ಕನ್ನಡ ಸುದ್ದಿ  /  Photo Gallery  /  Televison News Amruthadhaare Serial Today Episode Goutham Kiss To Bhumika Anand Plan Chance To Success Pcp

Amruthadhaare: ಆನಂದ್‌ ತರ್ಲೆ ಮಾತು ಕೇಳಿಸಿಕೊಂಡ್ರು ಭೂಮಿಕಾ; ಅಮೃತಧಾರೆಯಲ್ಲಿ ಗೌತಮ್‌ಗೆ ಈ ರಾತ್ರಿ ಸಿಹಿಚುಂಬನ ಖಾತ್ರಿ

  • Amruthadhaare Serial Today Episode: ಅಮೃತಧಾರೆ ಸೀರಿಯಲ್‌ನಲ್ಲಿ ಒಂದೆಡೆ ಜೈದೇವ್‌ ಅಪಘಾತದ ಪ್ಲ್ಯಾನ್‌ ನಡೆಯುತ್ತಿದೆ. ಇನ್ನೊಂದೆಡೆ ಭೂಮಿಕಾಳಿಗೆ ಮುತ್ತು ನೀಡುವ ಯತ್ನದಲ್ಲಿ ಗೌತಮ್‌ ಇದ್ದಾರೆ. ಇಂದಿನ ಸಂಚಿಕೆಯಲ್ಲಿ ಆನಂದ್‌ ಮಾತನ್ನು ಭೂಮಿಕಾ ಕೇಳಿಸಿಕೊಂಡಿದ್ದಾರೆ.

ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಪ್ರಕಟಿಸಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಒಂದೆಡೆ ಜೈದೇವ್‌ ಅಪಘಾತದ ಪ್ಲ್ಯಾನ್‌ ನಡೆಯುತ್ತಿದೆ. ಇನ್ನೊಂದೆಡೆ ಭೂಮಿಕಾಳಿಗೆ ಮುತ್ತು ನೀಡುವ ಯತ್ನದಲ್ಲಿ ಗೌತಮ್‌ ಇದ್ದಾರೆ. ಇಂದಿನ ಸಂಚಿಕೆಯಲ್ಲಿ ಆನಂದ್‌ ಮಾತನ್ನು ಭೂಮಿಕಾ ಕೇಳಿಸಿಕೊಂಡಿದ್ದಾರೆ.  
icon

(1 / 9)

ಗೌತಮ್‌ ಮತ್ತು ಭೂಮಿಕಾರ ನಡುವೆ ಇನ್ನೂ ಏನೂ ಆಗಿಲ್ಲ ಎಂದು ತಿಳಿದು ಆನಂದ್‌ ಅಚ್ಚರಿಗೊಂಡಿದ್ದಾನೆ. ಇಬ್ಬರು ಮೂವರಾಗಬೇಕು ಎಂದು ಪ್ರೋತ್ಸಾಹ ನೀಡುತ್ತಿದ್ದಾನೆ ಗೆಳೆಯ ಆನಂದ್‌. ಭೂಮಿಕಾಳಿಗೆ ಒಂದು ಮುತ್ತು ನೀಡಲೇಬೇಕು, ಇಲ್ಲದೆ ಇದ್ದರೆ ಅಜ್ಜಿಗೆ ಎಲ್ಲಾ ವಿಷಯ ತಿಳಿಸುವೆ ಎಂದು ಆನಂದ್‌ ಬೆದರಿಸುತ್ತಾನೆ.
icon

(2 / 9)

ಆನಂದ್‌ ಒತ್ತಾಯಕ್ಕೆ ಮಣಿದು ಮುತ್ತು ನೀಡುವ ಯೋಚನೆ ಮಾಡಿದರೂ ಗೌತಮ್‌ಗೆ ಧೈರ್ಯ ಸಾಕಾಗುವುದಿಲ್ಲ. ಆ ಸಮಯದಲ್ಲಿ ಹಲ್ಲಿಯನ್ನು ಓಡಿಸುವಾಗ ಭೂಮಿಕಾಳ ಹತ್ತಿರ ಬಂದಿರುತ್ತಾನೆ. ಆಕೆ ನಿದ್ದೆಯಿಂದ ಎದ್ದಾಗ ಆಕೆಯ ಮೇಲ್ಗಡೆ ಗೌತಮ್‌ ಮುಖವಿರುತ್ತದೆ. 
icon

(3 / 9)

ಬೆಳಗ್ಗೆ ಎದ್ದು ಗೌತಮ್‌ನ ಕುರಿತು ಭೂಮಿಕಾ ಕೂಡ ಪ್ರೀತಿಯಿಂದ ಯೋಚಿಸಿದ್ದಾರೆ.  "ಮುದ್ದುಮುದ್ದಾಗಿ ಒಳ್ಳೆ ಮಗು ತರಹ ಮಲಗಿದ್ದಾರೆ. ನನ್ನ ಸುಂದ್ರ" ಎಂದು ಭೂಮಿಕಾ ಗೌತಮ್‌ನನ್ನು ನೋಡುತ್ತಾ ಕುಳಿತುಕೊಳ್ಳುತ್ತಾಳೆ. "ಕಣ್ಣಿನ ಮುಂದೆ ಇದ್ದರೂ ಮುಟ್ಟುಕ್ಕೆ ಹೋಗೋಲ್ಲ ಮುದ್ದಿಸೋಕ್ಕೂ ಆಗೋಲ್ಲ" ಎನ್ನುತ್ತಾಳೆ. ಇದೇ ಸಮಯದಲ್ಲಿ ಹತ್ತಿರದಿಂದ ಕಿವಿಯಲ್ಲಿ ಐವ್‌ಯು ಎಂದಿರ್ತಾರೆ.
icon

