Amruthadhaare: ದೀಪಾನ್ಶು ಪೀಡನೆಯಿಂದ ಪಾರಾಗಲು ಸತ್ಯದ ಹಾದಿ ಹಿಡಿದ ಮಹಿಮಾ; ಭೂಮಿಕಾಳ ಮುಂದೆ ಬಿಚ್ಚಿಟ್ರು ಮಗು ಅಬಾರ್ಟ್ ಸತ್ಯ
- Amruthadhaare Serial Today Episode: ಮಗುವನ್ನು ಅಬಾರ್ಟ್ ಮಾಡಿರುವ ಸತ್ಯವನ್ನು ತಿಳಿದಿರುವ ದೀಪಾನ್ಶು ಈ ವಿಷಯದ ಮೂಲಕ ಮಹಿಮಾಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾನೆ. ನನ್ನ ಜತೆ ಸಂಬಂಧ ಹೊಂದು. ಇಲ್ಲ ಎಲ್ಲರಿಗೂ ವಿಷಯ ತಿಳಿಸುವೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಾನೆ.
- Amruthadhaare Serial Today Episode: ಮಗುವನ್ನು ಅಬಾರ್ಟ್ ಮಾಡಿರುವ ಸತ್ಯವನ್ನು ತಿಳಿದಿರುವ ದೀಪಾನ್ಶು ಈ ವಿಷಯದ ಮೂಲಕ ಮಹಿಮಾಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾನೆ. ನನ್ನ ಜತೆ ಸಂಬಂಧ ಹೊಂದು. ಇಲ್ಲ ಎಲ್ಲರಿಗೂ ವಿಷಯ ತಿಳಿಸುವೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಾನೆ.
(1 / 10)
ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಮಹಿಮಾ ಒಂದು ದೃಢ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಭಾವನಾತ್ಮಕ ಬ್ಲ್ಯಾಕ್‌ಮೇಲ್‌ನಂತಹ ಸಂದರ್ಭದಲ್ಲಿ ಜನರು ಯಾವ ರೀತಿ ವರ್ತಿಸಬೇಕು ಎಂಬ ಪಾಠವೂ ಇದರಲ್ಲಿದೆ.
(2 / 10)
ಜೀವನ್ ಕುಟುಂಬದಲ್ಲಿ ನೆಮ್ಮದಿಯಾಗಿದ್ದ ಮಹಿಮಾಳಿಗೆ ಕಳೆದ ಕೆಲವು ದಿನಗಳಲ್ಲಿ ಹೊಸ ಸಂಕಟ ಎದುರಾಗಿತ್ತು. ಮಹಿಮಾ ಮಗುವನ್ನು ಅಬಾರ್ಟ್ ಮಾಡಿರುವ ಸತ್ಯ ತಿಳಿದಿರುವ ಗೆಳೆಯ ದೀಪಾನ್ಶುವಿನ ಇನ್ನೊಂದು ಮುಖ ಹೊರಕ್ಕೆ ಬಂದಿತ್ತು. "ನನ್ನ ಜತೆ ಸಂಬಂಧ ಹೊಂದು. ಇಲ್ಲಾ, ನಿನ್ನ ಮನೆಯವರಿಗೆ ವಿಷಯ ತಿಳಿಸುವೆ" ಎಂದು ಬೆದರಿಸುತ್ತಿದ್ದ.
(3 / 10)
ದೀಪಾನ್ಶುವಿನ ಕಾಟ ಮಿತಿಮೀರಿತ್ತು. ಮಹಿಮಾಳ ಅಪಾರ್ಟ್‌ಮೆಂಟ್ ಕೆಳಗೆ ಬಂದು ಕೆಳಕ್ಕೆ ಬಾ ಎಂದು ಕರೆದಿದ್ದ. ಮಹಿಮಾ ಫೋನ್ ಮಾಡದೆ ಇದ್ದಾಗ ಜೀವನ್ ಫೋನ್‌ಗೂ ಕಾಲ್ ಮಾಡಲು ಆರಂಭಿಸಿದ್ದ.
(4 / 10)
ಸ್ಟುಡಿಯೋದಲ್ಲಿ ಭೇಟಿಯಾದ ಸಂದರ್ಭದಲ್ಲಿ "ನಾನು ಕರೆದಾಗ ಬರಬೇಕು, ಇಲ್ಲಾ ನೀನು ಮಗುವನ್ನು ಅಬಾರ್ಟ್ ಮಾಡಿದ ಸಂಗತಿ ಎಲ್ಲರಿಗೂ ಹೇಳುವೆ" ಎಂದೆಲ್ಲ ಬೆದರಿಸಿದ್ದ. ಈ ಮೂಲಕ ಈಕೆಯನ್ನು ತನಗೆ ಬೇಕಂತೆ ಬಳಸಿಕೊಳ್ಳಲು ಬಯಸಿದ್ದ.
