Amruthadhaare: ಜಾತಕ ದೋಷ ಸರಿಪಡಿಸಲು ದೇಗುಲದಲ್ಲಿ ಉರುಳು ಸೇವೆ, ನೆಲದಲ್ಲಿ ಆಹಾರ ಸೇವನೆ; ಗೌತಮ್ ದಿವಾನ್ ಕಷ್ಟನೋಡಿ ಭೂಮಿಕಾ ಕಣ್ಣೀರಧಾರೆ
- Amruthadhaare Serial Today Episode: ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಭೂಮಿಕಾಳ ಒಳಿತಿಗಾಗಿ ಗೌತಮ್ ದೇಗುಲದಲ್ಲಿ ಹರಕೆ ತೀರಿಸುವ ಕಷ್ಟವನ್ನು ನೋಡಿ ಭೂಮಿಕಾ ಕಣ್ಣೀರಿಟ್ಟಿದ್ದಾರೆ.

(1 / 11)
ಗೌತಮ್ ದಿವಾನ್ ಮತ್ತು ಭೂಮಿಕಾರ ಜಾತಕ ದೋಷವಿದೆ. ನೀವಿಬ್ಬರು ಒಂದಾದರೆ ಅಪಾಯವಿದೆ ಎಂದು ಶಕುಂತಲಾದೇವಿಯು ಜ್ಯೋತಿಷಿ ಮೂಲಕ ಹೇಳಿಸಿದ್ದರು. ತನ್ನ ಪತ್ನಿಗೆ ಅಪಾಯವಾಗಬಹುದು ಎಂಬ ವಿಚಾರ ಗೌತಮ್‌ಗೆ ಮಾನಸಿಕ ನೋವು ತಂದಿದೆ.
(2 / 11)
ಆನಂದ್ ಸಲಹೆಯಂತೆ ದೇವಾಲಯದಲ್ಲಿ ಭೂಮಿಕಾಳ ಒಳಿತಿಗಾಗಿ ಹರಕೆ ಹೊತ್ತಿದ್ದಾನೆ. ಭೂಮಿಕಾಳು ಈ ಹರಕೆಯ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸುವುದು ಅನಿವಾರ್ಯ. ಅದಕ್ಕಾಗಿ ಪತ್ನಿಯನ್ನೂ ಕರೆದುಕೊಂಡು ಬಂದಿದ್ದಾರೆ ಗೌತಮ್.
(5 / 11)
ರಾಜನಂತೆ ಬದುಕಿದ ಗೌತಮ್ ದೇವಾಲಯದ ನೆಲದ ಮೇಲೆ ಉರುಳು ಸೇವೆ ಮಾಡಿದ್ದಾರೆ. ಇದನ್ನು ನೋಡಿ ಭೂಮಿಕಾಳ ಕರಳು ಚುರುಕು ಎಂದಿದೆ.
(6 / 11)
ನೀವು ಹರಕೆ ಮಾಡಬೇಡಿ, ನಾನು ಮಾಡ್ತಿನಿ ಎಂದು ಭೂಮಿಕಾ ಹೇಳುತ್ತಾಳೆ. ಇಲ್ಲ ಇದು ನಾನು ಹೊತ್ತ ಹರಕೆ ನಾನೇ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತಾರೆ.
(9 / 11)
ದೇಗುಲದ ಕಲ್ಲಿನ ನೆಲದ ಮೇಲೆ ಯಾವುದೇ ಪ್ಲೇಟ್, ಎಲೆ ಬಳಸದೆ ನೆಲದಲ್ಲಿಯೇ ಊಟ ಮಾಡುವ ಹರಕೆಯನ್ನೂ ತೀರಿಸುತ್ತಾರೆ.
(10 / 11)
ಇದನ್ನೆಲ್ಲ ನೋಡಿ ಭೂಮಿಕಾ ಕಣ್ಣೀರಾಗಿದ್ದಾರೆ. ಆದರೆ, ನನಗಾಗಿಯೇ ಗೌತಮ್ ಈ ಕೆಲಸ ಮಾಡುತ್ತಿದ್ದಾನೆ ಎಂದು ಆಕೆಗೆ ಗೊತ್ತಿಲ್ಲ.
ಇತರ ಗ್ಯಾಲರಿಗಳು