(4 / 9)

ಇಂದಿನ ಸಂಚಿಕೆಯ ಪ್ರಮೋದಲ್ಲಿ ಗೌತಮ್‌ಗೆ ಭೂಮಿಕಾಳ ಫೋನ್‌ ಬರುತ್ತದೆ. ಆ ಸಮಯದಲ್ಲಿ ಆನಂದ್‌ ಮಾತನಾಡುವ ಮಾತುಗಳು ಭೂಮಿಕಾಳಿಗೆ ಕೇಳಿಸುತ್ತದೆ. ಭೂಮಿಕಾ ಫೋನ್‌ ಬಂದಾಗ ಬಿಝಿ ಇದ್ದಾಗಲೂ ಗೌತಮ್‌ ಫ್ರೀ ಇದ್ದಿನಿ ಅನ್ತಾರೆ. ಇದನ್ನು ಆಫೀಸ್‌ನವರು ಮಾತನಾಡಿಕೊಳ್ಳುತ್ತಾರೆ. ಸ್ವಲ್ಪ ಹೊತ್ತಲ್ಲಿ ಇತರರನ್ನು ಆನಂದ್‌ ಹೊರಕ್ಕೆ ಕಳುಹಿಸುತ್ತಾನೆ.
icon

(5 / 9)

ನನ್ನ ಮುಂದೆ ಮಾತ್ರ ಹುಲಿ ಥರ ಇರ್ತಿ, ಮನೆಯಲ್ಲಿ ಮಾತ್ರ ಮಿಯಾಂವ್‌ ರೀತಿ ಇರ್ತಿ ಎಂದು ಗೌತಮ್‌ನನ್ನು ಆನಂದ್‌ ಟೀಕಿಸ್ತಾನೆ. ಎಲ್ಲಾ ಸರಿಯಾಗಿ ಹೋಗ್ತಾ ಇದೆ, ಸಮಯ ನೋಡಿ ಕಿಸ್‌ ನೀಡು ಎಂದು ಗೌತಮ್‌ಗೆ ಸಲಹೆ ನೀಡುತ್ತಾನೆ. ಈ ಸಮಯದಲ್ಲಿ ಫೋನ್‌ ಕಟ್‌ ಆಗಿರುವುದಿಲ್ಲ. ಎಲ್ಲವನ್ನೂ ಭೂಮಿಕಾ ಕೇಳಿಸಿಕೊಂಡಿರ್ತಾರೆ. ನಾಚಿಕೆ ಮೂಡುತ್ತದೆ.  
icon

(6 / 9)

ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾ ನಡುವೆ ಸಿಹಿಚುಂಬನದ ವಿನಿಮಯವಾಗುವ ಸೂಚನೆಯಿದೆ. ಇದೇ ಸಂಚಿಕೆಯಲ್ಲಿ ಜೈದೇವ್‌ ಮಲ್ಲಿಯನ್ನು ಸಾಯಿಸಲು ಮಾಡಿದ ಯೋಜನೆ ಏನಾಗುತ್ತದೆ ಎಂದು ನೋಡಬೇಕಿದೆ. ಏಕೆಂದರೆ, ಆಕ್ಸಿಡೆಂಟ್‌ ಮಾಡಲು ಉದ್ದೇಶಿಸಿದ ಕಾರಲ್ಲಿ ಮಲ್ಲಿ ಮಾತ್ರವಲ್ಲದೆ ಶಕುಂತಲಾದೇವಿ ಕೂಡ ಇದ್ದಾರೆ.  
icon

(7 / 9)

ಇಂದಿನ ಪ್ರಮೋ ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ. "ಗೆಳೆಯ ಆನಂದಾ ಈ ಸರ್ತಿ ಬೆಸ್ಟ್ ಗೆಳೆಯ ಅವಾರ್ಡ್ ನಿಮಗೇ ಫಿಕ್ಸ್ . ಗೌತಮ್ ಸರ್ ಗೆ ಬೆಸ್ಟ್ ಗಂಡ ಅಲಿಯಾಸ್ ಬೆಸ್ಟ್ ಹಸ್ಬೆಂಡ್ ಅವಾರ್ಡ್ ಫಿಕ್ಸ್" "ಒಂದು ಕಿಸ್‌ ಕೊಟ್ಟು ಬಿಡಿ ಡುಮ್ಮ ಸರ್‌" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. 
icon

(8 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(9 / 9)

ಇತರ ಗ್ಯಾಲರಿಗಳು