(5 / 10)
ತಾವು ಆತ್ಮೀಯರೆಂದುಕೊಂಡವರಿಂದ ಅಥವಾ ಅಪರಿಚಿತರಿಂದ ಹೆಚ್ಚಿನ ಜನರು ಒಂದಲ್ಲ ಒಂದು ರೀತಿಯ ಬ್ಲ್ಯಾಕ್‌ಮೇಲ್‌ಗೆ ಒಳಗಾಗುತ್ತಾರೆ. ಎದುರಾಳಿಯ ವೀಕ್‌ನೆಸ್ ಹಿಡಿದುಕೊಂಡು ತಮಗೆ ಬೇಕಾದಂತೆ ಬಳಸಿಕೊಳ್ಳಲು ಬಯಸುತ್ತಾರೆ. ಹೆಣ್ಣು ಮಕ್ಕಳು ಇಂತಹ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಇಂತಹ ಬ್ಲ್ಯಾಕ್‌ಮೇಲ್ ಸಮಯದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕೆಂಬ ಪಾಠ ಇಂದಿನ ಅಮೃತಧಾರೆ ಸಂಚಿಕೆಯ ಪ್ರಮೋದಲ್ಲಿ ಕಾಣಿಸಿದೆ.
(6 / 10)
ದೀಪಾನ್ಶುವಿನ ಬೆದರಿಕೆಯ ಸಮಯದಲ್ಲಿ ಮಹಿಮಾಳ ಮುಂದೆ ಎರಡು ಆಯ್ಕೆಗಳು ಇದ್ದವು. ತನ್ನ ಗಂಡನಿಗೆ ಮೋಸ ಮಾಡಿ ದೀಪಾನ್ಶು ಜತೆ ಸುತ್ತಾಡುವುದು, ಸಹಕರಿಸುವುದು. ಇನ್ನೊಂದು ಮಗು ಅಬಾರ್ಟ್ ಮಾಡಿದ ಸತ್ಯವನ್ನು ಎಲ್ಲರಿಗೂ ತಿಳಿಸುವುದು.
(7 / 10)
ಅಪಾಯದಿಂದ ಪಾರಾಗಲು ಬಹುತೇಕರು ಅನಿವಾರ್ಯವಾಗಿ ಮೊದಲ ಆಯ್ಕೆ ಮಾಡಿಕೊಳ್ಳಬಹುದು. ಎರಡನೆ ಆಯ್ಕೆ ಮಾಡಿದರೆ ಅಳು, ನೋವು, ಜಗಳ, ಎಲ್ಲವೂ ಬರುತ್ತದೆ. ಮನೆಯವರ ಮುಂದೆ ತಲೆತಗ್ಗಿಸಬೇಕಾಗುತ್ತದೆ. ಆದರೆ, ಈ ಎರಡನೇ ಆಯ್ಕೆ ಆರಂಭದಲ್ಲಿ ನೋವು ಉಂಟುಮಾಡಿದರೂ ಭವಿಷ್ಯದಲ್ಲಿ ಅಪಾಯವಿಲ್ಲ.
(8 / 10)
ಬುದ್ಧಿವಂತೆ ಮಹಿಮಾ ಎರಡನೇ ಆಯ್ಕೆಯನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ. ತನ್ನ ಅತ್ತಿಗೆ ಭೂಮಿಕಾಳಿಗೆ ಕರೆ ಮಾಡಿ ಸ್ಟುಡಿಯೋಗೆ ಕರೆಸಿಕೊಂಡಿದ್ದಾರೆ. ಆಕೆಯನ್ನು ತಬ್ಬಿಕೊಂಡು ತಾನೇ ಮಗುವನ್ನು ಅಬಾರ್ಟ್ ಮಾಡಿದ ಸತ್ಯ ಹೇಳಿದ್ದಾಳೆ. ಭೂಮಿಕಾಳಿಗೆ ಈ ಸತ್ಯ ಸುದ್ದಿ ಕೇಳಿ ಆಘಾತವಾಗಿದೆ.
(9 / 10)
ಆದರೆ, ಇಂತಹ ಸಮಯದಲ್ಲಿ ಮಹಿಮಾಳ ಕಷ್ಟಕ್ಕೆ ಪರಿಹಾರವನ್ನು ಭೂಮಿಕಾಳೇ ತೋರಿಸುತ್ತಾರೆ ಎನ್ನುವ ಕುರಿತು ಯಾರಿಗೂ ಸಂದೇಹ ಇಲ್ಲ. ಒಟ್ಟಾರೆ ಮಹಿಮಾ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.
ಇತರ ಗ್ಯಾಲರಿಗಳು