Amruthadhaare: ಇಲ್ಲಿ ಸುಳ್ಳುಗಳು ಸತ್ಯದ ಮುಖವಾಡ ಹಾಕಿಕೊಂಡಿವೆ; ಗೌತಮ್ ಮುಖ ನೋಡಿ ಗುರುಗಳು ಹೇಳಿದ ಭವಿಷ್ಯಕ್ಕೆ ಶಕುಂತಲಾ ದಂಗು
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಂಚಾಂಗ ಶ್ರವಣ ಮಾಡಲು ಬಂದ ಗುರುಗಳು ಗೌತಮ್ ಮುಖ ನೋಡಿ ಅವರ ಮನಸ್ಸಿನಲ್ಲಿರುವ ತೊಂದರೆಗಳನ್ನು ಹೇಳುತ್ತಾರೆ. ಶಕುಂತಲಾದೇವಿಗೆ ಇದು ಭೂಮಿಕಾ ಕರೆಸಿದ ಶಾಸ್ತ್ರಿಗಳು ಎಂದು ತಿಳಿದಾಗ ಭಯವಾಗುತ್ತದೆ.
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಂಚಾಂಗ ಶ್ರವಣ ಮಾಡಲು ಬಂದ ಗುರುಗಳು ಗೌತಮ್ ಮುಖ ನೋಡಿ ಅವರ ಮನಸ್ಸಿನಲ್ಲಿರುವ ತೊಂದರೆಗಳನ್ನು ಹೇಳುತ್ತಾರೆ. ಶಕುಂತಲಾದೇವಿಗೆ ಇದು ಭೂಮಿಕಾ ಕರೆಸಿದ ಶಾಸ್ತ್ರಿಗಳು ಎಂದು ತಿಳಿದಾಗ ಭಯವಾಗುತ್ತದೆ.
(1 / 11)
ಗೌತಮ್ ದಿವಾನ್ ಮನೆಗೆ ಭೂಮಿಕಾ ತನ್ನ ತಂದೆಯ ಪರಿಚಯದ ಮಹಾನ್ ಗುರುಗಳನ್ನು ಕರೆಯಿಸಿದ್ದಾರೆ. ಭೂಮಿಕಾ ಮತ್ತು ಗೌತಮ್ ಜಾತಕ ಸರಿ ಇಲ್ಲ ಎಂದಿದ್ದ ಶಾಸ್ತ್ರಿಗಳ ಸುಳ್ಳು ಜಾತಕದ ಎದುರು ಸತ್ಯ ಏನೆಂದು ಇಂದಿನ ಅಮೃತಧಾರೆ ಸಂಚಿಕೆಯಲ್ಲಿ ತಿಳಿಯಲಿದೆ.
(2 / 11)
ಯುಗಾದಿ ಹಬ್ಬದಂದು ಪಂಚಾಂಗ ಶ್ರವಣ ಮಾಡಲು ಮನೆಗೆ ಬಂದಿದ್ದ ಗುರುಗಳಲ್ಲಿ ಭೂಮಿಕಾ "ಗುರುಗಳೇ ನೀವು ಗೌತಮ್ ಅವರ ಜಾತಕ ಒಮ್ಮೆ ನೋಡಬೇಕಿತ್ತು" ಎಂದು ಕೇಳುತ್ತಾಳೆ. ನಮ್ಮ ಮನೆಯವರ ಬಗ್ಗೆ ಅವರ ಒಳಿತು ಕೆಡುಕುಗಳ ಬಗ್ಗೆ ಹೇಳಿ ಎಂದು ಭೂಮಿಕಾ ಕೇಳಿಕೊಳ್ಳುತ್ತಾರೆ.
(3 / 11)
ಈಕೆ ಈ ರೀತಿ ಕೇಳಿದಾಗ ಗೌತಮ್‌ಗೆ ಆತಂಕವಾಗುತ್ತದೆ. ತಮ್ಮ ಜಾತಕ ದೋಷ ಗೊತ್ತಾಗಿಬಿಡಬಹುದು ಎಂಬ ಭಯ ಇರುತ್ತದೆ. ಒಮ್ಮೆ ಜಾತಕ ತೋರಿಸಿದ್ದೇವೆ, ಇನ್ಯಾಕೆ ತೋರಿಸಬೇಕು ಎಂದು ಕೇಳುತ್ತಾನೆ. ತಕ್ಷಣ ಶಕುಂತಲಾದೇವಿ ಕೂಡ "ಹೌದೌದು ಇನ್ನೊಮ್ಮೆ ಏಕೆ ತೋರಿಸಬೇಕು" ಎಂದು ಕೇಳುತ್ತಾರೆ.
(4 / 11)
ಅದಕ್ಕೆ ಭೂಮಿಕಾ "ಇವರು ಎಲ್ಲರ ತರಹ ಅಲ್ಲ. ಸಾತ್ವಿಕರು. ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನ ಹಾಗೆ ಕಣ್ಣಿಗೆ ಕಟ್ಟಿದ ಹಾಗೆ ಹೇಳ್ತಾರೆ" ಎಂದು ಹೇಳುತ್ತಾಳೆ ಭೂಮಿಕಾ.
