧಾರೆಯಲ್ಲಿ ಈಗ ಮತ್ತೊಂದು ತಿರುವು ಎದುರಾಗಿರುವುದು ಪ್ರಮೋದಲ್ಲಿ ಕಾಣಿಸಿಕೊಂಡಿದೆ. 
icon

(1 / 9)

ಗೌತಮ್‌ ಮಾಜಿ ಪ್ರೇಯಸಿ ಮಾನ್ಯ ಈಗ ಭೂಮಿಕಾ ಮತ್ತು ಗೌತಮ್‌ ಮುಂದೆ ಬಂದಿದ್ದಾರೆ. ಹೌದು, ಆಕೆ ರೌಡಿ ಕೈಯಿಂದ ತಪ್ಪಿಸಿಕೊಂಡಿದ್ದಾಳೆ. ಮೆಲ್ಲಗೆ ಪ್ರಯತ್ನಪಟ್ಟು ತನ್ನ ಕೈಯ ಹಗ್ಗ ಕತ್ತರಿಸಿಕೊಂಡಿದ್ದ ಮಾನ್ಯ ರೌಡಿಯ ತಲೆಗೆ ಹೊಡೆದು ಅಲ್ಲಿಂದ ಹೊರಕ್ಕೆ ಓಡಿ ಬಂದಿದ್ದಾಳೆ. 
icon

(2 / 9)

ಇನ್ನೊಂದು ಕಡೆ ಗೌತಮ್‌ ಔಟಿಂಗ್‌ಗೆ ಹೋಗುವ ಮೂಡ್‌ನಲ್ಲಿದ್ದಾನೆ. ಆನಂದ್‌ ಪ್ರೋತ್ಸಾಹದಿಂದ ಡುಮ್ಮ  ಸರ್‌ಗೂ ಭೂಮಿಕಾ ಜತೆ ಪ್ರೀತಿ ಹೆಚ್ಚಾಗಿದೆ. ಭೂಮಿಕಾ ಜತೆ ಎಲ್ಲಾದರೂ ಹೊರಗೆ ಸರ್‌ಪ್ರೈಸ್‌ ಆಗಿ ಹೋಗಲು ಬಯಸಿದ್ದಾನೆ.  
icon

(3 / 9)

ಈ ರೀತಿ ಭೂಮಿಕಾ ಜತೆ ಡೇಟಿಂಗ್‌ ಸಂದರ್ಭದಲ್ಲಿ ಕಾರು ಗೌತಮ್‌ ರೌಡಿ ಕೈಯಿಂದ ತಪ್ಪಿಸಿಕೊಂಡು ಬರುತ್ತಿರುವ ಮಾನ್ಯಳಿಗೆ ಇವರ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಕೆ ಸ್ಮೃತಿ ತಪ್ಪಿದಂತೆ ಇದೆ.  ಭೂಮಿಕಾ ಮೇಲಿನಿಂದ ಆತಂಕದಿಂದ ನೋಡುತ್ತಿದ್ದಾರೆ.
icon

(4 / 9)

ಕಾರಿನಿಂದ ಇಳಿದ ಗೌತಮ್‌ಗೆ ಮಾನ್ಯಳನ್ನು ನೋಡಿ ಆಶ್ಚರ್ಯವಾಗುತ್ತದೆ. ಡೇಟಿಂಗ್‌ಗೆ ಎಂದು ಹೊರಟವನಿಗೆ ಹಳೆ ಲವರ್‌ ಸಿಕ್ಕರೆ ಹೇಗಾಗಬೇಡ? ಇನ್ಮುಂದೆ ಏನಾಗಲಿದೆ? ಮಾನ್ಯ ಎಲ್ಲಾ ಕಥೆ ಹೇಳುತ್ತಾಳ? ಶಕುಂತಲಾದೇವಿಯ ಎಲ್ಲಾ ಕುತಂತ್ರಗಳು ಭೂಮಿಕಾಳಿಗೆ ತಿಳಿಯುತ್ತ ಎಂದು ಕಾದುನೋಡಬೇಕಿದೆ.
icon

(5 / 9)

ಈಗಾಗಲೇ ಪ್ರೇಕ್ಷಕರು ಈ ಪ್ರಮೋಗೆ ನಾನಾ ಕಾಮೆಂಟ್‌ ಮಾಡಿದ್ದಾರೆ. "ಈ ಹಿಂದೆ ಭೂಮಿಕಾಳ ಲವ್‌ ಸ್ಟೋರಿ ಗೌತಮ್‌ಗೆ ತಿಳಿಯಿತು. ಅದಾದ ಬಳಿಕ ಈಗ ಗೌತಮ್‌ ಲವ್‌ ಸ್ಟೋರಿ ಭೂಮಿಕಾಳಿಗೆ ತಿಳಿಯಲಿದೆ. ಇನ್ಮುಂದೆ ಗೌತಮ್‌ ಮತ್ತು ಭೂಮಿಕಾ ಪ್ರೀತಿ ಮುಂದುವರೆಸಲಿದ್ದಾರೆ" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.
icon

(6 / 9)

ಇನ್ನೊಂದು ಕಡೆ ಶಕುಂತಲಾ ದೇವಿ ಮತ್ತು ಮನೆಹಾಳ ಮಾವನಿಗೂ ಮಾನ್ಯ ತಪ್ಪಿಸಿಕೊಂಡ ಸಂಗತಿ ತಿಳಿಯುತ್ತದೆ. ಸುದ್ದಿ ಕೇಳಿ ಇಬ್ಬರೂ ಆಘಾತಗೊಂಡಿದ್ದಾರೆ. ಒಂದೆಡೆ ಜೈದೇವ್‌ ಮತ್ತು ಮಲ್ಲಿಯ ಕಥೆ, ಇನ್ನೊಂದೆಡೆ ಶಕುಂತಲಾ ದೇವಿಯ ಕುತಂತ್ರ ಜತೆಯಾಗಿದೆ. 
icon

(7 / 9)

ಇದಕ್ಕೂ ಮೊದಲು ಶಕುಂತಲಾ ಬೇರೆ ರೀತಿ ಆಲೋಚಿಸುತ್ತಿದ್ದಳು. ಮಾನ್ಯಳಂತೆ ಭೂಮಿಕಾಳನ್ನೂ ಇದ್ದು ಇಲ್ಲದಂತೆ ಮಾಡುವುದಾಗಿ ಹೇಳಿದ್ದಳು. "ಮಾನ್ಯ ಈ ಭೂಮಿಕಾಗಿಂತ ದೊಡ್ಡ ಪ್ರಾಬ್ಲಂ. ಅಂತವಳನ್ನು ನಾನು ನೀಟಾಗಿ ಹ್ಯಾಂಡಲ್‌ ಮಾಡಿದ್ದೇನೆ. ಇವಳು ಯಾವ ಲೆಕ್ಕ" ಎಂದಿರುತ್ತಾಳೆ. ಈಗ ನೋಡಿದರೆ ಮಾನ್ಯ ಗೌತಮ್‌ ಮುಂದೆ ಇದ್ದಾಳೆ. ಮುಂದೆ ಏನಾಗಲಿದೆ ಎಂಬ ಕುತೂಹಲಕ್ಕೆ ಇಂದಿನ  ಸಂಚಿಕೆಯಲ್ಲಿ ಉತ್ತರ ದೊರಕಲಿದೆ.
icon

(8 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(9 / 9)

ಇತರ ಗ್ಯಾಲರಿಗಳು