(5 / 11)
"ನನ್ನ ತಂದೆಗೆ ಈ ಗುರುಗಳೆಂದರೆ ತುಂಬಾ ನಂಬಿಕೆ" ಎಂದು ಭೂಮಿಕಾ ಹೇಳಿದಾಗ ಶಕುಂತಲಾದೇವಿಗೆ ಆಶ್ಚರ್ಯವಾಗುತ್ತದೆ. "ಹಾ, ಇದು ನಮ್ಮ ಗುರುಗಳು ಕಲಿಸಿದವರಲ್ವ? ಈಕೆಯ ತಂದೆ ಕಳುಹಿಸಿದ ಶಾಸ್ತ್ರಿಗಳ?" ಎಂದು ಅಚ್ಚರಿ ಪಡುತ್ತಾಳೆ.
(6 / 11)
"ಗೌತಮ್ ಅವರೇ ನಿಮಗೆ ಏನಾದರೂ ಕೇಳಬೇಕೆಂದಾರೆ ಇವರಲ್ಲಿ ಕೇಳಿ, ಇವರಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುತ್ತದೆ. ಇನ್‌ಫ್ಯಾಕ್ಟ್ ನೀವು ಬಾಯಿಬಿಟ್ಟು ಕೇಳಲೇಬೇಕೆಂದಿಲ್ಲ. ಗುರುಗಳು ನಿಮ್ಮ ಮುಖ ನೋಡಿಯೇ ಎಲ್ಲಾ ಹೇಳುತ್ತಾರೆ" ಎಂದು ಭೂಮಿಕಾ ಹೇಳುತ್ತಾಳೆ.
(7 / 11)
ಗುರುಗಳು ಗೌತಮ್ ಮುಖ ನೋಡಿ ಹೀಗೆ ಭವಿಷ್ಯ ಹೇಳುತ್ತಾರೆ. "ನಿಮ್ಮಲ್ಲಿ ಚಿಂತೆ ಮನೆ ಮಾಡಿದೆ. ಅದು ಸಾಮಾನ್ಯ ಚಿಂತೆಯಲ್ಲ. ಚಿತೆಯಂತಹ ಚಿಂತೆ" ಎಂದು ಗುರುಗಳು ಹೇಳುತ್ತಾರೆ.
(8 / 11)
"ಅದು ನಿಮ್ಮ ಮನಶಾಂತಿಯನ್ನ, ನೆಮ್ಮದಿಯನ್ನ ಸುಟ್ಟು ಬೂದಿ ಮಾಡುತ್ತ ಇದೆ. ಪ್ರೀತಿನ ಎಲ್ಲಿ ಕಳೆದುಕೊಂಡು ಬಿಡ್ತಿನೋ ಎಂಬ ಭಯ ನಿಮಗಿದೆ" ಎಂದು ಗುರುಗಳು ಇರೋ ವಿಚಾರನ್ನ ಕಣ್ಣಿಗೆ ಕಟ್ಟಿದಂತೆ ಹೇಳುತ್ತಾರೆ.
(9 / 11)
"ನಾವು ತಿಳಿದುಕೊಂಡಿರುವುದು ಸೂಜಿ ಮೊನೆಯಷ್ಟು. ತಿಳಿದುಕೊಳ್ಳಬೇಕಾಗಿರುವುದು ಬ್ರಹ್ಮಾಂಡದಷ್ಟು. ಇಲ್ಲಿ ಎಷ್ಟೋ ಸುಳ್ಳುಗಳು ಸತ್ಯದ ಮುಖವಾಡ ಹಾಕಿಕೊಂಡಿವೆ" ಎಂದು ಗುರುಗಳು ಹೇಳಿದಾಗ ಅಜ್ಜಿ "ಗುಂಡೂ ಗುರುಗಳು ಹೇಳ್ತಾ ಇದ್ದಾರೆ. ಒಂದು ಮರಕ್ಕಿಂತ ಇನ್ನೊಂದು ಮರ ದೊಡ್ಡದಿರುತ್ತದೆ. ಅವರಿಗೆ ಜಾತಕ ತೋರಿಸು" ಎಂದು ಹೇಳುತ್ತಾರೆ.
(10 / 11)
ಈ ಮೂಲಕ ಜ್ಯೋತಿಷಿ ಮೂಲಕ ಸುಳ್ಳು ಹೇಳಿಸಿದ ಶಕುಂತಲಾದೇವಿಗೆ ಭೂಮಿಕಾ ನಿಜವಾದ ಗುರುಗಳ ಮೂಲಕ ಸತ್ಯವನ್ನು ಹೇಳಿಸುವ ಪ್ರಯತ್ನ ಮಾಡಿದ್ದಾರೆ.
ಇತರ ಗ್ಯಾಲರಿಗಳು